ನನ್ನ ಅವಧಿಯಲ್ಲಿ Bitcoin ಹಗರಣ ನಡೆದಿದ್ದರೆ, ವಿಪಕ್ಷವಾಗಿದ್ದ BJP ಆಗ ಏಕೆ ಸುಮ್ಮನಿತ್ತು; Siddaramaiah ಕಿಡಿ

2018 ರಲ್ಲಿ ನಾನು ಸಿಎಂ ಇದ್ದೆ, ನಾನು ಇಲ್ಲ ಅಂತ ಹೇಳಿಲ್ಲ. ಆಗ ಯಾರು ದೂರು ಕೊಟ್ಟಿಲ್ಲ, ಕೇಸ್ ಸಹ ಇಲ್ಲ. ಅದು ಹೇಗೆ ನಮಗೆ ಗೊತ್ತಾಗುತ್ತೆ. ಒಂದು ವೇಳೆ ಇವರಿಗೆ ಗೊತ್ತಿದ್ರೆ ಯಾಕೆ ಸುಮ್ಮನಿದ್ರು. ವಿರೋಧ ಪಕ್ಷದಲ್ಲಿ ಇದ್ದವರು ಅದನ್ನ ಹೊರತರಬೇಕಿತ್ತು. ಅಂದು ಸುಮ್ಮನೆ ಇದ್ದಿದ್ದು ಯಾಕೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು: ಬಿಟ್​​​ಕಾಯಿನ್​ ಹಗರಣ (Bitcoin scam) ಸಂಬಂಧ ರಾಜ್ಯ ಸರ್ಕಾರ (Karnataka BJP Government) ಹಾಗೂ ವಿಪಕ್ಷದ (Opposition Party) ಮಧ್ಯೆ ಆರೋಪ-ಪ್ರತ್ಯಾರೋಪಗಳ ವಾಗ್ಯುದ್ಧ ಮುಂದುವರೆದಿದೆ. ಬಿಜೆಪಿ ನಾಯಕರ ಸರಣಿ ಸುದ್ದಿಗೋಷ್ಠಿಗಳಿಗೆ, ಆರೋಪಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (opposition leader Siddaramaiah) ತಿರುಗೇಟು ನೀಡಿದರು. ಪ್ರಕರಣದಲ್ಲಿ ಭಾಗಿಯಾದವರ ಹೆಸರು ಅವರಿಗೆ ಗೊತ್ತಾಗಬೇಕು. ಸರ್ಕಾರ ಅವರದ್ದೇ ಇರೋದು. ಆಡಳಿತ ನಡೆಸಲು ಆಗಲ್ಲ ಅಂದ್ರೆ ಅಧಿಕಾರ ಬಿಟ್ಟು ಹೋಗಲಿ. 2018 ರಲ್ಲಿ ನಾನು ಸಿಎಂ ಇದ್ದೆ, ನಾನು ಇಲ್ಲ ಅಂತ ಹೇಳಿಲ್ಲ. ಆಗ ಯಾರು ದೂರು ಕೊಟ್ಟಿಲ್ಲ, ಕೇಸ್ ಸಹ ಇಲ್ಲ. ಅದು ಹೇಗೆ ನಮಗೆ ಗೊತ್ತಾಗುತ್ತೆ. ಒಂದು ವೇಳೆ ಇವರಿಗೆ ಗೊತ್ತಿದ್ರೆ ಯಾಕೆ ಸುಮ್ಮನಿದ್ರು. ವಿರೋಧ ಪಕ್ಷದಲ್ಲಿ ಇದ್ದವರು ಅದನ್ನ ಹೊರತರಬೇಕಿತ್ತು. ಅಂದು ಸುಮ್ಮನೆ ಇದ್ದಿದ್ದು ಯಾಕೆ ಎಂದು ಪ್ರಶ್ನಿಸಿದರು.

‘ಸಿಂಹ ಒಬ್ಬ ಅಪ್ರಬುದ್ಧ ರಾಜಕಾರಣಿ’

ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಆರ್​.ಅಶೋಕ್​ ಗೆ ಸಿದ್ದರಾಮಯ್ಯ ಮಾತಿನಲ್ಲೇ ತಿವಿದರು. ನಾವು ಇವರ ಪ್ರಶ್ನೆಗೆ ಉತ್ತರ ನೀಡುವ ಮೊದಲು ಕಾಂಗ್ರೆಸ್​​ ರಾಜ್ಯ ಉಸ್ತುವಾರಿ ರಂದೀಪ್​​ ಸುರ್ಜೇವಾಲ ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ. ನಲಪಾಡ್ ಪ್ರಕರಣ ಅದು ಕ್ರಿಮಿನಲ್ ಕೇಸ್ ದಾಖಲಾಗಿದೆ. ಈಗ ಬೊಮ್ಮಯಿ ಗೃಹ ಸಚಿವರಾಗಿದ್ದಾಗ ಬಿಟ್​​ಕಾಯಿನ್​ ಹಗರಣ ನಡೆದಿದೆ. ಸಚಿವ ಆರ್​.ಆಶೋಕ್ ಹೋಂ ಮಿನಿಸ್ಟರ್ ಆಗಿರಲಿಲ್ಲ. ಆ ಕೇಸ್​​ನಲ್ಲಿ ಯಾರಿದ್ದಾರೆ ಅನ್ನೋದನ್ನ ಬೊಮ್ಮಯಿ ಹೇಳಲಿ ಎಂದು ಸವಾಲೆಸೆದರು. ಇನ್ನು ಸಂಸದ ಪ್ರತಾಪ್​ ಸಿಂಹ ಹೇಳಿಕೆಗಳ ಬಗ್ಗೆ ನಾನು ಮಾತಾಡಲ್ಲ. ಅವನು ಅಪ್ರಬುದ್ಧ ರಾಜಕಾರಣಿ ಎಂದು ಏಕವಚನದಲ್ಲಿ ವ್ಯಂಗ್ಯವಾಡಿದರು.

ರಾಜಕಾರಣಕ್ಕಾಗಿ ಇಲ್ಲದನ್ನು ಹೇಳುತ್ತಿದ್ದಾರೆ

ಇಂದು ಬೆಳಗ್ಗೆ ಬಿಟ್ ಕಾಯಿನ್ ಹಗರಣ ಕುರಿತು ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಅವರ ಬಳಿ ಏನಾದರೂ ದಾಖಲೆ ಇದ್ರೆ ಇಡಿ, ಪೊಲೀಸರಿಗೆ ಕೊಡಿ ಎಂದು ಹೇಳಿದ್ದೇನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುತ್ತೇವೆ ಅಂತ ಹೇಳಿದ್ದೇನೆ. ಆದರೆ ದಾಖಲೆ ಇಲ್ದೆ ಅವರು ಇಲ್ಲದನ್ನು‌ ಜೀವಂತವಾಗಿ ಇಡಲು ಹೊರಟಿದ್ದಾರೆ. ಕೇವಲ ಇದನ್ನು ಕಾಂಗ್ರೆಸ್  ರಾಜಕಾರಣಕ್ಕೆ ಅಷ್ಟೇ ಬಳಸುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.

ಪ್ರತಾಪ್​​ ಸಿಂಹ ವಿರುದ್ಧ ಪ್ರತಿಭಟನೆ

ಕಾಂಗ್ರೆಸ್​ ನಾಯಕ ಪ್ರಿಯಾಂಕ್​​ ಖರ್ಗೆ ಹೆಸರು ಗಂಡಸಿದ್ದೋ ಹೆಣ್ಣಿನದ್ದೋ ಕ್ಲಾರಿಟಿ ಇಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದ ಪ್ರತಿಭಟನೆ ನಡೆಸಿದರು. ಸಂಸದ ಪ್ರತಾಪ್ ಸಿಂಹ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಒಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಾಪ್ ಸಿಂಹ ಹಾಗೂ ಬಿಜೆಪಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಬಳಿಕ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸಂಸದ ಪ್ರತಾಪ್ ಸಿಂಗ್ ಪ್ರತಿಕೃತಿ ದಹನ ಮಾಡಿದರು. ಸಂವಿಧಾನ ವಿರೋಧಿ, ದಲಿತ ವಿರೋಧಿ ಪ್ರತಾಪ್ ಸಿಂಹ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: Bitcoin ಹಗರಣದಲ್ಲಿ ಭಾಗಿಯಾಗಿಲ್ಲವಾದರೆ BJP ನಾಯಕರು ಸಿಡಿಮಿಡಿಗೊಳ್ಳುತ್ತಿರುವುದು ಏಕೆ: Priyank Kharge ಪ್ರಶ್ನೆ

ಕಾಂಗ್ರೆಸ್​ ನಾಯಕರ ಆರೋಪಗಳಿಗೆ ಬಿಜೆಪಿ ನಾಯಕರು ಇಂದೂ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದರು. ವಿಧಾನಸೌಧದಲ್ಲಿ ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಕೆ. ಗೋಪಾಲಯ್ಯ, ಶಾಸಕ ಪ್ರೀತಂ ಗೌಡ ಪತ್ರಿಕಾಗೋಷ್ಠಿ ನಡೆಸಿದರು. ಬಿಟ್ ಕಾಯಿನ್ ನಲ್ಲಿ ಅಕೌಂಟ್ ಯಾರದ್ದು ಇದೆ? ಎಲ್ಲಿದೆ? ಎಂದು ಸಿದ್ದರಾಮಯ್ಯ ತಿಳಿಸಲಿ. ಪ್ರಧಾನಿ ಮೋದಿ ಅಮೆರಿಕಾಗೆ ಹೋದಾಗ ಬಿಟ್ ಕಾಯಿನ್ ಬಗ್ಗೆ ತನಿಖೆ ಮಾಡಲಿ ಎಂದು ಅಮೆರಿಕಾದ ಅಧ್ಯಕ್ಷ ಹೇಳಿದ್ದಾರಂತೆ. ಅಲ್ಲಿ ಸುರ್ಜೇವಾಲ ಎಲ್ಲಿದ್ದರು? ಇವರು ಅಮೆರಿಕಾದ ರಾಯಭಾರಿಯಾಗಿ ಹೋಗಿದ್ದರಾ?  ನೋಡದೆ, ಹೋಗದೆ, ಕೇಳದೆ ಆರೋಪ ಮಾಡುತ್ತಾರೆ. ಅಮೆರಿಕಾದ ಅಧ್ಯಕ್ಷರು ಮೋದಿ ಬಗ್ಗೆ ಮಾತನಾಡುವಾಗ ಇವರು ಎಲ್ಲಿ ಕೂತಿದ್ದರು? ಸುಳ್ಳು ಹೇಳಲು ಮಿತಿ ಇರಬೇಕು ಎಂದು ಕಾಂಗ್ರೆಸ್​​ ರಾಜ್ಯ ಉಸ್ತುವಾರಿ ರಂದೀಪ್​ ಸುರ್ಜೇವಾಲಗೆ ತಿರುಗೇಟು ನೀಡಿದರು. ಬಿಳಿ ಬಟ್ಟೆ ಹಾಕಿದ್ದಾರೆ ಎಂದು ಮಸಿ ಎಸೆದು ಓಡಿ ಹೋಗುವ ಪ್ರಯತ್ನ ಕಾಂಗ್ರೆಸನದ್ದು ಎಂದು ಕಿಡಿಕಾರಿದರು.
Published by:Kavya V
First published: