Abhishek Ambareesh Enter Politics: ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯದ ಬಗ್ಗೆ ಬಾಯ್ಬಿಟ್ಟ ಸುಮಲತಾ ಅಂಬರೀಶ್

ಚುನಾವಣೆಗೆ ನಿಲ್ಲುವ ಬಗ್ಗೆ ಒಲವಿರುವುದು ಅವರ ಮಾತಿನಲ್ಲಿ ವ್ಯಕ್ತವಾಯಿತು. ವಿಧಾನಸಭಾ ಚುನಾವಣೆಗೆ 20 ತಿಂಗಳು ಇದೆ, ಆಗ ನೋಡೋಣ ಏನಾಗಲಿದೆಯೋ. ಅಭಿಮಾನಿಗಳಿಂದ ಒತ್ತಾಯ ಬಂದರೆ ನೋಡೋಣ ಎನ್ನುವ ಮೂಲಕ ಅಭಿಷೇಕ್​ ರಾಜಕೀಯ ಭವಿಷ್ಯದ ಬಗ್ಗೆ ಸುಳಿವು ಬಿಟ್ಟುಕೊಟ್ಟರು.  

ಸುಮಲತಾ, ಅಭಿಷೇಕ್​

ಸುಮಲತಾ, ಅಭಿಷೇಕ್​

  • Share this:
ಬೆಂಗಳೂರು: ಎರಡ್ಮೂರು ದಿನಗಳ ಹಿಂದೆಯಷ್ಟೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್(mp sumalatha ambareesh )​ ಮಂಡ್ಯ-ಮದ್ದೂರು ಮಧ್ಯೆ ಹನಕೆರೆ ಬಳಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಮಂಡ್ಯದಲ್ಲೇ ಮನೆ ಕಟ್ಟಿ ನೆಲಸುವ ಮಾತನ್ನು ಸಕಾರ ಮಾಡಲು ಹೊರಟ್ಟಿದ್ದಾರೆ. ಸಂಸದೆ ಸುಮಲತಾರ ಮನೆ ನಿರ್ಮಾಣದ ಹಿಂದೆಯೂ ರಾಜಕೀಯ ದೂರದೃಷ್ಟಿ ಇದೆ ಎಂದು ವಿಶ್ಲೇಷಿಸಲಾಗಿತ್ತು. ಮಂಡ್ಯ ಸಂಸದೆಯಾಗಿರುವ ಸುಮಲತಾ ಮುಂದಿನ ವಿಧಾನಸಭೆಯಲ್ಲಿ ಮದ್ದೂರು ಕ್ಷೇತ್ರದಿಂದ ಪುತ್ರ ಅಭಿಷೇಕ್​ ಅಂಬರೀಶ್ (abhishek ambareesh)​ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಇದರ ಭಾಗವಾಗಿಯೇ ಮದ್ದೂರು ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಮಾತು ಹೇಳಿ ಬಂದಿತ್ತು.

ಒತ್ತಾಯ ಮಾಡಿದ್ರೆ ರಾಜಕೀಯ ಬರಬಹುದು

ಈ ಎಲ್ಲಾ ಅಂತೆ-ಕಂತೆಗಳ ಬೆನ್ನಲ್ಲೇ ಇಂದು ಸುಮಲತಾ ಅವರು ತಮ್ಮ ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಭಿಷೇಕ್ ಈಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ ಎಂದರು. ಜೊತೆಗೆ ಚುನಾವಣೆಗೆ ನಿಲ್ಲುವ ಬಗ್ಗೆ ಒಲವಿರುವುದು ಅವರ ಮಾತಿನಲ್ಲಿ ವ್ಯಕ್ತವಾಯಿತು. ವಿಧಾನಸಭಾ ಚುನಾವಣೆಗೆ 20 ತಿಂಗಳು ಇದೆ, ಆಗ ನೋಡೋಣ ಏನಾಗಲಿದೆಯೋ. ಅಭಿಮಾನಿಗಳಿಂದ ಒತ್ತಾಯ ಬಂದರೆ ನೋಡೋಣ ಎನ್ನುವ ಮೂಲಕ ಅಭಿಷೇಕ್​ ರಾಜಕೀಯ ಭವಿಷ್ಯದ ಬಗ್ಗೆ ಸುಳಿವು ಬಿಟ್ಟುಕೊಟ್ಟರು.

ಅಕ್ರಮ ಗಣಿಗಾರಿಕೆ ಬಗ್ಗೆ ಚರ್ಚೆ

ಇನ್ನು ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ಸಂಬಂಧ ಗಣಿ, ಮಹಿಳಾ ಮತ್ತು ಮಕ್ಳಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್  ಅವರನ್ನು ಸಂಸದೆ ಸುಮಲತಾ ವಿಧಾನಸೌಧದ ಮೂರನೇ ಮಹಡಿಯ ಹಾಲಪ್ಪ ಕೊಠಡಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು. ಈಗಲೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ, ಹಾಗಾಗಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಚಿವರಿಗೆ ಮನವಿ ಮಾಡಿದರು. ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಚರ್ಚಿಸಿದರು. ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಚಿವರ ಜೊತೆ ಸಮಾಲೋಚಿಸಿದರು. ಈ ವೇಳೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಉಪಸ್ಥಿತಿ ಇದ್ದರು.

ಸಚಿವರ ಭೇಟಿ ಬಳಿಕ ಮಾತನಾಡಿದ ಸಂಸದೆ ಸುಮಲತಾ, ಮಂಡ್ಯ ಜಿಲ್ಲೆಯ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಸಚಿವರ ಜೊತೆ ಚರ್ಚಿಸಿದೆ. ಸಚಿವರನ್ನೂ ಜಿಲ್ಲೆಗೆ ಭೇಟಿ ನೀಡುವಂತೆ ಮನವಿ ಮಾಡಿದ್ದೇನೆ, ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆರ ಬಗ್ಗೆಯೂ ಸಚಿವರ ಜೊತೆ ಚರ್ಚಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ: Petrol Diesel Cess Decrease: ತಮಿಳುನಾಡು ಮಾದರಿ ಪೆಟ್ರೋಲ್& ಡೀಸೆಲ್ ಸೆಸ್ ಕಡಿತದ ಸುಳಿವು ನೀಡಿದ ಸಿಎಂ

ಮನೆ ನಿರ್ಮಾಣದ ಉದ್ದೇಶ

ಚುನಾವಣೆ ಮುಗಿದು ಎರಡೂವರೆ ವರ್ಷ ಕಳೆಯುತ್ತಿರುವ ಸಂದರ್ಭದಲ್ಲಿ ಸುಮಲತಾ ಅವರು ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿದ್ದು, ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾಮದ ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪುತ್ರ ಅಭಿಷೇಕ್ ಜೊತೆ ಸೇರಿ ಪೂಜೆಯನ್ನೂ ನೆರವೇರಿಸಿದ್ದಾರೆ.

ಮದ್ದೂರಿನಿಂದ ಅಭಿಷೇಕ್ ಸ್ಪರ್ಧೆಗೆ ಪ್ಲಾನ್.!

ಮನೆ ನಿರ್ಮಾಣದ ಹಿಂದೆ ರಾಜಕೀಯವಾಗಿ ಭದ್ರ ನೆಲೆ ಕಂಡುಕೊಳ್ಳುವ ತಂತ್ರಗಾರಿಕೆ ಅಡಗಿದೆ ಎನ್ನುವ ಚರ್ಚೆ ಆರಂಭವಾಗಿದೆ. ಮದ್ದೂರು ಕ್ಷೇತ್ರದಿಂದ ಪುತ್ರ ಅಭಿಷೇಕ್ ಅವರನ್ನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಪ್ಲಾನ್ ಮಾಡಿಕೊಂಡಿದ್ದು, ಅದಕ್ಕಾಗಿ ಮದ್ದೂರು ಹಾಗೂ ಮಂಡ್ಯ ಎರಡಕ್ಕೂ ಹತ್ತಿರವಾಗುವಂತೆ ಹನಕೆರೆಯಲ್ಲಿ ಮನೆ ನಿರ್ಮಾಣ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ ಅವರು, ಮಾತು ಕೊಟ್ಟಂತೆ ಸ್ವಂತ ಮನೆ ಕಟ್ಟುತ್ತಿದ್ದೇನೆ. ಸಮಯ, ಸಂದರ್ಭ ಯಾವ ರೀತಿ ಇರುತ್ತೋ ನೋಡೋಣ. ಯಾವುದೂ ನಮ್ಮ ಕೈಲಿ ಇರೋದಿಲ್ಲ. ನಾನು ರಾಜಕೀಯಕ್ಕೆ ಬರ್ತೀನಿ, ಎಂಪಿ ಆಗ್ತೀನಿ ಅಂತ ಕನಸಿನಲ್ಲೂ ನೆನಸಿರಲಿಲ್ಲ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ.
Published by:Kavya V
First published: