ಬೆಂಗಳೂರಿನ ಜನರಿಗೆ ಗುಡ್ ನ್ಯೂಸ್! ಆರಂಭವಾಗಲಿವೆ Namma Clinic ಆಸ್ಪತ್ರೆಗಳು

ಸದ್ಯ ಪಾಲಿಕೆ 198 ವಾರ್ಡ್ ಗಳಲ್ಲಿ 161 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಕೊರೋನಾಗೂ ಮೊದಲು 141 PHC ಕೇಂದ್ರಗಳಿದ್ದವು. ಕೊರೋನಾ ಕಾಲದಲ್ಲಿ 20 ವಾರ್ಡ್ ಗಳಲ್ಲಿ ಹೊಸದಾಗಿ 20 PHC ತೆರೆಯಲಾಗಿತ್ತು. ಇದನ್ನು ಹೊರತುಪಡಿಸಿ ನಗರದಲ್ಲಿ  243 ನಮ್ಮ ಕ್ಲಿನಿಕ್ ಗಳು ಸ್ಥಾಪನೆಯಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆರೋಗ್ಯವೇ ಭಾಗ್ಯ ಎನ್ನುವ ಸಾಲಿಗೆ ಹೆಚ್ಚು ಮಹತ್ವ ಸಿಕ್ಕಿದ್ದು, ಮನವರಿಕೆಯಾಗಿದ್ದು ಕೋವಿಡ್ ಬಂದ ಮೇಲೆ ಎಂದರೂ ತಪ್ಪಿಲ್ಲ. ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಬೆಂಗಳೂರಿನ ಯಾವ ಯಾವ ಗಲ್ಲಿಯಲ್ಲಿ ಸರ್ಕಾರಿ ಆಸ್ಪತ್ರೆಗಳು (Government Hospitals Bengaluru) ಇವೆ ಎನ್ನುವುದು ರಾಜಧಾನಿ ಜನರಿಗೆ ಗೊತ್ತಾಯ್ತು ಕೂಡ. ಅಷ್ಟರ ಮಟ್ಟಿಗೆ ಸರ್ಕಾರಿ ಆಸ್ಪತ್ರೆಗಳಿಗೆ ಬೇಡಿಕೆ ಬಂದಿತ್ತು. ಇದನ್ನು ಅರಿತ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಸಿಲಿಕಾನ್ ಸಿಟಿಗೆ ಆಸ್ಪತ್ರೆ ಭಾಗ್ಯ ಕರುಣಿಸಿದೆ. ಶೀಘ್ರವೆ ಈ ಆಸ್ಪತ್ರೆಗಳನ್ನ ಅನುಷ್ಠಾನಕ್ಕೆ ತರಲು ಬಿಬಿಎಂಪಿ (BBMP) ಕೂಡ ಭರದ ಸಿದ್ಧತೆ ನಡೆಸುತ್ತಿದೆ. ನಗರದ 198 ವಾರ್ಡ್ ಗಳಲ್ಲೂ ನಮ್ಮ ಕ್ಲಿನಿಕ್ ಸೇವೆ (Namma Clinic Bangalore)  ದೊರೆಯುವ ಕುರಿತು ಮಹತ್ವದ ಸುದ್ದಿ ಹೊರಬಿದ್ದಿದೆ. 

ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳ ಮಹತ್ವದ ಬಗ್ಗೆ ಚೆನ್ನಾಗಿ ಅರಿತಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಮೊದಲ ಬಜೆಟ್ ನಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಗೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಯೋಜನೆಯನ್ನು ಆದಷ್ಟು ಬೇಗ ತನ್ನ ವ್ಯಾಪ್ತಿಯಲ್ಲೇ ಮೊದಲಿಗೆ ಜಾರಿಗೆ ತರಲು ಬಿಬಿಎಂಪಿ ಭರದ ಸಿದ್ಧತೆ ನಡೆಸಿದೆ. ಈ ಬಗ್ಗೆ ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ಬಾಲ ಸುಂದರ್ ಮಾಹಿತಿ ಹಂಚಿಕೊಂಡಿದ್ದಾರೆ.

ನಗರದ 198 ವಾರ್ಡ್ ಗಳಲ್ಲೂ ಸೇವೆ ನೀಡಲಿವೆ ನಮ್ಮ ಕ್ಲಿನಿಕ್!
ಸದ್ಯ ಪಾಲಿಕೆ 198 ವಾರ್ಡ್ ಗಳಲ್ಲಿ 161 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಕೊರೋನಾಗೂ ಮೊದಲು 141 PHC ಕೇಂದ್ರಗಳಿದ್ದವು. ಕೊರೋನಾ ಕಾಲದಲ್ಲಿ 20 ವಾರ್ಡ್ ಗಳಲ್ಲಿ ಹೊಸದಾಗಿ 20 PHC ತೆರೆಯಲಾಗಿತ್ತು. ಇದನ್ನು ಹೊರತುಪಡಿಸಿ ನಗರದಲ್ಲಿ  243 ನಮ್ಮ ಕ್ಲಿನಿಕ್ ಗಳು ಸ್ಥಾಪನೆಯಾಗಲಿದೆ.

ಈಗಾಗಲೇ 160 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಗೆ ಜಾಗ ಗೊತ್ತು ಮಾಡಲಾಗಿದೆ. ಪಾಲಿಕೆ ಜಾಗ ಖಾಲಿ ಇಲ್ಲದಿದ್ದರೆ ಬಾಡಿಗೆಗೆ ಜಾಗ ಪಡೆಯುವಂತೆ ಆರೋಗ್ಯ ಇಲಾಖೆಯಿಂದ ಪಾಲಿಕೆಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಡಿಲಿಮಿಟೇಷನ್ ಆದ ಬಳಿಕ ಹೊಸ ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಯಾಗಲಿವೆ.

'ನಮ್ಮ ಕ್ಲಿನಿಕ್' ಸ್ಥಾಪನೆ ಹಿಂದಿರುವ ಉದ್ದೇಶವೇನು?
ಸ್ಲಂ ಏರಿಯಾಗಳಲ್ಲಿನ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸವಲತ್ತು ಒದಗಿಸುವುದು- PHC ಕೇಂದ್ರಗಳು, ರೆಫರಲ್ ಆಸ್ಪತ್ರೆಗಳು ಸೇರಿದಂತೆ ಇತರೆ ಆಸ್ಪತ್ರೆಗಳು ಇದ್ದರೂ ಉತ್ತಮ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

ಇದರಿಂದ ಸ್ಲಂ ಏರಿಯಾಗಳಲ್ಲಿನ ಜನರು PHC ಕೇಂದ್ರಗಳ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ.  BPL ಕೆಳಗಿರುವ ಜನರಿಂದ PHC ಕೇಂದ್ರಗಳು ದೂರವಾಗಿದೆ.  ಕೊರೋನಾ ಸಮಯದಲ್ಲಿ ಜನರಿಗೆ ಶುಚಿತ್ವ ಹಾಗೂ ಆರೋಗ್ಯ ಮುಖ್ಯ ಎಂಬ ಅರಿವು ಹಿನ್ನೆಲೆಯಲ್ಲಿ ನಮ್ಮ ಕ್ಲಿನಿಕ್ ಮುಖ್ಯವಾಗಿದೆ.

ಹೇಗಿರಲಿದೆ 'ನಮ್ಮ ಕ್ಲಿನಿಕ್' ಸೇವೆ?
ದಿನದ 24 ಗಂಟೆಗಳ ಕಾಲವೂ ಇರಲಿದೆ ನಮ್ಮ ಕ್ಲಿನಿಕ್- 4 ಸಿಬ್ಬಂದಿಗಳನ್ನು ಒಳಗೊಂಡು ಮೂರು ಶಿಫ್ಟ್ ನಲ್ಲಿ ಸೇವೆ- MBBS ವೈದ್ಯೆ, ಸ್ಟಾಫ್ ನರ್ಸ್, ಅರೆಕಾಲಿಕೆ ವೈದ್ಯೆ, ಡಿ ಗ್ರೂಪ್ ಸಿಬ್ಬಂದಿಯ ನಿಯೋಜನೆ- PHC ಕೇಂದ್ರಗಳ ಗುಣಮಟ್ಟ ಹೆಚ್ಚಿಸುವ ಸಲುವಾಗಿ ನಮ್ಮ ಕ್ಲಿನಿಕ್ ಓಪನ್- ನಮ್ಮ ಕ್ಲಿನಿಕ್ಗೆ ಬರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ PHC ಅಥವಾ ಇತರೆ ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ.

ಇದನ್ನೂ ಓದಿ: Bengaluru Karaga: ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ ಬೆಂಗಳೂರು ಕರಗ ಮಹೋತ್ಸವ

ಒಟ್ಟಾರೆ ಸಿಎಂ ಬೊಮ್ಮಾಯಿ ತಮ್ಮ ಚೊಚಲ ಬಜೆಟ್​ನಲ್ಲಿ ಘೋಷಿಸಿರುವ ಈ ನಮ್ಮ ಕ್ಲಿನಿಕ್ ಯೋಜನೆ ಜನ ಸಹಕಾರಿಯಾಗಿದ್ದು, ಆದಷ್ಟು ಬೇಗ ನಮ್ಮ ಕ್ಲಿನಿಕ್ ಗಳು ಆರಂಭವಾಗಿ ಬಡ ಜನರಿಗೆ ಆರೋಗ್ಯ ಸೇವೆ ಸಿಗುವಂತಾಗಲಿ ಅನ್ನೋದೇ ಸಾರ್ವಜನಿಕರ ಆಶಯ ಕೂಡ.
Published by:guruganesh bhat
First published: