ಬೆಂಗಳೂರು: ಹಾವು, ಮುಂಗುಸಿಯಂತಿದ್ದ ಬಿಜೆಪಿ(BJP) ನಾಯಕರಿಬ್ಬರು ಈಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದ ಅವಧಿಯಲ್ಲಿ ಪರಸ್ಪರ ವಾಕ್ಸಮರ, ಏಕವಚನದಲ್ಲೇ ವಾಗ್ದಾಳಿಗಳನ್ನು ನಡೆಸುತ್ತಿದ್ದ ಬಿಜೆಪಿ ಶಾಸಕರುಗಳಾದ ಎಂ.ಪಿ.ರೇಣುಕಾಚಾರ್ಯ(MP Renukacharya), ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಈಗ ದೋಸ್ತಿಗಳಾಗಿದ್ದಾರೆ. ಈಗಿನ ಬೊಮ್ಮಾಯಿ ಸರ್ಕಾರದಲ್ಲಿ ಇಬ್ಬರು ಈಗ ಗೆಳೆತನದ ಹಸ್ತಚಾಚಿದ್ದಾರೆ. ಹಳೆ ಸಿಟ್ಟು ಮರೆತು ಇಬ್ಬರೂ ನಾಯಕರು ಒಂದಾಗಿದ್ದಾರೆ. ಶಾಸಕ ಬಸನಗೌಡ ಯತ್ನಾಳ್, ರೇಣುಕಾಚಾರ್ಯ ನಡುವೆ ರಾಜಿ ಪಂಚಾಯ್ತಿ ಆದಂತೆ ಕಾಣುತ್ತಿದೆ. ವಿಕಾಸಸೌಧದ ಕಚೇರಿಯಲ್ಲಿ ಉಭಯ ನಾಯಕರ ಮಿಲನ ಆಗಿದೆ. ರೇಣುಕಾಚಾರ್ಯ ಕಚೇರಿಗೆ ತೆರಳಿ ಯತ್ನಾಳ್ ಇಂದು ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಹಳೆಯ ಜಿದ್ದಿಗೆ ಇಬ್ಬರಿಂದಲೂ ವಿರಾಮ ಹಾಕಿದ್ದು, ಬೇರೆಯವರ ಅನುಕೂಲಕ್ಕಾಗಿ ನಾವ್ಯಾಕೆ ಕಚ್ಚಾಡಬೇಕು. ನಮಗೆ ಅದರಿಂದ ಯಾವುದೇ ಲಾಭ ಇಲ್ಲ. ಇನ್ಮುಂದೆ ಸೌಹಾರ್ದವಾಗಿ ಇರೋಣ ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಇಬ್ಬರೂ ನಾಯಕರಿಂದ ಲಾಬಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ ವಿವಾದಲ್ಲಿ Nalapad.. ಕಾಂಗ್ರೆಸ್ ಯುವ ಮುಖಂಡರು ಸೇರಿದ್ದ ಆ ಹೋಟೆಲ್ನಲ್ಲಿ ಅಸಲಿಗೆ ಆಗಿದ್ದೇನು?
ಡಿ.ಕೆ ಶಿವಕುಮಾರ್ ವೇಗ ತಡೆಯಲು ಚರ್ಚೆ
ಹಳೆ ದ್ವೇಷ ಮರೆತು, ಹೊಸ ದೋಸ್ತಿ ಮಾಡಿರುವ ಬಗ್ಗೆ ಪ್ರತಿಕ್ರಿತಿಸಿದ ರೇಣುಕಾಚಾರ್ಯ ಅವರು ಯತ್ನಾಳ್ ಗುಣಗಾನ ಮಾಡಿದರು. ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿ. ಕೇಂದ್ರ ಸಚಿವರಾಗಿದ್ರು, ಹಿರಿಯರು. ನಮ್ಮದು ಆಕಸ್ಮಿಕ ಸೌಜನ್ಯದ ಭೇಟಿ, ಮುಂದೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಪಾದಯಾತ್ರೆಯ ಮೂಲಕ ಅಧಿಕಾರಕ್ಕೆ ಬಂದ್ವಿ ಅನೋತರ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಡಿಕೆಶಿ ವೇಗ ತಡೆಯಲು ಚರ್ಚೆ ನಡೆಸಿದ್ವಿ ಎಂದರು.
ಯತ್ನಾಳ್ ಮಂತ್ರಿಯಾಗ್ಲಿ
ಕಾಲ ಬಂದ್ರೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡ್ತಿವಿ. ಮಾರ್ಚ್ ನಂತರ ಮಂತ್ರಿಗಿರಿ ಕೊಟ್ರೆ ಅಭಿವೃದ್ಧಿ ಆಗುತ್ತಾ? ಯತ್ನಾಳ್ ಹಿರಿಯರಿದ್ದಾರೆ, ಅವರು ಮಂತ್ರಿಯಾಗ್ಲಿ ಅಂತ ಶುಭ ಕೋರುತ್ತೇನೆ ಎಂದರು. ಸಂಪುಟ ಪುನರ್ ರಚನೆ ವಿಚಾರವಾಗಿ ಮಾತನಾಡಿ, ಯಾವ ಸಚಿವರ ವಿರುದ್ದವೂ ಆಕ್ರೋಶ ಇಲ್ಲ. ಸಂಘಟನೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡಿದವರನ್ನ ಮುಂದುವರೆಸುವುದು ಒಳ್ಳೆಯದು. ಅಧಿಕಾರಕ್ಕಾಗಿ ಇದ್ದವರು, ಸ್ವಾರ್ಥಕ್ಕಾಗಿ ಇದ್ದವರನ್ನ ಕೈಬಿಡಬೇಕು.
ಸಹಿ ಸಂಸ್ಕೃತಿ ನಮ್ಮಲ್ಲಿ ಇಲ್ಲ
ಈ ಬಗ್ಗೆ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡುತ್ತೇವೆ. ಸಿಎಂ ಜೊತೆಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಮುಂದಿನ ದಿನದಲ್ಲಿ ಬಿಜೆಪಿ ದೇಶದಲ್ಲಿ ರಾಜ್ಯದಲ್ಲಿ ಸದೃಢವಾಗಿದೆ, ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಎಲ್ಲಾ ಶಾಸಕರು ಮಾತ್ನಾಡೋಕೆ ಆಗ್ತಿಲ್ಲ, ಬಹಳಷ್ಟು ಶಾಸಕರು ನಮಗೆ ಹೇಳಿದ್ದಾರೆ. ಹೀಗಾಗಿ ನಾವಿಬ್ಬರು ಸಚಿವ ಸಂಪುಟದ ಬಗ್ಗೆ ಮಾತ್ನಾಡಿದ್ದೇವೆ. ಬಿಜೆಪಿಯಲ್ಲಿ ಸಹಿ ತೆಗೆದುಕೊಳ್ಳುವ ಸಂಸ್ಕೃತಿ ಇಲ್ಲ ಎಂದರು.
ಇದನ್ನೂ ಓದಿ: ಅವನ್ಯಾರೋ ಇದ್ದಾನಲ್ಲ ಕತ್ತಿ.. ಮಾಸ್ಕ್ ಹಾಕದವನು, ಮಂತ್ರಿ ಆಗೋಕೆ ಲಾಯಕ್ಕಾ..? Siddaramaiah ಕಿಡಿನುಡಿ
ರೇಣುಕಾಚಾರ್ಯನೂ ಮಂತ್ರಿಯಾಗ್ಲಿ
ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ವಿಚಾರವಾಗಿ ಮಾತನಾಡಿದ ಶಾಸಕ ಯತ್ನಾಳ್, ನಾನು ಏನು ಹೇಳಲು ಆಗಲ್ಲ. ಪಂಚರಾಜ್ಯ ಮುಗಿದ ಮೇಲೆ ಆಗುತ್ತೋ ಅಥವಾ ಅದಕ್ಕಿಂತ ಮೊದಲೇ ಆಗುತ್ತೋ ನೋಡೋಣ. ಆದ್ರೆ ಒಳ್ಳೆಯ ಬೆಳವಣಿಗೆ ಆಗುತ್ತೆ. ರೇಣುಕಾಚಾರ್ಯ ಮಂತ್ರಿಯಾಗ್ಲಿ ಅಂತ ಆಶೀರ್ವಾದ ಮಾಡುತ್ತೇನೆ. ರೇಣುಕಾಚಾರ್ಯ ಯಾರಾದರೂ ನಾಯಕತ್ವ ಒಪ್ಪಿಕೊಂಡ್ರೆ ಅವರ ನಾಯತ್ವದಲ್ಲೆ ಇರ್ತಾರೆ. ಬಿಎಸ್ವೈ ನಾಯಕತ್ವ ಅಥವಾ ಬೊಮ್ಮಾಯಿ ನಾಯಕತ್ವ ಒಪ್ಪಿಕೊಂಡಿದ್ದೀರಾ ಎಂಬ ಪ್ರಶ್ನೆಗೆ, ಅವರು ಬಿಜೆಪಿ ನಾಯಕತ್ವ ಒಪ್ಪಿಕೊಂಡಿದ್ದಾರೆ. ಮೊದಲು ಕೊರೊನಾ ಸಮರ್ಥವಾಗಿ ಎದುರಿಸಬೇಕು. ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡುತ್ತೆ ನೋಡೋಣ ಎಂದರು.
ಸಚಿವ ಸಂಪುಟ ಪುನರ್ ರಚನೆ ಇನ್ನು 15 ದಿವಸದಲ್ಲಿ ಆದ್ರೆ ಒಳ್ಳೆಯದು. ಮಾರ್ಚ್ ನಂತರ ಸಚಿವ ಸಂಪುಟ ರಚನೆ ಆದ್ರೆ ಏನು ಉಪಯೋಗ ಇಲ್ಲ, ಮಾಡುವುದಿದ್ರೆ ಇವಾಗ್ಲೇ ಮಾಡಿ. ಕೊನೆ ಪಕ್ಷ ಒಂದು ವರ್ಷ ಇದ್ದಾಗ ಮಾಡಿದ್ರೆ ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡ್ಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ