Bangalore Crime News: ಉತ್ತರ ಕರ್ನಾಟಕ ಮೂಲದ ಯುವತಿಯ ಮೇಲೆ ನೈಜೀರಿಯಾ ಪ್ರಜೆಯಿಂದ ಅತ್ಯಾಚಾರ ಆರೋಪ, ಇಬ್ಬರ ಬಂಧನ

North Karnataka Techie Allegedly Rapes by Nigerian Nationals: ಉತ್ತರ ಕರ್ನಾಟಕ ಜಿಲ್ಲೆಯೊಂದರ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬಳ ಜತೆ ನೈಜೀರಿಯಾ ಪ್ರಜೆಗಳಿಗೆ ಇತ್ತೀಚೆಗೆ ಸ್ನೇಹವಾಗಿದೆ. ಆಗಸ್ಟ್​ 29ರಂದು ಟೋನಿ ಯುವತಿಯನ್ನು ಉಬಾಕನ ಮನೆಗೆ ಕರೆದೊಯ್ದಿದ್ದಾನೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  Bengaluru Crime News: ಸಾಮಾನ್ಯವಾಗಿ ನೈಜೀರಿಯಾ, ಆಫ್ರಿಕಾ, ಜಾಂಬಿಯಾ, ನಿಗರ್​ ಮತ್ತಿತರ ಹಿಂದುಳಿದ ಆಫ್ರಿಕಾ ಖಂಡದ ದೇಶಗಳ (African Nationals in Bengaluru) ಯುವಕ ಯುವತಿಯರು ಪದೇ ಪದೇ ಸುದ್ದಿಯಲ್ಲಿರುತ್ತಾರೆ. ಬೇಸರದ ಸಂಗತಿಯೆಂದರೆ ಇವರು ಸುದ್ದಿಯಲ್ಲಿರುವುದು ಮಾದಕ ದ್ರವ್ಯ ಸೇವನೆ, ಮಾರಾಟ, ಗಲಾಟೆ ಪ್ರಕರಣಗಳಿಂದಲೇ. ಇದೇ ರೀತಿಯ ಇನ್ನೊಂದು ಆರೋಪ ಈಗ ಕೇಳಿಬಂದಿದೆ. ಉತ್ತರ ಕರ್ನಾಟಕದ (North Karnataka) ಮೂಲದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ನೈಜೀರಿಯಾ ಮೂಲದ ಇಬ್ಬರನ್ನು ನಗರದ ಬಾಣಸವಾಡಿ ಪೊಲೀಸರು (Banasawadi Police) ಬಂಧಿಸಿದ್ದಾರೆ. 

  ಸಾಮಾನ್ಯವಾಗಿ ನೈಜೀರಿಯಾ ಪ್ರಜೆಗಳು ಅವರವರ ನಡುವೆಯೇ ಹೊಡೆದಾಟ, ದೊಂಬಿ ಮಾಡಿಕೊಂಡು ಜೈಲು ಪಾಲಾಗುತ್ತಾರೆ. ಅಥವಾ ಸ್ಥಳೀಯರ ಜತೆಗೋ ಇಲ್ಲ ಪೊಲೀಸರ ಜತೆಗೋ ಕೈ ಕೈ ಮಿಲಾಯಿಸಿ ಸುದ್ದಿಯಾಗುತ್ತಾರೆ. ಆದರೆ ಈ ಬಾರಿ ಕನ್ನಡತಿಯ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ. ಈಗಾಗಲೇ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.

  ನೈಜೀರಿಯಾ (Nigerian Citizens) ಮೂಲದ ಟೋನಿ ಮತ್ತು ಉಬಾಕ ಎಂಬುವವರನ್ನು ಆರೋಪಿಗಳು ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ, ಉತ್ತರ ಕರ್ನಾಟಕ ಜಿಲ್ಲೆಯೊಂದರ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬಳ ಜತೆ ನೈಜೀರಿಯಾ ಪ್ರಜೆಗಳಿಗೆ ಇತ್ತೀಚೆಗೆ ಸ್ನೇಹವಾಗಿದೆ. ಆಗಸ್ಟ್​ 29ರಂದು ಟೋನಿ ಯುವತಿಯನ್ನು ಉಬಾಕನ ಮನೆಗೆ ಕರೆದೊಯ್ದಿದ್ದಾನೆ. ನಂತರ ಎಲ್ಲರೂ ಅಲ್ಲಿ ಮದ್ಯ ಸೇವಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಯುವತಿಯ ಮೇಲೆ ಉಬಾಕ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

  ಯುವತಿಯ ದೂರಿನ ಅನ್ವಯ ಉಬಾಕ ಯುವತಿಯ ಜತೆ ಸ್ನೇಹ ಬೆಳೆಸಲು ಈ ಹಿಂದೆಯೂ ಯತ್ನಿಸಿದ್ದನಂತೆ. ಆದರೆ ಯುವತಿ ನಿರಾಕರಿಸಿದ ಹಿನ್ನೆಲೆ, ಸಾಧ್ಯವಾಗಿರಲಿಲ್ಲ. ಆದರೆ ಸ್ನೇಹಿತ ಟೋನಿ ಸಹಾಯ ಪಡೆದು ಮನೆಗೆ ಕರೆಸಿಕೊಂಡು, ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

  ವೀಸಾ ಅವಧಿ ಮುಗಿದ ನಂತರವೂ ಈ ಇಬ್ಬರೂ ಆರೋಪಿಗಳು ಬೆಂಗಳೂರಿನಲ್ಲಿ ಇದ್ದರು ಎಂಬ ಅನುಮಾನವಿದ್ದು, ಇಬ್ಬರ ವೀಸಾ ಮತ್ತು ಪಾಸ್​ಪೋರ್ಟ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಗಳು ತಮ್ಮ ಪಾಸ್ಟ್​ಪೋರ್ಟ್​ ಮತ್ತು ವೀಸಾ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  ಎಲ್ಲೆಲ್ಲೂ ಅತ್ಯಾಚಾರ ಪ್ರಕರಣಗಳದ್ದೇ ಸದ್ದು:

  ಇತ್ತೀಚೆಗಷ್ಟೇ ರಾಷ್ಟ್ರಮಟ್ಟದಲ್ಲಿ ಮೈಸೂರಿನ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ (Mysuru Gang Rape Case) ಸುದ್ದಿಯಾಗಿತ್ತು. ಜತೆಗೆ ಪ್ರಕರಣ ಸಂಬಂಧ 6 ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬಂಧಿತರು ಇನ್ನಷ್ಟು ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಶಯ ಇರುವ ಹಿನ್ನಲೆ ಪಾಲಿಗ್ರಾಫ್​ ಟೆಸ್ಟ್​ ನಡೆಸಲು ಮೈಸೂರು ಪೊಲೀಸರು ಮುಂದಾಗಿದ್ದಾರೆ.

  ಇದನ್ನೂ ಓದಿ: Crime News: ಹೆಂಡತಿಯ ಮೇಲಿನ ಸಿಟ್ಟಿಗೆ ತನ್ನ ಎರಡು ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಕ್ರೂರ ಅಪ್ಪ

  ಇನ್ನೊಂದೆಡೆ ತುಮಕೂರಿನಲ್ಲಿ ಕುರಿ ಮೇಯಿಸಲು ಹೋಗಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿತ್ತು (Tumkur Gang Rape Case). ಅದರ ಸಂಬಂಧ ಇದುವರೆಗೂ ಆರೋಪಿಗಳು ಬಂಧನವಾಗಿಲ್ಲ. ಹರಿಯಾಣದ ಗುರುಗ್ರಾಮದಲ್ಲಿ ಹೆತ್ತ ತಂದೆಯೇ ಹೆಂಡತಿಯ ಮೇಲಿನ ಕೋಪದಿಂದ ಎರಡು ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ ಭೀಕರ ಘಟನೆಯೂ ವರದಿಯಾಗಿದೆ.

  ಇದನ್ನೂ ಓದಿ: Online Dating App: ಏಕ ಕಾಲಕ್ಕೆ ಇಬ್ಬರ ಜತೆ ಡೇಟಿಂಗ್​, ವಿಷಯ ತಿಳಿದ ಬಾಯ್​ಫ್ರೆಂಡ್​ಗಳು ಏನು ಮಾಡಿದ್ರು ಗೊತ್ತಾ?

  ಒಟ್ಟಿನಲ್ಲಿ ಒಂದರ ಮೇಲೊಂದರಂತೆ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಕೇಳಿ ಬರುತ್ತಿದೆ. ಆನ್​ಲೈನ್​ ಡೇಟಿಂಗ್​ ಆ್ಯಪ್​ (Online Dating Apps) ಬಳಸಿ ಯುವತಿಯರನ್ನು ಬ್ಲಾಕ್​ಮೇಲ್​ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಖಾಸಗಿ ಫೋಟೊ, ವಿಡಿಯೋಗಳನ್ನು ಹರಿಬಿಡುವುದು, ಹೀಗೇ ನೂರೆಂಟು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿವೆ.

  ಇನ್ನೂ ಬಾಣಸವಾಡಿ ಪೊಲೀಸರು ಪ್ರಕರಣದ ಆರೋಪಿಗಳಿಗೂ ಡ್ರಗ್​ ಮಾಫಿಯಾಗೂ ಸಂಬಂಧವಿದೆಯಾ ಎಬ್ಬ ಕಡೆಗೂ ತನಿಖೆ ನಡೆಸುತ್ತಿದ್ದಾರೆ.
  Published by:Sharath Sharma Kalagaru
  First published: