• Home
  • »
  • News
  • »
  • state
  • »
  • Double Murder: ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ್ದ ವೃದ್ದ ದಂಪತಿ‌ ಕೊಲೆ ಪ್ರಕರಣ: ಬಾಡಿಗೆದಾರ ಸೇರಿದಂತೆ ನಾಲ್ವರು ಅರೆಸ್ಟ್

Double Murder: ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ್ದ ವೃದ್ದ ದಂಪತಿ‌ ಕೊಲೆ ಪ್ರಕರಣ: ಬಾಡಿಗೆದಾರ ಸೇರಿದಂತೆ ನಾಲ್ವರು ಅರೆಸ್ಟ್

ಕೊಲೆಯಾದ ವೃದ್ಧ ದಂಪತಿ.

ಕೊಲೆಯಾದ ವೃದ್ಧ ದಂಪತಿ.

ದಂಪತಿ ಕೊಲೆ ಮಾಡಲು ಪೂರ್ವ ಸಿದ್ಧತೆಯೊಂದಿಗೆ ಹಿಂದೂಪುರದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಮೆಜೆಸ್ಟಿಕ್ ನಿಂದ ಕುಮಾರಸ್ವಾಮಿ ಲೇಔಟ್ ಗೆ ಬಿಎಂಟಿಸಿಯಲ್ಲಿ ಬಸ್ ನಲ್ಲೇ ಬಂದು ಇಳಿದಿದ್ದಾರೆ‌. ಸಮೀಪದ ಅಂಗಡಿಯೊಂದರಲ್ಲಿ ಸ್ಕ್ರೂ ಡ್ರೈವರ್ ಖರೀದಿಸಿದ್ದಾರೆ.

  • Share this:

ಬೆಂಗಳೂರು: (Bengaluru) ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ್ದ ವೃದ್ದ ದಂಪತಿ ಕೊಲೆ (Old Couple Murder) ಪ್ರಕರಣವನ್ನು ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇದಿಸಿದ್ದಾರೆ. ಹಣಕ್ಕಾಗಿ ಬಾಡಿಗೆದಾರನೇ ಸಹಚರರೊಂದಿಗೆ ಸೇರಿಕೊಂಡು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ. ಇದೀಗ ಪ್ರಕರಣ ಸಂಬಂಧ ಒಟ್ಟು ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.


ಹಾಡಹಗಲೇ ಜೋಡಿ ಕೊಲೆ ಮಾಡಿದ ಆರೋಪದಡಿ ಮೃತರಿಗೆ ಸೇರಿದ ಮನೆಯಲ್ಲಿ 10 ವರ್ಷಗಳ ಹಿಂದೆ ಬಾಡಿಗೆಗೆ ಇದ್ದ ನಾರಾಯಣಪ್ಪ, ಸಹಚರರಾದ ರಾಮಸ್ವಾಮಿ, ಆಸೀಫ್ ಹಾಗೂ ಗಂಗಾಧರ್ ಬಂಧಿತ ಆರೋಪಿಗಳು. ಬಂಧಿತರಿಂದ 193 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.


ಆರೋಪಿಗಳೆಲ್ಲರೂ ಆಂಧ್ರಪ್ರದೇಶದ ಹಿಂದೂಪುರ ಮೂಲದವರು. ಈ ಪೈಕಿ ನಾರಾಯಣಪ್ಪ 10 ವರ್ಷಗಳ ಹಿಂದೆ ಮೃತರಾದ ಶಾಂತರಾಜು, ಪ್ರೇಮಲತಾ ವಾಸವಾಗಿದ್ದ ಕಾಶಿನಗರದಲ್ಲಿ ಹೆಂಡತಿ-ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೆಲ ವರ್ಷಗಳ ಹಿಂದೆ ಮನೆ ಖಾಲಿ ಮಾಡಿ ಹಿಂದೂಪುರದಲ್ಲಿ ನೆಲೆಸಿದ್ದ. ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿದ್ದ ನಾರಾಯಣಪ್ಪ, ಆರ್ಥಿಕ ಸಂಕಷ್ಟ ಎದುರಿಸಿದ್ದ.‌ ಈ ಸಂಬಂಧ ಆ.12 ರಂದು ದಂಪತಿ ಮನೆಗೆ ನಾರಾಯಣಪ್ಪ ಬಂದಿದ್ದ. ಸಾಲದ ಸುಳಿಯಲ್ಲಿ ಸಿಲುಕಿದ್ದು ಸಾಲ ಕೊಡುವಂತೆ ಮನವಿ ಮಾಡಿದ್ದ. ಇದಕ್ಕೆ ದಂಪತಿ‌ ನಿರಾಕರಿಸಿದ್ದರು.


ಬಳಿಕ ಮತ್ತೆ ಆ.20 ರಂದು ವರಮಹಾಲಕ್ಷ್ಮಿ ಹಬ್ಬದ ದಿನದಂದು ನಾಲ್ವರು ಆರೋಪಿಗಳು ಮ‌ನೆಗೆ ಬಂದಿದ್ದಾರೆ. ಸಂಬಂಧಿಕರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಸಾಲ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರೇಮಲತಾ ನಿರಾಕರಿಸಿದ್ದರು. ಇದರಿಂದ ಅಸಮಾಧಾನಗೊಂಡ ಆರೋಪಿಗಳು ವೃದ್ದೆಯನ್ನು ವೈರ್ ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಬಳಿಕ ರೂಮ್ ನಲ್ಲಿ ಮಲಗಿದ್ದ ಶಾಂತರಾಜು ನನ್ನು ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಮನೆಯಲ್ಲಿ ಚಿನ್ನಾಭರಣ ಕದ್ದು ಪರಾರಿ ಆಗಿದ್ದರು‌. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.


ಇದನ್ನು ಓದಿ: Union Minister Narayan Rane: ಕೇಂದ್ರ ಸಚಿವ ರಾಣೆಯನ್ನು ಬಂಧಿಸಲು ಪೊಲೀಸರು ರತ್ನಗಿರಿಗೆ ಬಂದಾಗ ಅವರು ಏನು ಮಾಡುತ್ತಿದ್ದರು ಗೊತ್ತೆ?


ಬಿಎಂಟಿಸಿ ಬಸ್ ನಲ್ಲಿ ಬಂದು ಕೃತ್ಯ ಎಸಗಿದ್ರು


ದಂಪತಿ ಕೊಲೆ ಮಾಡಲು ಪೂರ್ವ ಸಿದ್ಧತೆಯೊಂದಿಗೆ ಹಿಂದೂಪುರದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಮೆಜೆಸ್ಟಿಕ್ ನಿಂದ ಕುಮಾರಸ್ವಾಮಿ ಲೇಔಟ್ ಗೆ ಬಿಎಂಟಿಸಿಯಲ್ಲಿ ಬಸ್ ನಲ್ಲೇ ಬಂದು ಇಳಿದಿದ್ದಾರೆ‌. ಸಮೀಪದ ಅಂಗಡಿಯೊಂದರಲ್ಲಿ ಸ್ಕ್ರೂ ಡ್ರೈವರ್ ಖರೀದಿಸಿದ್ದಾರೆ. ಬಳಿಕ ಮನೆಗೆ ತಾನು ಅಂದುಕೊಂಡಂತೆ ಕೃತ್ಯ ಎಸಗಿ ಮತ್ತೆ ಬಸ್ ಮೂಲಕ ಮೆಜೆಸ್ಟಿಕ್ ಗೆ ಹೋಗಿ ಅಲ್ಲಿಂದ ಹಿಂದೂಪುರ ಸೇರಿದ್ದರು. ಹಿಂದೂಪುರ ಸೇರಿದ್ದೇ ನಾರಾಯಣಪ್ಪ ತನಗಿದ್ದ ಪ್ರಾವಿಷನ್ ಸ್ಟೋರ್ ನೋಡಿಕೊಂಡು ಕೊಲೆಗೂ ತನಗೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಆರಾಮಾಗಿಯೇ ಇದ್ದ. ಇತ್ತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಚಹರೆ ಪತ್ತೆ ಹಚ್ಚಲು 100 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರ ದೃಶ್ಯಾವಳಿ‌ ವಶಕ್ಕೆ‌ ಪಡೆದುಕೊಂಡು‌ ಪರಿಶೀಲಿಸಿದಾಗ ಆರೋಪಿಗಳ ಚಲನವಲನ ಸೆರೆಯಾಗಿತ್ತು. ಇದರ ಆಧಾರದ ಮೇಲೆ ತನಿಖೆ‌ ನಡೆಸಿದ ಪೊಲೀಸತು ಆರೋಪಿಗಳನ್ನು ಬಂಧಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಯಾರೂ ಅನಗತ್ಯವಾಗಿ ಹೊರಗೆ ಬಾರದೆ ಮುನ್ನೆಚ್ಚರಿಕೆ ವಹಿಸಬೇಕಿದೆ.

Published by:HR Ramesh
First published: