ಯಶಸ್ವಿಯಾಗಿ ಮುಕ್ತಾಯವಾದ Operation Ganga:  ಕರುನಾಡು ಸೇರಿದ 572 ವಿದ್ಯಾರ್ಥಿಗಳು

ಒಟ್ಟು 13 ದಿನ ನಡೆದ ಆಪರೇಷನ್ ನಲ್ಲಿ ಕರ್ನಾಟಕದ 572 ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರು ಸೇರಿದ್ದಾರೆ. ಆಪರೇಷನ್‌ ಆರಂಭಕ್ಕೂ ಮೊದಲೇ ಬಂದಿದ್ದ 61 ವಿದ್ಯಾರ್ಥಿಗಳು ಕರ್ನಾಟಕ ತಲುಪಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Russia And Ukraine War: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಡೆಯುತ್ತಿದ್ದು, ಇನ್ನು ಮುಂದುವರಿದಿದೆ. ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು (Indian Students) ಉಕ್ರೇನ್ ನ ವಿವಿಧ ನಗರಗಳಲ್ಲಿ ಸಿಲುಕಿದ್ದರು. ವಿದ್ಯಾರ್ಥಿಗಳನ್ನ ಭಾರತಕ್ಕೆ (India) ಕರೆ ತರಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾ (Operation Ganga) ಆರಂಭಿಸಿತ್ತು. ನಿನ್ನೆ ರಾತ್ರಿ ಅಂತಿಮವಾಗಿ ವಿದ್ಯಾರ್ಥಿಗಳು ಭಾರತ ತಲುಪಿದ್ದು, ಆಪರೇಷನ್ ಗಂಗಾ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದುವರೆಗೂ ಆಪರೇಷನ್ ಗಂಗಾ ಅಡಿಯಲ್ಲಿ ಕರ್ನಾಟಕದ (Karnataka) 572 ವಿದ್ಯಾರ್ಥಿಗಳನ್ನು ಒಟ್ಟು 63 ಬ್ಯಾಚ್ ಗಳಲ್ಲಿ ಕರೆ ತರಲಾಗಿದೆ

ಫೆಬ್ರವರಿ 27ರಂದು ಆಪರೇಷನ್ ಗಂಗಾ ಆರಂಭವಾಗಿದ್ದು, ನಿನ್ನೆ ಅಂದ್ರೆ ಶುಕ್ರವಾರ ಕೊನೆಯ ವಿಮಾನ ಬಂದಿಳಿದಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವ ಪ್ರಕ್ರಿಯೆಗೆ ಆಪರೇಷನ್ ಗಂಗಾ ಎಂದು ಹೆಸರನ್ನಿಡಲಾಗಿತ್ತು. ಒಟ್ಟು 13 ದಿನ ನಡೆದ ಆಪರೇಷನ್ ನಲ್ಲಿ ಕರ್ನಾಟಕದ 572 ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರು ಸೇರಿದ್ದಾರೆ. ಆಪರೇಷನ್‌ ಆರಂಭಕ್ಕೂ ಮೊದಲೇ ಬಂದಿದ್ದ 61 ವಿದ್ಯಾರ್ಥಿಗಳು ಕರ್ನಾಟಕ ತಲುಪಿದ್ದರು.

ವಿದ್ಯಾರ್ಥಿಗಳ ಆಗಮನ

ಫೆಬ್ರವರಿ 27 - 30 ವಿದ್ಯಾರ್ಥಿಗಳು - 3 ವಿಮಾನಗಳಲ್ಲಿ ಆಗಮನ

ಫೆಬ್ರವರಿ 28 - 7 ವಿದ್ಯಾರ್ಥಿಗಳು - 2 ವಿಮಾನಗಳಲ್ಲಿ ಆಗಮನ

ಮಾರ್ಚ್ 1 - 18 ವಿದ್ಯಾರ್ಥಿಗಳು - 3 ವಿಮಾನಗಳಲ್ಲಿ ಆಗಮನ

ಮಾರ್ಚ್ 2 - 31 ವಿದ್ಯಾರ್ಥಿಗಳು - 6 ವಿಮಾನಗಳಲ್ಲಿ ಆಗಮನ

ಮಾರ್ಚ್ 3 - 104 ವಿದ್ಯಾರ್ಥಿಗಳು - 12 ವಿಮಾನಗಳಲ್ಲಿ ಆಗಮನ

ಮಾರ್ಚ್ 4 - 92 ವಿದ್ಯಾರ್ಥಿಗಳು - 9 ವಿಮಾನಗಳಲ್ಲಿ ಆಗಮನ

ಮಾರ್ಚ್ 5 - 90 ವಿದ್ಯಾರ್ಥಿಗಳು - 6 ವಿಮಾನಗಳಲ್ಲಿ ಆಗಮನ

ಮಾರ್ಚ್ 6 - 88 ವಿದ್ಯಾರ್ಥಿಗಳು - 8 ವಿಮಾನಗಳಲ್ಲಿ ಆಗಮನ

ಮಾರ್ಚ್ 7 - 43 ವಿದ್ಯಾರ್ಥಿಗಳು - 6 ವಿಮಾನದಲ್ಲಿ ಆಗಮನ

ಮಾರ್ಚ್ 8 - 57 ವಿದ್ಯಾರ್ಥಿಗಳು - 5 ವಿಮಾನಗಳಲ್ಲಿ ಆಗಮನ

ಮಾರ್ಚ್ 11 - 12 ವಿದ್ಯಾರ್ಥಿಗಳು - 1 ವಿಮಾನದಲ್ಲಿ ಆಗಮನ

ಇದನ್ನೂ ಓದಿ:  Naveen​ ಪೋಷಕರಿಗೆ Siddaramaiah ಸಾಂತ್ವನ; ಪಾರ್ಥೀವ ಶರೀರ ತರಿಸಲು PM modiಗೆ ಪತ್ರ

ಕೊನೆಯ ಬ್ಯಾಚ್ ನಲ್ಲಿ 8 ವಿದ್ಯಾರ್ಥಿಗಳ ಆಗಮನ

ಮಧ್ಯರಾತ್ರಿ 12:20 ಹಾಗೂ 1:45 ಫ್ಲೈಟ್ ಮೂಲಕ ಕೊನೆಯ ಬ್ಯಾಚ್ ವಿದ್ಯಾರ್ಥಿಗಳು ಬೆಂಗಳೂರು ತಲುಪಿದ್ದಾರೆ.  ಎರಡು ಬ್ಯಾಚ್ ನಲ್ಲಿ ಒಟ್ಟು 8 ವಿದ್ಯಾರ್ಥಿಗಳ ಅಗಮಿಸಿದ್ದು, ಉಕ್ರೇನ್ ಭಯಾನಕ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಉಕ್ರೇನ್ ನಿಂದ ದೆಹಲಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ಉಕ್ರೇನ್ ಯುದ್ಧ ವಿವರಿಸಿದ ವಿದ್ಯಾರ್ಥಿ

ಕಳೆದ 14 ದಿನಗಳಿಂದ ಭಾರತಕ್ಕೆ ಬರಲು ಪ್ರಯತ್ನಿಸಿದರು ಸಾಧ್ಯವಾಗಿರಲಿಲ್ಲ.  ಸುಮಿ ಸ್ಟೇಟ್ ಒಳಭಾಗವನ್ನ ಉಕ್ರೇನ್ ಸೈನಿಕರು ಸುತ್ತುವರೆದಿದ್ದರು. ಸುಮಿ ಸ್ಟೇಟ್ ಹೊರಭಾಗದಲ್ಲಿ ರಷ್ಯಾದ ಮಿಲಿಟರಿ ಪಡೆ ಸುತ್ತುವರೆದಿದ್ದರು. ಕೀವ್, ಖಾರ್ಕೀವ್,ಸುಮಿ ಸ್ಟೇಟ್ ರಷ್ಯಾದ ಮಿಲಿಟರಿ ಪಡೆ ಟಾರ್ಗೆಟ್ ಆಗಿತ್ತು.ರಷ್ಯಾದ ಮಿಲಿಟರಿ ಪಡೆ ಮೂಲಭೂತ ಸೌಕರ್ಯ ಗಳ ಸಿಗದಂತೆ ಮಾಡಿದ್ರು.

ವಿದ್ಯುತ್, ನೀರು, ಆಹಾರ ಪೂರೈಕೆಯಲ್ಲಿ ತೊಂದರೆಯಾಗಿತ್ತು.  ಕರ್ಪ್ಯೂ ನಡುವೆ ಎರಡ್ಮೂರು ದಿನ ಹಸಿವಿನಿಂದ ಕಾಲಕಳೆಯಬೇಕಾದ ಪರಿಸ್ಥಿತಿ.  ಎಟಿಎಂಗಳಲ್ಲೂ ಹಣ ಇರಲಿಲ್ಲ. ನವೀನ್ ಮೃತಪಟ್ಟ ಬಳಿಕ  ವಿದ್ಯಾರ್ಥಿಗಳು ಮತ್ತಷ್ಟು ಅಲರ್ಟ್ ಆಗಿದ್ದೆವು. ಕೊನೆಗೂ ಕೇಂದ್ರ ಸರ್ಕಾರ ನಮ್ಮನ್ನು ಸೇಫ್ ಆಗಿ ಕರೆತಂದಿದೆ. ಹಸಿವಿನಿಂದ ಇದ್ದ ನಮ್ಮೆಲ್ಲರಿಗೂ ಆಹಾರ ನೀಡಿ ಕರೆತಂದರು ಈಗ ನಮ್ಮ ಪೋಷಕರನ್ನ ಬಂದು ಸೇರಿದ್ದೇವೆ ಎಂದು ಉಕ್ರೇನ್ ನಿಂದ ಹಿಂದಿರುಗಿದ ವಿದ್ಯಾರ್ಥಿ ಅಜೇಯ್ ಹೇಳಿದ್ದಾರೆ.

ಕರ್ನಾಟಕದ ನವೀನ್ ಸಾವು

ಉಕ್ರೇನ್ (Ukraine) ನಲ್ಲಿ ನಡೆದ ದಾಳಿಯಲ್ಲಿ ಕನ್ನಡಿಗ ನವೀನ್ (Naveen) ಸಾವನ್ನಪ್ಪಿದ್ದು, ಮೃತದೇಹ ತರಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಶೇಖರ ಗೌಡ ಅವರ ಎರಡನೇ ಮಗ ನವೀನ್ ಕಳೆದ ಮೂರು ವರ್ಷಗಳಿಂದ ಉಕ್ರೇನ್​ನಲ್ಲಿ ಎಂಬಿಬಿಎಸ್​ ವಿದ್ಯಾಭ್ಯಾಸ ಮಾಡುತ್ತಿದ್ದರು.

ಇದನ್ನೂ ಓದಿ:  Ukraine Crisis: ಬಾಂಬ್ ಬೀಳೋದು ಕಾಣ್ತಿತ್ತು, ಕತ್ತಲಲ್ಲು ಲೈಟ್ ಹಾಕದೆ ಕಾರ್ ಡ್ರೈವ್ ಮಾಡ್ಬೇಕಿತ್ತು, ಉಕ್ರೇನ್ ಸ್ಥಿತಿಯನ್ನು ಬಿಚ್ಚಿಟ್ಟ ಸುನೇಹಾ

ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ಊರಿಗೆ ಬಂದು ಹೋಗಿದ್ದ. ಉಕ್ರೇನ್ ​ನಲ್ಲಿ ಯುದ್ಧ ಆರಂಭವಾದಗಿನಿಂದ ನವೀನ್​ ಕುಟುಂಬದ ಜೊತೆ ಮಾತನಾಡುತ್ತಿದ್ದರು. ಯುದ್ಧ ಆರಂಭವಾದಗಿನಿಂದ ಮಗ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದರು.
Published by:Mahmadrafik K
First published: