HOME » NEWS » State » BENGALURU URBAN PARAPPANA AGRAHARA CENTRAL JAIL HAS SET EXAMPLE FOR CORONA VIRUS TREATMENT WITH KASHAYA HERBAL DRINK FOR INMATES SKTV GVTV

Coronavirus: ಕಷಾಯದಿಂದ ಕೊರೊನಾ ಓಡಿಸಿದ ಕೈದಿಗಳು, ಸೆಂಟ್ರಲ್ ಜೈಲ್ ಕೂಡಾ ಈಗ ಮಾದರಿ ಸ್ಥಳ !

Corona: ಯಾರೇ ವಿಚಾರಣಾಧೀನಾ ಕೈದಿ ಬಂದ್ರೂ ಹದಿನಾಲ್ಕು ದಿನ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.ಕ್ವಾರಂಟೈನ್ ನಲ್ಲಿರೋ ಪ್ರತಿ ಕೈದಿಗೆ ದಿನಕ್ಕೆ ಎರಡು ಬಾರಿ ಕಷಾಯ ಸಹ ನೀಡಲಾಗ್ತಿದೆ..ಎಲ್ಲಾ ಕೈದಿಗಳಿಗೆ ಪ್ರತಿನಿತ್ಯ ಇಮ್ಯೂನಿಟಿ ಬೂಸ್ಟ್ ಮಾಡುವ ಔಷಧಿ ‌ಕೊಡಲಾಗ್ತಿದೆ.

news18-kannada
Updated:June 18, 2021, 9:49 AM IST
Coronavirus: ಕಷಾಯದಿಂದ ಕೊರೊನಾ ಓಡಿಸಿದ ಕೈದಿಗಳು, ಸೆಂಟ್ರಲ್ ಜೈಲ್ ಕೂಡಾ ಈಗ ಮಾದರಿ ಸ್ಥಳ !
ಪರಪ್ಪನ ಅಗ್ರಹಾರ ಜೈಲು
  • Share this:
ಬೆಂಗಳೂರು: ರಾಜ್ಯದ ಕಾರಾಗೃಹಗಳಿಗೆ ಸೆಂಟ್ರಲ್ ಜೈಲ್ ಮಾದರಿಯಾಗಿದೆ..ಇಡೀ ರಾಜ್ಯದಲ್ಲೇ ಮೊದಲು ಕೊರೊನಾ ಪಾಸಿಟಿವ್ ಬಂದಿದ್ದ ಜೈಲಿಂದು ಕೊರೊನಾ ಮುಕ್ತವಾಗಿದೆ.. ನೂರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳಿದ್ದ ಸೆಂಟ್ರಲ್ ಜೈಲ್ ಕಂಟ್ರೋಲ್ ಗೆ ಬರಲು ಕಾರಣವಾಗಿದ್ದು ಜೈಲಾಧಿಕಾರಿಗಳ ದಶಸೂತ್ರ..ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ಪಾಸಿಟಿವ್ ಬರ್ತಿತ್ತು.. ವಿಚಾರಣಾಧಿನಾ ಕೈದಿಗಳಿಂದಲೇ ಹೆಚ್ಚು ಸೊಂಕು ಕಾಣಿಸಿಕೊಂಡಿತ್ತು..ಈ ನಡುವೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಜೈಲಿಗೆ ಭೇಟಿ ಕೊಟ್ಟು , ಸೊಂಕಿನ ಕಡಿವಾಣಕ್ಕೆ ಸೂಚನೆ‌ ಕೊಟ್ಟಿದ್ರು.. ಇದರ ಬೆನ್ ನಲ್ಲೇ ಕೇವಲ ಇಪ್ಪತ್ತು ದಿನದಲ್ಲಿ ಕೊರೊನಾ ಕಂಟ್ರೋಲ್ ಗೆ ತರಲಾಗಿದೆ..ಕಳೆದ ಒಂದು ವಾರದಿಂದಲೂ ಯಾವುದೇ ಪಾಸಿಟಿವ್ ಕೇಸ್ ರಿಪೋರ್ಟ್ ಆಗಿಲ್ಲ...ಈ ಮೂಲಕ ಪರಪ್ಪನ ಅಗ್ರಹಾರ ಕಾರಾಗೃಹ ಇತರೆ ಕಾರಾಗೃಹಗಳಿಗೆ ಮಾದರಿಯಾಗಿದೆ...

ಕೊರೊನಾ ಮುಕ್ತವಾಗಲು ಅನುಕೂಲವಾಗಿದ್ದು ಜೈಲಾಧಿಕಾರಿಗಳ ದಶಸೂತ್ರವಾಗಿದೆ..ಯಾರೇ ವಿಚಾರಣಾಧೀನಾ ಕೈದಿ ಬಂದ್ರೂ ಹದಿನಾಲ್ಕು ದಿನ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.ಕ್ವಾರಂಟೈನ್ ನಲ್ಲಿರೋ ಪ್ರತಿ ಕೈದಿಗೆ ದಿನಕ್ಕೆ ಎರಡು ಬಾರಿ ಕಷಾಯ ಸಹ ನೀಡಲಾಗ್ತಿದೆ..ಎಲ್ಲಾ ಕೈದಿಗಳಿಗೆ ಪ್ರತಿನಿತ್ಯ ಇಮ್ಯೂನಿಟಿ ಬೂಸ್ಟ್ ಮಾಡುವ ಔಷಧಿ ‌ಕೊಡಲಾಗ್ತಿದೆ...ಯಾರೇ ಸಿಬ್ಬಂದಿ ಮೂರು ದಿನ  ರಜೆ ಹೋದ್ರು ಸಹ ಕಡ್ಡಾಯ ನೆಗಟಿವ್ ರಿಪೋರ್ಟ್ ತರಬೇಕು..ಬ್ಯಾರಕ್ ಗಳಲ್ಲಿ ಐದು ಮಂದಿ ಕೈದಿಗಳು ಮಾತ್ರ ಇರಲು ಸೂಚನೆ ನೀಡಲಾಗಿದೆ.. ಯಾವುದೇ ಕೈದಿಗೆ ಸಣ್ಣ ನೆಗಡಿ, ಕೆಮ್ಮು ,ಜ್ವತ ಏನೇ ಇದ್ರೂ ಪ್ರತ್ಯೇಕ ಮಾಡಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ..

ಇದನ್ನೂ ಓದಿ: Coronavirus: ಮೂರನೇ ಅಲೆ ಮಕ್ಕಳನ್ನು ಬಾಧಿಸದೇ ಇರಬಹುದು, ಅವರು ಸ್ಟ್ರಾಂಗ್ ಇದ್ದಾರೆ !

ಒಳಗೆ ಪ್ರತಿನಿತ್ಯ ಸ್ಯಾನಿಟೈಸ್, ಪ್ರತಿಯೊಬ್ಬ ಕೈದಿಯೂ ಮಾಸ್ಕ್ ಕಡ್ಡಾಯವಿದೆ... ಜೈಲಿನ ಶುಚಿತ್ವ ಹಾಗೂ ಸ್ಯಾನಿಟೈಸ್ ,ಮಾಸ್ಕ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.. ಪೊಲೀಸ್ ಯಾವುದೇ ಆರೋಪಿಯನ್ನ ಕರೆತಂದ್ರೂ ಆರ್ ಟಿಪಿಸಿ ಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದ್ದು,ಕೈದಿಗಳ ಭೇಟಿಗೆ ಯಾರೇ ಬಂದ್ರೂ ಹೊರಗಿನ ವ್ಯಕ್ತಿಗಳಿಗೆ ಅವಕಾಶ ವಿಲ್ಲ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ...ಜೊತೆಗೆ ಕ್ವಾರಂಟೈನ್ ಬ್ಯಾರಕ್ ಗಳಲ್ಲಿರೋ ಕೈದಿಗಳು ಗುಂಪಿನೊಂದಿಗೆ ಇರದಂತೆ ಸೂಚಿಸಲಾಗಿದೆ. ಈ ಮಧ್ಯೆ ಮೂರು ಪಾಳಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಜಾಗ್ರತೆಯಿಂದ ಇರಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.... ಇನ್ನು ಜೈಲಿನಲ್ಲಿಯೇ ಮಾಸ್ಕ್ ತಯಾರಾಗಲಿದ್ದು, ವಾರಕ್ಕೆರಡು ಬಾರಿ ಕೈದಿಗಳಿಗೆ ಮಾಸ್ಕ್ ವಿತರಿಸಲಿದ್ದಾರೆ..

ಹೊರಗಿನ ತಿಂಡಿ ತಿನಿಸುಗಳಿಗೆ ಬ್ರೇಕ್ ಹಾಕಿದ್ದು, ಜೈಲಿನ ಒಳಗೆ‌ತಯಾರಿಸಿದ ತಿಂಡಿಯೇ ನೀಡಲಾಗುತ್ತೆ...ಒಂದ್ವೇಳೆ ಕುಟುಂಬಸ್ಥರನ್ನ ಯಾರಾದ್ರು ಕೈದಿ ನೋಡಲೇಬೇಕು ಎಂದಾಗ ಆನ್ ಲೈನ್ ವಿಡಿಯೋ ಮೂಲಕ ಭೇಟಿಗೆ ಅವಕಾಶ ಕೊಡಲಾಗುತ್ತೆ.. ಇದಕ್ಕೆ ಒಂದು ವಾರದ ಮುಂಚೆಯೇ ನೊಂದಾಣಿ ಮಾಡಿಕೊಳ್ಳಬೇಕು..ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಒಟ್ಟು  4643 ಕೈದಿಗಳಿದ್ದಾರೆ...ಕೋವಿಡ್ 19 ಹೆಚ್ಚಾದ ಹಿನ್ನಲೆ ಸುಪ್ರಿಂ ಕೋರ್ಟ್ ಆದೇಶದಂತೆ 92 ಮಂದಿಗೆ ಜೈಲಾಧಿಕಾತಿ ಪೆರೋಲ್ ಕೊಟ್ಟಿದ್ದು, ಈ ಮೂಲಕ ಜೈಲಿನಲ್ಲಿ ಜನಸಂದಣಿ ಕಡಿಮೆ ಮಾಡಲು  ಜೈಲಾಧಿಕಾರಿಗಳು ಮುಂದಾಗಿದ್ದಾರೆ..

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by: Soumya KN
First published: June 18, 2021, 9:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories