HOME » NEWS » State » BENGALURU URBAN MP TEJASVI SURYA REACTION ON BED SCAM AND CONGRESS ALLEGATIONS KVD

ಟೀಕೆಗಳಿಗೆ ಉತ್ತರಿಸಲ್ಲ, ಬೆಡ್ ಬ್ಲಾಕಿಂಗ್​​ಗೆ ಪರಿಹಾರ ಹುಡುಕುವುದಷ್ಟೇ ಕೆಲಸ : ತೇಜಸ್ವಿ ಸೂರ್ಯ

ಈ ಪ್ರಕರಣದಲ್ಲಿ ರಾಜಕೀಯ ಮಾಡೋದು ನನಗೆ ಬೇಕಿಲ್ಲ. ಅವರೇನು ಅಂದರು ಅದಕ್ಕೆ ನಾನು ಏನು ಹೇಳಿದೆ ಅನ್ನೋದು ಜನರಿಗೆ ಬೇಕಿಲ್ಲ. ತಮ್ಮ ಕುಟುಂಬಸ್ಥರಿಗೆ, ಸ್ನೇಹಿತರು-ಸಂಬಂಧಿಕರಿಗೆ ಬೆಡ್​ ಸಿಗೋದು ಜನರಿಗೆ ಈಗ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ.

Kavya V | news18-kannada
Updated:May 5, 2021, 3:42 PM IST
ಟೀಕೆಗಳಿಗೆ ಉತ್ತರಿಸಲ್ಲ, ಬೆಡ್ ಬ್ಲಾಕಿಂಗ್​​ಗೆ ಪರಿಹಾರ ಹುಡುಕುವುದಷ್ಟೇ ಕೆಲಸ : ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ
  • Share this:
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿನ ಬೆಡ್​ಗಳನ್ನು ವಾರ್​​ ರೂಂ ಮೂಲಕ ಅಕ್ರಮವಾಗಿ ಬ್ಲಾಕ್​ ಮಾಡುತ್ತಿದ್ದ ದಂಧೆಯನ್ನು ನಿನ್ನೆ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದರು. ಇಂದು ಪೊಲೀಸ್​ ಆಯುಕ್ತರ ಕಚೇರಿಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಸದ್ಯ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಈ ಬಗ್ಗೆ ಕಮಿಷನರ್​ ಕಮಲ್​ ಪಂಥ್​ ಜೊತೆ ಸಂಸದರು ಚರ್ಚೆ ನಡೆಸಿದರು. ದಂಧೆಯಲ್ಲಿ ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಕಮಿಷನರ್​ ಭೇಟಿ ಬಳಿಕ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಶಪಥ ಮಾಡಿದ್ದಾರೆ ಎಂದು ತಿಳಿಸಿದರು. ಇನ್ನು ಕಾಂಗ್ರೆಸ್​ ಟೀಕೆಗಳಿಗೆ ಉತ್ತರಿಸಲ್ಲ, ಜನರಿಗೆ ಬೆಡ್​ ಕೊಡಿಸುವುದಷ್ಟೇ ನನ್ನ ಆದ್ಯತೆ ಎಂದರು.

ಬೆಡ್ ಹಗರಣ ಕುರಿತು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಯಾರೆಲ್ಲಾ ದಂಧೆಯಲ್ಲಿ‌ ಭಾಗಿಯಾಗಿದ್ದಾರೆ ಅಂತ ಮಾಹಿತಿ ಕೊಡಲಾಗಿದೆ. ರಾತ್ರಿಯಿಂದಲೂ ಸಾಕಷ್ಟು ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಇದರಲ್ಲಿ ಎಲ್ಲಾ ಡಾಕ್ಯುಮೆಂಟರಿ ಎವಿಡೆನ್ಸ್ ಇದೆ. ದಂಧೆಕೋರರು ಗೂಗಲ್ ಪೇ ಮೂಲಕ ಹಣ ಪಡೆದಿದ್ದಾರೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಬಂಧಿಸುಂತೆ ಮುಖ್ಯಮಂತ್ರಿ ಸಹ  ಹೇಳಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಹೆಸರನ್ನು ಹೇಳದೆಯೇ, ನನಗೆ ಬಂದಿರೋ ಎಲ್ಲಾ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದೇನೆ ಎಂದಷ್ಟೇ ತೇಜಸ್ವಿ ಸೂರ್ಯ ಹೇಳಿದರು.

ಫೋನ್ ಸಂಭಾಷಣೆ ಸಹ ಸಾಕಷ್ಟು ಸಿಕ್ಕಿದ್ದು ಅದನ್ನು ಪೊಲೀಸರು‌ ಪರಿಶೀಲನೆ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ರಾಜಕೀಯ ಮಾಡುತ್ತಿಲ್ಲ. ನನ್ನೊಂದಿಗೆ ಮಾತನಾಡಿದ ಸಿಎಂ ಬಿ.ಎಸ್​.ಯಡಿಯೂರಪ್ಪ ಸಮಸ್ಯೆಯನ್ನು ಮಾತ್ರ ಹೇಳಿದರೆ ಹೇಗೆ ಪರಿಹಾರವನ್ನು ಹೇಳಯ್ಯ ಎಂದರು. ನಾನು ಪರಿಹಾರವನ್ನೂ ತಿಳಿಸಿದ್ದೇನೆ. ನಮ್ಮ ಬೆಂಗಳೂರು ಸಾಫ್ಟ್​​​ವೇರ್​​ಗೇ ಖ್ಯಾತಿ ಗಳಿಸಿದ ನಗರ. ಬೆಡ್​​ ಅಲಾಟ್​ಮೆಂಟ್​ ಬಗ್ಗೆಯೂ ಹೊಸ ಸಾಫ್ಟ್​ವೇರ್​ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದೆ. ಸಿಎಂ ಕೂಡಲೇ ಅತ್ಯುತ್ತಮ ಸಾಫ್ಟ್​​ವೇರ್​ ತಜ್ಞರ ತಂಡವನ್ನು ನೀಡಲಿದ್ದೇನೆ ಎಂದರು. ನಂದನ್‌ ನಿಲೇಕೇಣಿಗೂ ಕಾಲ್ ಮಾಡಿ ಮಾತನಾಡಿದ್ದೇನೆ. ದಿ ಬೆಸ್ಟ್ ಸಾಫ್ಟ್‌ವೇರ್ ಇಂಜನಿಯರ್ ಇರೋ ಟೀಂ‌‌ ಕೊಡೋದಾಗಿ ಹೇಳಿದ್ದಾರೆ. ಸಾಫ್ಟ್ ವೇರ್ ನಲ್ಲಿ ಯಾವುದೇ ಲೋಪದೋಷ ಇಲ್ಲದ ಹಾಗೆ ಮಾಡಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಇದನ್ನೂ ಓದಿ : ಚಾಮರಾಜನಗರ ಪ್ರಕರಣ ಡೈವರ್ಟ್ ಮಾಡಲು ತೇಜಸ್ವಿ ಸೂರ್ಯ ಬೆಡ್ ದಂಧೆ ಬಯಲಿಗೆಳೆದಿದ್ದಾರೆ : ಸಿದ್ದರಾಮಯ್ಯ

ಇನ್ನು ಚಾಮರಾಜನಗರ ಪ್ರಕರಣವನ್ನು ಡೈವರ್ಟ್​ ಮಾಡಲು ಬೆಡ್​ ಬ್ಲಾಕಿಂಗ್​ ದಂಧೆ ಬಯಲಿಗೆಳೆದಿದ್ದಾರೆ ಎಂಬ ಕಾಂಗ್ರೆಸ್​ ಆರೋಪಕ್ಕೆ ಪ್ರತಿಕ್ರಿಯಿಸಲು ತೇಜಸ್ವಿ ಸೂರ್ಯ ನಿರಾಕರಿಸಿದರು. ಈ ಪ್ರಕರಣದಲ್ಲಿ ರಾಜಕೀಯ ಮಾಡೋದು ನನಗೆ ಬೇಕಿಲ್ಲ. ಅವರೇನು ಅಂದರು ಅದಕ್ಕೆ ನಾನು ಏನು ಹೇಳಿದೆ ಅನ್ನೋದು ಜನರಿಗೆ ಬೇಕಿಲ್ಲ. ತಮ್ಮ ಕುಟುಂಬಸ್ಥರಿಗೆ, ಸ್ನೇಹಿತರು-ಸಂಬಂಧಿಕರಿಗೆ ಬೆಡ್​ ಸಿಗೋದು ಜನರಿಗೆ ಈಗ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ಅನಗತ್ಯವಾಗಿ ರಾಜಕೀಯ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
Published by: Kavya V
First published: May 5, 2021, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories