ನನ್ನ ಹೇಳಿಕೆಯಿಂದ ಕೆಲಸದಲ್ಲೂ ನನಗೆ ಹಿನ್ನಡೆಯಾಗಿದೆ; ವಿಚಾರಣೆ ವೇಳೆ ಗದ್ಗದಿತರಾದ Hamsalekha

Hamsalekha remarks on Pejawar Sri: ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದ್ರು. ನನ್ನ ಎಪತ್ತು ವರ್ಷದ ಜೀವನದಲ್ಲಿ ಎಂದಿಗೂ ಹೀಗೆ ಮಾಡಿಕೊಂಡಿರಲಿಲ್ಲ, ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವ ಧರ್ಮ ,ಜಾತಿಯ ನಿಂದಿಸೊ ಉದ್ದೇಶ ಇರಲಿಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ. ನನ್ನ ಕೆಲಸದಲ್ಲಿಯೂ ನನಗೆ ಹಿನ್ನಡೆ ಅಗಿದೆ.

ಹಂಸಲೇಖ

ಹಂಸಲೇಖ

 • Share this:
  ಬೆಂಗಳೂರು: ಕಳೆದ ಕೆಲ ದಿನಗಳಿಂದ ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ದಿ.ವಿಶ್ವೇಶತೀರ್ಥ ಪೇಜಾವರ ಶ್ರೀಗಳ (Pejawar Sri) ಕುರಿತು ಮೈಸೂರಿನಲ್ಲಿ ನೀಡಿದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹಂಸಲೇಖ ಅವರು ಕ್ಷಮೆ ಕೇಳಿದ್ದರು. ಆದರೂ ವಿವಾದ ತಣ್ಣಗಾಗಲಿಲ್ಲ, ಹಲವರು ಹಂಸಲೇಖರ ವಿರುದ್ಧ ದೂರು (Complaint) ದಾಖಲಿಸಿದ ಹಿನ್ನೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಹಂಸಲೇಖರಿಗೆ ನೋಟಿಸ್​ ಜಾರಿ ಮಾಡಿದ್ದರು. ಅದರಂತೆ ಇಂದು ಬಸವನಗುಡಿ ಠಾಣೆಗೆ ಆಗಮಿಸಿ ಹೇಳಿಕೆ ದಾಖಲಿಸಿದ್ದಾರೆ.  ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸುವಾಗ ಹಂಸಲೇಖ ಅವರು ಭಾವುಕರಾಗಿದ್ದಾರೆ ಎನ್ನಲಾಗುತ್ತಿದೆ.

  ವಿಚಾರಣೆ ವೇಳೆ ಗದ್ಗದಿತರಾದ ಹಂಸಲೇಖ

  ಯಾಕೆ ಹಾಗೆ ಹೇಳಿದೆನೋ ಗೊತ್ತೇ ಅಗಲಿಲ್ಲಾ ಸಾರ್, ನನಗೆ ಯಾವ ಉದ್ದೇಶವು ಇರಲಿಲ್ಲ. ಮಾತನಾಡುವ ಬರದಲ್ಲಿ ಹಾಗೆ ಹೇಳಿ ಬಿಟ್ಟೆ. ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದ್ರು. ನನ್ನ ಎಪತ್ತು ವರ್ಷದ ಜೀವನದಲ್ಲಿ ಎಂದಿಗೂ ಹೀಗೆ ಮಾಡಿಕೊಂಡಿರಲಿಲ್ಲ, ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವ ಧರ್ಮ ,ಜಾತಿಯ ನಿಂದಿಸೊ ಉದ್ದೇಶ ಇರಲಿಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ. ನನ್ನ ಕೆಲಸದಲ್ಲಿಯೂ ನನಗೆ ಹಿನ್ನಡೆ ಅಗಿದೆ.  ನಾನು ಈ ಘಟನೆಯಿಂದ ತುಂಬಾ ನೋವು ಅನುಭವಿಸಿದ್ದೇನೆ ಎಂದು  ತನಿಖಾಧಿಕಾರಿ ಮುಂದೆ ಕಣ್ಣೀರು ಹಾಕಿ ಹಂಸಲೇಖ‌ ಗದ್ಗದಿತರಾಗಿದ್ದಾರೆ ಎನ್ನಲಾಗುತ್ತಿದೆ.

  ಅಗತ್ಯ ಬಿದ್ದರೆ ಮತ್ತೆ ವಿಚಾರಣೆ

  ವಿಚಾರಣೆ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹಂಸಲೇಖ ಅವರು ತೆರಳಿದರು. ವಿಚಾರಣೆ ಬಗ್ಗೆ ಮಾತನಾಡಿದ ಹಂಸಲೇಖ ಪರ ವಕೀಲ ದ್ವಾರಕಾನಾಥ್, ಈಗ ವಿಚಾರಣೆ ಮುಗಿದಿದೆ. ಮತ್ತೆ ವಿಚಾರಣೆಗೆ ಬರಬೇಕು ಅಂದ್ರೆ ಬರ್ತಾರೆ. ಅಗತ್ಯವಿದ್ದರೆ ನೋಟಿಸ್​ ಕೊಡ್ತೀವಿ ಬನ್ನಿ ಅಂದಿದ್ದಾರೆ. ಸದ್ಯ ಇವತ್ತು ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ವಿಚಾರಣೆಯಲ್ಲಿ ಏನೆಲ್ಲಾ ಕೇಳಿದ್ರು ಅನ್ನೋದು ಹೇಳಲು ಆಗಲ್ಲ. ಕಾನೂನಿನ ಮೇಲೆ ನಂಬಿಕೆ ಇದೆ, ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು. ಹಂಸಲೇಖರಿಗೆ ಇನ್ಸ್​​ಪೆಕ್ಟರ್​ ರಮೇಶ್​ ಅವರು ಒಟ್ಟು 29 ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿದ್ದಾರೆ.

  ಡಿಸಿಪಿ ಹರೀಶ್ ಪಾಂಡೆ ಸ್ಪಷ್ಟನೆ

  ತನಿಖಾಧಿಕಾರಿಗಳು ಹಂಸಲೇಖಾ ವಿಚಾರಣೆ ಮಾಡಿದ್ದಾರೆ. ಏನೆಲ್ಲಾ ಪ್ರಶ್ನೆಗಳು ಬೇಕೋ ಅದನ್ನ ಕೇಳಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು. ಮತ್ತೆ ಅವಶ್ಯಕತೆ ಇದ್ರೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆಯುತ್ತೇವೆ. ಕೋರ್ಟ್ ಗೆ ನಾವು ಎಲ್ಲಾ ಉತ್ತರ ನೀಡಬೇಕಾಗುತ್ತೆ, ಆ ಸಲುವಾಗಿ ಎಲ್ಲಾ ರೀತಿಯ ತನಿಖೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇನ್ನು ಠಾಣೆಯ ಮುಂದೆ ನಡೆದ ಹೈಡ್ರಾಮಾ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಡ್ರಾಮಾ ಅಂತೆಲ್ಲಾ ಏನು ಆಗಿಲ್ಲ. ಹಂಸಲೇಖರ ಪರ ಹಾಗೂ ವಿರೋಧವಾಗಿ ಪ್ರತಿಭಟನೆ ಆಗಿದೆ. ಅಧಿಕಾರಿಗಳು ಪ್ರತಿಭಟನಾಕಾರರನ್ನು ಕಳುಹಿಸಿದ್ದಾರೆ. ಕಾನೂನು ಪ್ರಕಾರ ತನಿಖೆ ಮಾಡ್ತೀವಿ ಎಂದರು.

  ಇದನ್ನೂ ಓದಿ: ACB Raid ವೇಳೆ ನೀರಿನ ಪೈಪ್​​ನಲ್ಲಿ ಹಣ ಸಿಕ್ಕಿದ್ದೇ ರೋಚಕ: Overacting ಮಾಡಿ ಸಿಕ್ಕಿಬಿದ್ದ ತಂದೆ-ಮಗ!

  ನಟ ಅಹಿಂಸಾ  ಚೇತನ್​ ಧರಣಿ

  ಇಂದು ಹಂಸಲೇಖ ಅವರ ಜೊತೆಗೆ ನಟ ಅಹಿಂಸಾ ಚೇತನ್​ ಕೂಡ ಪೊಲೀಸ್​ ಠಾಣೆಗೆ ಆಗಮಿಸಿದರು. ಅವರ ಆಗಮಕ್ಕೆ ಭಜರಂಗದಳ ಕಾರ್ಯಕರ್ತರು ವಿರೋಧಿಸಿ ಧಿಕ್ಕಾರ ಕೂಗಿದರು.  ಅವರ ಆಗಮನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆ ಅಹಿಂಸಾ ಚೇತನ್​​ ತಮ್ಮ ಬೆಂಬಲಿಗರೊಂದಿಗೆ ಠಾಣೆ ಎದುರು ಧರಣಿ ನಡೆಸಿದರು.

  ದೂರು ನೀಡಿದ ಕಾರಣವೇನು?

  ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ, ದಲಿತರ ಮನೆಗೆ ಪೇಜಾವರ ಶ್ರೀಗಳು ಹೋಗಬಹುದು. ಆದರೆ, ಅವರ ಮನೆಯಲ್ಲಿ ಕೋಳಿ ಕೊಟ್ಟರೆ ತಿನ್ನಲು ಸಾಧ್ಯವಾ ಎಂದಿದ್ದರು. ದಲಿತರ ಮನೆಗೆ ಬಲಿತರ ಹೋಗೋದಲ್ಲ, ದಲಿತರನ್ನು ಬಲಿತರು ಮನೆಗೆ ಕರೆಸಿಕೊಳ್ಳುಬೇಕು ಎಂದಿದ್ದರು. ಅವರ ಈ ಹೇಳಿಕೆ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದಾದ ಬಳಿಕ ಹಂಸಲೇಖ ಅವರು ತಾವು ಆಡಿದ ಮಾತಿಗೆ ಕ್ಷಮೆ ಕೋರಿದ್ದರು. ಈ ಸಂಬಂಧ ಬಸವನ ಗುಡಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ದೂರಿನ ವಿಚಾರಣೆಗೆ ಈ ಹಿಂದೆ ಅನಾರೋಗ್ಯದ ಕಾರಣ ನೀಡಿ ಹಂಸಲೇಖ ಅವರು ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಪೊಲೀಸರು ನ. 25ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದರು. ಆ ನೋಟಿಸ್​​ನಂತೆ ಇಂದು ಹಂಸಲೇಖ ಅವರು ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
  Published by:Kavya V
  First published: