Nandi Hills Reopened: ಪ್ರವಾಸಿಗರೇ ಇಲ್ಲಿ ಕೇಳಿ.. ಡಿ.1ರಿಂದ ನಂದಿ ಬೆಟ್ಟ ಪ್ರವೇಶಕ್ಕೆ ಅವಕಾಶ

ಬೆಂಗಳೂರಿನ ಸುತ್ತಮುತ್ತಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ನಂದಿ ಬೆಟ್ಟ ಪ್ರವೇಶ ಮುಚ್ಚಲ್ಪಟ್ಟು 3 ತಿಂಗಳೇ ಕಳೆದಿದೆ. ಇದೀಗ ಮತ್ತೆ ಡಿಸೆಂಬರ್ 1 (December 1) ರ ಬುಧವಾರದಿಂದ (wednesday)ಮತ್ತೆ ತೆರೆಯಲು ಸಿದ್ಧವಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭೂ ಕುಸಿತ ( Landslide) ಉಂಟಾಗಿ ಮುಚ್ಚಲ್ಪಟ್ಟಿದ್ದ ಬೆಂಗಳೂರಿಗರ (Bangalore hotspot)ಹಾಟ್‌ ಸ್ಟಾಟ್ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ (Nandi Hills) ಮತ್ತೆ ಡಿಸೆಂಬರ್‌ 1ರಿಂದ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ, ಪ್ರವಾಸಿಗರಿಗೆ ಇದು ನಿಜಕ್ಕೂ ಸಿಹಿಸುದ್ದಿ, ಸೈಕಲಿಸ್ಟ್‌ಗಳಿಗೆ, ವಾಕಿಂಗ್‌ ಪ್ರಿಯರಿಗೆ, ಹಾಗೂ ಪ್ರಕೃತಿ ಪ್ರಿಯರಿಗೆ ನಂದಿಬೆಟ್ಟ ಮತ್ತೆ ತೆರೆಯುತ್ತಿರುವುದು ಎಲ್ಲಿಲ್ಲದ ಆಹ್ಲಾದ ನೀಡಿದೆ. ಬೆಂಗಳೂರಿನ ಸುತ್ತಮುತ್ತಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ನಂದಿ ಬೆಟ್ಟ ಪ್ರವೇಶ ಮುಚ್ಚಲ್ಪಟ್ಟು 3 ತಿಂಗಳೇ ಕಳೆದಿದೆ. ಇದೀಗ ಮತ್ತೆ ಡಿಸೆಂಬರ್ 1 (December 1) ರ ಬುಧವಾರದಿಂದ (wednesday)ಮತ್ತೆ ತೆರೆಯಲು ಸಿದ್ಧವಾಗಿದೆ.  ನಂದಿ ಬೆಟ್ಟಗಳು ಕರ್ನಾಟಕದ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿದೆ ಮತ್ತು ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ( popular tourist)ತಾಣವಾಗಿದೆ. ಆಗಸ್ಟ್ 25 ರಂದು ಭಾರೀ ಮಳೆಯಿಂದ(heavy rain) ಉಂಟಾದ ಭೂಕುಸಿತದಿಂದಾಗಿ ನಂದಿ ಬೆಟ್ಟದ ಶಿಖರಕ್ಕೆ ಹೋಗುವ ರಸ್ತೆಯ 43 ಮೀಟರ್ ವಿಸ್ತಾರವು ಕುಸಿತವಾಗಿ ಮುಚ್ಚಲ್ಪಟಿತ್ತು.

  ಇದನ್ನು ಓದಿ:Weekend Trip: ನಂದಿ ಬೆಟ್ಟದ ಬಳಿಯಲ್ಲೇ ಅದ್ಭುತವಾದ Waterfalls ಇದೆ ಗೊತ್ತಾ? ವೀಕೆಂಡ್ ಟ್ರಿಪ್​ಗೆ ಹೇಳಿ ಮಾಡಿಸಿದ ಸ್ಥಳ ಇದು!

  ಸಚಿವರು ಟ್ವಿಟ್
  ಆರೋಗ್ಯ ಸಚಿವ ಕೆ ಸುಧಾಕರ್ ಅವರು  ರಸ್ತೆಯನ್ನು ಮರುನಿರ್ಮಾಣ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ. ''ಆ.25ರಂದು ಸಂಭವಿಸಿದ ಭೂಕುಸಿತದಲ್ಲಿ ಕೊಚ್ಚಿ ಹೋಗಿದ್ದ ನಂದಿ ಬೆಟ್ಟದ 43 ಮೀಟರ್‌ ರಸ್ತೆಯನ್ನು ಮರುನಿರ್ಮಾಣ ಮಾಡಲಾಗಿದೆ. ಹೊಸ ರಸ್ತೆಯ ಕಾಮಗಾರಿ 3 ತಿಂಗಳೊಳಗೆ ಪೂರ್ಣಗೊಂಡಿದೆ. #ನಂದಿಹಿಲ್ಸ್  ಎಂದು ಅವರು ಟ್ವೀಟ್ ಮಾಡಿದ್ದಾರೆ.

  ‌ಡಿ.1 ರಿಂದ ಪ್ರವಾಸಿಗರಿಗೆ ಅವಕಾಶ
  ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ. ಆರ್. ಮಾಹಿತಿ ನೀಡಿದ್ದು, ಭೂ ಕುಸಿತದಿಂದ 3 ತಿಂಗಳ ನಂತರ ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಅನುಮತಿಸಲಾಗುತ್ತಿದೆ. ಹಾಳಾದ ರಸ್ತೆಗಳನ್ನು ಪುನರ್‌ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಡಿಸೆಂಬರ್ 1ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ಶನಿವಾರ ಮತ್ತು ಭಾನುವಾರದಂದು ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

  ಮಾಸ್ಕ್‌ ಕಡ್ಡಾಯ
  ಇದೇ ವೇಳೆ ಎಲ್ಲಾ ಪ್ರವಾಸಿಗರಿಗೆ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ಲತಾ ಅವರು ಹೇಳಿದ್ದಾರೆ. "ಪ್ರವಾಸಿಗರು ತಮ್ಮ ಲಸಿಕೆ ಪ್ರಮಾಣಪತ್ರಗಳನ್ನು ಪ್ರವೇಶಿಸಲು ಒದಗಿಸುವ ಬಗ್ಗೆ ನಾವು ಇನ್ನೂ ಯೋಚಿಸುತ್ತಿದ್ದೇವೆ ಏಕೆಂದರೆ ಇದು ಜನಸಂದಣಿಯನ್ನು ಉಂಟುಮಾಡುತ್ತದೆ. ಆದ್ದರಿಂದ, ನಾವು ಪ್ರಸ್ತುತ ಮಾಸ್ಕ್ ಮತ್ತು ದೈಹಿಕ ಅಂತರದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಮಾಸ್ಕ್ ಧರಿಸುವುದನ್ನು ಜಾರಿಗೊಳಿಸಲಾಗುವುದು ಮತ್ತು ಯಾರಾದರೂ ಮಾಸ್ಕ್ ಧರಿಸದಿರುವುದು ಕಂಡುಬಂದರೆ ಅವರಿಗೆ ದಂಡ ವಿಧಿಸಲಾಗುತ್ತದೆ, ”ಎಂದು ಅವರು ಹೇಳಿದರು.

  ಜನ, ವಾಹನ, ಬೈಕ್, ಅಂಗಡಿಗಳ ವ್ಯವಹಾರ ಹೀಗೆ ಎಲ್ಲವೂ ಬಂದ್ ಆಗಿ ಸ್ವರ್ಗದಂತೆ ನಿರ್ಮಾಣವಾಗುತ್ತಿದೆ. ಪ್ರವಾಸಿಗರು ನಂದಿಬೆಟ್ಟದ ಸೌಂದರ್ಯವನ್ನು ಆಸ್ವಾದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ಮುಂದೆ ಪ್ರವಾಸಿಗರ ಕಣ್ಣಿಗೆ ನಂದಿ ಗಿರಿಧಾಮ ಮತ್ತಷ್ಟು ಮುದ ನೀಡಲಿದೆ. ಭಾರಿ ಮಳೆಗೆ ನಂದಿ ಬೆಟ್ಟದ ರಸ್ತೆ ಮಾರ್ಗ ಕುಸಿದು, ಬಂದ್ ಆಗಿತ್ತು. ಇದು ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದ್ದ ನಂದಿ ಬೆಟ್ಟ ದೂರವಾಗಿತ್ತು. ಕೊಚ್ಚಿ ಹೋಗಿದ್ದ ರಸ್ತೆ ಮರು ನಿರ್ಮಾಣ ಕಾರ್ಯ ನವೆಂಬರ್ 11ಕ್ಕೆ ಮುಕ್ತಾಯವಾಗಿದೆ.

  ಲಕ್ಷಾಂತರ ರೂ ವೆಚ್ಚ ಕಾಮಾಗಾರಿ
  ನಂದಿ ಬೆಟ್ಟದಲ್ಲಿ ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಮೇಲ್ಭಾಗದಲ್ಲಿ ಕಾಂಕ್ರಿಟ್ ಹಾಕಿ 10 ದಿನ ಕ್ಯೂರಿಂಗ್ ಮಾಡಲಾಗಿದೆ. ಹೀಗಾಗಿ ನಂದಿಬೆಟ್ಟಕ್ಕೆ ಬೈಕ್, ಕಾರು, ಬಸ್‌ಗಳಲ್ಲಿ ಹೋಗಬಹುದು. 4 ಸಿಮೆಂಟ್ ಕಾಂಕ್ರಿಟ್ ಪೈಪ್‌ಗಳನ್ನು ಅಳವಡಿಸಿ ಅದರ ಮೇಲೆ ಕಾಂಕ್ರಿಟ್ ರಸ್ತೆ ನಿರ್ಮಿಸುತ್ತಿದ್ದಾರೆ.

  ಇದನ್ನು ಓದಿ:Nandi Hills: ನಂದಿ ಬೆಟ್ಟಕ್ಕೆ ಹೋಗ್ಬೇಕು ಅಂದ್ರೆ ಮೊದ್ಲು ಪಾರ್ಕಿಂಗ್ ಸ್ಥಳ ಬುಕ್ ಮಾಡಿ, ಇಲ್ಲದಿದ್ರೆ ನೋ ಎಂಟ್ರಿ

  ಬೆಟ್ಟದ ಮೇಲಿನಿಂದ ಬರುವ ನೀರು ಸರಾಗವಾಗಿ ಕೆಳಗೆ ಹರಿದು ಹೋಗುವಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿಂದೆ ಭೂಕುಸಿತ ಸಂಭವಿಸಿದಾಗ ಗುಡ್ಡದ ಮೇಲೆ ಒಂದು ಬದಿಯಿಂದ ಮಣ್ಣು ಕುಸಿದು ರಸ್ತೆಯ ಮೇಲೆ ರಾಶಿ ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅವಶೇಷಗಳನ್ನು ತೆರವುಗೊಳಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಒಟ್ಟಿನಲ್ಲಿ ನಂದಿಬೆಟ್ಟ ಪುನರ್‌ ಆರಂಭದಿಂದ ಅದ್ಭುತವಾದ ವಾತವಾರಣದಲ್ಲಿ ಪ್ರಕೃತಿ ಸೊಬಗನ್ನು ಸವಿಯಲು ಪರಿಸರ ಪ್ರೇಮಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
  Published by:vanithasanjevani vanithasanjevani
  First published: