ಛೇ.. ಬೆಂಗಳೂರಿಗೆ ಏನಾಗಿದೆ: ಮಹಿಳೆ ಮುಂದೆಯೇ ಹಸ್ತಮೈಥುನ ಮಾಡಿಕೊಂಡ ಓಲಾ ಡ್ರೈವರ್!

Ola cab driver: ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳಲು ಓಲಾ ಕ್ಯಾಬ್‌ ಬುಕ್‌ ಮಾಡಿದ್ದೆ. ಕ್ಯಾಬ್‌ನಲ್ಲಿ ಹೋಗುವಾಗ ಚಾಲಕ(Driver) ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ. ನಾನು ಇದನ್ನು ಗಮನಿಸಿದೆ. ತಕ್ಷಣ ಆತ  ಮುಚ್ಚಿಕೊಂಡು ಏನು ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದ ಎಂದು ಮಹಿಳೆ ಟ್ವೀಟ್​ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯ ರಾಜಧಾನಿ ಬೆಂಗಳೂರು(Bengaluru) ನಗರಕ್ಕೆ ಏನಾಗಿದೆ. ಎತ್ತ ಸಾಗುತ್ತಿದೆ ನಮ್ಮ ಬೆಂದಕಾಳೂರು..ಪ್ರತಿದಿನ ಇಲ್ಲಿ ಕಾಮುಕರ ಅಟ್ಟಹಾಸ ಮೀತಿಮೀರಿದೆ. ಇದೀಗ ಹೆಣ್ಣುಮಕ್ಕಳಿಗೆ ಬೆಂಗಳೂರು ಎಷ್ಟು ಸೇಫ್(Safe)​ ಎಂಬ ಪ್ರಶ್ನೆ ಮೂಡಿದೆ. ಇಂಥ ಘಟನೆ ಕಂಡು ಮಹಿಳೆ(Women)ಯರು ಹೊರ ಬರಲು ಹೆದರುವಂತಾಗಿದೆ. ಓಲಾ ಕ್ಯಾಬ್​ ಚಾಲಕನೊಬ್ಬ ಮಹಿಳಾ ಮಹಿಳಾ ಪ್ರಯಾಣಿಕರೊಬ್ಬರ ಎದುರು ಹಸ್ತಮೈಥುನ(Masturbation) ಮಾಡಿಕೊಂಡು ಕೆಟ್ಟದಾಗಿ ವರ್ತಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಸಂತ್ರಸ್ತೆ ಟ್ವೀಟ್‌ನಲ್ಲಿ(Tweet) ಘಟನೆಯನ್ನು ವಿವರಿಸಿದ್ದಾರೆ. ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳಲು ಓಲಾ ಕ್ಯಾಬ್‌ ಬುಕ್‌ ಮಾಡಿದ್ದೆ. ಕ್ಯಾಬ್‌ನಲ್ಲಿ ಹೋಗುವಾಗ ಚಾಲಕ(Driver) ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ. ನಾನು ಇದನ್ನು ಗಮನಿಸಿದೆ. ತಕ್ಷಣ ಆತ  ಮುಚ್ಚಿಕೊಂಡು ಏನು ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದ. ಈ ವೇಳೆ ನಾನು ಕೊಂಚ ಧೈರ್ಯ ಮಾಡಿ ಕಿರುಚಾಡಿದ್ದರಿಂದ ಕ್ಯಾಬ್‌ ನಿಲ್ಲಿಸಿದ. ಬಳಿಕ ನಾನು ಕೆಳಗೆ ಇಳಿದುಕೊಂಡು ಮತ್ತೊಂದು ಕ್ಯಾಬ್‌ನಲ್ಲಿ ಮನೆಗೆ ತೆರಳಿದೆ ಎಂದು ಟ್ಟಿಟರ್‌(Twitter)ನಲ್ಲಿ ಬರೆದುಕೊಂಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಬೆಂಗಳೂರು ಮಹಿಳೆಯರಿಗೆ ಎಷ್ಟು ಸೇಫ್​ ಎಂಬ ಪ್ರಶ್ನೆ ಕೇಳುತ್ತಿದ್ದಾರೆ ನೆಟ್ಟಿಗರು.

‘ಬೆಂಗಳೂರು ಭಯ ಹುಟ್ಟಿಸುತ್ತಿದೆ ಎಂದ ಮಹಿಳೆ’

ಪತ್ರಕರ್ತೆ ಅನಿಲ ಕುಲಕರ್ಣಿ ಎಂಬುವವರಿಗೆ ಈ ರೀತಿಯ ಕೆಟ್ಟ ಅನುಭವವಾಗಿದ್ದು, ಈ ಬಗ್ಗೆ ಟ್ವಿಟರ್​ನಲ್ಲಿ ಆಕೆ ಬರೆದುಕೊಂಡಿದ್ದಾರೆ. ಈ ಘಟನೆಯಿಂದ ನಮ್ಮ ಮನೆ ಎಂದು ಭಾವಿಸುವ ಬೆಂಗಳೂರು ನಗರ ಅಸುರಕ್ಷಿತ ಎನ್ನುವ ಭಾವನೆ ಮೂಡಿದೆ. ನನ್ನಲ್ಲಿ ಭಯ ಹುಟ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸುರಕ್ಷತೆಯ ದೃಷ್ಟಿಯಿಂದ ಒಂಟಿಯಾಗಿ ಕ್ಯಾಬ್‌ಗಳಲ್ಲಿ ತೆರಳುವಾಗ ಪರಿಚಿತರ ಸಂಪರ್ಕದಲ್ಲಿರಬೇಕು. ಪ್ರಯಾಣವನ್ನು ಟ್ರ್ಯಾಕ್‌ ಮಾಡಲು ಲೈವ್‌ ಲೊಕೇಶನ್‌ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ. ನೀವು ಕ್ಯಾಬ್​​ಗಳಲ್ಲಿ ಪ್ರಯಾಣಿಸುವಾಗ ನಿಮ್ಮವರೊಂದಿಗೆ ಕರೆ ಮಾಡಿ ಮಾತನಾಡುತ್ತಾ ಸಂಪರ್ಕದಲ್ಲಿರು ಎಂದು ಆಕೆ ಮನವಿ ಮಾಡಿಕೊಂಡಿದ್ದಾರೆ.ಇದನ್ನು ಓದಿ : ಇಂದಿನಿಂದ ಬೆಂಗಳೂರಿನಲ್ಲಿ ಮಳೆಯ ಆರ್ಭಟ-ಕಡಿಮೆ ಆಯ್ತು ಚಿನ್ನದ ಬೆಲೆ: ಬೆಳಗಿನ ಟಾಪ್ ನ್ಯೂಸ್​ಗಳು

ಓಲಾ ಕಂಪನಿಗೆ ದೂರು, ಚಾಲಕ ಅಮಾನತು!

ಈ ಘಟನೆ ನಡೆದ ಬಳಿಕ ಯುವತಿ ಕೂಡಲೇ ಓಲಾ ಕಂಪನಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಕೆಲ ಹೊತ್ತಲ್ಲೇ ಕಂಪನಿ ಕೂಡ ಆತನನ್ನು ಕೆಲಸದಿಂದ ತೆಗೆದಿದೆ ಎಂದು ಹೇಳಿ ಅವರ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಕೆಲಸದಿಂದ ತೆಗೆದರೆ ಸಾಕಾ? ಆತನನ್ನು ಕೂಡಲೇ ಬಂಧಿಸುವಂತೆ ಕೂಗು ಕೇಳಿಬಂದಿದೆ. ಈ ಬಗ್ಗೆ  ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಈ ಘಟನೆ ಬಗ್ಗೆ ಕ್ಷಮೆ ಇರಲಿ. ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ದುರ್ವತನೆಯ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಪೊಲೀಸರು ನಿಮ್ಮನ್ನು ಸಂರ್ಪಕಿಸುತ್ತಾರೆ. ಓಲಾ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


 ಇದನ್ನು ಓದಿ: ಓಮಿಕ್ರಾನ್​​ಗೆ ಹೊಸ ಲಸಿಕೆ ಹಾಕ್ತಿವಿ ಅಂತ ಮನೆಗೆ ನುಗ್ಗಿದವರು ಮಾಡಿದ್ದೇ ಬೇರೆ!

ಈ ರೀತಿಯ ಘಟನೆಗಳು ಪ್ರತಿದಿನ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುತ್ತೆ. ಆದರೆ ನಿಧಾನವಾಘಿ ಬೆಳಕಿಗೆ ಬರುತ್ತಿದೆ. ದಯವಿಟ್ಟು ಈ ರೀತಿಯ ಘಟನೆ ಆದ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿ. ಇಂಥಹ ಕಾಮುಕರ ಎಡೆಮುರಿ ಕಟ್ಟಲು ಕೈ ಜೋಡಿಸಿ.
Published by:Vasudeva M
First published: