Coronavirus: ಛೇ ಎಂಥ ಕಾಲ.. ಅಮ್ಮ ಸತ್ರೂ ಬಾರದ ಮಗಳು.. ಹಿಂದುಪರಿಷತ್ ಕಾರ್ಯಕರ್ತರಿಂದಲೇ ಶವ ಸಂಸ್ಕಾರ!

ತನ್ನ ಮಕ್ಕಳು ಚೆನ್ನಾಗಿರಲಿ ಎಂದು ಕೇಳಿಕೊಳ್ಳುವ ಪೋಷಕರಿಗೆ ಕೊರೋನಾ ಬಂದರೆ ಮಕ್ಕಳು ಅವರಿಂದ ದೂರವಾಗುತ್ತಿದ್ದಾರೆ. ಇದೇ ರೀತಿ ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಇದನ್ನು ನೋಡಿದ ನಿಮಗೆ ಆ ಮಗಳ ಮೇಲೆ ಕೆಟ್ಟ ಕೋಪ ಬರುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಳಿಗೆ ಒಂದೇ ಮನೆ.. ಬಾಳೆಗೆ ಒಂದೇ ಕೊನೆ.. ಭೂಮಿಗೆ ದೈವ ಒಂದೆನೇ.. ತಾಯಿ(Mother). ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ.  ಕಣ್ಣಿಗೆ ಕಾಣುವ ದೇವರು ಅವಳು. ಈ ಕೊರೋನಾ(Corona) ಬಂದು ನಮ್ಮ ಜನರಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಮುಖ್ಯವಾಗಿ ಮನುಷ್ಯತ್ವವನ್ನೆ ಮರೆ ಮಾಚಿದೆ. ಹೌದು, ಯಾಕಪ್ಪ ಹೀಗೆ ಹೇಳುತ್ತಿದ್ದೇವೆ ಅಂತ ಅಂದುಕೊಂಡರ.. ಇದನ್ನು ಓದಿದ ಬಳಿಕ ನಿಮ್ಮ ಕಣ್ಣುಗಳು ತೇವವಾಗುತ್ತೆ. ಕೊರೋನಾದಿಂದ ಮೃತಪಟ್ಟ ಪೋಷಕರನ್ನು(Parents) ನೋಡಲು ಮಕ್ಕಳು ಬರುತ್ತಿಲ್ಲ. ಇದನೆಲ್ಲ ಕೊರೋನಾ ಬಂದಾಗಿನಿಂದಲೂ ಈ ರೀತಿಯ ಮನಕಲುಕುವ ಘಟನೆಗಳನ್ನು ನೋಡಿಕೊಂಡು ಬಂದಿದ್ದೇವೆ. ಇನ್ನೂ ಈ ಕಣ್ಣುಗಳಲ್ಲಿ ಏನೇನು ನೋಡಬೇಕೋ ದೇವರಿಗೆ ಗೊತ್ತು. ತನ್ನ ಮಕ್ಕಳು ಚೆನ್ನಾಗಿರಲಿ ಎಂದು ಕೇಳಿಕೊಳ್ಳುವ ಪೋಷಕರಿಗೆ ಕೊರೋನಾ ಬಂದರೆ ಮಕ್ಕಳು ಅವರಿಂದ ದೂರವಾಗುತ್ತಿದ್ದಾರೆ. ಇದೇ ರೀತಿ ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಇದನ್ನು ನೋಡಿದ ನಿಮಗೆ ಆ ಮಗಳO(Daughter) ಮೇಲೆ ಕೆಟ್ಟ ಕೋಪ ಬರುತ್ತೆ. ಯಾಕೆಂದರೆ ಆಕೆ ಮಾಡಿರುವ ಕೆಲಸ ಕೂಡ ಹಾಗೇ ಇದೆ. ಪ್ರಪಂಚದಲ್ಲಿ ಯಾವುದು ನಡೆಯಬಾರದು ಎಂದುಕೊಳ್ಳುತ್ತೆವೋ ಅದೇ ನಡೆಯುತ್ತಿದೆ.

ತಾಯಿ ಸತ್ತರೂ ನೋಡಲು ಬಾರದ ಮಗಳು!

ಮಹಾಮಾರಿ ಕೊರೊನಾ ಮೂರನೇ ಅಲೆ ರಾಜ್ಯದಲ್ಲಿ ಶುರುವಾಗಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಸೋಂಕು ಕಂಟ್ರೋಲ್​ ಮಾಡಲು ಸರ್ಕಾರ ಕೂಡ ಹರಸಾಹಸ ಪಡುತ್ತಿದೆ. ಇದರ ನಡುವೆ ಪ್ರತಿದಿನ ಸೋಂಕಿಗೆ ಬಲುಯಾಗುವವರ ಸಂಖ್ಯೆ ಕೂಡ ಏರುತ್ತಿದೆ. ಹೀಗೆ ಕೊವೀಡ್ ನಿಂದ ಮೃತಪಟ್ಟ ತಾಯಿಯನ್ನ ನೋಡಲು ಮಗಳು ಬಂದಿಲ್ಲ. ಒಂದೂವರೆ ದಿನ ಕಳೆದರೂ ತಾಯಿಯ ಅಂತಿಮ ದರ್ಶನಕ್ಕೆ ಮೃತ ತಾಯಿಯ ಮಗಳು ಬಂದಿದ್ದ. ಮಾನವೀಯ ಸಂಬಂಧಗಳನ್ನೂ ಕೊರೋನಾ ಕಿತ್ತುಕೊಂಡಿದೆ. ಇಲ್ಲ ಕೊರೋನಾ ಹೆಸರಿಗೆ ಮಾತ್ರ ಅನ್ನಿಸುತ್ತೆ. ಮನುಷ್ಯನ ನಿಜ ರೂಪವನ್ನು ಬಯಲಿಗೆಳೆಯಲೆಂದೇ ಈ ಕೊರೋನಾ ಬಂದಿದ್ಯಾ ಅನ್ನಿಸುತ್ತದೆ.

ಇದನ್ನು ಓದಿ: ಸರ್ಕಾರದ ನಿರ್ಧಾರದ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ

ಹಿಂದುಪರಿಷತ್​​ ಕಾರ್ಯಕರ್ತರಿಂದ ಶವ ಸಂಸ್ಕಾರ

ಮೂಲತಃ ಮಂಡ್ಯದವರಾಗಿದ್ದ 52 ವರ್ಷದ ಭಾಗ್ಯಲಕ್ಷ್ಮೀ ಕೋವಿಡ್​ನಿಂದ ಕೊನೆಯುಸಿರೆಳೆದಿದ್ದರು. ತಾಯಿ ಮೃತಪಟ್ಟಿರುವ ವಿಚಾರವನ್ನು ಅಧಿಕಾರಿಗಳು ಫೋನ್​ಮಾಡಿ ಮಗಳಿಗೆ ತಿಳಿಸಿದ್ದಾರೆ. ಆದರೆ, ಮಗಳು ಮಾತ್ರ ತಾಯಿಯನ್ನು ನೋಡಲು ಬಂದಿಲ್ಲ. ಮತ್ತೆ ಕರೆ ಮಾಡಿದರೆ, ಬರುತ್ತಿದ್ದೇನೆ ಎಂದು ಕಾಲ್​ ಕಟ್ ಮಾಡಿದ್ದಾರಂತೆ. ಹೀಗಾಗಿ ವಿಶ್ವ ಹಿಂದುಪರಿಷತ್ ಕಾರ್ಯಕರ್ತರು ಶವ ಸಂಸ್ಕಾರ ಮಾಡಲು ಮುಂದಾಗಿದ್ದು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಹೆಬ್ಬಾಳ ಚಿರಶಾಂತಿ ಧಾಮದಲ್ಲಿ ಭಾಗ್ಯಲಕ್ಷ್ಮೀ ಶವ ಇರಿಸಲಾಗಿದೆ. ಕೊನೆ ಸಮಯದಲ್ಲಿ ಮಗಳು ತಾಯಿಯ ಮುಖ ನೋಡಲಿ ಎಂದು ಕಾಯುತ್ತಿದ್ದಾರೆ. 9 ತಿಂಗಳು ಹೊತ್ತು, ಜೀವ ಕೊಟ್ಟ ತಾಯಿಯ ಮುಖವನ್ನು ಕೊನೆ ಬಾರಿ ನೋಡಲು ಬಾರದ ಮಗಳು ಇದ್ದರೆಷ್ಟು, ಹೋದರೆಷ್ಟು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.


ಇದನ್ನು ಓದಿ: ಬೆಳಗಾವಿಯಲ್ಲಿ ಲಸಿಕೆ ಪಡೆದ ಮೂರು‌ ಮಕ್ಕಳ ಸಾವು ಪ್ರಕರಣ; ವರದಿ ಕೇಳಿದ CM Bommai


ರಾಜ್ಯದಲ್ಲಿ ನಿನ್ನೆ 27 ಸಾವಿರ ಕೇಸ್

ರಾಜ್ಯದಲ್ಲಿ ನಿನ್ನೆ 27 ಸಾವಿರದ 156 ಮಂದಿಗೆ ವೈರಸ್ ವಕ್ಕರಿಸಿದೆ. ಕೊರೊನಾ ಹಾಟ್ಸ್ಪಾಟ್ ಆಗಿರೋ ಬೆಂಗಳೂರಿನಲ್ಲಿ ಇಂದು 15 ಸಾವಿರದ 947 ಮಂದಿಗೆ ಪಾಸಿಟಿವ್ ಕನ್ಫರ್ಮ್ ಆಗಿದೆ. ಅಲ್ದೆ, ರಾಜ್ಯದಲ್ಲಿ ಕೊರೊನಾಗೆ 14 ಮಂದಿ ಬಲಿಯಾಗಿದ್ದರೆ, ಐವರು ಬೆಂಗಳೂರಿನವರಾಗಿದ್ದಾರೆ. ಜೊತೆಗೆ ಈ ರೀತಿಯ ಮನಕಲುಕುವ ಘಟನೆಗಳು ಕೂಡ ಹೆಚ್ಚಾಗಿ ವರದಿಯಾಗುತ್ತಿದೆ.
Published by:Vasudeva M
First published: