Omicron ಸೋಂಕಿತರಿಬ್ಬರೂ 2 ಡೋಸ್ ಲಸಿಕೆ ಪಡೆದಿದ್ದರು; ಬೆಂಗಳೂರಲ್ಲಿ ಸದ್ಯ 1 ಓಮಿಕ್ರಾನ್ ಕೇಸ್ ಮಾತ್ರ ಇರೋದು

66 ಹಾಗೂ 46 ವರ್ಷದ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್​​ ರೂಪಾಂತರಿ ಸೋಂಕು ಇರುವುದು ದೃಢಪಟ್ಟಿದೆ. 46 ವರ್ಷದ ವ್ಯಕ್ತಿ ಸ್ಥಳೀಯರಾಗಿದ್ದು, ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲದಿದ್ದರೂ ಸೋಂಕು ಪತ್ತೆಯಾಗಿದೆ. ಸದ್ಯ ಇವರಿಗೆ ನಗರ ಬೌರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕಳೆದೊಂದು ವಾರದಿಂದ ವಿಶ್ವದ ಹಲವೆಡೆ ಪತ್ತೆಯಾಗಿ ಆತಂಕ ಹುಟ್ಟಿಸಿದ್ದ ಕೊರೊನಾದ ಬಹು ರೂಪಾಂತರಿ ಸೋಂಕು ಓಮಿಕ್ರಾನ್(Corona Variant Omicron)​ ಭಾರತಕ್ಕೆ ವಕ್ಕರಿಸಿಯೇ ಬಿಟ್ಟಿದೆ. ಅದರಲ್ಲೂ ಮೊದಲ ಪ್ರಕರಣ ನಮ್ಮ ರಾಜ್ಯದಲ್ಲೇ ಪತ್ತೆಯಾಗಿದೆ(First Case in Karnataka). ಬೆಂಗಳೂರಲ್ಲೇ ಎರಡೂ ಓಮಿಕ್ರಾನ್​​ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು(2 Omicron Cases Detected In Bengaluru) , ಸಿಲಿಕಾನ್​ ಸಿಟಿ ಮಂದಿಯನ್ನು ಆತಂಕಕ್ಕೆ ದೂಡಿದೆ. 66 ಹಾಗೂ 46 ವರ್ಷದ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್​​ ರೂಪಾಂತರಿ ಸೋಂಕು ಇರುವುದು ದೃಢಪಟ್ಟಿದೆ. 46 ವರ್ಷದ ವ್ಯಕ್ತಿ ಸ್ಥಳೀಯರಾಗಿದ್ದು, ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲದಿದ್ದರೂ ಸೋಂಕು ಪತ್ತೆಯಾಗಿದೆ. ಸದ್ಯ ಇವರಿಗೆ ನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 66 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕಾದ ಮೂಲದವರಾಗಿದ್ದು, ಅವರೀಗ ಬೆಂಗಳೂರಲ್ಲಿ ಇಲ್ಲ. ಕೊರೊನಾ ನೆಗೆಟಿವ್​ ವರದಿ ಹಿನ್ನೆಲೆಯಲ್ಲಿ ದುಬೈಗೆ​ ಹೋಗಿದ್ದಾರೆ. ಆದರೆ ಅವರಿಂದ ಸಂಗ್ರಹಿಸಲಾಗಿದ್ದ ಸ್ಯಾಂಪಲ್​​ನ ರಿಸಲ್ಟ್​ ಈಗ ಬಂದಿದೆ. ಅವರಲ್ಲಿ ಓಮಿಕ್ರಾನ್​ ಇರುವುದು ಪತ್ತೆಯಾಗಿದೆ.

ಇಬ್ಬರೂ ಸೋಂಕಿತರು ಲಸಿಕೆ ಪಡೆದಿದ್ದರು

ಭಾರತದಲ್ಲೇ ಮೊದಲು ಓಮಿಕ್ರಾನ್​​ ಸೋಂಕಿಗೆ ತುತ್ತಾಗಿರುವ ಇಬ್ಬರೂ ವ್ಯಕ್ತಿಗಳು ಎರಡೂ ಡೋಸ್​ ಕೋವಿಡ್​ ಲಸಿಕೆ ಪಡೆದುಕೊಂಡಿದ್ದಾರೆ. ಕೊರೊನಾ ಲಸಿಕೆ ಪಡೆದಿದ್ದರೂ ಸೋಂಕು ಹಬ್ಬಿದೆ ಎಂಬ ಅಂಶ ಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಆದರೆ ತಜ್ಞರು ಇಲ್ಲಿಯವರೆಗೂ ಹೇಳಿರುವ ಪ್ರಕಾರ, ಲಸಿಕೆ ಪಡೆದರೂ ಸೋಂಕು ಬರುವ ಸಾಧ್ಯತೆಗಳಿವೆ. ಆದರೆ ಲಸಿಕೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಸೋಂಕು ತಗುಲಿದರೂ ಹೆಚ್ಚಿನ ಅಪಾಯ ಇರುವುದಿಲ್ಲ ಎಂದು ಹೇಳಿದ್ದಾರೆ.

ಬಿಬಿಎಂಪಿ ಫುಲ್​ ಅಲರ್ಟ್​

ಇನ್ನು ಬೆಂಗಳೂರಿಲ್ಲಿ ಓಮಿಕ್ರಾನ್​ ಪತ್ತೆಯಾಗುತ್ತಿದ್ದಂತೆ ಬಿಬಿಎಂಪಿ ಫುಲ್​ ಅಲರ್ಟ್​​ ಆಗಿದೆ. ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸೋಂಕಿತರನ್ನು ಐಸೋಲೇಟ್​ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಿತರನ್ನು ಹುಡುಕಿ ಐಸೋಲೇಷನ್​ಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟೇ ಬಿಡ್ತು ಓಮಿಕ್ರಾನ್ ವೈರಸ್: ಬೆಂಗಳೂರಲ್ಲಿ 2 Omicron ಕೇಸ್​ ದೃಢ

ಓಮಿಕ್ರಾನ್ ಸೋಂಕಿನ ಲಕ್ಷಣಗಳು

ಹೆಚ್ಚಿನ ರೋಗಿಗಳು ಲಕ್ಷಣ ರಹಿತರಾಗಿದ್ದಾರೆ.  ವರದಿಗಳ ಪ್ರಕಾರ, ಇತರ ದೇಶಗಳಲ್ಲಿ ಈ ಹೊಸ ರೂಪಾಂತರದೊಂದಿಗೆ ಕಂಡುಬಂದ ರೋಗಿಗಳು ತೀವ್ರ ಅನಾರೋಗ್ಯವನ್ನು ವರದಿ ಮಾಡಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ. ಗಂಟಲು ಕೆರೆತ, ವಿಪರೀತ ಸುಸ್ತು, ಲಘು ಜ್ವರ ಇವು ಈ ಓಮಿಕ್ರಾನ್​​ನ ಕೆಲವು ಲಕ್ಷಣಗಳಾಗಿವೆ.
ದೇಶದಲ್ಲಿ ಪತ್ತೆಯಾದ ಒಮಿಕ್ರಾನ್ ಕೊರೋನಾ ವೈರಸ್ ರೂಪಾಂತರದ ಒಟ್ಟು 19 ಪ್ರಕರಣಗಳಲ್ಲಿ 16 ಲಕ್ಷಣರಹಿತವಾಗಿವೆ ಎಂದು ಬೋಟ್ಸ್ವಾನಾದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

COVID-19 ರೂಪಾಂತರ ಓಮಿಕ್ರಾನ್ ಸೋಂಕಿನ ಮುಖ್ಯ ಲಕ್ಷಣಗಳು:

ಗಂಟಲು ಕೆರೆತ
ಮೈ-ಕೈ ನೋವು, ತಲೆನೋವು, ಆಯಾಸ,
ಹೆಚ್ಚಿನ ತಾಪಮಾನ (ಎಲ್ಲಾ ಸಂದರ್ಭಗಳಲ್ಲಿ ಅಲ್ಲ)
ಹೊಸ, ನಿರಂತರ ಕೆಮ್ಮು (ಎಲ್ಲಾ ಸಂದರ್ಭಗಳಲ್ಲಿ ಅಲ್ಲ)
ನಿಮ್ಮ ವಾಸನೆ ಅಥವಾ ರುಚಿಯ ಗ್ರಹಿಕೆ ನಷ್ಟ (ಎಲ್ಲಾ ಸಂದರ್ಭಗಳಲ್ಲಿ ಅಲ್ಲ)

ಕೊರೊನಾಗೆ ಮೊದಲ ಬಲಿ ಕರ್ನಾಟಕದಲ್ಲೇ ಆಗಿತ್ತು
ದೇಶದಲ್ಲಿ ಕೇರಳ ರಾಜ್ಯದಲ್ಲಿ ಮೊದಲು ಕೊರೊನಾ ಸೋಂಕು ಪತ್ತೆಯಾದರೆ, ರಾಜ್ಯದ ಕಲಬುರಗಿ ವ್ಯಕ್ತಿ ದೇಶದಲ್ಲೇ ಕೊರೊನಾಗೆ ಬಲಿಯಾದ ಮೊದಲನೆಯವರಾಗಿದ್ದರು. ಈಗ ಕೊರೊನಾದ ಅಪಾಯಕಾರಿ ರೂಪಾಂತರವಾದ ಓಮಿಕ್ರಾನ್​​ ಕರ್ನಾಟಕದಲ್ಲೇ ಮೊದಲು ಪತ್ತೆಯಾಗಿರೋದು ಕನ್ನಡಿಗರಲ್ಲಿ ಆತಂಕ ಮೂಡಿಸಿದೆ.
Published by:Kavya V
First published: