ಲಾಕ್​​ಡೌನ್​ನಿಂದ ಸರ್ಕಾರದ ಬೊಕ್ಕಸಕ್ಕೆ ಪೆಟ್ಟು; ಸಚಿವರ 1 ವರ್ಷದ ವೇತನ, ಶಾಸಕ 1 ತಿಂಗಳ ವೇತನ ಕಡಿತ!

ಸಚಿವರು, ಶಾಸಕರ ವೇತನ ಕಡಿತದಿಂದ ಕೋಟ್ಯಂತರ ಹಣ ಉಳಿಯಲಿದೆ. ಈ ಹಣವನ್ನು ಕೋವಿಡ್​ ನಿರ್ವಹಣೆಗೆ ಬಳಸಲು ರಾಜ್ಯ ಸರ್ಕಾರ ಮುಂದಾಗಿದೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

 • Share this:
  ಬೆಂಗಳೂರು : ಕೊರೋನಾ ಬೇಗೆಯಲ್ಲಿ ಬೇಯುತ್ತಿರುವ ಕರ್ನಾಟಕವನ್ನು ಪಾರು ಮಾಡಲು ರಾಜ್ಯ ಸರ್ಕಾರ ಮತ್ತೆ ಲಾಕ್​​ಡೌನ್​ ಮೊರೆ ಹೋಗಿದೆ. ಲಾಕ್​ಡೌನ್​ನಿಂದ ಆರ್ಥಿಕತೆಗೆ ಹೊಡೆತ ಬೀದಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗುತ್ತಿದೆ. ರಾಜ್ಯದ ಮೇಲೆ ಲಾಕ್​​ಡೌನ್​​ ಹೇರಿರುವ ಸರ್ಕಾರ ಕೋವಿಡ್​ ಪರಿಸ್ಥಿತಿಯನ್ನು ನಿರ್ವಹಿಸುವ ಒತ್ತಡದಲ್ಲಿದೆ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ ನಷ್ಟವನ್ನು ಸರಿದೂಗಿಸಲು ಸಚಿವರ 1 ವರ್ಷದ ವೇತನ ಹಾಗೂ ಶಾಸಕರ 1 ತಿಂಗಳ ವೇತನ ಕಡಿತಗೊಳಿಸಲು ಸಿಎಂ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಏ.26ರಂದೇ ನ್ಯೂಸ್​ 18 ಕನ್ನಡ ಸುದ್ದಿ ವರದಿ ಮಾಡಿತ್ತು.

  ಏ.26ರಂದು ನಡೆದ ಸಭೆಯಲ್ಲಿ ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ಹೊರತುಪಡಿಸಿ ಸಚಿವರು- ಶಾಸಕರು ವೇತನ ಕಡಿತ ನಿರ್ಧಾರದ ಬಗ್ಗೆ ಚರ್ಚೆ ನಡೆದಿದೆ. ಸಚಿವರು, ಶಾಸಕರ ವೇತನ ಕಡಿತದಿಂದ  ಕೋಟ್ಯಂತರ ಹಣ ಸರ್ಕಾರಕ್ಕೆ ಉಳಿಯಲಿದೆ. ಈ ಹಣವನ್ನು ಕೋವಿಡ್​ ನಿರ್ವಹಣೆಗೆ ಬಳಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಭೆಯಲ್ಲಿ ಬಹುತೇಕ ಸಚಿವರು ತಮ್ಮ ವೇತನ ಕಡಿತಕ್ಕೆ ಸಮ್ಮತಿ ಸೂಚಿಸಿದ್ದಾರೆ.

  ಕೋವಿಡ್​ ಸಮಯದಲ್ಲಿ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್​ ಇಲಾಖೆಯನ್ನು ವೇತನ ಕಡಿತದಿಂದ ಹೊರಗಿಡುವ ಬಗ್ಗೆ ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಇನ್ನು ಸರ್ಕಾರಿ ನೌಕರರ 1 ತಿಂಗಳ ವೇತನ ಕಡಿತದ ಬಗ್ಗೆ ಚರ್ಚೆ ನಡೆದಿತ್ತಾದರೂ ಆ ನಿರ್ಧಾರವನ್ನು ಕೈ ಬಿಡಲಾಗಿದೆ. ಸದ್ಯ ಸಚಿವ 1 ವರ್ಷದ ವೇತನ, ಶಾಸಕರ 1 ತಿಂಗಳ ವೇತನ ಹಣವನ್ನು ಕೋವಿಡ್​ ನಿರ್ವಹಣೆಗೆ ಸರ್ಕಾರ ಬಳಸಿಕೊಳ್ಳಲಿದೆ.

  ಇನ್ನು ದೇಶದಲ್ಲಿ ಬುಧವಾರ 3,79,257 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 2,69,507 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,83,76,524ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಬುಧವಾರ 3,645 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,04,832ಕ್ಕೆ ಏರಿಕೆ ಆಗಿದೆ. ಈವರೆಗೆ 15,00,20,648 ಜನರಿಗೆ ಲಸಿಕೆ ಹಾಕಲಾಗಿದೆ.
  Published by:Kavya V
  First published: