B.Sriramulu: ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ, ವಜಾಗೊಂಡ ನೌಕರರಿಗೆ ಮರು ನೇಮಕಾತಿ ಪತ್ರ

ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ ಎಂದು ಬೆಂಗಳೂರಿನಲ್ಲಿ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಸಾರಿಗೆ ಸಚಿವ ಬಿ. ಶ್ರೀರಾಮುಲು

ಸಾರಿಗೆ ಸಚಿವ ಬಿ. ಶ್ರೀರಾಮುಲು

  • Share this:
ಬೆಂಗಳೂರು (ಫೆ.10): ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಹೀಗಾಗಿ ಸಾರಿಗೆ ಪ್ರಯಾಣದ ದರ ಕೂಡ ಹೆಚ್ಚಾಗುತ್ತೆ ಎಂದು ಹೇಳಲಾಗ್ತಿತ್ತು. ಸದ್ಯಕ್ಕೆ ಸಾರಿಗೆ ಪ್ರಯಾಣ ದರ (Transportation rate) ಹೆಚ್ಚಳ  ಇಲ್ಲ ಎಂದು ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು (B.Sriramulu) ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.  ಪ್ರಯಾಣದ ದರ ಹೆಚ್ಚಳದ ಬಗ್ಗೆ ಯಾವುದೇ ಆತಂಕ ಪಡದೆ ಬಸ್​ಗಳಲ್ಲಿ ಪ್ರಯಾಣಿಸಿ.  ವೋಲ್ವೋ ಬಸ್ (volvo bus) ಪ್ರಯಾಣ ದರವನ್ನು ಇಳಿಕೆ ಮಾಡಲಾಗಿದೆ ಎಂದಿದ್ದಾರೆ.  ನಗರದಲ್ಲಿ 2 ಬಸ್ ಬೆಂಕಿಗೆ ಆಹುತಿಯಾದ ಪ್ರಕರಣ ಬಗ್ಗೆ ಅಧಿಕಾರಿಗಳು ವರದಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದ್ದಾರೆ. ಬಿಎಂಟಿಸಿ ಹಾಗೂ ಕೆಎಸ್ಆರ್​ಟಿಸಿ ನೌಕರರಿಗೆ ಸಂಬಳ (Salary) ವಿಚಾರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳೊದಾಗಿ ರಾಮುಲು ಭರವಸೆ ನೀಡಿದ್ದಾರೆ.

ಸಾರಿಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್

ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ ಎಂದು ಬೆಂಗಳೂರಿನಲ್ಲಿ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮಹಾಮಾರಿ ಕೊರೊನಾ, ಸಾರಿಗೆ ನೌಕರರ ಮುಷ್ಕರ, ಡೀಸೆಲ್ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ನೀಡಲೂ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿತ್ತು.

ಹೀಗಾಗಿ ಟಿಕೆಟ್ ದರ ಏರಿಕೆ ಮಾಡುವ ಸಾಧ್ಯತೆಗಳು ಹೆಚ್ಚಿದ್ದವು. ಸದ್ಯ ಟಿಕೆಟ್ ದರ ಏರಿಕೆಗೆ ಸರ್ಕಾರ ಬ್ರೇಕ್ ಹಾಕಿದೆ. ಈ ಸಂಬಂಧ ಮಾತನಾಡಿದ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು, ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ. ವೋಲ್ವೋ ಬಸ್ ಪ್ರಯಾಣ ದರ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಏಕಾಏಕಿ BMTC Buses ಹೊತ್ತಿ ಉರಿದೇ ಬಿಟ್ಟವು.. ಹೆದರಿರುವ ಪ್ರಯಾಣಿಕರ ವಿಶ್ವಾಸ ಗಳಿಸಲು ಮುಂದಾದ MD

ವಜಾಗೊಂಡಿದ್ದವರಿಗೆ ಮರುನೇಮಕ ಪತ್ರ

ಮುಷ್ಕರದಲ್ಲಿ ಭಾಗಿಯಾಗಿ ವಜಾಗೊಂಡಿದ್ದ ನೌಕರರಿಗೆ ಮರುನೇಮಕಾತಿ ಪತ್ರ ನೀಡಲಾಗಿದೆ. ಸರ್ಕಾರಿ ಬಂಗಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ರಾಮುಲು ಮೊದಲ ಹಂತದಲ್ಲಿ 100 ಜನರಿಗೆ ಮರು ನೇಮಕಾತಿ ಪತ್ರ ನೀಡಿದ.

ಇನ್ನು ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರ ವಜಾಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಭಾಗಿಯಾಗಿದ್ದ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂದು 100 ನೌಕರರು, ನಾಳೆ 200 ನೌಕರರ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮುಷ್ಕರದಲ್ಲಿ 1,610 ಜನ ಭಾಗಿಯಾಗಿ ತೊಂದರೆಗೀಡಾಗಿದ್ದರು.

ಇದನ್ನೂ ಓದಿ: ಬಿಎಂಟಿಸಿ‌ ಬಸ್ ಹತ್ತಿದ ವಿಕಲಚೇತನರಿಗೆ ಶಾಕ್ ; ವರ್ಷದ ಪಾಸ್ ಸ್ವೀಕರಿಸದೆ ಟಿಕೆಟ್ ಕೇಳಿದ ಕಂಡಕ್ಟರ್

‘ನೀವು ಸರ್ಕಾರವನ್ನು ನಂಬಿ’

ಮರು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ನಿಮ್ಮ ಕುಟುಂಬವನ್ನು ನೋಡಿ ಮರು ನೇಮಕ ಮಾಡುತ್ತಿದ್ದೇವೆ. ನಿಮ್ಮ ಜೊತೆ ಮುಷ್ಕರ ಮಾಡಿದವರು ಈಗ ಓಡಿ ಹೋದರು. ಆದರೆ, ಇಂದು ನಿಮ್ಮ ಜೊತೆಗೆ ನಿಂತಿದ್ದು ನಮ್ಮ ಸರ್ಕಾರ. ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಬುದ್ದಿವಾದ ಹೇಳಿದ್ದಾರೆ. ಮುಷ್ಕರ ಆಗಬಾರದಿತ್ತು. ಮುಷ್ಕರ ಮಾಡೋರು ಅರ್ಥ ಮಾಡಿಕೊಂಡು ಮಾಡಬೇಕು. ಏನೇ ಬೇಡಿಕೆ ಇದ್ದರು ಸಚಿವರು, ಯುನಿಯನ್ ಲೀಡರ್ ಜೊತೆ ಮಾತಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು ಎಂದು ಬುದ್ದಿವಾದ ಹೇಳಿದ್ರು.

‘ಸರಿಯಾಗಿ ಕಾಲಕಾಲಕ್ಕೆ ಸಿಗುತ್ತೆ ಸಂಬಳ’

ಸಿಎಂ ಅಣತಿಯಂತೆ ನೌಕರರ ಮರುನೇಮಕ ಮಾಡಿಕೊಳ್ತಿದ್ದೇವೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಅವಕಾಶ ಕೊಡಲಾಗಿದೆ. ಮತ್ತೆ ಆ ರೀತಿಯ ತಪ್ಪು ಮಾಡಲು ಹೋಗಬೇಡಿ. ಮತ್ತೆ ಮುಷ್ಕರ ಅಂದ್ರೆ ನಾವ್ಯಾರೂ ಜೊತೆಯಲ್ಲಿ ಇರೋದಿಲ್ಲ. ಮುಂದಿನ ತಿಂಗಳಿಂದ ಸರಿಯಾಗಿ ಸಂಬಳ ನೀಡುತ್ತೇವೆ. ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಸಾಕಷ್ಟು ಬಾರಿ ಈ ಬಗ್ಗೆ ನಾನು ಎಂಡಿಗಳನ್ನು ಕರೆದು ಮಾತಾಡಿದ್ದೆ. ಮುಷ್ಕರ ಪ್ರಾರಂಭ ಆಗೋದು ಸುಲಭ, ಆದರೆ ಪ್ರಾರಂಭದ ನಂತರ ಅದನ್ನು ನಿಲ್ಲಿಸಲು ಆಗಲ್ಲ ಎಂದರು.
Published by:Pavana HS
First published: