BMTC ಚಾಲಕರು & ನಿರ್ವಾಹಕರ ಮೇಲೆ ಗದಾಪ್ರಹಾರ..! ಅಧಿಕಾರಿಗಳಿಂದ ಆದಾಯ ʻಟಾರ್ಗೆಟ್ ಕಿರುಕುಳʼ?

ಚಾಲಕ ನಿರ್ವಾಹಕರನ್ನ ಗುರಿಯಾಗಿಸಿ ಟಾರ್ಗೆಟ್ ನೀಡಿದೆ. ಸಾಮಾನ್ಯ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ 7ರಿಂದ 8ಸಾವಿರ, ರಾತ್ರಿ ತಂಗುವ ಪಾಳಿಯದವರು 9 ರಿಂದ 10 ಸಾವಿರ, ರಾತ್ರಿ ಪಾಳಿಯಲ್ಲಿ 5 ಸಾವಿರ ಆದಾಯವನ್ನ ಸಂಗ್ರಹಿಸಲೇಬೆಂಕೆಂದು ಒತ್ತಡ ತರಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು:  ಬಿಎಂಟಿಸಿ(BMTC)  ಬೆಂಗಳೂರಿಗರ ಜೀವನಾಡಿ. ಟ್ರಾಫಿಕ್ ಜಂಜಾಟದ ನಡುವೆ ಚಾಲಕ, ನಿರ್ವಾಹಕರು (driver and conductor ) ಹಗಲು ರಾತ್ರಿ ಕಣ್ಣಿಗೆ ಎಣ್ಣೆಬಿಟ್ಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ಕಡೆ ಸರಿಯಾದ ಸಂಬಳ (salary) ಬರ್ತಿಲ್ಲ. ಮತ್ತೊಂದು ಕಡೆ ಅಧಿಕಾರಿಗಳ ಕಿರುಕುಳ(torcher). ಸಾರಿಗೆ ನೌಕರರಿಗೆ ಒಂದಿಲ್ಲೊಂದು ರೂಪದಲ್ಲಿ ಸಮಸ್ಯೆಗಳ ಸರಮಾಲೆ ಇದ್ದೆ ಇದೆ. ಅದರ ಸಾಲು ಇದೀಗ ಮತ್ತಷ್ಟು ದೊಡ್ಡದಾಗ್ತಿದೆ. ಹೀಗೆ ನಾನಾ ಸಮಸ್ಯೆಗಳಿಂದ ನಿರ್ವಾಹಕರು ಹಾಗೂ ಚಾಲಕರು ಬೇಸತ್ತಿದ್ದಾರೆ. ಇದ್ರ ನಡುವೆ ಆದಾಯ ಸಂಗ್ರಹದಲ್ಲಿ ಟಾರ್ಗೆಟ್ ಸುಳಿಗೆ ಸಿಲುಕಿ ಕಂಗಾಲಾಗ್ತಿದ್ದಾರೆ.  ಬಿಎಂಟಿಸಿ  ಅಧಿಕಾರಿಗಳ ಹಿಟ್ಲರ್ ಆಡಳಿತ ಇದೀಗ ಮತ್ತೊಮ್ಮೆ ಬಟಾಬಯಲಾಗಿದೆ. ಮೇಲಾಧಿಕಾರಿಗಳು ಕೋಟ್ಯಾನು ಕೋಟಿ ನಷ್ಟ ಮಾಡ್ತಿದ್ರೂ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅನ್ನೋಹಾಗೆ ಚಾಲಕ ಮತ್ತು ನಿರ್ವಾಹಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಸಿಬ್ಬಂದಿಗೆ ಟಾರ್ಗೆಟ್ ಟಾರ್ಚರ್ 

ಆದಾಯ ಸಂಗ್ರಹ ಮಾಡ್ತಿಲ್ಲ ಅಂತ ಅದೆಷ್ಟೋ ನೌಕರರಿಗೆ ಬಿಎಂಟಿಸಿ ಅಧಿಕಾರಿ ವರ್ಗ ನೋಟಿಸ್ ಕೊಟ್ಟು ಟಾರ್ಚರ್ ಕೊಡುತ್ತಿದೆ. ಹೀಗಾಗಿ ಗುರಿಯನ್ನ ತಲುಪಲಾಗದ ಸಿಬ್ಬಂದಿ ಸಾಕಷ್ಟ ನೋವನ್ನ ಅನುಭವಿಸ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿಕೊಳ್ಳಲು ಸರಿಯಾದ ಮಾರ್ಗ ಕಂಡುಕೊಳ್ಳುವ ಬದಲು ನಿಗಮದ ನೌಕರರ ಮೇಲೆ ಹೊಣೆ ಮಾಡ್ತಿದೆ. ಓಲಾ, ಊಬರ್, ಮೆಟ್ರೋ ಸೇವೆ ಶುರುವಾದ ಬಳಿಕ ಬಿಎಂಟಿಸಿ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಭಾರಿ ಇಳಿಕೆ ಕಂಡಿದೆ. ಮತ್ತೊಂದು ಕಡೆ ಕೋವಿಡ್ ಆರಂಭದ ಬಳಿಕ ಪ್ರಯಾಣಿಕರು ಬಿಎಂಟಿಸಿಯ ಬಸ್ ಅನ್ನ ಹತ್ತದೆ ಸ್ವಂತ ವಾಹಗಳತ್ತ ಮೊರೆ ಹೋಗಿದ್ದಾರೆ. ಇದ್ರಿಂದ ಪ್ರತಿನಿತ್ಯ 52 ಲಕ್ಷ ಮಂದಿ ಪ್ರಯಾಣಿಸುತ್ತಿದ್ದ ಜಾಗದಲ್ಲಿ 21ಲಕ್ಷಕ್ಕೆ ಇಳಿಕೆಯಾಗಿದೆ.

ಇಷ್ಟೇ ಆದಾಯ ತರಬೇಕೆಂದು ಒತ್ತಡ

ಇದ್ರ ನಡುವೆ ಪ್ರತಿಯೊಂದು ಸಂಚಾರ ಮಾರ್ಗಕ್ಕೂ ಆದಾಯದ ಗುರಿಯನ್ನ ನಿಗದಿಪಡಿಸಿರೋ ನಿಗಮ, ಚಾಲಕ ನಿರ್ವಾಹಕರನ್ನ ಗುರಿಯಾಗಿಸಿ ಟಾರ್ಗೆಟ್ ನಿಯಮದಾಟಕ್ಕೆ ತುಪ್ಪ ಸುರಿದ್ದಾರೆ. ಸಾಮಾನ್ಯ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ 7ರಿಂದ 8ಸಾವಿರ, ರಾತ್ರಿ ತಂಗುವ ಪಾಳಿಯದವರು 9 ರಿಂದ 10 ಸಾವಿರ, ರಾತ್ರಿ ಪಾಳಿಯಲ್ಲಿ 5 ಸಾವಿರ ಆದಾಯವನ್ನ ಸಂಗ್ರಹಿಸಲೇಬೆಂಕೆಂದು ಒತ್ತಡ ತರಲಾಗಿದೆ. ಆಯಾ ಡಿಪೋ ಗಳಲ್ಲಿ ಪಾವತಿಸಬೇಕಂತ ಟಾರ್ಗೆಟ್ ಕೊಟ್ಟಿದೆ. ಆದ್ರೆ ಮೆಟ್ರೋ, ಟ್ಯಾಕ್ಸಿ, ಖಾಸಗೀ ಬಸ್ ಗಳ ಸೇವೆ ದುಪ್ಪಟ್ಟು ಆಗಿರೋದ್ರಿಂದ ಬಿಎಂಟಿಸಿಯ ಟಾರ್ಗೆಟ್ ಆದಾಯ ತರೋದಾದ್ರು ಹೇಗೆ ಅಂತ ನೌಕರರು ನಿಗಮಕ್ಕೆ ಪ್ರಶ್ನೆ ಮಾಡ್ತಿದ್ದಾರೆ.

ಡಿಪೋ ಅಧಿಕಾರಿಗಳಿಂದ ನೋಟಿಸ್​ 

ನಗರದ ಎಲ್ಲಾ ಮಾರ್ಗಗಳಲ್ಲೂ ಟ್ಯಾಕ್ಸಿ, ಆಟೋ, ಸೇರಿದಂತೆ ಇನ್ನಿತರ ಖಾಸಗಿ ಸೇವೆ ಹೆಚ್ಚಿರೋದು ಅಧಿಕಾರಿಗಳಿಗೂ ಗೊತ್ತಿದೆ. ಆದ್ರೆ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗದೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ, ಚಾಲಕ ನಿರ್ವಾಹಕರರನ್ನ ಟಾರ್ಗೆಟ್ ಸುಳಿಯಲ್ಲಿ ಸಿಲುಕಿಸಿದೆ. ಅದ್ರಲ್ಲೂ ರಾತ್ರಿ ಪಾಳಿಯದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ, ನೀವು ಕಡಿಮೆ ಆದಾಯ ಪಾವತಿಸುತ್ತಿದ್ದೀರಾ, ನಿಗಮಕ್ಕೆ ನಷ್ಟ ಉಂಟುಮಾಡ್ತೀದ್ದೀರಾ ಎಂದು ಡಿಪೋಗಳಲ್ಲಿನ ಅಧಿಕಾರಿಗಳು ನೋಟೀಸ್ ಕೊಟ್ಟು ಟಾರ್ಚರ್ ಕೊಡ್ತಾಯಿದ್ದಾರೆ. ರಾತ್ರಿ ಪಾಳಿಯದಲ್ಲಿ ಪ್ರಯಾಣಿಕರೇ ಇರೋದಿಲ್ಲ ಅಂತದ್ರಲ್ಲಿ ಆದಾಯ ಸಂಗ್ರಹ ಮಾಡೋದು ಹೇಗೆ ಎಂದು ಸಿಬ್ಬಂದಿ ಅಳಲು.

ಇದನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ವರುಣನ ಅಬ್ಬರ: ಅಂಡರ್‌ಪಾಸ್‌ ಜಲಾವೃತ, ತಗ್ಗು ಪ್ರದೇಶಗಳಿಗೆ ನೀರು

ನಿಗಮದ ಉಪಾಧ್ಯಕ್ಷರಿಗೇ ಗೊತ್ತಿಲ್ಲದೆ ಟಾರ್ಗೆಟ್​..!? 

ಈ ಸಂಬಂಧ ಬಿಎಂಟಿಸಿ ನಿಗಮದ ಉಪಾಧ್ಯಕ್ಷ ಎಂ. ಆರ್ ವೆಂಕಟೇಶ್ ರವರನ್ನ ಈ ಬಗ್ಗೆ ಕೇಳಿದರೆ, ಹೀಗೆ ಟಾರ್ಗೆಟ್ ಕೊಟ್ಟಿರುವ ಬಗ್ಗೆ ನನ್ನ ಗಮನಕ್ಕೆ ಈವರೆಗೆ ಬಂದಿಲ್ಲ. ಈ ಬಗ್ಗೆ ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಕಳೆದ ಒಂದುವರೆ ವರ್ಷದಿಂದ ವೋಲ್ವೋ ಬಸ್ ಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ. ಇದ್ರಿಂದ ಬಿಎಂಟಿಸಿ ಪ್ರತೀ ತಿಂಗಳು ಕೋಟ್ಯಾಂತರ ನಷ್ಟ ಅನುಭವಿಸುತ್ತಿದೆ. ಜೊತೆಗೆ ಮಾರ್ಕೋ ಪೊಲೊ ಬಸ್, ಡಿಪೋ ಗಳಲ್ಲಿ ಡೀಸೆಲ್ ಸ್ಕ್ಯಾಮ್ ಸೇರಿದಂತೆ ಇನ್ನಿತರ ರೂಪದಲ್ಲಿ ಅಧಿಕಾರಿಗಳು ಲೆಕ್ಕಕ್ಕಿಲ್ಲದಷ್ಟು ದುಂದು ವೆಚ್ಚ ಮಾಡ್ತಿದ್ರೂ ಇವ್ರನ್ನ ಹೇಳೋರಿಲ್ಲ ಕೇಳೋರಿಲ್ಲ ಎಂಬಾಂತಾಗಿದೆ. ಇಷ್ಟೆಲ್ಲದರ ನಡುವೆ ನಿಯತ್ತಾಗಿ ದುಡಿದು ನಿಗಮವನ್ನ ಮೇಲಕ್ಕೆತ್ತುವ ಪ್ರಯತ್ನದಲ್ಲಿರುವ ನೌಕರರ ಮೇಲೆ ಯಾಕೆ ಕೆಂಗಣ್ಣು ಎಂಬ ಆಕ್ರೋಶ ಸಾರಿಗೆ ನೌಕರರಲ್ಲಿ ವ್ಯಕ್ತವಾಗ್ತಿದೆ.
Published by:Kavya V
First published: