Ganesha Festival: ಗಣೇಶ ಹಬ್ಬದ ಆಚರಣೆಗೆ ಓಕೆ.. ಆದ್ರೆ ಷರತ್ತು ಇರುತ್ತೆ ಜೋಕೆ..!

ನಗರದ ಕೆರೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡುವ ಬಗ್ಗೆ ಇನ್ನೂ ಗೊಂದಲವಿದೆ. ಕೆರೆಗಳಿಗಿಂತ ಪ್ರತಿ ಏರಿಯಾದಲ್ಲಿ ವಾಟರ್ ಟ್ಯಾಂಕ್ ವಾಹನ ಚಲಾಯಿಸಿ ಅದರಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲು ಚರ್ಚಿಸಲಾಗಿದೆ. ಇದಕ್ಕಾಗಿಯೇ ಸುಮಾರು 20ಕ್ಕು ಹೆಚ್ಚು ನಿಯಮಗಳ ಪಟ್ಟಿ ತಯಾರಿ ನಡೆದಿದೆ.

ಗಣೇಶ

ಗಣೇಶ

  • Share this:
ಬೆಂಗಳೂರು: ಗಣೇಶ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಕಳೆದ ಎರಡು ವರ್ಷ ಕೂಡ ಕೊರೋನಾ ಹಿನ್ನಲೆ ಹಬ್ಬದ ಆಚರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೆ ಈಗ ಮೂರನೇ ಅಲೆಯ ಭೀತಿಯಲ್ಲೇ ಗಣೇಶ ಹಬ್ಬದ ಆಚರಣೆಗೆ ತಯಾರಿ ನಡೆದಿದೆ. ಆದ್ರೆ ಇದಕ್ಕೆ ಕೆಲ ನಿಬಂಧನೆಗಳನ್ನು ಸಹ ಹಾಕಲು ಸರ್ಕಾರ ಮುಂದಾಗಿದೆ. ಕೋವಿಡ್ -19 ಮೂರನೇ ಅಲೆಯ ಭೀತಿ ನಡುವೆಯೇ ಗಣೇಶ ಹಬ್ಬದ ಆಚರಣೆಗೆ ಭರ್ಜರಿ ಸಿದ್ದತೆ ನಡೆದಿದೆ. ಕೆಲ ಕಠಿಣ ನಿಯಮಗಳ ಅನುಸಾರ ಹಬ್ಬ ಆಚರಣೆಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಹೌದು, ಬಿಗಿ ನಿಯಮಗಳೊಂದಿಗೆ, ನಗರದ ವಾರ್ಡ್ ನಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರ್ಮಿಷನ್‌ ಸಿಗಲಿದೆ. ವಾರ್ಡ್ ನಲ್ಲಿ ಒಂದು ಗಣೇಶ ಸಾರ್ವಜನಿಕವಾಗಿ ಕೂರಿಸಲು ಬಿಬಿಎಂಪಿ ಅನುಮತಿ ನೀಡಲಿದ್ದು, ಗಣೇಶ ವಿಗ್ರಹ 4 ಅಡಿ ಎತ್ತರ ಮೀರದಂತೆ ಸೂಚನೆ ನೀಡಲಾಗುತ್ತೆ ಎನ್ನಲಾಗಿದೆ. ಇನ್ನು ಸಾರ್ವಜನಿಕ ಗಣೇಶೋತ್ಸವದಲ್ಲಿ 20 ರಿಂದ 30 ಮಂದಿ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗುತ್ತೆ. ಈಗಾಗಲೇ ಸ್ಥಳೀಯ ಪಾಲಿಕೆ, ನಗರಸಭೆ, ಪುರಸಭೆಗೂ ಸಹ ಸರ್ಕಾರದ ಸಮಿತಿ ಪತ್ರ ಬರೆದಿದೆ. ಪ್ರತಿ ಏರಿಯಾ ಹಾಗೂ ವಾರ್ಡ್ ನಲ್ಲಿ ವಾಟರ್ ಟ್ಯಾಂಕ್ ಇರುವ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ ಅಂತ ಹೇಳಲಾಗಿದೆ. ವಾಟರ್ ಟ್ಯಾಂಕ್ ವಾಹನದಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಇರಲಿದ್ದು, ಮನೆಯಲ್ಲಿ ಕೂರಿಸುವ ಗಣೇಶ ಮೂರ್ತಿಯನ್ನು ಅದೇ ವಾಟರ್ ಟ್ಯಾಂಕ್ ನಲ್ಲಿ ವಿಸರ್ಜಿಸಲು ಸೂಚನೆ ನೀಡಲಾಗುತ್ತೆ. ಜೊತೆಗೆ ಪ್ರತಿ ವಾರ್ಡ್ ಮತ್ತು ಏರಿಯಾಗೆ ವಾಟರ್ ಟ್ಯಾಂಕ್ ವ್ಯವಸ್ಥೆ ಮಾಡಲು ಬಿಬಿಎಂಪಿಗೆ ಈಗಾಗ್ಲೇ ಸೂಚನೆ ನೀಡಲಾಗಿದ್ಯಂತೆ.

ನಗರದ ಕೆರೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡುವ ಬಗ್ಗೆ ಇನ್ನೂ ಗೊಂದಲವಿದೆ. ಕೆರೆಗಳಿಗಿಂತ ಪ್ರತಿ ಏರಿಯಾದಲ್ಲಿ ವಾಟರ್ ಟ್ಯಾಂಕ್ ವಾಹನ ಚಲಾಯಿಸಿ ಅದರಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲು ಚರ್ಚಿಸಲಾಗಿದೆ. ಇದಕ್ಕಾಗಿಯೇ ಸುಮಾರು 20ಕ್ಕು ಹೆಚ್ಚು ನಿಯಮಗಳ ಪಟ್ಟಿ ತಯಾರಿ ನಡೆದಿದೆ. ಕೊರೋನಾ ಮಹಾಮಾರಿ ಭೀತಿಯ ನಡುವೆ ಹಬ್ಬ ಆಚರಣೆಗೆ ಅನುಮತಿ ನೀಡಲಾಗ್ತಿದ್ದು, ಇನ್ನೂ ನಾಲ್ಕೈದು  ದಿನದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.

ಗಣೇಶ ವಿಸರ್ಜನೆಗೆ ಇನ್ನೂ ಗೊಂದಲಗಳಿವೆ . ಕೆರೆಗಳಲ್ಲಿ ಬಿಡಲು ಅನುಮತಿ ಕೊಡುವುದು. ಅಲ್ಲಿ ಬಿಬಿಎಂಪಿ ಸಿಬ್ಬಂದಿಯನ್ನ ನೇಮಿಸಿ ಭದ್ರತೆ ನೋಡಿಕೊಳ್ಳುವಂತೆ ಮಾಡುವುದರ ಬಗ್ಗೆ ಚರ್ಚೆ ಆಗಿದೆ. ಆದ್ರೆ ಅಧಿಕಾರಿಗಳು ಕೆರೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಕೊಟ್ರೆ ಮತ್ತೆ ಹೆಚ್ಚು ಮಂದಿ ಜಮಾವಣೆಯಾಗಿ ಸಮಸ್ಯೆ ಉಂಟಾಗುತ್ತೆ. ಹೀಗಾಗಿ ವಾಟರ್ ಟ್ಯಾಂಕ್ ಗಳಿಗೆ ಅವಕಾಶ ಕೊಟ್ರೆ ಸ್ಥಳದಲ್ಲೇ ಗಣೇಶ ವಿಸರ್ಜನೆ ಆಗುತ್ತೆ. ನಾಲ್ಕು ಅಡಿ ಗಣೇಶ ಮೂರ್ತಿಗೆ ಮಾತ್ರ ಅವಕಾಶ ಹಿನ್ನಲೆ ಯಾವುದೇ ಸಮಸ್ಯೆ ಆಗೋದಿಲ್ಲ ಎಂದಿದ್ದಾರೆ.

ಇದನ್ನು ಓದಿ: Cabinet Meeting: ವಿಶ್ವ ಹೂಡಿಕೆದಾರರ ಸಮಾವೇಶ ಸೇರಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ಇತರೆ ನಿರ್ಣಯಗಳು

ಈ ಬಗ್ಗೆ ಎರಡ್ಮೂರು ದಿನದಲ್ಲಿ ಆದೇಶ ಬರಲಿದೆ. ವಾರ್ಡ್ ಗೆ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೊಟ್ಟರೂ ಅದಕ್ಕೂ ನಿಬಂಧನೆಗಳು ಇರಲಿದೆ. ಇದಕ್ಕೆ ಪೊಲೀಸರ ಅನುಮತಿ ಕಡ್ಡಾಯವಾಗಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
Published by:HR Ramesh
First published: