HOME » NEWS » State » BENGALURU URBAN NRIS WHO CAME TO VISIT FAMILIES IN BENGALURU STAYED BACK TO ADDRESS COVID DISTRESS SKTV

Corona Effect: ತಮ್ಮವರನ್ನು ನೋಡಲು ಬಂದ NRIಗಳು ಈಗ ಕೊರೊನಾ ವಾರಿಯರ್ಸ್ ಆಗಿ ಇಲ್ಲೇ ಉಳಿದುಬಿಟ್ಟಿದ್ದಾರೆ !

ಸೋಂಕಿನ ಪ್ರತಾಪ ಒಂದಷ್ಟು ಕಡಿಮೆಯಾಗುವ ತನಕ ಇಲ್ಲೇ ಉಳಿಯುವುದು ಎಂದು ನಿರ್ಧಾರವಾದ ನಂತರ ಜ್ಯೋತ್ಸ್ನಾ ಕೋವಿಡ್ ಸೋಂಕಿತರಿಗೆ, ಐಸೊಲೇಶನ್ನಲ್ಲಿ ಇರುವವರಿಗೆ ಸಹಾಯ ಮಾಡಲು ನಿರ್ಧರಿಸಿದ್ರು. ಕೆಲ ಸ್ವಯಂಸೇವಕರ ಜೊತೆ ಸೇರಿ ರೋಗಿಗಳಿಗೆ ಆಕ್ಸಿಜನ್, ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸಲು ಸಹಾಯ ಮಾಡಲಾರಂಭಿಸಿದ್ರು. ನೋಡನೋಡುತ್ತಲೇ ಈ ಗುಂಪು ಮತ್ತಷ್ಟು ದೊಡ್ಡದಾಗಿ ಇವರಂತೆಯೇ ಬೆಂಗಳೂರಿನಲ್ಲಿ ಉಳಿದ ಮತ್ತಷ್ಟು ಅನಿವಾಸಿ ಭಾರತೀಯರು ಕೈಜೋಡಿಸಿದ್ರು.

news18-kannada
Updated:May 9, 2021, 5:50 PM IST
Corona Effect: ತಮ್ಮವರನ್ನು ನೋಡಲು ಬಂದ NRIಗಳು ಈಗ ಕೊರೊನಾ ವಾರಿಯರ್ಸ್ ಆಗಿ ಇಲ್ಲೇ ಉಳಿದುಬಿಟ್ಟಿದ್ದಾರೆ !
ಸ್ವಯಂಸೇವಕರಿಗೆ ತರಬೇತಿ
  • Share this:
ಬೆಂಗಳೂರು: ನಮ್ಮ ದೇಶ, ನಮ್ಮ ನೆಲ, ನಮ್ಮವರು ಅನ್ನೋ ಸೆಳೆತವೇ ಹಾಗೆ. ತವರು ನೆಲದಲ್ಲಿ ಒಂದಷ್ಟು ಸಮಸ್ಯೆ ಎಂದರೂ ದೂರದಲ್ಲಿರುವ ಕರುಳು ಹಿಂಡಿದಂತಾಗುತ್ತದೆ. ಹೀಗೇ ಅನಿಸಿದ್ದಕ್ಕೆ ಕೆಲ ಅನಿವಾಸಿ ಭಾರತೀಯರು ಕೊರೊನಾ ಕಾಲದಲ್ಲಿ ತಾಯ್ನೆಲದ ಬೆಂಬಲಕ್ಕೆ ನಿಂತು ಇಲ್ಲೇ ಉಳಿದುಬಿಟ್ಟಿದ್ದಾರೆ. ಬೆಂಗಳೂರು ಮೂಲದ ಜ್ಯೋತ್ಸ್ನಾ ಪ್ರಸಾದ್ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಾರೆ. ಕೊರೊನಾದಿಂದಾಗಿ ಕಳೆದ ಸುಮಾರು 2 ವರ್ಷಗಳಿಂದ ಅವರಿಗೆ ಬೆಂಗಳೂರಿನಲ್ಲಿರುವ ತಮ್ಮ ವಯಸ್ಸಾದ ತಾಯಿಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಜನವರಿ ತಿಂಗಳ ವೇಳೆಗೆ ಕೊರೊನಾ ಆರ್ಭಟ ತುಸು ಕಡಿಮೆ ಆಗಿದ್ದರಿಂದ ತಾಯಿಯನ್ನು ನೋಡಿಕೊಂಡು ಹೋಗಲು ಅವರು ಬೆಂಗಳೂರಿಗೆ ಬಂದರು. ಒಂದೆರಡು ತಿಂಗಳು ತಾಯಿಯೊಂದಿಗೆ ಇದ್ದು ಹೋಗುವ ಆಲೋಚನೆ ಅವರದ್ದಾಗಿತ್ತು. ಆದ್ರೆ ಅಷ್ಟರಲ್ಲಾಗಲೇ ಕೊರೊನಾ ಎರಡನೇ ಅಲೆ ತನ್ನ ರೌದ್ರರೂಪ ಪ್ರದರ್ಶಿಸೋಕೆ ಶುರುಮಾಡಿಬಿಡ್ತು. ಬೇರೆ ದಾರಿ ಇಲ್ಲದೆ ಜ್ಯೋತ್ಸ್ನಾ ಪ್ರಸಾದ್ ಇಲ್ಲೇ ಉಳಿದುಕೊಂಡರು.

ಇನ್ನೇನು ಸೋಂಕಿನ ಪ್ರತಾಪ ಒಂದಷ್ಟು ಕಡಿಮೆಯಾಗುವ ತನಕ ಇಲ್ಲೇ ಉಳಿಯುವುದು ಎಂದು ನಿರ್ಧಾರವಾದ ನಂತರ ಜ್ಯೋತ್ಸ್ನಾ ಕೋವಿಡ್ ಸೋಂಕಿತರಿಗೆ, ಐಸೊಲೇಶನ್​ನಲ್ಲಿ ಇರುವವರಿಗೆ ಸಹಾಯ ಮಾಡಲು ನಿರ್ಧರಿಸಿದ್ರು. ಕೆಲ ಸ್ವಯಂಸೇವಕರ ಜೊತೆ ಸೇರಿ ರೋಗಿಗಳಿಗೆ ಆಕ್ಸಿಜನ್, ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸಲು ಸಹಾಯ ಮಾಡಲಾರಂಭಿಸಿದ್ರು. ನೋಡನೋಡುತ್ತಲೇ ಈ ಗುಂಪು ಮತ್ತಷ್ಟು ದೊಡ್ಡದಾಗಿ ಇವರಂತೆಯೇ ಬೆಂಗಳೂರಿನಲ್ಲಿ ಉಳಿದ ಮತ್ತಷ್ಟು ಅನಿವಾಸಿ ಭಾರತೀಯರು ಕೈಜೋಡಿಸಿದ್ರು.

“ನಮ್ಮ ಫೋನ್​ಗಳು ಸದಾ ಬ್ಯುಸಿಯಾಗಿಯೇ ಇರುತ್ತವೆ. ಸಮಸ್ಯೆ ಎದುರಿಸುವ ಜನರ ಸಂಖ್ಯೆ ಬಹಳ ದೊಡ್ಡದಿದೆ, ಇದರಲ್ಲಿ ನಮಗೆ ಎಷ್ಟು ಸಹಾಯ ಮಾಡಲು ಸಾಧ್ಯವೋ ಅಷ್ಟನ್ನು ಶಕ್ತಿಮೀರಿ ಮಾಡುತ್ತಿದ್ದೇವೆ” ಎನ್ನುತ್ತಾರೆ ಜ್ಯೋತ್ಸ್ನಾ. ಅಮೇರಿಕಾದಲ್ಲಿ ಸೇವಾ ಇಂಟರ್​ನ್ಯಾಷನಲ್ ಎನ್ನುವ ಸ್ವಯಂಸೇವಾ ಸಂಘಟನೆಯ ಸದಸ್ಯರೂ ಆಗಿರುವ ಇವರು ಭಾರತದ ಸದ್ಯದ ಪರಿಸ್ಥಿತಿಗೆ ಎಲ್ಲರೂ ಒಟ್ಟಾಗಿ ಸೇರಿ ಮತ್ತಷ್ಟು ಸಹಾಯ ಮಾಡುವ ಕೆಲಸಕ್ಕೂ ಜನರನ್ನು ಒಗ್ಗೂಡಿಸುತ್ತಿದ್ದಾರೆ.

ಇದನ್ನೂ ಓದಿhttps://kannada.news18.com/news/coronavirus-latest-news/all-people-in-18-to-44-years-age-bracket-will-get-corona-vaccine-from-may-10-announces-health-minister-dr-k-sudhakar-sktv-562289.html

ಬೆಂಗಳೂರಿನಲ್ಲಿ ಅನಿವಾಸಿ ಭಾರತೀಯರ ಗುಂಪು ಖುದ್ದು ತಾವೇ ಹೋಗಿ ಸಹಾಯ ಮಾಡುವುದಲ್ಲದೇ ಒಂದಷ್ಟು ಯುವಕ ಯುವತಿಯರನ್ನೂ ಈ ಕೆಲಸಕ್ಕೆ ಪ್ರೇರೇಪಿಸಿ ತರಬೇತಿ ನೀಡಿದೆ. ಸಾಮಾನ್ಯವಾಗಿ ಕಾಲೇಜು ವಿದ್ಯಾರ್ಥಿಗಳಾದ ಈ ಯುವಜನರು ಮನೆಮನೆಗೆ ತೆರಳಿ ಅಲ್ಲಿರುವ ಎಷ್ಟು ಜನ ಲಸಿಕೆ ಪಡೆಯಲು ಅರ್ಹರು, ಎಷ್ಟು ಜನ ಲಸಿಕೆ ಪಡೆದಿದ್ದಾರೆ ಎನ್ನುವ ಲೆಕ್ಕ ಇಡುತ್ತಿದ್ದಾರೆ. ಅರ್ಹ ವ್ಯಕ್ತಿಗಳು ಲಸಿಕೆ ಪಡೆಯದಿದ್ರೆ ಖುದ್ದಾಗಿ ತಾವೇ ಅವರನ್ನು ಕರೆದುಕೊಂಡು ಹೋಗಿ ಲಸಿಕೆ ಕೊಡಿಸುತ್ತಿದ್ದಾರೆ. ಅಗತ್ಯ ಇರುವ ಕಡೆ ರೇಷನ್ ಕಿಟ್ ಮತ್ತು ಅಗತ್ಯ ಸಾಮಗ್ರಿಗಳನ್ನೂ ತಲುಪಿಸುತ್ತಿದ್ದಾರೆ.
Youtube Video

ಈ ಕೊರೊನಾ ಅನೇಕರಿಂದ ಅವರ ಪ್ರೀತಿಪಾತ್ರರನ್ನು ಕಿತ್ತುಕೊಂಡಿದೆ. ಅದೇ ರೀತಿ ಕೆಲವರನ್ನು ಸಂಕಷ್ಟ ಕಾಲದಲ್ಲಿ ಸನಿಹಕ್ಕೂ ತಂದಿದೆ. ಎಲ್ಲರೂ ಒಟ್ಟಾಗಿ ಹೋರಾಡಿ ಈ ಮಹಾಮಾರಿಯಿಂದ ಜೋಪಾನವಾಗಿ ಪಾರಾಗಿ ದಡ ಸೇರಬೇಕಿದೆ. 
Published by: Soumya KN
First published: May 9, 2021, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories