Corona Wave: ಬೆಂಗಳೂರಿನ ಒಂದೇ ಅಪಾರ್ಟ್ಮೆಂಟ್​ನಲ್ಲಿ 385 ಜನರ ಐಸೋಲೇಶನ್; ಇಡೀ ಬ್ಲಾಕ್ ಸೀಲ್ ಡೌನ್

ಕೇರಳ ರಾಜ್ಯದಲ್ಲಿ ಈಗಾಗಲೇ ಮೂರನೇ ಅಲೆ ವಿಜೃಂಭಿಸುತ್ತಿದ್ದು, ಬೆಂಗಳೂರಿನಲ್ಲೂ ಆತಂಕ ಇದ್ದೇ ಇದೆ. ಯಶವಂತಪುರದ ಅಪಾರ್ಟ್ಮೆಂಟ್​ವೊಂದರಲ್ಲಿ ಕೋವಿಡ್ ಪ್ರಕರಣಗಳು ಭುಗಿಲೆದ್ದಿರುವುದು ಮೂರನೇ ಅಲೆಯ ಮುನ್ಸೂಚನೆ ಎನ್ನಲಾಗಿದೆ.

ಯಶವಂತಪುರದ ಒಂದು ಅಪಾರ್ಟ್​ಮೆಂಟ್ ದೃಶ್ಯ

ಯಶವಂತಪುರದ ಒಂದು ಅಪಾರ್ಟ್​ಮೆಂಟ್ ದೃಶ್ಯ

  • Share this:
ಬೆಂಗಳೂರು: ಈ ಕೊರೋನಾ ಮಹಾಮಾರಿಯಿಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಕೊರೋನಾ ಹಾವಳಿಯಿಂದ‌ ಮುಕ್ತಿ ಸಿಕ್ಕರೆ ಸಾಕಪ್ಪ ಎನ್ನುವ ಹೊತ್ತಲ್ಲೇ ನಗರದ ವಲಯದ ಮಟ್ಟದಲ್ಲಿ ಕೊರೋನಾ ಕೇಸ್ ಗಳ ಸಂಖ್ಯೆ ಹೆಚ್ಚಾಗಿದ್ದು ಜನರಲ್ಲಿ ಆತಂಕ ಸೃಷ್ಟಿ ಮಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಗರದ ಯಶವಂತಪುರದ ಅಪಾರ್ಟ್ಮೆಂಟ್ ಒಂದರಲ್ಲಿ ಕೊರೋನಾ ಸ್ಪೋಟಗೊಂಡಿದೆ. ಈ ಬೆಳವಣಿಗೆ ಮೂರ‌ನೇ ಅಲೆಯ ಮುನ್ಸೂಚನೆಯ ಎಂಬ ಅನುಮಾನ ಕಾಡತೊಡಗಿದೆ.

ಮೈಕ್ರೋ ಕಂಟೈನ್ಮೆಟ್ ಝೋನ್ ಜೊತೆಗೆ ಪಾಲಿಕೆಯಿಂದ ರೆಡ್ ಟೇಪ್ ಅಳವಡಿಕೆ: ಕೊರೋನಾದ ಮೊದಲನೇ ಹಾಗೂ ಎರಡನೇ ಅಲೆ ನೋಡಿರುವ ಜನರು ಸುಸ್ತಾಗಿ ಹೋಗಿದ್ದಾರೆ.‌ ಇದರ ಮಧ್ಯೆ ಪಕ್ಕದ ರಾಜ್ಯವಾದ  ಕೇರಳದಲ್ಲಿ ಈಗಾಗಲೇ  ಮೂರನೇ ಅಲೆ ಆರಂಭವಾಗಿದ್ದು ವಾರಂತ್ಯದ ಅನ್ ಲಾಕ್ ಸಹ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ನಮ್ಮ ರಾಜ್ಯ ರಾಜಧಾನಿಯಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಸೋಂಕು ಕಾಣಿಸಿಕೊಳ್ಳುತ್ತಿರುವ ಮನೆಗಳಿಗೆ ರೆಡ್ ಟೇಪ್ ಅಂಟಿಸಲಾಗುತ್ತಿದೆ. ಜೊತೆಗೆ ಸೋಂಕು ಕಾಣಿಸಿಕೊಳ್ಳುತ್ತಿರುವ ಮನೆಯ 100 ಮೀಟರ್ ಸುತ್ತಳತೆಯಲ್ಲಿರುವ ಮನೆಗಳ ಜನರಿಗೆ ಟೆಸ್ಟಿಂಗ್ ಸಹ ಮಾಡಲಾಗುತ್ತಿದೆ. ಸೋಂಕಿತರು ಅಗತ್ಯ ವಸ್ತು ಖರೀದಿಗೂ ಹೊರಗೆ ಹೋಗುವಂತಿಲ್ಲ. ಬದಲಾಗಿ ಅಗತ್ಯವಾದದ್ದನ್ನ ಬಿಬಿಎಂಪಿ, ಸ್ಥಳೀಯರು ಸಹ ಸಹಾಯ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಪಾಲಿಕೆ ಪಶ್ಚಿಮ‌‌ ವಿಭಾಗದ ಅಪಾರ್ಟ್ಮೆಂಟ್ ಒಂದರಲ್ಲಿ 16 ಕೇಸ್ ಪತ್ತೆ.!!

ಇದರ ನಡುವೆ ನಗರದ ಪೂರ್ವ ವಲಯದ ಯಶವಂತಪುರದ ಖಾಸಗಿ‌ ಅಪಾರ್ಟ್ಮೆಂಟ್ ನಲ್ಲಿ ಕೊರೋನಾ‌ ಸ್ಪೋಟಗೊಂಡಿದೆ.‌ ಈ ಅಪಾರ್ಟ್ಮೆಂಟ್ A ಬ್ಲಾಕ್ ಸೀಲ್ ಡೌನ್ ಮಾಡಲಾಗಿದೆ. A ಬ್ಲಾಕ್‌ನ 72 ಮನೆಗಳು ಸೀಲ್ ಡೌನ್ ಮಾಡಲಾಗಿದೆ. ಧಾರವಾಡ, ದೆಹಲಿಗೆ ಪ್ರಯಾಣ ಮಾಡಿ ವಾಪಸ್ ಆದವರಲ್ಲಿ ಕೊರೋನ ಕಾಣಿಸಿಕೊಂಡಿದೆ. ಒಟ್ಟು 72 ಮನೆಗಳಲ್ಲಿ 385 ಜನರನ್ನು ಐಸೋಲೇಟ್ ಮಾಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಅಪಾರ್ಟ್​ಮೆಂಟ್ ಅಸೋಸಿಯೇಷನ್ ಒಪ್ಪಿಕೊಂಡಿದೆ. ಹೀಗಾಗಿ ಅಪಾರ್ಟ್ಮೆಂಟ್ ಅನ್ನು ಕೊರೋನಾ ಕ್ಲಸ್ಟರ್ ಎಂದು ಗುರುತಿಸಿ ಬಿಬಿಎಂಪಿ ಸೀಲ್ ಡೌನ್ ಮಾಡಿದೆ.

ಇದನ್ನೂ ಓದಿ: Exclusive – ಅಪಾಯದಲ್ಲಿ ಚನ್ನಪಟ್ಟಣದ ಈ ಸರ್ಕಾರಿ ಶಾಲೆ; ಆತಂಕದಲ್ಲಿ ಪೋಷಕರು

ಇದು ಒಂದೆಡೆಯಾದ್ರೆ ಮತ್ತೊಂದೆಡೆ ನಗರದಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ‌ ಸಂಖ್ಯೆ ಶತಕ ದಾಟಿದೆ. ನಗರದಲ್ಲಿ ಒಟ್ಟು 108 ಮೈಕ್ರೋ ಕಂಟೈನ್ಮೆಟ್ ಪ್ರದೇಶಗಳಿದ್ದು, ಮಹಾದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಹೆಚ್ಚು ಕಂಟೈನ್ಮೆಂಟ್ ಝೋನ್‌ಗಳು ಕಂಡುಬಂದಿವೆ. ಅದ್ರಲ್ಲಿ ಕಳೆದ ಹತ್ತು ದಿನಗಳ ವಲಯವಾರು ಪ್ರಕರಣಗಳ ಸಂಖ್ಯೆ ಹಾಗೂ ಕಂಟೈನ್ಮೆಟ್ ಪ್ರದೇಶಗಳ ವಿವರ ಇಂತಿದೆ:

ವಲಯವಾರು ಕೇಸ್‌ಗಳ ಸಂಖ್ಯೆ ಮತ್ತು ಕಂಟೈನ್ಮೆಂಟ್ ಪ್ರದೇಶಗಳು:
ಮಹಾದೇವಪುರ ವಲಯ – 700 ಪ್ರಕರಣ, 34 ಕಂಟೇನ್ಮೆಂಟ್ ಝೋನ್​ಗಳು
ಬೊಮ್ಮನಹಳ್ಳಿ ವಲಯ - 682 ಪ್ರಕರಣ, 28 ಕಂಟೇನ್ಮೆಂಟ್ ಝೋನ್​ಗಳು
ಪೂರ್ವ ವಲಯ ವಲಯ - 533 ಪ್ರಕರಣ, 19 ಕಂಟೇನ್ಮೆಂಟ್ ಝೋನ್​ಗಳು
ಆರ್ ಆರ್ ನಗರ ವಲಯ - 430 ಪ್ರಕರಣ, 8 ಕಂಟೇನ್ಮೆಂಟ್ ಝೋನ್​ಗಳು
ಯಲಹಂಕ ವಲಯ - 309 ಪ್ರಕರಣ, 6 ಕಂಟೇನ್ಮೆಂಟ್ ಝೋನ್​ಗಳು
ದಕ್ಷಿಣ ವಲಯ - 377 ಪ್ರಕರಣ, 5 ಕಂಟೇನ್ಮೆಂಟ್ ಝೋನ್​ಗಳು
ಪಶ್ಚಿಮ ವಲಯ - 366 ಪ್ರಕರಣ, 4 ಕಂಟೇನ್ಮೆಂಟ್ ಝೋನ್​ಗಳು
ದಾಸರಹಳ್ಳಿ ವಲಯ - 106 ಪ್ರಕರಣ, 4 ಕಂಟೇನ್ಮೆಂಟ್ ಝೋನ್​ಗಳು

ಇನ್ನು ರಾಜಧಾನಿಯಲ್ಲಿ ಕೇಸ್ ಗಳು ಹೆಚ್ಚಳವಾಗುವುದಕ್ಕೆ ಸರ್ಕಾರ ಕೊಟ್ಟಿರುವ ಸಡಿಲಿಕೆ ಹಾಗೂ ಟೆಸ್ಟಿಂಗ್ ಪ್ರಮಾಣವನ್ನ ಹೆಚ್ಚಿಸದೇ ಇರುವುದು ಕೂಡ ಪ್ರಮುಖವಾದ ಕಾರಣ ಆಗಿದ್ಯಂತೆ. ಹೀಗಾಗಿ ಸರ್ಕಾರ ಜನರಿಗೆ ಪ್ರಮುಖವಾಗಿ ವ್ಯಾಕ್ಸಿನೇಷನ್‌ ನೀಡುವ ಜೊತೆಗೆ ಮೂರನೇ ಅಲೆಗೆ ಸಿದ್ದತೆ ಮಾಡಿಕೊಳ್ಳುವಂತೆ ವೈದ್ಯರುಗಳೇ ಎಚ್ಚರಿಕೆ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಮೊದಲನೇ ಹಾಗೂ ಎರಡನೇ ಅಲೆಯನ್ನ ಎದುರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದ ಸರ್ಕಾರ ಮೂರನೇ ಅಲೆ ಹೆಚ್ಚಾಗುವುದಕ್ಕೆ ದಾರಿ ಮಾಡಿಕೊಡದೆ ಇದ್ರೆ ಅಷ್ಟೇ ಸಾಕಾಗಿದೆ. ಹಾಗಾಗಿ‌ ಅದಷ್ಟು ಕಠಿಣ ಕ್ರಮಗಳನ್ನ ಜೊತೆಗೆ ಮೂರನೇ ಅಲೆಗೆ ಬೇಕಾದ ಸಿದ್ದತೆಗಳನ್ನ ಸಹ ಮಾಡಿಕೊಳ್ಳಬೇಕಿದೆ.

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: