Bengaluru: ಗುಂಡಿಗೆ ಗಟ್ಟಿ ಇದ್ದರೆ ಮಾತ್ರ ಈ ರೋಡ್‌ಗೆ ಬನ್ನಿ! ಇಲ್ಲಿ ವಾಹನ ಸವಾರರ ಕಷ್ಟ ಕೇಳೋರಿಲ್ಲ

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ್ದ ಈ ಬಸ್ ಲೈನ್ ನ ಬೊಲಾರ್ಡ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅದಷ್ಟೇ ಅಲ್ಲದೆ ಬೊಲಾರ್ಡ್ ಗಳನ್ನ ಅಳವಡಿಸಲು ಕಬ್ಬಿಣ ಹಾಗೂ ಫೈಬರ್ ಕ್ಯಾಪ್ ಬಳಕೆ ಮಾಡಲಾಗಿದೆ. ಸದ್ಯ ಬೊಲಾರ್ಡ್ ಕಿತ್ತು ಬಿದ್ದಿದ್ರೆ, ಈ ಫೈಬರ್ ಗಳು ದ್ವಿಚಕ್ರ ವಾಹನ ಸವಾರರಿಗೆ ಯಮಸ್ವರೂಪಿ ರಸ್ತೆಯಾಗಿ ಮಾರ್ಪಾಟಾಗಿದೆ.

ಅಪಾಯಕ್ಕೆ ಆಹ್ವಾನ ನೀಡುವ ರಸ್ತೆ

ಅಪಾಯಕ್ಕೆ ಆಹ್ವಾನ ನೀಡುವ ರಸ್ತೆ

 • Share this:
  ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ರಸ್ತೆ (Road) ಗುಂಡಿಗಳು ಯಮನ ಪಾದ ಸೇರಿಸುವ ಹಾಟ್ ಸ್ಪಾಟ್ (Hot Spot) ಗಳು. ಅದರಲ್ಲೂ ನಮ್ಮ ಮೆಟ್ರೋ (Namma Metro) ಕಾಮಗಾರಿ ಸೇರಿಕೊಂಡು ಬಿಟ್ಟರೆ ಏನಾಗುತ್ತೆ? ಸದಾ ಬ್ಯುಸಿ (Busy) ರೋಡ್ ಕಾಮಗಾರಿ ಹೆಸರಿನಲ್ಲಿ ಹಾಳಾಗಿದೆ. ಬೈಕ್ (Bike) ಸವಾರರಿಗೆ ಯಮಸ್ವರೂಪಿ ಡೇಂಜರ್ ರೋಡ್ (Danger Road) ಆಗಿ ಮಾರ್ಪಾಡಾಗಿದೆ. ಅದು ಐಟಿ-ಬಿಟಿ (IT-BT) ಕಂಪನಿಗಳ (Company) ತವರೂರು. ಸದಾ ಟ್ರಾಫಿ(Traffic)ಕ್ ನಿಂದ ತುಂಬಿ ತುಳುಕುತ್ತಿದ್ದ ಏರಿಯಾ (Area). ಬಿಎಂಟಿಸಿ (BMTC) ತನ್ನ ಸಂಸ್ಥೆಯ ಬಸ್ ಗಳು (Bus) ಪ್ರತ್ಯೇಕ ಮಾರ್ಗವಾಗಿ ಸಂಚರಿಸೋಕೆ ಅಂತಲೇ ಬಸ್ ಲೈನ್ ವ್ಯವಸ್ಥೆ ಕಲ್ಪಿಸಿಕೊಂಡಿತ್ತು. ಮಹದೇವಪುರ, ವೈಟ್ ಫೀಲ್ಡ್, ಸಿಲ್ಕ್ ಬೋರ್ಡ್ ಸೇರಿದಂತೆ ಹಲವು ಭಾಗಗಳಲ್ಲಿ ಈ ಪ್ರತ್ಯೇಕ ಬಸ್ ಲೈನ್ ಇದೆ. ಆದ್ರೆ, ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರ ಮಾರ್ಗವಾಗಿ ನಿರ್ಮಾಣವಾಗ್ತಿರೋ ಮೆಟ್ರೋ ಕಾಮಗಾರಿಗೆ ಈ ಟ್ರಾಫಿಕ್ ಬೊಲಾರ್ಡ್ (Traffic Bollard) ಅಡ್ಡಿಯಾಗ್ತಿದೆ.

  ಬೋಲಾರ್ಡ್‌ಗಳಿಂದಲೇ ಕಿರಿಕಿರಿ

  ಬಿಎಂಟಿಸಿ ಬಸ್ ಸಂಚರಿಸೋಕೆ ಅಂತಲೇ ಹಾಕಿದ್ದ ಬಸ್ ಲೈನ್ 40ಕ್ಕೂ ಹೆಚ್ಚು ಬೊಲಾರ್ಡ್ ಗಳನ್ನು ಬಿಎಂಆರ್‌ಸಿಎಲ್‌ ಕಿತ್ತು ಬಿಸಾಡಿದೆ ಎಂಬ ಆರೋಪವಿದೆ.  ಫ್ಯಾಕ್ಟರಿಗೆ ಸಂಪರ್ಕ ಕಲ್ಪಿಸೊ ಈ ಮಹದೇವಪುರ ರಸ್ತೆಯಲ್ಲಿ ಜನ ಜೀವ ಕೈಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

  ಲಕ್ಷಾಂತರ ರೂಪಾಯಿಯ ಬೋಲಾರ್ಡ್‌ ವ್ಯರ್ಥ

  ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ್ದ ಈ ಬಸ್ ಲೈನ್ ನ ಬೊಲಾರ್ಡ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅದಷ್ಟೇ ಅಲ್ಲದೆ ಬೊಲಾರ್ಡ್ ಗಳನ್ನ ಅಳವಡಿಸಲು ಕಬ್ಬಿಣ ಹಾಗೂ ಫೈಬರ್ ಕ್ಯಾಪ್ ಬಳಕೆ ಮಾಡಲಾಗಿದೆ. ಸದ್ಯ ಬೊಲಾರ್ಡ್ ಕಿತ್ತು ಬಿದ್ದಿದ್ರೆ, ಈ ಫೈಬರ್ ಗಳು ದ್ವಿಚಕ್ರ ವಾಹನ ಸವಾರರಿಗೆ ಯಮಸ್ವರೂಪಿ ರಸ್ತೆಯಾಗಿ ಮಾರ್ಪಾಟಾಗಿದೆ.

  ಇದನ್ನೂ ಓದಿ: Train: ಪ್ರಯಾಣಿಕರೇ ಗಮನಿಸಿ, ಬೆಂಗಳೂರು-ಮಂಗಳೂರು ನಡುವಿನ ರೈಲುಗಳು ಸದ್ಯಕ್ಕೆ ಹೊರಡುವುದಿಲ್ಲ!

  ಭಾರೀ ವಾಹನಗಳಿಂದ ಮತ್ತಷ್ಟು ಅಪಾಯ

  ಈ ರಸ್ತೆಯಲ್ಲಿ ಭಾರೀ ಗಾತ್ರದ ವಾಹನಗಳು ಓಡಾಡುತ್ತಿರುವ ಹಿನ್ನೆಲೆ ಈಗಾಗ್ಲೇ ಫೈಬರ್ ಕ್ಯಾಪ್ ಗಳು ರಭಸಕ್ಕೆ ಪುಡಿಪುಡಿಯಾಗಿವೆ. ಕಬ್ಬಿಣದ ರೀತಿಯ ಮೊಳೆಗಳು ವಾಹನಗಳ ಟೈಯರ್ ಗೆ ತಗುಲಿ ಪಂಚರ್ ಆಗ್ತಿದೆ. ಇದು ದ್ವಿಚಕ್ರ ವಾಹನಗಳಿಗೆ ಮಾತ್ರವಲ್ಲ, ಸವಾರ ಹಾಗೂ ಹಿಂಬದಿಯಿಂದ ಬರುವ ಸವಾರರಿಗೂ ತೊಂದರೆಯುಂಟಾಗುತ್ತೆ.

  ಮೆಟ್ರೋ ಕಾಮಗಾರಿಯಿಂದ ಕಿರಿಕಿರಿ

  ಸದ್ಯ ಸೆಂಟ್ರಲ್ ಸಿಲ್ಕ್ ಬೋರ್ಡ್ ಟೂ ಕೆ.ಆರ್.ಪುರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಸದ್ಯ ಮಹದೇವಪುರ, ಹೆಚ್.ಆರ್.ಆರ್ ಲೇಔಟ್, ಆಗರ ಕೆರೆ ಸೇರಿದಂತೆ ಹಲವು ರಸ್ತೆಗಳಲ್ಲಿ ಮೆಟ್ರೊ ಕಾಮಗಾರಿ ನಡೆಸಲು ಈ ಟ್ರಾಫಿಕ್ ಬೊಲಾರ್ಡ್ ಅಡ್ಡಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳನ್ನ ತೆರೆಯುವ ಕೆಲಸ ಮಾಡ್ತೀವಿ ಎಂದು ಅಧಿಕಾರಿಗಳು ಹೇಳಿದ್ದರು.

  ಈಗ ಉಲ್ಟಾ ಹೊಡೆಯುತ್ತಿರೋ ಅಧಿಕಾರಿಗಳು

  ಆದ್ರೆ, ಈಗ ಬೊಲಾರ್ಡ್ ತೆರವನ್ನ ನಮ್ಮ ಮೆಟ್ರೋ ಮಾಡಿಲ್ಲ. ವಾಹನ ಸವಾರರೇ ಮುರಿದು ಹಾಕಿದ್ದಾರೆ ಅಂತ ಬಿಎಂಆರ್ ಸಿಎಲ್ ಸ್ಪಷ್ಟನೆ ನೀಡುತ್ತದೆ‌.

  ಇದನ್ನೂ ಓದಿ: Bengaluru To Kashmir: ಬೆಂಗಳೂರಿನ ಜನರೆಲ್ಲ ಕಾಶ್ಮೀರಕ್ಕೆ ಹೋಗುತ್ತಾ ಇದ್ದಾರಂತೆ! ಅದ್ಯಾಕೆ ಅಂತ ನಿಮಗೆ ಗೊತ್ತಾ?

  ಬಿಎಂಟಿಸಿ, ಬಿಎಂಆರ್‌ಸಿಎಲ್‌ ವಿರುದ್ಧ ಸಾರ್ವಜನಿಕರ ಆಕ್ರೋಶ

  ಅಧಿಕಾರಿಗಳ ಬೇಜವಾಬ್ದಾರಿಯಿಂದ ನಾವು ನರಕಯಾತನೆ ಅನುಭವಿಸ್ತೀವಿ ಎನ್ನುತ್ತಾರೆ ಆಟೋ ಸವಾರರು. ಒಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ದಿನನಿತ್ಯ ಅಪಘಾತವಾಗುತ್ತಿದ್ರೂ, ಕಿಲ್ಲರ್ ರಸ್ತೆಯಲ್ಲಿರುವ ಈ ಫೈಬರ್ ಕ್ಯಾಪ್ ಮತ್ತು ಕಬ್ಬಿಣದ ಮೊಳೆಗಳನ್ನ ಆದಷ್ಟು ಬೇಗ ತೆರವುಗೊಳಿಸಬೇಕಿದೆ.

  (ವರದಿ: ಶರಣ ವೈ.ಎಂ.)
  Published by:Annappa Achari
  First published: