BMRCL: ಬೈಯಪ್ಪನ ಹಳ್ಳಿಯಿಂದ ವೈಟ್​ಫೀಲ್ಡ್​ಗೆ ಶೀಘ್ರವೇ ಮೆಟ್ರೋ ಸಂಚಾರ; 99 ಪರ್ಸೆಂಟ್ ಕಾಮಗಾರಿ ಕಂಪ್ಲೀಟ್

ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ವರೆಗಿನ ನೇರಳೆ ಮಾರ್ಗದ ವಿಸ್ತರಣೆಯಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಕಾಮಗಾರಿಗೆ ಇದ್ದ ಎಲ್ಲ ಅಡಚಣೆ ಕ್ಲಿಯರ್ ಆಗಿದ್ದು, ವೈಟ್‌ಫೀಲ್ಡ್ ವರೆಗೂ  ಶೇಕಡಾ 99 ರಷ್ಟು ಕಾಮಗಾರಿ ಕಂಪ್ಲೀಟ್ ಆಗಿದೆ.

ನಮ್ಮ ಮೆಟ್ರೋ

ನಮ್ಮ ಮೆಟ್ರೋ

  • Share this:
ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರಿಗೆ ಟ್ರಾಫಿಕ್‌ (Traffic) ಕಿರಿಕಿರಿಯಿಂದ ಮುಕ್ತಿ ನೀಡಿರುವ ನಮ್ಮ ಮೆಟ್ರೋ  ವಿಸ್ತರಣೆ (Namma Metro Expansion)  ಕಾರ್ಯ ಮತ್ತಷ್ಟು ಚುರುಕುಗೊಂಡಿದೆ.  ಹಲವು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ವೈಟ್​ಫೀಲ್ಡ್​​ ಗೂ ಶೀಘ್ರವೇ ಮೆಟ್ರೋ ವಿಸ್ತರಣೆ ಆಗಲಿದೆ. ಮೆಟ್ರೋ ಪ್ರಯಾಣಿಕರಿಗೆ ಸಂಚಾರ ಮತ್ತಷ್ಟು ಸರಳವಾಗಲಿದೆ.  2  ವರ್ಷಗಳಿಂದ ವಿಳಂಬಗೊಂಡಿದ್ದ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಹಾಗೂ ವೈಟ್‌ಫೀಲ್ಡ್ (Whitefield) ನಡುವಿನ ಕಾಮಗಾರಿಯನ್ನು(Construction)  BMRCL ಇದೀಗ ಚುರುಕುಗೊಳಿಸಿದೆ. ಮುಂದಿನ ವರ್ಷ ಮಾರ್ಚ್​ನಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​ ವರೆಗೂ ಮೆಟ್ರೋ ಸಂಚಾರ ಪಾರಂಭವಾಗಲಿದೆ.

ಮತ್ತಷ್ಟು ಚುರುಕುಗೊಂಡ BMRCL ಕಾಮಗಾರಿ

2020ರಲ್ಲೇ ಮುಗಿಯಬೇಕಿದ್ದ ಕಾಮಗಾರಿ, ಹಲವು ಅಡಚಣೆಯಿಂದ ವಿಳಂಬ ಆಗಿತ್ತು. ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ವರೆಗಿನ ನೇರಳೆ ಮಾರ್ಗದ ವಿಸ್ತರಣೆಯಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಕಾಮಗಾರಿಗೆ ಇದ್ದ ಎಲ್ಲ ಅಡಚಣೆ ಕ್ಲಿಯರ್ ಆಗಿದ್ದು, ವೈಟ್‌ಫೀಲ್ಡ್ ವರೆಗೂ  ಶೇಕಡಾ 99 ರಷ್ಟು ಕಾಮಗಾರಿ ಕಂಪ್ಲೀಟ್ ಆಗಿದೆ. ಮೆಟ್ರೋ ಕಾಮಗಾರಿ ನಡೆಸಲು ಭೂಸ್ವಾಧೀನ ಮತ್ತು ಮರ ಕಟಾವು ಪ್ರಕ್ರಿಯೆಗೆ  ಕೊರೊನಾ ಅಡ್ಡಿ ಪಡಿಸಿತ್ತು.

14 ಮೆಟ್ರೋ ನಿಲ್ದಾಣಗಳು ಬರಲಿವೆ 

ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್‌ ಏರಿಯಾದ ತನಕ ಕಾಮಗಾರಿಗೆ ಅಡ್ಡಿಯಾಗುವ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಬೆನ್ನಿಗಾನಹಳ್ಳಿ, ಕೆ.ಆರ್.ಪುರಂ, ಚನ್ನಸಂದ್ರ, ವೈಟ್ ಫೀಲ್ಡ್ ಸೇರಿ 14 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದ್ದು, 2022ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವನ್ನು BMRCL ವ್ಯಕ್ತಪಡಿಸಿದೆ.

ಇದನ್ನೂ ಓದಿ: PSI Exam Scam: ಎಕ್ಸಾಂ ಮುಗಿದ ಮೇಲೆ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ! ಆಯ್ಕೆಯಾದ ಅಣ್ಣ-ತಮ್ಮನಿಗೂ ಈಗ ಸಂಕಷ್ಟ

ಟ್ರಾಫಿಕ್ ಸಮಸ್ಯೆಯಿಂದ ಸಿಗಲಿದೆ ಮುಕ್ತಿ

ಜಿಲ್ಲೆಯಿಂದ ನಿತ್ಯ ಬೆಂಗಳೂರಿಗೆ ಉದ್ಯೋಗ ಮತ್ತು ಶಿಕ್ಷಣಕ್ಕೆಂದು ಸಂಚರಿಸುವ ಬಸ್‌ ಪ್ರಯಾಣಿಕರಿಗೆ ನಿತ್ಯ ಬೆಂಗಳೂರಿನ ಹೆಬ್ಬಾಳ, ಮೇಕ್ರಿವೃತ್ತ, ಪ್ಯಾಲೇಸ್‌ ಗುಟ್ಟಹಳ್ಳಿ, ಮಾದಾವರ, ಕೆ.ಆರ್‌.ಪುರಂ ಟ್ರಾಫಿಕ್‌ ತೀವ್ರ ಪ್ರಯಾಸ ಸೃಷ್ಟಿಸುತ್ತಿತ್ತು. ಈ ಟ್ರಾಫಿಕ್‌ನಿಂದಾಗಿ ಗಂಟೆಗಟ್ಟಲೇ ತಡವಾಗುತ್ತಿದ್ದ ಹಿನ್ನೆಲೆ ಅನೇಕರಿಗೆ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಸದ್ಯ, ಇದೇ ಮಾರ್ಗಗಳವರೆಗೆ ಮೆಟ್ರೋ ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆ ಅನೇಕರಲ್ಲಿ ಸಂತಸ ಮೂಡಿಸಿದೆ. ಜತೆಗೆ, ಕಾಮಗಾರಿ ನೆಪದಲ್ಲಿ ಪುನಃ ಒಂದೆರಡು ವರ್ಷ ಹೆಚ್ಚಾದ ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಗುತ್ತದೆ ಎನ್ನುವ ಚಿಂತೆಯೂ ಅನೇಕರಲ್ಲಿ ಮೂಡಿದೆ.

2025ರ ವೇಳೆಗೆ ಏರ್‌ಪೋರ್ಟ್‌ಗೆ ಸಂಪರ್ಕ

ನಮ್ಮ ಮೆಟ್ರೋ ಯೋಜನೆಯಲ್ಲಿ ಪ್ರಮುಖವಾಗಿ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಾಧಿಸುವುದು ಅತಿಮುಖ್ಯವಾಗಿದ್ದು, ಏರ್‌ಪೋರ್ಟ್‌ ಪ್ರಯಾಣಿಕರೊಂದಿಗೆ ಐಟಿ ಉದ್ಯೋಗಿಗಳಿಗೆ ಈ ಮಾರ್ಗ ಅನಿವಾರ್ಯವಾಗಿದೆ. ಜತೆಗೆ, ದೇವನಹಳ್ಳಿಯ ಜನರಿಗೂ ಈ ಮಾರ್ಗದಲ್ಲಿ ಮೆಟ್ರೋ ಅಗತ್ಯವಿದ್ದು, ಈ ಮಾರ್ಗದಲ್ಲಿ ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ 58.19ಕಿಮೀ ಕಾಮಗಾರಿ ನಡೆಯಲಿದೆ. ಈ ಯೋಜನೆಗೆ 2025ರ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Araga Jnanendra: ಪಿಎಸ್ಐ ಪರೀಕ್ಷೆ ಹಗರಣದ ಅಪರಾಧಿಗಳು ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತೇವೆ! ಗೃಹಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

ನೆಲಮಂಗಲಕ್ಕೂ ರೆಡಿಯಾಗ್ತಿದೆ ಮೆಟ್ರೋ

ಇತ್ತ ನಾಗಸಂದ್ರ ಟು ಯಲೇಚನಹಳ್ಳಿಗೆ ಸಂಪರ್ಕಿಸೋ ನಮ್ಮ ಮೆಟ್ರೋ ಮಾರ್ಗ ಕೂಡ ವಿಸ್ತಾರಣೆಯಾಗುತ್ತಿದ್ದು, ಮಾದಾವರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇದು ಕೂಡ ಶೀಘ್ರವೇ ಸಂಚಾರ ಮುಕ್ತವಾಗಲಿದೆ. ಮಾದಾವರಕ್ಕೆ ಮೆಟ್ರೋ ಸಂಪರ್ಕದಿಂದ ಬೆಂಗಳೂರು ಗ್ರಾಮಾಂತರ ನೆಲಮಂಗಲ ಜನರ ಓಡಾಟಕ್ಕೂ ಅನುಕೂಲವಾಗಲಿದೆ.

ಮೆಟ್ರೋ ಹೊಸ ಮಾರ್ಗಗಳು 

ಹೊಸಕೋಟೆಗೆ ಕೆ.ಆರ್‌.ಪುರಂ, ವೈಟ್‌ಫೀಲ್ಡ್‌ ಮೆಟ್ರೋ ವಿಸ್ತರಣೆ ನೆರವಾಗಲಿದೆ.

ದೊಡ್ಡಬಳ್ಳಾಪುರ, ದೇವನಹಳ್ಳಿಗೆ ಹೆಬ್ಬಾಳ ಸಮೀಪವಾಗಲಿದೆ.

ನೆಲಮಂಗಲಕ್ಕೆ ಮಾದಾವರ ಮೆಟ್ರೋ ನೆರವಾಗಲಿದೆ.

ಕೆಲವೇ ವರ್ಷಗಳಲ್ಲಿ ಯಲಹಂಕ ಮತ್ತು ದೇವನಹಳ್ಳಿ ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಮತ್ತಷ್ಟು ಸಹಕಾರಿಯಾಗಲಿದೆ.

ಬೈಯ್ಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್

ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆಗೊಳ್ಳುವ ನಿರೀಕ್ಷೆ ಮೂಡಿದೆ.
ರೈಲ್ವೆ ನಿಲ್ದಾಣದಲ್ಲಿ ಮೆಟ್ರೋ ನಿಲ್ದಾಣ
Published by:Pavana HS
First published: