ಇಲ್ಲೊಬ್ಬ ಕಳ್ಳ ಯಾಕೆ ಕಳ್ಳತನ ಮಾಡುತ್ತಿದ್ದ ಅನ್ನೋದನ್ನ ನೀವು ಕೇಳಿ ಬಿಟ್ರೆ ಅಸಹ್ಯ ಪಡ್ತೀರಿ. ಥೂ ಅಂತ ಅವನ ಮುಖಕ್ಕೆ ಉಗೀತಿರಿ. ಅಷ್ಟಕ್ಕೂ ಈ ಕಳ್ಳ ಕಳ್ಳತನ ಮಾಡ್ತಾ ಇದ್ದಿದ್ದು, ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಮಜಾ ಮಾಡಿ, ತನ್ನ ಚಪಲ ತೀರಿಸಿಕೊಳ್ಳಲು. ಅಂದಹಾಗೆ ಈತನೇನೂ ನವ ತರುಣನಲ್ಲ. ‘ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ’ ಎನ್ನುವಂತಾ ವಯಸ್ಸು. ಅಂದರೆ ಸುಮಾರು 70 ವರ್ಷ! ಇದೂ ಸಾಲದು ಅಂತ ಇವನಿಗೆ ಎರಡೆರಡು ಮದ್ವೆಯಾಗಿದ್ಯಂತೆ!
ಬೆಂಗಳೂರು: ಈ ಜಗತ್ತಿನಲ್ಲಿ ಎಂತೆಂಥಾ ಚಿತ್ರ, ವಿಚಿತ್ರ ಕಳ್ಳರಿರುತ್ತಾರೆ (Thief) ನೋಡಿ. ಪ್ರತಿಯೊಬ್ಬ ಕಳ್ಳನಿಗೂ ಕಳ್ಳತನ ಮಾಡೋದಕ್ಕೆ ಒಂದು ರೀಸನ್ (Reason) ಇರುತ್ತೆ. ಆದ್ರೆ ಇಲ್ಲೊಬ್ಬ ಕಳ್ಳ ಯಾಕೆ ಕಳ್ಳತನ ಮಾಡುತ್ತಿದ್ದ ಅನ್ನೋ ಕಾರಣ ಏನಾದ್ರೂ ನೀವು ಕೇಳಿ ಬಿಟ್ರೆ ಅಸಹ್ಯ ಪಡ್ತೀರಿ. ಥೂ ಅಂತ ಅವನ ಮುಖಕ್ಕೆ ಉಗೀತಿರಿ. ಅಷ್ಟಕ್ಕೂ ಈ ಕಳ್ಳ ಕಳ್ಳತನ ಮಾಡ್ತಾ ಇದ್ದಿದ್ದು, ಸಿಕ್ಕ ಸಿಕ್ಕ ಹುಡುಗಿಯರ (Girls) ಜೊತೆ ಮಜಾ ಮಾಡಿ, ತನ್ನ ಚಪಲ ತೀರಿಸಿಕೊಳ್ಳಲು. ಅಂದಹಾಗೆ ಈತನೇನೂ ನವ ತರುಣನಲ್ಲ. ‘ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ’ ಎನ್ನುವಂತಾ ವಯಸ್ಸು. ಅಂದರೆ ಸುಮಾರು 70 ವರ್ಷ! ಅಸಲಿಗೆ ಈ ಕಳ್ಳ ಮುದುಕ ಯಾರು? ಆತನ ಕಳ್ಳತನದ ಕಥೆ ಏನು? ಚಪಲ ಚೆನ್ನಿಗರಾಯನ ಇತಿಹಾಸವೇನು? ಈತ ಬೆಂಗಳೂರು (Bengaluru) ಪೊಲೀಸರ (Police) ಕೈಯಲ್ಲಿ ಹೇಗೆ ಸಿಕ್ಕಿ ಬಿದ್ದ ಅಂತ ನೀವೇ ಒಮ್ಮೆ ಓದಿ ಬಿಡಿ…
ಬೆಂಗಳೂರಲ್ಲಿ ಸಿಕ್ಕಿಬಿದ್ದ ಚಪಲ ಚೆನ್ನಿಗರಾಯ
ಬೆಂಗಳೂರಿನ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಇಂದು ವಿಚಿತ್ರ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು 70 ವರ್ಷದ ರಮೇಶ್ ಅಂತ ಗುರುತಿಸಲಾಗಿದೆ. ಈತ ಚಿಕ್ಕಮಗಳೂರು ಮೂಲದವ. ಸದ್ಯ ಈತನಿಗೆ ಪೊಲೀಸರು ಈತನಿಂದ 8 ಲಕ್ಷ ರೂ. ಮೌಲ್ಯದ 162 ಗ್ರಾಂ ತೂಕದ ಚಿನ್ನಾಭರಣ, 5 ಸಾವಿರ ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ವೃದ್ಧ ಕಳ್ಳನ ಕೈಚಳಕ
ಬಿಟಿಎಂ 1ನೇ ಹಂತದ ನಿಮ್ಹಾನ್ಸ್ ಲೇಔಟ್ನ ಮನೆಯೊಂದರ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಮಾಲೀಕರು ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಪೊಲೀಸರು, ಅಕ್ಕಪಕ್ಕದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ರಮೇಶ್ನ ಕೈಚಳಕ ಬಯಲಾಗಿದೆ.
ಈ ರಮೇಶ್ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನ ಮಾಡುತ್ತಿದ್ದ. ಹೀಗೆ ಕದ್ದ ವಸ್ತುಗಳನ್ನು ತೆಗೆದುಕೊಂಡು ವೇಶ್ಯೆಯರು, ಎಳೆ ವಯಸ್ಸಿನ ಹುಡುಗಿಯರ ಹಿಂದೆ ಹೋಗುತ್ತಿದ್ದ. ಅವರಿಗೆ ಅದನ್ನು ಕೊಟ್ಟು, ತನ್ನ ಚಪಲ ತೀರಿಸಿಕೊಂಡು ಬರುತ್ತಿದ್ದ.
ಈ ಚಪಲ ಚೆನ್ನಿಗರಾಯನಿಗೆ ಒಂದಲ್ಲಾ ಎರಡು ಮದುವೆ!
ಅಸಲಿಗೆ ಈ ವೃದ್ಧ ಚಪಲಗಾರ ರಮೇಶ್ ಒಂಟಿಯೇನಲ್ಲ. ಒಂದಲ್ಲ ಅಂತ ಎರಡೆರಡು ಮದುವೆ ಆಗಿದ್ದಾನಂತೆ. ಎರಡು ಹೆಂಡತಿಯರಿದ್ದು ಮೂವರು ಮಕ್ಕಳಿದ್ದಾರೆ. ಜೊತೆಗೆ ಮೂರನೇ ಮದುವೆಗೂ ಯತ್ನ ನಡೆಸಿದ್ದ ಎನ್ನಲಾಗಿದೆ.
12 ವರ್ಷಗಳ ಹಿಂದೆ ಮನೆ ಬಿಟ್ಟು ಬಂದಿದ್ದ ರಮೇಶ್
12 ವರ್ಷಗಳ ಹಿಂದೆ ಮನೆ ತೊರೆದಿದ್ದ ಎನ್ನಲಾಗಿದೆ. ಮನೆಯವರ ಸಂಪರ್ಕ ಕಡಿದುಕೊಂಡು ಬೆಂಗಳೂರು ಸೇರಿದಂತೆ ಕೆಲವೆಡೆ ಕಳ್ಳತನ ಮಾಡುತ್ತಿದ್ದ. ಹೀಗೆ ಕದ್ದ ವಸ್ತುಗಳೆಲ್ಲವನ್ನೂ ತನ್ನ ಚಪಲ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ.
ಈ ಕಾಮುಕ ಮುದುಕ ಪ್ರತಿ ಬಾರಿ ಕಳ್ಳತನ ಮಾಡಿದಾಗಲೂ ಹೊಸ ಹೊಸ ವೇಶ್ಯೆಯರು, ಮಹಿಳೆಯರ ಮನೆಗೆ ಹೋಗುತ್ತಿದ್ದ. ಅವರಿಗೆ ಹಣ, ಚಿನ್ನಾಭರಣ ಕೊಟ್ಟು ಬರುತ್ತಿದ್ದ. ಹೀಗಾಗಿ ಈತ ಎಷ್ಟು ಜನರಿಗೆ ಚಿನ್ನಾಭರಣ ನೀಡಿದ್ದಾನೆ ಎಂದು ತಿಳಿಯುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಸದ್ಯ ಈತನ ಮೊಬೈಲ್ ಸಂಪರ್ಕದಲ್ಲಿದ್ದ ಕೆಲವು ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ.