BIAL: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ತಪ್ಪಿದ ಅನಾಹುತ? ನೌಕರರ ವಿರುದ್ಧ ಕ್ರಮ

ವಾಯು ಸಂಚಾರ ನಿಯಂತ್ರಕರು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನೌಕರರಾಗಿರುವುದರಿಂದ ಆ ಸಂಸ್ಥೆಯೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಜನವರಿ 7ರಂದು ಬೆಂಗಳೂರಿನ ಕೆಂಪೇಗೌಡ (Kempegowda International Airport) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಇಂಡಿಗೋ(IndiGo flight) ವಿಮಾನಗಳು ಕೊನೆಯ ಕ್ಷಣದಲ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಳ್ಳುವುದರಿಂದ ಪಾರಾಗಿ ಭಾರಿ (Huge Disaster) ಅವಘಡವೊಂದು ತಪ್ಪಿದ ಘಟನೆ ನಡೆದಿದೆ. ಈ ಸಂಬಂಧ ಕಠಿಣ ಕ್ರಮ ಜರುಗಿಸಿರುವ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರು, ಆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೂವರು ವಾಯು ಸಂಚಾರ ನಿಯಂತ್ರಕರನ್ನು(Air Traffic Regulators) ಪಾಳಿಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಜನವರಿ 7 ರಂದು ಎರಡು ಇಂಡಿಗೋ ವಿಮಾನಗಳು ಒಂದೇ ದಿಕ್ಕಿನಲ್ಲಿ (Direction) ಹಾಗೂ ಒಂದೇ ಸಮಯದಲ್ಲಿ ಟೇಕ್ ಆಫ್ ತೆಗೆದುಕೊಳ್ಳಲು ಅವಕಾಶ ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಕಠಿಣ ಕ್ರಮದ ಜಾರಿ
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯದಿಂದ ಪ್ರಾಥಮಿಕ ತನಿಖೆ ಪೂರ್ಣಗೊಂಡಿದ್ದು, ‘ಕಠಿಣ ಕ್ರಮದ ಜಾರಿ’ ಶೀಘ್ರವೇ ಆಗಲಿದೆ ಎಂದು ಹೇಳಲಾಗಿದೆ. ಈ ಕ್ರಮಗಳ ಪೈಕಿ ವಾಯು ಸಂಚಾರ ನಿಯಂತ್ರಕರ ಪರವಾನಗಿ ಅಮಾನತು ಕೂಡಾ ಸೇರಿದೆ ಎಂದು ತಿಳಿಸಲಾಗಿದೆ.

ಈ ಮೂವರು ಸಂಚಾರ ನಿಯಂತ್ರಕರಿಗೆ ಕಾನೂನಿನನ್ವಯ ಶೋಕಾಸ್ ನೋಟೀಸ್ ಜಾರಿಯಾಗಲಿದ್ದು, ತನಿಖಾ ಸಂಸ್ಥೆಗಳಿಂದ ಕ್ರಮ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವಾಯು ಸಂಚಾರ ನಿಯಂತ್ರಕರು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನೌಕರರಾಗಿರುವುದರಿಂದ ಆ ಸಂಸ್ಥೆಯೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: New Rule: ವಿಮಾನದಲ್ಲಿ ಇನ್ಮುಂದೆ ಹೆಚ್ಚಿನ Handbags ಕೊಂಡೊಯ್ಯುವಂತಿಲ್ಲ, ಕ್ಯಾಬಿನ್​ನಲ್ಲಿ ಇಷ್ಟೇ ತೂಕದ ಬ್ಯಾಗಿಗೆ ಅವಕಾಶ

ವಿಮಾನ ಅಪಘಾತ ತನಿಖಾ ಮಂಡಳಿ
ಹಾಗೆಯೇ ವಾಯು ಸಂಚಾರ ನಿಯಂತ್ರಕರಿಗೆ ಪರವಾನಗಿ ನೀಡಿ ಅದರ ಮೇಲುಸ್ತುವಾರಿ ನಡೆಸುವ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವೂ ಕ್ರಮ ಕೈಗೊಳ್ಳಬಹುದಾಗಿದೆ. ಈ ಘಟನೆಯನ್ನು ಗಂಭೀರವೆಂದು ವರ್ಗೀಕರಿಸಲಾಗಿರುವುದರಿಂದ, ವಿಮಾನ ಅಪಘಾತ ತನಿಖಾ ಮಂಡಳಿಯೂ ಈ ಘಟನೆ ಕುರಿತು ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಘಟನೆಯ ಕುರಿತು ದಿನಚರಿ ಪುಸ್ತಕದಲ್ಲಿ ನಮೂದಿಸಲಾಗಿಲ್ಲ ಅಥವಾ ಈ ಘಟನೆ ಕುರಿತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ವರದಿಯನ್ನೂ ಮಾಡಿಲ್ಲ. ಈ ನಡುವೆ ಘಟನೆಯ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯದ ಮುಖ್ಯಸ್ಥ ಅರುಣ್ ಕುಮಾರ್, ನಿಯಂತ್ರಕರು ಈ ಕುರಿತು ತನಿಖೆ ನಡೆಸುತ್ತಿದ್ದು, “ಅದಕ್ಷ ಕಾರ್ಯನಿರ್ವಹಣೆ ತೋರಿರುವವರ” ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಬೇರ್ಪಡೆ ಉಲ್ಲಂಘನೆ
ಎರಡು ಇಂಡಿಗೋ ವಿಮಾನಗಳಾದ 6ಇ455 (ಬೆಂಗಳೂರು-ಕೋಲ್ಕತ್ತಾ) ಹಾಗೂ 6ಇ246 (ಬೆಂಗಳೂರು-ಭುವನೇಶ್ವರ) ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬೇರ್ಪಡೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಭಾಗಿಯಾಗಿವೆ. ಈ ಬೇರ್ಪಡೆ ಉಲ್ಲಂಘನೆಯು ಎರಡು ವಿಮಾನಗಳು ಆಕಾಶದಲ್ಲಿ ಕಡ್ಡಾಯವಾಗಿ ಇರಬೇಕಾದ ಸಮತಟ್ಟು ಅಥವಾ ಲಂಬಾಕಾರದ ಅಂತರವನ್ನು ಉಲ್ಲಂಘಿಸಿದಾಗ ಘಟಿಸುತ್ತದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ “ನಂತರದ ಪಾಳಿಯ ಮೇಲ್ವಿಚಾರಕರು ರನ್‍ವೇಯನ್ನು (ಪ್ರವೇಶ ಹಾಗೂ ನಿರ್ಗಮನ ಎರಡನ್ನೂ) ಏಕಮುಖ ಸಂಚಾರ ಕಾರ್ಯನಿರ್ವಹಣೆಗೆ ಮೀಸಲಿಡಲು ನಿರ್ಧರಿಸಿದರು.

ನಿರ್ಗಮಿಸುವ ಅವಕಾಶ
ಅರ್ಥಾತ್, ಉತ್ತರಾಭಿಮುಖ ರನ್‍ವೇಯನ್ನು ಸಂಚಾರ ಕಾರ್ಯನಿರ್ವಹಣೆಗೆ ಮೀಸಲಿರಿಸಿ, ದಕ್ಷಿಣಾಭಿಮುಖ ರನ್‍ವೇಯನ್ನು ಮುಚ್ಚಲು ನಿರ್ಧರಿಸಿದರಾದರೂ ಈ ಸಂಗತಿಯನ್ನು ದಕ್ಷಿಣ ಗೋಪುರ ನಿಯಂತ್ರಕರ ಗಮನಕ್ಕೆ ತಂದಿರಲಿಲ್ಲ. ಹೀಗಾಗಿ ದಕ್ಷಿಣ ಗೋಪುರ ನಿಯಂತ್ರಕರು 6ಇ455 ವಿಮಾನಕ್ಕೆ ನಿರ್ಗಮಿಸುವ ಅವಕಾಶ ನೀಡಿದರು. ಇದೇ ಸಮಯದಲ್ಲಿ ಉತ್ತರ ಗೋಪುರ ನಿಯಂತ್ರಕರು ಯಾವುದೇ ಸಮಾಲೋಚನೆ ನಡೆಸದೆ 6ಇ 246 ವಿಮಾನಕ್ಕೂ ನಿರ್ಗಮಿಸುವ ಅವಕಾಶ ನೀಡಿದರು ಎಂದು ಹೇಳಲಾಗಿದೆ.

ಇದನ್ನೂ ಓದಿ: Bengaluru Airport: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ!

ಜನವರಿ 7ರ ಮುಂಜಾನೆಯಂದು ಎರಡೂ ವಿಮಾನಗಳು ಕೇವಲ ಐದು ನಿಮಿಷದ ಅಂತರದಲ್ಲಿ ನಿರ್ಗಮಿಸಿದ್ದವು ಎಂದು ವರದಿಯಾಗಿದ್ದು, ಎರಡೂ ವಿಮಾನಗಳು 3000 ಅಡಿ ಎತ್ತರಕ್ಕೆ ಹಾರಿದ ಮೇಲೆ ರಾಡಾರ್ ನಿಯಂತ್ರಕರು ಈ ದೋಷವನ್ನು ಗಮನಿಸಿ ಪೈಲಟ್‍ ಗಳಿಗೆ ಎಚ್ಚರಿಕೆ ರವಾನಿಸಿದ್ದರು. ಇದಾದ ನಂತರ ಪೈಲಟ್‍ಗಳು ತಮ್ಮ ವಿಮಾನಗಳನ್ನು ವಿರುದ್ಧ ದಿಕ್ಕಿಗೆ ಹಾರಿಸುವ ಮೂಲಕ ಪರಸ್ಪರ ಡಿಕ್ಕಿಯಾಗುವುದನ್ನು ತಪ್ಪಿಸಿದರು ಎನ್ನಲಾಗಿದೆ.

ಎರಡೂ ವಿಮಾನಗಳು ನಿರ್ಗಮಿಸಿದ ನಂತರ ಒಂದೇ ದಿಕ್ಕಿನಲ್ಲಿ ಪಯಣಿಸುತ್ತಾ, ಒಂದಕ್ಕೊಂದು ಡಿಕ್ಕಿಯಾಗುವಷ್ಟು ಸನಿಹಕ್ಕೆ ಬಂದಿದ್ದವು. ಈ ಹಂತದಲ್ಲಿ ದೋಷವನ್ನು ಗುರುತಿಸಿದ ರಾಡಾರ್ ನಿಯಂತ್ರಕರು ಪರಸ್ಪರ ವಿರುದ್ಧ ದಿಕ್ಕಿಗೆ ತಿರುವು ಪಡೆಯುವಂತೆ ಪೈಲಟ್‍ಗಳಿಗೆ ಸೂಚಿಸುವ ಮೂಲಕ ಸಂಭವನೀಯ ಡಿಕ್ಕಿಯನ್ನು ತಪ್ಪಿಸಿದರು” ಎಂದು ವರದಿಯಲ್ಲಿ ಹೇಳಲಾಗಿದೆ.
Published by:vanithasanjevani vanithasanjevani
First published: