HOME » NEWS » State » BENGALURU URBAN NO QUESTION OF LEADERSHIP CHANGE IN KARNATAKA SAYS NALINKUMAR KATEEL KVD

ಸಿಎಂ ಬದಲಾವಣೆ ವಿಚಾರ: ಬಿಜೆಪಿ ಶಾಸಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ನಳೀನ್​​ಕುಮಾರ್​​ ಕಟೀಲ್

ಸಿಎಂ ಬದಲಾವಣೆ ಚರ್ಚೆಯನ್ನು ತಣ್ಣಗಾಗಿಸಲು ಬಿಜೆಪಿ ಶಾಸಕರಿಗೆ ಪಕ್ಷದ ಅಧ್ಯಕ್ಷ ನಳೀನ್​​ಕುಮಾರ್​ ಕಟೀಲ್​​ ಎಚ್ಚರಿಕೆ ಕೊಟ್ಟಿದ್ದಾರೆ. ಈಗ ಕೋವಿಡ್​ ಕೆಲಸ ಮಾತ್ರ ಮಾಡಿ, ರಾಜಕೀಯ ಬೇಡ ಎಂದಿದ್ದಾರೆ.

Kavya V
Updated:May 28, 2021, 2:10 PM IST
ಸಿಎಂ ಬದಲಾವಣೆ ವಿಚಾರ: ಬಿಜೆಪಿ ಶಾಸಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ನಳೀನ್​​ಕುಮಾರ್​​ ಕಟೀಲ್
ನಳೀನ್ ಕುಮಾರ್ ಕಟೀಲ್
  • Share this:
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸುಳಿಗಾಳಿಯಂತೆ ಸುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಬಿಜೆಪಿ  ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಲ್ಲಗಳೆದಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಎಲ್ಲಿಯೂ ಚರ್ಚೆ ಆ ಬಗ್ಗೆ ಆಗಿಲ್ಲ, ಯಾವುದೇ ಬದಲಾವಣೆ ಕೂಡ ಮಾಡಲ್ಲ. ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ ಆದಗಿನಿಂದ ಬದಲಾವಣೆ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಮುಂದಿನ ಎರಡು ವರ್ಷ ಅವರೇ ಸಿಎಂ ಆಗಿ ಇರುತ್ತಾರೆ. ಅವರೇ ಅಧಿಕಾರವನ್ನು ಕೂಡ ಪೂರ್ಣಗೊಳಿಸ್ತಾರೆ‌. ಸದ್ಯಕ್ಕೆ ಶಾಸಕಾಂಗ ಪಕ್ಷದ ಸಭೆ ಇಲ್ಲ, ಕೋವಿಡ್ ಮುಗಿಯುವ ತನಕ ಯಾವುದೇ ಸಭೆಗಳನ್ನ ನಡೆಸಲ್ಲ ಎನ್ನುವ ಮೂಲಕ ಬಿಎಸ್​ವೈ ಪರ ಬ್ಯಾಟ್​ ಬೀಸಿದರು.

ಯಶವಂತಪುರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂಪಾಯಿ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕಟೀಲ್ ಅವರು ಸಚಿವ ಸಿಪಿ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದರು. ಸಿಎಂ ಯಡಿಯೂರಪ್ಪ ಅವರು ೨೪ ಗಂಟೆಗಳ ಕಾಲ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಸಚಿವರ  ತಂಡ ಕೂಡ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಜನರ ಜೊತೆ ನಾನು ಇದ್ದೇನೆ ಎಂದು ಭರವಸೆ ನೀಡುವ ಸಲುವಾಗೇ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡಿದರು. ಸಿಪಿ ಯೋಗೇಶ್ವರ್ ಜವಾಬ್ದಾರಿಯುತ ಸ್ಥಾನದಲ್ಲಿರುವವರು. ರಾಜ್ಯದಲ್ಲಿ ಶುದ್ಧ ಸರ್ಕಾರ ಇಲ್ಲ ಎಂಬ ಅವರ ಹೇಳಿಕೆ ಬಗ್ಗೆ ಕೂಡಲೇ ವಿವರಣೆ ಪಡೆಯುತ್ತೇನೆ. ಸಿಎಂ ಪುತ್ರರಿಂದ ಅಧಿಕಾರ ಹಸ್ತಕ್ಷೇಪದ ಆರೋಪದ ಬಗ್ಗೆಯೂ ವಿವರಣೆ ಪಡೆಯುತ್ತೇನೆ ಎಂದರು.

ಈಗ ಕೋವಿಡ್ ಕೆಲಸ ಮಾತ್ರ ನಡೆಯುತ್ತಿದೆ. ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಶಾಸಕರಿಗೆ ಈ ಹಿಂದೆಯೇ ಸೂಚಿಸಿದ್ದೆ, ಈಗಲೂ ಅದೇ ಸೂಚನೆ ಕೊಡುತ್ತಿದ್ದೇನೆ. ಈಗ ಕೋವಿಡ್ ಕೆಲಸ ಮಾಡಬೇಕು, ಬೇರೆ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಭಿನ್ನಮತೀಯ ಶಾಸಕರಿಗೆ ಕಟೀಲ್​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Cooking Oil Price: ಅಡುಗೆ ಎಣ್ಣೆ ರೇಟ್ ಕೇಳಿ ಹೌಹಾರಿದ ಬೆಂಗಳೂರಿನ ಜನ..!; ಯಾವ್ಯಾವ್ದು ಎಷ್ಟೆಷ್ಟಾಗಿದೆ ಗೊತ್ತಾ?

ಕೊರೋನಾ ಕೇವಲ ಕರ್ನಾಟಕಕ್ಕೆ, ದೇಶಕ್ಕೆ ಮಾತ್ರ ಬಂದಿರೋದು ಅಲ್ಲ. ವಿಶ್ವಾದ್ಯಂತ ಜನ ಸೋಂಕಿನಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದರೆ ನಾವು ಈಗ ಆತ್ಮವಿಶ್ವಾಸ ಕಳೆದುಕೊಳ್ಳಬೇಕಿಲ್ಲ. ಗುಣಮುಖರಾದವರ ಸಂಖ್ಯೆ ಹೆಚ್ಚು ಇದ್ದು, ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಕರ್ನಾಟಕದಲ್ಲಿ ಎರಡನೇ ಅಲೆ ಆರಂಭದಲ್ಲಿ ಸಮಸ್ಯೆ ಇತ್ತು. ಈಗ ಸಮಸ್ಯೆಗಳು ಸರಿಯಾಗಿವೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಚಿವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಸಚಿವ ಸೋಮಶೇಖರ್ ಅತ್ಯುತ್ತಮ ಸಚಿವರಾಗಿದ್ದಾರೆ ಎಂದು ಕಟೀಲ್​​ ಹೊಗಳಿದರು.

ಸಚಿವ ಸೋಮಶೇಖರ್ ಮೈಸೂರಿನಲ್ಲಿ ಉತ್ತಮ ರೀತಿಯಾಗಿ ಕರ್ತವ್ಯ ನಿರ್ವಹಿಸಿ, ಕೋವಿಡ್ ನಿಯಂತ್ರಣ ಮಾಡಲು ಶ್ರಮ ಪಟ್ಟಿದ್ದಾರೆ. ಹೀಗಾಗಿ ಅವರು ಮೈಸೂರು ಜಿಲ್ಲೆ ಹಾಗೂ ರಾಜ್ಯದಲ್ಲಿ ಅತ್ಯುತ್ತಮ ಸಚಿವರಾಗಿದ್ದಾರೆ ಎಂದು ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Bangalore Gangrape: ಸಂತ್ರಸ್ತೆಯ ಮತ್ತೊಂದು ವಿಡಿಯೋ ವೈರಲ್; ಮಾಹಿತಿ ಕಲೆ ಹಾಕುತ್ತಿರುವ ಪೊಲೀಸ್ ಆಯುಕ್ತ ಕಮಲ್ ಪಂತ್ಇನ್ನು ರಾಜ್ಯದಲ್ಲಿ ಶುದ್ಧ ಸರ್ಕಾರವಿಲ್ಲ ಎಂಬ ಸಚಿವ ಸಿಪಿ ಯೋಗೇಶ್ವರ್ ಹೇಳಿಕೆಗೆ ಸಚಿವ ಸೋಮಶೇಖರ್ ಟಾಂಗ್ ಕೊಟ್ಟರು. ಯಾರು ಮೂರು ಪಕ್ಷಗಳನ್ನು ಬದಲಾವಣೆ ಮಾಡಿರ್ತಾರೋ ಅವರು ಮಾತ್ರ ಈ ರೀತಿ ಹೇಳೋಕೆ ಸಾಧ್ಯ. ನಮ್ಮ ಸರ್ಕಾರ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಿಪಿ ಯೋಗೇಶ್ವರ್ ಒಬ್ಬ ಮಂತ್ರಿ ಯಾಗಿ ಈ ರೀತಿ ಹೇಳೋದು ಸರಿಯಲ್ಲ ಎಂದು ಕಿಡಿಕಾರಿದರು.

ಜೊತೆಗೆ ಸಿಎಂ ಪುತ್ರ ವಿಜಯೇಂದ್ರ ಅವರನ್ನು ಸಮರ್ಥಿಸಿಕೊಂಡರು. ಸರ್ಕಾರದಲ್ಲಿ ವಿಜಯೇಂದ್ರ ಎಳ್ಳಷ್ಟು ಹಸ್ತಕ್ಷೇಪ ಮಾಡಿಲ್ಲ. ಇದುವರೆಗೂ ನನ್ನ ಇಲಾಖೆಯಲ್ಲಿ ಅವರು ಹಸ್ತಕ್ಷೇಪ ಮಾಡಿರುವ ನಿದರ್ಶನ ಇಲ್ಲ. ವಿಜಯೇಂದ್ರ ಅವರು ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅದು ಬಿಟ್ಟು ಸರ್ಕಾರದ ಆಡಳಿತಕ್ಕೆ ಹಸ್ತಕ್ಷೇಪ ಮಾಡಿಲ್ಲ ಎಂದ ಸೋಮಶೇಖರ್ ಸ್ಪಷ್ಟನೆ ನೀಡಿದರು.
Published by: Kavya V
First published: May 28, 2021, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories