• ಹೋಂ
  • »
  • ನ್ಯೂಸ್
  • »
  • state
  • »
  • Bengaluru Crime: ಬೆಂಗಳೂರಿನಲ್ಲಿ ಮತ್ತೆ Black Pulsar ಸದ್ದು, ಈ ಗಾಡಿ ಸರಗಳ್ಳರ ಫೇವರಿಟ್ ವಾಹನ ಆಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ!

Bengaluru Crime: ಬೆಂಗಳೂರಿನಲ್ಲಿ ಮತ್ತೆ Black Pulsar ಸದ್ದು, ಈ ಗಾಡಿ ಸರಗಳ್ಳರ ಫೇವರಿಟ್ ವಾಹನ ಆಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ!

ಕಪ್ಪು ಪಲ್ಸರ್ ಬೈಕ್

ಕಪ್ಪು ಪಲ್ಸರ್ ಬೈಕ್

ರಸ್ತೆ ಮೇಲೆ ಬ್ಲಾಕ್ ಪಲ್ಸರ್ ಗಾಡಿ ಕಂಡಿತು ಅಂದ್ರೆ ಹೆಣ್ಣುಮಕ್ಕಳು ತಮ್ಮ ಒಡವೆ ಬಗ್ಗೆ ಸ್ವಲ್ಪ ಜಾಸ್ತಿನೇ ಎಚ್ಚರಿಕೆ ವಹಿಸುತ್ತಾರೆ. ಯಾಕಂದ್ರೆ ಅನೇಕ ವರ್ಷಗಳಿಂದ ಚೈನ್ ಸ್ನಾಚರ್ಸ್​ ನೆಚ್ಚಿನ ಬೈಕ್ ಅಂದ್ರೆ ಅದು ಕಪ್ಪು ಬಣ್ಣದ ಬಜಾಜ್ ಪಲ್ಸರ್ ವಾಹನ. ಅದ್ಯಾಕೆ ಕಳ್ಳರಿಗೆ ಈ ಗಾಡಿಯೇ ಬೇಕು? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿ‌ಲ್ಲಿ ಮತ್ತೆ ಸರಗಳ್ಳರ ನೆಚ್ಚಿನ 220 ಬ್ಲಾಕ್ ಪಲ್ಸರ್ (Black Pulsar 220) ಬೈಕ್ ಸದ್ದು ಮಾಡ್ತಿದೆ..ಈ ನಡುವೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ನಗರದಲ್ಲಿ ಕೈಚಳಕ ತೋರಿಸ್ತಿದ್ದಾರೆ.. ಹೀಗೆ ಇವತ್ತು ಬೆಳಗ್ಗೆ ವಿಜಯನಗರ 2 ನೇ ಕ್ರಾಸ್ ನಲ್ಲಿ ವೃದ್ದೆಯ ಸರ ಕಸಿದು ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಸರಗಳ್ಳರು ಎಸ್ಕೇಪ್ ಆಗಿದ್ದಾರೆ.. ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಇಬ್ಬರು ಚೈನ್ ಸ್ನಾಚರ್ಸ್, ವೃದ್ದ ಮಹಿಳೆ ಇಂದಿರಮ್ಮ ಎಂಬುವರ  ಸರ ಕಸಿದು ಕಿತ್ತೊಯ್ದಿದ್ದಾರೆ.. ಸುಮಾರು 35 ಗ್ರಾಂ ಚಿನ್ನದ ಸರ ಎಂದು ಹೇಳಲಾಗಿದೆ.. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ..‌ ಈ ವೇಳೆ ಮಾತನಾಡಿರೋ ಇಂದಿರಮ್ಮ, ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಇಬ್ಬರು ಹೆಲ್ಮೆಟ್ ಧಾರಿಗಳು ಬಂದ್ರು..ಪಕ್ಕದ ಮನೆಗೆ ಹೋಗುತ್ತಾರೆಂದು ಭಾವಿಸಿದೆ..ಆದ್ರೆ ಬೈಕ್ ನಲ್ಲಿ ಕೆಳಗಿಳಿದ ಆಸಾಮಿ, ಸರ ಕಿತ್ತು ಬೈಕ್ ನಲ್ಲಿ ಹೋದ್ರು ಎಂದಿದ್ದಾರೆ...ಇನ್ನು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳರು ಕೈಚಳಕ ತೋರಿಸಿದ್ದಾರೆ‌.


ವಿಜಯನಗರದ ಬಳಿಕ ಕಾಡುಗೋಡಿ‌ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದೆ.. ಕುಂಬೇನ ಆಗ್ರಹಾರ ಗೇಟ್ ಬಳಿ ಘಟನೆ ನಡೆದಿದೆ..ಕೋಮಲ ಎಂಬ ಮಹಿಳೆ ಬಳಿ ೭೦ ಗ್ರಾಂ ಚಿನ್ನದ ಸರ್ ಕದ್ದು ಎಸ್ಕೇಪ್ ಆಗಿದ್ದಾರೆ‌... ಬೈಕ್ ನಲ್ಲಿ ಬಂದ ಮೂವರಿಂದ ಕೃತ್ಯ ನಡೆದಿದ್ದು, ರೇಷನ್ ಅಂಗಡಿಗೆ ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಕಿತ್ತು ಎಳೆದಾಡಿದ್ದಾರೆ..ಸರ ಕಸಿಯಲು ಮಹಿಳೆಯನ್ನ ರಸ್ತೆಯಲ್ಲಿ ಬೀಳಿಸಿದ್ದಾರೆ..ಇನ್ನು ಬ್ಲಾಕ್ ಪಲ್ಸರ್ ನಲ್ಲಿ ಬರೋರು ಇದೇ ಮೊದಲಲ್ಲ...ಕಳೆದ ಹದಿನೈದು ದಿನದ ಹಿಂದೆಯಷ್ಟೇ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಒಂದೇ ದಿನ ಒಂಭತ್ತು ಕಡೆ ಸರಗಳ್ಳತನವಾಗಿತ್ತು.. ಮುಖ್ಯಮಂತ್ರಿಗಳ ಕಾರ್ಯನಿಮಿತ್ತ ಬಂದೋಬಸ್ತ್ ನಲ್ಲಿದ್ದ ಪೊಲೀಸರನ್ನೆ ಯಾಮಾರಿಸಿ ರಾಜಾರೋಷವಾಗಿ ಸರಗಳ್ಳತನ ಮಾಡಿದ್ರು... ಒಂದು ಕೆಜಿಗೂ ಅಧಿಕ ಚಿನ್ನಾಭರಣ ಕಸಿದು ಪರಾರಿಯಾಗಿದ್ರು.


ಇದನ್ನೂ ಓದಿ: ಪೆಗಾಸಸ್ ಮೂಲಕ ಭಾರತದ ಪತ್ರಕರ್ತರು, ರಾಜಕಾರಣಿಗಳ ಫೋನ್ ಹ್ಯಾಕ್ ಮಾಡಲಾಗಿತ್ತಾ?


ಇನ್ನು ಕೊರೊನಾ ಕಾಲದಲ್ಲಿ ಅಪರಾಧ ಪ್ರಕರಣಗಳು ತಗ್ಗಿವೆ. ಸೈಬರ್​ ಕ್ರೈಂ ಜಾಸ್ತಿಯಾಗಿದೆಯಷ್ಟೇ ಅಷ್ಟೇ ಎಂದು ಬೆಂಗಳೂರು ಪೊಲೀಸರು ಮೈಮರೆತಂತೆ ಇರುವಾಗ ಸರಗಳ್ಳರು ನಾವಿದ್ದೇವೆ ಫೀಲ್ಡ್​​ನಲ್ಲಿ ಎಂದು ಸಾರಿದ್ದಾರೆ., ಎಲ್ಲಾ ಠಾಣಾ ಸಿಬ್ಬಂದಿ ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಚೆಕ್‌ಪೋಸ್ಟ್‌ಗಳಲ್ಲಿಯೂ ಅಲರ್ಟ್ ಆಗಿರುವಂತೆ ತಮ್ಮ ಪೊಲೀಸರಿಗೆ ಅಧಿಕಾರಿಗಳಿಗರ ತಿಳಿಸಿದ್ದಾರೆ..ಆದ್ರೂ ಸರಗಳ್ಳರು ತಮ್ಮ ಕೈಚಳಕ ತೋರಿಸ್ತಿದ್ದಾರೆ....ಬ್ಲಾಕ್ ಪಲ್ಸರ್ ಬೈಕ್ ಸರಗಳ್ಳರಿಗೆ ಬಹಳ ಉಪಯೋಗವಾಗುತ್ತೆ...ವೇಗ ಹಾಗೂ ಯಾವುದೇ ತಿರುವು ಇದ್ರೂ ಸುಲಭವಗಿ ಎಸ್ಕೇಪ್ ಆಗಬಹುದು....ಇದೇ ಕಾರಣಕ್ಕೆ ಚೈನ್ ಸ್ನಾಚರ್ಸ್, ಪಲ್ಸರ್ ಬೈಕ್ ಬಳಸ್ತಾರೆ...ಇದನ್ನ ಮೊದಲು ಬಳಸಿದ್ದೇ ಇರಾನಿ ಗ್ಯಾಂಗ್ ....ಆ ಬಳಿಕ ಬವೇರಿಯಾ ಗ್ಯಾಂಗ್ ಸಹ ಬಳಸಿತ್ತು..ನಂಬರ್ ಪ್ಲೇಟ್ ತೆಗೆದು ರಾಜಾರೋಷವಾಗಿ ಹೊರ ಹೊಲಯ ಭಾಗದಲ್ಲೇ ದುಷ್ಕೃತ್ಯ ಎಸಗ್ತಿದ್ರು...ಆದ್ರೀಗ ಅನ್ ಲಾಕ್ ಬೆನ್ನಲ್ಲೇ ಮತ್ತೆ ಸರಗಳ್ಳರು ಆಕ್ಟೀವ್ ಆಗಿದ್ದಾರೆ‌.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: