ರೋಹಿಣಿ ಸಿಂಧೂರಿ ವಿಚಾರವಾಗಿ ವ್ಯಂಗ್ಯ: ಸಿದ್ದರಾಮಯ್ಯಗಾರು ಎಂದು ತೆಲುಗಿನಲ್ಲಿ ಚೇಡಿಸಿದ ಪ್ರತಾಪ್ ಸಿಂಹ!

'ಸಿದ್ದರಾಮಯ್ಯಗಾರು ಎಂದಿದ್ದಾನೆ ಪ್ರತಾಪ್, ತನಗೆ ತೆಲುಗು ಬರುತ್ತೆ ಎಂದು ತೋರಿಸುತ್ತಿದ್ದಾನೆ. ಬಹುವಚನದಲ್ಲಿ ಮಾತಾಡಿದ್ದಾನೆ ಪರ್ವಾಗಿಲ್ಲ'

ಸಿದ್ದರಾಮಯ್ಯ , ಪ್ರತಾಪ್​ ಸಿಂಹ

ಸಿದ್ದರಾಮಯ್ಯ , ಪ್ರತಾಪ್​ ಸಿಂಹ

  • Share this:
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರ ವರ್ಗಾವಣೆ ವಿಚಾರ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರೋಹಿಣಿ ಸಿಂಧೂರಿ ಪರ ವಹಿಸಿದ್ದಾರೆ ಎಂಬ ಸಂಸದ ಪ್ರತಾಪ್​ ಸಿಂಹ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು. ಪ್ರತಾಪ್​​ ಸಿಂಹ ಇನ್ನು ಅಪ್ರಬುದ್ಧರಾಗಿದ್ದಾರೆ, ಅದರಿಂದ ಅವರು ಇನ್ನೂ ಹೊರಬಂದಿಲ್ಲ. ಅಪ್ರಬುದ್ಧ ರಾಜಕಾರಣದಿಂದ ಹೊರಬರಬೇಕು ಎಂದು ಟಾಂಗ್​​​​ ಕೊಟ್ಟಿದ್ದಾರೆ. ಇನ್ನು ಸಿದ್ದರಾಮಯ್ಯಗಾರು ಎಂದಿದ್ದಾನೆ ಪ್ರತಾಪ್, ತನಗೆ ತೆಲುಗು ಬರುತ್ತೆ ಎಂದು ತೋರಿಸುತ್ತಿದ್ದಾನೆ. ಬಹುವಚನದಲ್ಲಿ ಮಾತಾಡಿದ್ದಾನೆ ಪರ್ವಾಗಿಲ್ಲ ಎಂದರು. ಆಂಧ್ರದವರಾದ ರೋಹಿಣಿಗೆ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಾಪ್​​​ ಸಿಂಹ ವ್ಯಂಗ್ಯವಾಗಿ ತೆಲುಗು ಬಳಕೆ ಮಾಡಿದ್ದರು.

ಭೂ ಮಾಫಿಯಾ ವಿರುದ್ಧ ತನಿಖೆಗೆ ಆದೇಶಿಸಿದ್ದರಿಂದಲೇ ಟ್ರಾನ್ಸ್​ಫರ್​ ಮಾಡಲಾಗಿದೆ ಎಂದು ಐಎಸ್​ ಅಧಿಕಾರಿ ರೋಹಿಣಿ ಅವರು ಶಾಸಕ ಸಾ.ರಾ.ಮಹೇಶ್​ ವಿರುದ್ಧ ಆರೋಪ ಮಾಡಿದ್ದರು. ರಾಜಕಾಲುವೆ ಮೇಲೆ ಶಾಸಕರು ಕಟ್ಟಡ ಕಟ್ಟಿದ್ದಾರೆ ಎಂದೂ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆರೋಪ ಮಾಡಿದ್ದ ತನಿಖೆ ಆಗಲಿ. ಅವರ ವರ್ಗಾವಣೆ ರಾಜಕೀಯ ಪ್ರೇರಿತವೇ ಎಂಬುದು ಬಯಲಾಗಲಿ. ಕಟ್ಟಡ ಕಟ್ಟಿದ್ದಾರಾ, ಇಲ್ಲವಾ ಎಂದು ದಾಖಲೆಗಳಿಂದ ಗೊತ್ತಾಗಲಿ. ಪ್ರಮಾಣಿಕ ತನಿಖೆಯಿಂದಷ್ಟೇ ಸತ್ಯ ಹೊರ ಬರಬೇಕಿದೆ ಎಂದರು.

ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆ.  KERC ಶಿಫಾರಸ್ಸಿನ ಮೇಲೆ 30 ಪೈಸೆ ಹೆಚ್ಚಳವಾಗಿದೆ. ಲಾಕ್‌ಡೌನ್ ಹಾಗೂ ಕೋವಿಡ್ ಸಂಕಷ್ಟದ ಮಧ್ಯೆ ಇದು ಹೊರೆಯಾಗಲಿದೆ. ಉದ್ಯೋಗ ಇಲ್ಲ, ದುಡಿಮೆ‌ ಇಲ್ಲದಿರುವಾಗ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ತೈಲ ಬೆಲೆ ಕೂಡ 30% ಹೆಚ್ಚಳವಾಗಿದೆ. ರಾಜ್ಯದ ಇತಿಹಾಸದಲ್ಲೇ ಇದು ಮೊದಲು. ಅಚ್ಚೇ ದಿನ್ ಆಯೇಗಾ ಎಂದು‌ ಹೇಳಿದ್ರು, ಈಗ ಎಲ್ಲವೂ ಬೆಲೆ ಹೆಚ್ಚಳ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಮೊಬೈಲ್ ಕೊಟ್ಟಿರುವುದರಿಂದಲೇ ರೇಪ್​​ಗಳು ಆಗುತ್ತಿವೆ: ಮಹಿಳಾ ಆಯೋಗದ ಸದಸ್ಯೆ ವಿವಾದ

ಪೆಟ್ರೋಲ್ ಬೆಲೆ 100 ರೂ. ದಾಟಿದೆ, ಡಿಸೆಲ್ ಬೆಲೆ 92 ರೂ. ಆಗಿದೆ. ಕೇಂದ್ರಕ್ಕೆ ಹೆಚ್ಚು ಬೆಲೆಗೆ ವಿದ್ಯುತ್ ಖರೀದಿ ಮಾಡಿ ಭ್ರಷ್ಟಾಚಾರಗೆ ಕಡಿವಾಣ ಹಾಕಿ ಸೋರಿಕೆ ತಡೆಗಟ್ಟಿದರೆ ಎಲ್ಲ‌ ಸರಿಯಾಗುತ್ತೆ ಎಂದರು. ಇನ್ನು ಪೆಟ್ರೋಲ್ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ ಮಾಡುವಂತೆ ಎಐಸಿಸಿ ಸೂಚಿಸಿದೆ. ನಾಳೆಯಿಂದ ಐದು ದಿನಗಳ ಕಾಲ ಪೆಟ್ರೋಲ್ ಬಂಕ್ ಮುಂದೆ ನಧರಣಿ ಮಾಡ್ತೇವೆ. ದೇಶಾದ್ಯಂತ ಈ ಪ್ರತಿಭಟನೆಯನ್ನ ಮಾಡ್ತೇವೆ ಎಂದು ತಿಳಿಸಿದರು.

ಇನ್ನು ಲಸಿಕೆಗಾಗಿ ಕಾಂಗ್ರೆಸ್​ ನೀಡಿದ್ದ 100 ಕೋಟಿ ಹಣವನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವ ಬಗ್ಗೆ ಅಸಮಾಧಾನ ಹೊರ ಹಾಕಿದರು. ವ್ಯಾಕ್ಸಿನ್ ಕೊಡುವುದು ಪಕ್ಷದ ಕಾರ್ಯಕ್ರಮವೇ, ಇದು ಪಕ್ಷದ ಕಾರ್ಯಕ್ರಮವಲ್ಲ. ನಿಮ್ಮ ಪಕ್ಷದ ಶಾಸಕರು ಕೊಡಲಿ ಬೇಡ ಅ‌ನ್ನುತ್ತೇವಾ, ಜಮೀರ್ ಅವರ ಹಣದಲ್ಲಿ ಕೊಡ್ತಿಲ್ವಾ, ನಾನು ನನ್ನ ಹಣದಲ್ಲಿ ಕೊಡ್ತಿಲ್ವಾ. ಇವರಿಂದ ನಾವು ಪಾಠ ಕಲಿಯಬೇಕಾ ಎಂದು ಕಿಡಿಕಾಡಿದರು.

ಸಿಎಂ ಯಡಿಯೂರಪ್ಪ ಬದಲಾವಣೆ ಮಾಡಿ ಎಂದು ನಾನು ಹೇಳಿಲ್ಲ. ಆದರೆ ಆ ರೀತಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದೆ. ನಾಯಕತ್ವ ಬದಲಾವಣೆ ಬಗ್ಗೆ ಅವರ ಶಾಸಕರೇ ಮಾತನಾಡುತ್ತಿದ್ದಾರೆ. ಬಸನಗೌಡ ಯತ್ನಾಳ್, ಯೋಗೇಶ್ವರ್, ವಿಶ್ವನಾಥ್ ವಿರುದ್ಧ ಯಾಕೆ ಕ್ರಮ ಆಗಿಲ್ಲ. ಹೈಕಮಾಂಡ್ ಪ್ರಬಲವಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಸವಾಲೆಸೆದರು. ಯಡಿಯೂರಪ್ಪ ಅತ್ಯಂತ ಕೆಟ್ಟ ಸಿಎಂ. ದುರ್ಬಲ‌ ಮುಖ್ಯಮಂತ್ರಿ, ದುರ್ಬಲ ಹೈಕಮಾಂಡ್ ಅನ್ನೋದು ಸರಿ ಎಂದು ಮಾತಿನಲ್ಲೇ ತಿವಿದರು. ಜನರಿಗೆ ತೊಂದರೆಯಾಗದಂತೆ ಅನ್​ಲಾಕ್​ ಮಾಡುವುದಕ್ಕೆ ಯಾವುದೇ ತಕರಾರಿಲ್ಲ ಎಂದಿದ್ದಾರೆ.
Published by:Kavya V
First published: