ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲ್ (BJP Karnataka state President Nalin Kumar Kateel) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಡ್ರಗ್ ಪೆಡ್ಲರ್ ಎಂದು ಹೇಳಿಕೆ ನೀಡುವ ಮೂಲಕ ವ್ಯಾಪಕ ಟೀಕೆಗೆ ಕಟೀಲ್ ಗುರಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಹಾಲಿ ಶಾಸಕ ದಿನೇಶ್ ಗುಂಡೂರಾವ್ (Congress leader Dinesh Gundu Rao), ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಲೆ ಕೆಟ್ಟಿದೆ, ಅದಕ್ಕಾಗಿಯೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದಿದ್ದಾರೆ. ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ತಲೆಕೆಟ್ಟಿರುವ ವ್ಯಕ್ತಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು ಕಟೀಲ್ ಹೇಳಿಕೆಯನ್ನು ಕಟುವಾಗಿ ಖಂಡಿಸಿದರು. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುವುದು ಅಕ್ಷಮ್ಯ ಅಪರಾಧ ಎಂದು ಗುಂಡೂರಾವ್ ದೂರಿದರು.
ಮುಂದುವರೆದ ಅವರು, ಇಂತಹ ತಲೆ ಕೆಟ್ಟಿರುವ ವ್ಯಕ್ತಿಯನ್ನು ಬಿಜೆಪಿ ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸುಬೇಕು ಎಂದು ಆಗ್ರಹಿಸಿದರು. ಇವರ ಮಾನಸಿಕ ಸ್ಥಿಮಿತ ಕೂಡ ಸರಿ ಇಲ್ಲ, ಇದು ಅತ್ಯಂತ ಕೀಳುಮಟ್ಟದ ಹಾಗೂ ಆಧಾರ ರಹಿತ ಆರೋಪ. ಕೊಳಕು ಮನಸ್ಸಿನ ಸಂಸ್ಕೃತಿ ಬಗ್ಗೆ ಗೊತ್ತಾಗ್ತಿದೆ. ಕೂಡಲೇ ಬಿಜೆಪಿಗೆ ನೈತಿಕತೆ ಇದ್ರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತಾಕಬೇಕು ಎಂದು ಗುಂಡೂರಾವ್ ಆಗ್ರಹಿಸಿದರು.
ರಾಹುಲ್ ತಂದೆ ದೇಶಕ್ಕಾಗಿ ಪ್ರಾಣತ್ಯಾಗ:
ಮುಂದುವರೆದು ಮಾತನಾಡಿದ ದಿನೇಶ್ ಗುಂಡೂರಾವ್, ರಾಹುಲ್ ಗಾಂಧಿಯವರ ತಂದೆ ದೇಶಕ್ಕೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ (Rajiv Gandhi sacrificed his life for country). ಇಂತಹ ವ್ಯಕ್ತಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರೋದು ನಿಜಕ್ಕೂ ನಾಚಿಕೆಗೇಡು. ಒಬ್ಬ ಸಂಸದನಾಗಿ, ರಾಜ್ಯಾಧ್ಯಕ್ಷ ನಾಗಿ ಈ ರೀತಿ ಮಾತಾಡ್ತಾರೆ ಅಂದರೆ ಅವ್ರ ಕೊಳಕು ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ ಎಂದು ಕಟೀಲ್ ಅವರ ವಿರುದ್ಧ ಹರಿಹಾಯ್ದರು.
ದೇವರು, ಸಂಸ್ಕೃತಿ ಅನ್ನೋದು, ಬ್ಲೂ ಫಿಲಂ ನೋದೋದು (BJP Sex Tapes):
ದೇವರು, ಸಂಸ್ಕೃತಿ ಬಗ್ಗೆ ಮಾತಾಡೋರು, ಬ್ಲೂ ಫಿಲಂ ನೋಡೋರು, ಬ್ಲೂ ಫಿಲಂ ಮಾಡಿದವರ ವಿರುದ್ದ ಏನು ಕ್ರಮ ತೆಗೆದುಕೊಂಡಿದ್ದಾರೆ..? ಎಂದು ಗುಂಡೂರಾವ್ ಪ್ರಶ್ನಿಸಿದರು. ಈ ನಳೀನ್ ಕುಮಾರ್ ಕಟೀಲ್ ಗೆ ಯೋಗ್ಯತೆನೇ ಇಲ್ಲ. ಬಿಜೆಪಿ ಒಂದು ಭ್ರಷ್ಟ ಪಕ್ಷ, ಕೇವಲ ಹಣದಲ್ಲಿ ಅಲ್ಲ, ನೈತಿಕತೆಯಲ್ಲೂ ಬಹಳ ಭ್ರಷ್ಟರಾಗಿದ್ದಾರೆ. ದೇವರನ್ನು ಬಂಡವಾಳ ಮಾಡಿಕೊಂಡು ದೇಶದಲ್ಲಿ ಕೆಟ್ಟ ಪ್ರಕ್ರಿಯೆಗಳನ್ನು ಅಳವಡಿಸುತ್ತಿದ್ಸಾರೆ. ಇವರ ನಾಲಿಗೆ ಯಾವುದೇ ರೀತಿಯ ಲಂಗು ಲಗಾಮು ಇಲ್ಲ. ಸಿಟಿ ರವಿ, ಯತ್ನಾಳ್, ಅನಂತ ಕುಮಾರ್ ಹೆಗಡೆ, (CT Ravi, Basanagouda Patil Yatnal, Ananth Kumar Hegde) ಈ ಕಟೀಲ್ ದೊಡ್ಡ ಹೀರೋಗಳು. ಇವರಿಗೆ ಏನಾದರೂ ರಾಜಕೀಯ ಸಂಸ್ಕೃತಿ ಗೊತ್ತಿದೆಯಾ..? ಇಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಇವರನ್ನು ಕಂಟ್ರೋಲ್ ಮಾಡಿಲ್ಲ. ಬಾಯಿಗೆ ಬಂದ ಮಾತಾಡುವ ಇವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ.
ಇವರಿಗೆ ಕ್ಷಮೆ ಕೇಳುವ ಅರ್ಹತೆ ಇಲ್ಲ ಎಂದು ಗುಂಡೂರಾವ್ ಗುಡುಗಿದರು.
ಬಿಜೆಪಿಯವರಿಗೆ ನೈತಿಕತೆ ಅನ್ನೋದು ಇದ್ರೆ, ಅವರನ್ನು ಕಿತ್ತಾಕಬೇಕು. ಇಲ್ಲ ಅಂದರೆ ಸರಿಯಾಗಿ ಇರಪ್ಪ ಎಂದು ವಾರ್ನ್ ಮಾಡಬೇಕು. ನಳೀನ್ ಕುಮಾರ್ ಕಟೀಲ್ ವಿರುದ್ಧ ಕಾನೂನು ಕ್ರಮ ಆಗಬೇಕು. ಅವರ ಪಕ್ಷದವರು, ಮತ್ತೆ ಮಂತ್ರಿಗಳು ಏನೇನು ಮಾಡ್ತಿದಾರೆ ಎಂದು ನಮಗೆ ಗೊತ್ತಿಲ್ವಾ..? ಸುಮ್ಮನೆ ಬಾಯಿಗೆ ಬಂದಂತೆ ಏನೇನೋ ಮಾತಾಡಬಾರದು. ಏನಾದರೂ ಆಧಾರ ಇಟ್ಟುಕೊಂಡು ಮಾತಾಡಬೇಕು. ಅಧ್ಯಕ್ಷ ನೇಮಕ ಮಾಡೋದು ಬಿಡೋದು ನಮ್ಮ ಪಕ್ಷದ ತೀರ್ಮಾನ . ನಮ್ಮ ಪಕ್ಷದೊಳಗಿನ ವಿಚಾರಕ್ಕೂ ಇವರಿಗೂ ಏನು ಸಂಬಂಧ ಎಂದರು.
ಇದನ್ನೂ ಓದಿ: 'ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್': ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ
ಮೋದಿ ತರ ಸುಳ್ಳು ರಾಜಕಾರಣಿಯಲ್ಲ ರಾಹುಲ್ ಗಾಂಧಿ:
ಆರ್ ಎಸ್ ಎಸ್ ಇಲ್ದೆ ಬಿಜೆಪಿ ಯವರು ಯಾಕೆ ಏನು ತೀರ್ಮಾನ ಮಾಡಲ್ಲ. ಬಿಜೆಪಿ ಯನ್ನು ಕಂಟ್ರೋಲ್ ಮಾಡ್ತಿರೋದೇ ಈ ಆರ್ಎಸ್ಎಸ್. ರಾಹುಲ್ ಗಾಂಧಿ ನೇರವಾಗಿ ರಾಜಕಾರಣ ಮಾಡ್ತಿದ್ದಾರೆ. ನರೇಂದ್ರ ಮೋದಿ ತರ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡ್ತಿಲ್ಲ ಎಂದು ಬಿಜೆಪಿ ನಾಯಕರಿಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.
ಇದನ್ನೂ ಓದಿ: ಸಾವರ್ಕರ್ ಕ್ಷಮಾಪಣೆಗೆ ಗಾಂಧಿ ಸಲಹೆ ನೀಡಿದ್ದರೇ? ನಿಜಕ್ಕೂ ಇದೊಂದು ಹಾಸ್ಯಾಸ್ಪದ ಹೇಳಿಕೆ; ರಾಜಮೋಹನ್ ಗಾಂಧಿ
ಕಾಂಗ್ರೆಸ್ ಮೇಲೆ ಕುಮಾರಸ್ವಾಮಿ ದಾಳಿ ವಿಚಾರ:
ಕುಮಾರಸ್ವಾಮಿ (Former Karnataka Chief Minister HD Kumaraswamy)ವಿರುದ್ದ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ. ಕುಮಾರಸ್ವಾಮಿ ಯವರ ಉದ್ದೇಶವೇ ಬೇರೆ ಇದೆ. ಅವರಿಗೆ ಒಟ್ಟಿನಲ್ಲಿ ಅಂದರೆ ಯಾರಿಗೆ ಬಹುಮತ ಬರಬಾರದು. ಯಾರು ಕೂಡ ಸಂಪೂರ್ಣ ಮೆಜಾರಿಟಿಯಲ್ಲಿ ಅಧಿಕಾರಕ್ಕೆ ಬರಬಾರದು. ಯಾರಿಗೂ ಪೂರ್ಣ ಬಹುಮತ ಬರದೇ ಅವರಿಗೆ 20-25 ಸೀಟ್ ಬಂದರೆ ಮತ್ತೆ ಕಿಂಗ್ ಮೇಕರ್ ಆಗಬಹುದು ಎಂಬುದೇ ಅವರ ಒಳ ಆಶಯ. ಎಲ್ಲರನ್ನು ಬ್ಲಾಕ್ ಮೇಲ್ ಮಾಡಿಕೊಂಡು ಇರಬೇಕು ಎಂಬುದು ಅವರ ರಾಜಕಾರಣ. ಅವರಿಗೆ ಯಾವುದೇ ತತ್ವ, ಸಿದ್ಧಾಂತ ಇಲ್ಲ. ಅವರ ವ್ಯಯಕ್ತಿಕ ಲಾಭಕ್ಕಾಗಿ ಅವ್ರು ಈ ರೀತಿ ಮಾಡ್ತಿದ್ದಾರೆ ಹೊರತು, ಅವರು ಅವರ ಪಕ್ಷದ ಬಗ್ಗೆಯೂ ಕೇರ್ ಮಾಡಲ್ಲ. ಅವರಿಂದ ನಾವು ಏನು ಕಲಿಯುವ ಅಗತ್ಯತೆ ಇಲ್ಲ ಎಂದು ಕುಮಾರಸ್ವಾಮಿಯವರಿಗೆ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ