Building Collapse : ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆಯೇ ಕುಸಿದ ಬಹುಮಹಡಿ ಕಟ್ಟಡ

ಅದೃಷ್ಟವಶಾತ್​ ಕಟ್ಟಡ ಬೆಳಗ್ಗೆ ಕುಸಿದ ಬಿದ್ದ ಪರಿಣಾಮ ಭಾರೀ ಹಾನಿಯೊಂದು ತಪ್ಪಿದೆ. ಒಂದು ವೇಳೆ ರಾತ್ರಿ ಸಮಯದಲ್ಲಿ ಈ ರೀತಿ ಘಟನೆ ನಡೆದಿದ್ದರೆ, ಕಟ್ಟಡದಲ್ಲಿದ್ದ ಸುಮೂರು 30 ರಿಂದ 40 ಮಂದಿ ಪ್ರಾಣಕ್ಕೆ ಕುತ್ತು ಎದುರಾಗುತ್ತಿತ್ತು.

ಕಟ್ಟಡ ಕುಸಿತದ ದೃಶ್ಯ

ಕಟ್ಟಡ ಕುಸಿತದ ದೃಶ್ಯ

  • Share this:
    ಬೆಂಗಳೂರು (ಸೆ. 27): ನಗರದ ವಿಲ್ಸನ್​ ಗಾರ್ಡನ್​ನ ಲಕ್ಕಸಂದ್ರದಲ್ಲಿ (lakkasandra wilson garden) ಮೂರು ಅಂತಸ್ತಿನ ಮನೆಯೊಂದು ಜನರ ಕಣ್ಣೇದುರಿಗೆ ಕುಸಿದು ಬಿದ್ದಿರುವ (multi storey building collapse) ಘಟನೆ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿಯಾಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆಯೇ ಈ ಮನೆ ಕೊಂಚ ವಾಲಿತ್ತು. ಇಂದು ಬೆಳಗ್ಗೆ ಮನೆ ನಿಧಾನವಾಗಿ ಮತ್ತಷ್ಟು ವಾಲಲು ಮುಂದಾಗಿದೆ. ಈ  ಘಟನೆ ಅರಿವಿಗೆ ಬರುತ್ತಿದ್ದಂತೆ ತಕ್ಷಣಕ್ಕೆ ಮನೆಯಲ್ಲಿದ್ದವರೆಲ್ಲಾ ಹೊರಗೆ ಓಡಿ ಹೋಗಿದ್ದಾರೆ. ಅಲ್ಲದೇ ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ. ಮನೆಯವರೆಲ್ಲಾ ಹೊರ ಹೋಗುತ್ತಿದ್ದಂತೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

    ಮೆಟ್ರೋ ಕಾರ್ಮಿಕರು ವಾಸವಾಗಿದ್ದ ಕಟ್ಟಡ

    ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಮನೆ ಕೂಡ ಕೊಂಚ ವಾಲಿದ್ದರಿಂದ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ಯಾವುದೇ ಕುಟುಂಬ ವಾಸವಾಗಿರಲಿಲ್ಲ. ಈ ಹಿನ್ನಲೆ ಖಾಲಿ ಇದ್ದ ಕಟ್ಟಡದಲ್ಲಿ ಸುಮಾರು 30 ರಿಂದ 40 ಮಂದಿ ಮೆಟ್ರೋ ಕಾರ್ಮಿಕರು ವಾಸಿಸುತ್ತಿದ್ದರು. ಇನ್ನು ಕಟ್ಟಡ ವಾಲುತ್ತಿರುವ ಸಂದರ್ಭದಲ್ಲಿ ಮನೆ ಮಾಲೀಕರಾದ ಮಂಜುಳಾ ಮತ್ತು ಸುರೇಶ್​ ದಂಪತಿಗೆ ಕರೆ ಮಾಡಲಾಗಿದೆ. ಆದರೆ, ಅವರು ತಾವು ಕೋರ್ಟ್​ನಲ್ಲಿದ್ದೇವೆ ಎಂದು ಸಬೂಬು ಹೇಳಿ ಕರೆ ಇಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.



    ಅದೃಷ್ಟವಶಾತ್​ ಬದುಕುಳಿದ ಜನರು

    ಅದೃಷ್ಟವಶಾತ್​ ಕಟ್ಟಡ ಬೆಳಗ್ಗೆ ಕುಸಿದ ಬಿದ್ದ ಪರಿಣಾಮ ಭಾರೀ ಹಾನಿಯೊಂದು ತಪ್ಪಿದೆ. ಒಂದು ವೇಳೆ ರಾತ್ರಿ ಸಮಯದಲ್ಲಿ ಈ ರೀತಿ ಘಟನೆ ನಡೆದಿದ್ದರೆ, ಕಟ್ಟಡದಲ್ಲಿದ್ದ ಸುಮಾರು 30 ರಿಂದ 40 ಮಂದಿ ಪ್ರಾಣಕ್ಕೆ ಕುತ್ತು ಎದುರಾಗುತ್ತಿತ್ತು.

    ಘಟನೆ ನಡೆದಾಕ್ಷಣಕ್ಕೆ ಅಗ್ನಿಶಾಮಕ ದಳದ ತಂಡ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಾಹಣ ಎನ್​ಡಿಆರ್​ಎಫ್ ತಂಡದ ಸದಸ್ಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ​ಕುಸಿದ ಮನೆಯೊಳಗೆ ಅಡುಗೆ ಸಿಲಿಂಡರ್ ಇರುವ ಕಾರಣದಿಂದ ಪರಿಶೀಲನೆ ಮಾಡುತ್ತಿದ್ದು, ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ನಡೆಸಲಾಗುತ್ತಿದೆ.

    ಇದನ್ನು ಓದಿ: ಸ್ವಂತ ಉದ್ಯಮ ಹೊಂದುವ ಕನಸಿದ್ಯಾ; ಕಡಿಮೆ ಬಂಡವಾಳದಲ್ಲಿ ದುಪ್ಪಟ್ಟು ಲಾಭ ಪಡೆಯಲು ಇಲ್ಲಿದೆ ಐಡಿಯಾ

    ನಾಪತ್ತೆಯಾದ ಮನೆ ಮಾಲೀಕರು

    ಇನ್ನು ಘಟನೆ ಕುರಿತು ಸ್ಥಳೀಯರು ಮಾಲೀಕರಾದ ಮಂಜುಳಾ ಮತ್ತು ಸುರೇಶ್​ ದಂಪತಿಗೆ  ಮಾಹಿತಿ ನೀಡಿದ್ದರು. ಕಟ್ಟಡ ಕುಸಿದ ಬಳಿಕವೂ ಮನೆ ಮಾಲೀಕರು ಘಟನಾ ಸ್ಥಳಕ್ಕೆ ಆಗಮಿಸಿಲ್ಲ. ಈ ಹಿಂದೆಯೇ ಕಟ್ಟಡ ವಾಲಿದ್ದರ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನಲೆ ಈ ಅನಾಹುತ ಸಂಭವಿಸಿದೆ. ಈ ಹಿನ್ನಲೆ ಮನೆ ಮಾಲೀಕರ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆ ಹಿನ್ನಲೆ ಅವರು ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಇದುವರೆಗೂ ಬಾರದೇ ಕಣ್ಮರೆಯಾಗಿರವ ಮನೆ ಮಾಲೀಕ ಸುರೇಶ್​ ವಿರುದ್ಧ ಅಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. IPC 336 ರ ನಿರ್ಲಕ್ಷ್ಯ ದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಪೊಲೀಸರು ಅವರ ಹುಡುಕಾಟಕ್ಕೆ ಮುಂದಾಗಿದ್ದಾರೆ.

    ಈ ಹಿಂದೆ ಕೂಡ ಇವರ ಮತ್ತೊಂದು ಕಟ್ಟಡ ಬಿದ್ದಿತ್ತು

    ಮಂಜುಳಾ ಮತ್ತು ಸುರೇಶ್​ ದಂಪತಿಗಳಿಗೆ ಸೇರಿದ ಮತ್ತೊಂದು ಕಟ್ಟಡ ಕೂಡ ಈ ಹಿಂದೆ ಇದೇ ರೀತಿ ಕುಸಿದು ಬಿದ್ದಿತು. ಆಗಲೂ ಕೂಡ ಅದೃಷ್ಟವಶಾತ್​ ಯಾವುದೇ ಪ್ರಾಣ ಅಪಾಯವಾಗಿರಲಿಲ್ಲ.  ಲಕ್ಕಸಂದ್ರ ಫಸ್ಟ್ ಕ್ರಾಸ್ ಕೂಡ ಇದೇ ರೀತಿ ಹಳೆಯ ಶಿಥಿಲಗೊಂಡ ಕಟ್ಟಡ ಬಿದಿದ್ದು. ಈ  ಸಂದರ್ಭದಲ್ಲೂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಘಟನೆ ಬಳಿಕವೂ ಈ ಕಟ್ಟಡದ ಬಗ್ಗೆ ಅವರು ಮುನ್ನೆಚ್ಚರಿಕೆ ವಹಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
    Published by:Seema R
    First published: