ಕುಮಾರಸ್ವಾಮಿಗೋಸ್ಕರ ಬಸ್ ಓಡಿಸಿದ್ದೆ, ಅವನು ಅದರ ಫಲ ಕೊಟ್ಟಿದ್ದಾನೆ: ಏಕವಚನದಲ್ಲಿ Zameer ತಿರುಗೇಟು

zameer v/s hd kumaraswamy: ಬಸ್​​ನ ಅವನಿಗೋಸ್ಕರ ಓಡಿಸಿದ್ದೇನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಎಂಎಲ್ ಎಗಳನ್ನು ರಾಜ್ಯಪಾಲರ ಬಳಿ ಕರೆದುಕೊಂಡು ಹೋದಾಗ ನಾನು ಬಸ್ಸು ಓಡಿಸಿದ್ದೆ. ಆದರೆ ಅದರ ಫಲವನ್ನು ಅವನು ಈಗಾಗಲೇ ನನಗೆ ಕೊಟ್ಟಿದ್ದಾನೆ.

ಶಾಸಕ ಜಮೀರ್​

ಶಾಸಕ ಜಮೀರ್​

  • Share this:
ಬೆಂಗಳೂರು: JDS ನಾಯಕ ಎಚ್​.ಡಿ.ಕುಮಾರಸ್ವಾಮಿ (hd kumaraswamy) ಹಾಗೂ ಜೆಡಿಎಸ್​ ತೊರೆದು ಕಾಂಗ್ರೆಸ್​​ನಿಂದ ಶಾಸಕರಾಗಿರುವ ಜಮೀರ್​ ಅಹ್ಮದ್​ ಖಾನ್​( zameer ahmed khan) ಮಧ್ಯೆ ವಾಕ್ಸಮರ ಮುಂದುವರೆದಿದೆ. ಇಂದು ಉಪ ಚುನವಣಾ(By election) ಪ್ರಚಾರದ ವೇಳೆ ಜಮೀರ್​ ವಿರುದ್ಧ ಎಚ್​ಡಿಕೆ ವಾಗ್ದಾಳಿ ನಡೆಸಿದ್ದರು. ಬಸ್​ ಒರೆಸುತ್ತಿದ್ದ ಹುಡುಗನನ್ನು ಕರೆತಂದು ಶಾಸಕ ಮಾಡಿದೆ. ಆಗ ಸಿದ್ದರಾಮಯ್ಯ(siddaramaiah) ಎಲ್ಲಿದ್ದರು ಎಂದು ಪ್ರಶ್ನಿಸಿದ್ದರು. ಇದಕ್ಕೆ ಜಮೀರ್​ ತಿರುಗೇಟು ನೀಡಿದ್ದು, ಬಸ್​ ಒರೆಸುವವನು ಅಲ್ಲ, ನಾನೊಬ್ಬ ಬಸ್ ಆಪರೇಟರ್ ಆಗಿದ್ದೆ. ಕುಮಾರಸ್ವಾಮಿ ಅವರಿಗೆ ಕುಳಿತು ಕೊಳ್ಳಲು ಜಾಗ ಇರಲಿಲ್ಲ. ಇದೇ ಟ್ರಾನ್ಪೋರ್ಟ್ ಆಪರೇಟರ್ ಆಗ ಅವನಿಗೆ ಜಾಗ ಕೊಟ್ಟಿದ್ದು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಬಸ್​​ನ ಅವನಿಗೋಸ್ಕರ ಓಡಿಸಿದ್ದೇನೆ

ನಾನು ಇಲ್ಲ ಅಂದಿದ್ರೆ, ಕುಮಾರಸ್ವಾಮಿನೂ ಇಲ್ಲಿ ಇರುತ್ತಿರಲಿಲ್ಲ. ಬಸ್​​ನ ಅವನಿಗೋಸ್ಕರ ಓಡಿಸಿದ್ದೇನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಎಂಎಲ್ ಎಗಳನ್ನು ರಾಜ್ಯಪಾಲರ ಬಳಿ ಕರೆದುಕೊಂಡು ಹೋದಾಗ ನಾನು ಬಸ್ಸು ಓಡಿಸಿದ್ದೆ. ಆದರೆ ಅದರ ಫಲವನ್ನು ಅವನು ಈಗಾಗಲೇ ನನಗೆ ಕೊಟ್ಟಿದ್ದಾನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಏಕವಚನದಲ್ಲೇ ಜಮ್ಮೀರ್ ಕಿಡಿಕಾರಿದರು. ಬೈ ಎಲೆಕ್ಷನ್​ನಲ್ಲಿ ಯಾಕೆ ಅಲ್ಪಸಂಖ್ಯಾತರ ಮೇಲೆ ಇವರಿಗೆ ಪ್ರೀತಿ‌? ಸಾರ್ವತ್ರಿಕ ಚುನಾವಣೆಯಲ್ಲಿ ಯಾಕೆ ಇವರಿಗೆ ಅಲ್ಪಸಂಖ್ಯಾತರು ನೆನಪು ಆಗಲ್ವಾ..? ರಾಮನಗರ ಬೈ ಎಲೆಕ್ಸನ್ ನಲ್ಲಿ ಯಾಕೆ ಅಲ್ಪಸಂಖ್ಯಾತರಿಗೆ ಬಿಟ್ಟು ಕೊಟ್ಡಿಲ್ಲ. ಯಾಕೆ ಅವರ ಧರ್ಮಪತ್ನಿ ಅನಿತಾಕ್ಕನ್ನ ನಿಲ್ಲಿಸಿದ್ರು..? ಅವರ ಭದ್ರ ಕೋಟೆಯಲ್ಲಿ ಅಲ್ಪಸಂಖ್ಯಾತರಿಗೆ ಏಕೆ ಜಾಗವಿಲ್ಲ ಎಂದು ಪ್ರಶ್ನಿಸಿದರು.

ದಳಪತಿಗಳು ಸೂಟ್ಕೇಸ್​​​ ತಗೋತ್ತಾರೆ

ಆದರೆ ಎಲ್ಲಿ ಸೂಟ್ಕೇಸ್ ಸಿಗ್ತಾ ಇದೆ ಅಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಗಳು ನಿಲ್ಲಿಸುತ್ತಾರೆ. ಬಿಜೆಪಿಗೆ ಲಾಭ ಮಾಡಲು ದೇವೇಗೌಡರು, ಕುಮಾರಸ್ವಾಮಿ ಠಿಕಾಣಿ ಹಾಕಿದ್ದಾರೆ ಎಂದು ಜಮೀರ್​ ಆರೋಪಿಸಿದರು. ಇಲ್ಲಿ ಆಲ್ ರೆಡಿ ಸೂಟ್ಕೇಸ್ ಬಂದ್ಬಿಟ್ಡಿದೆ, ಆದರೆ ಹಾನಗಲ್ ಗೆ ಇನ್ನೂ ಸೂಟ್ಕೇಸ್ ರೀಚ್ ಆಗಿಲ್ಲ. ಇವಾಗ ಸಾಯಾಂಕಾಲ ರೀಚ್ ಆದರೆ, ನಾಳೆ ಅಲ್ಲಿಗೆ ಹೋಗ್ತಾರೆ ಎಂದರು.

ಕಣ್ಣೀರು ಹಾಕಿ ಕರೆದಿದ್ದಕ್ಕೆ ಪ್ರಚಾರಕ್ಕೆ ಬಂದಿದ್ದೀನಿ

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರ ನಿರ್ಲಕ್ಷ್ಯ ಮಾಡಿರೋ ಪಟ್ಡಿ ಪ್ರದರ್ಶಿಸಿ ಜಮೀರ್​ ಆಕ್ರೋಶ ವ್ಯಕ್ತಪಡಿಸಿದರು. ಕೆಲವರಿಗೆ ಟಿಕೆಟ್ ಕೊಡಿಸಿ, ಅವರನ್ನು ಬೀದಿಯಲ್ಲಿ ನಿಲ್ಲಸಿದ್ದಾರೆ. ಆದ್ರೆ ಇದೇ ಕುಮಾರಸ್ವಾಮಿ ಇದೀಗ ಅವರ ಪುತ್ರನನ್ನು ಸೋಲಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಅಲ್ಪಸಂಖ್ಯಾತ ಅಭ್ಯರ್ಥಿ ಯನ್ನು ಹಾಕಿದ್ದಾರೆ. ಇಡಿ ದಾಳಿಯಿಂದ ನಾನು ಪ್ರಚಾರದಿಂದ ದೂರ ಉಳಿದಿದ್ದೆ. ಆದ್ರೆ ಸಿದ್ದರಾಮಯ್ಯ ಸೇರಿದಂತೆ ಅನೇಕರು ಮನವಿ ಮಾಡಿದ್ದರು. ಜಮೀರ್ ಅಹ್ಮದ್ ಬರದೇ ಇದ್ರೆ ಕಷ್ಟವಾಗುತ್ತೆ ಅಂತ ಅಶೋಕ ಮನಗೂಳಿ ಕಣ್ಣೀರು ಹಾಕಿದ್ರು. ಅದಕ್ಕಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಈ ದರಿದ್ರ ಸರ್ಕಾರ ಬರಲು ಸಿದ್ದರಾಮಯ್ಯನೇ ಕಾರಣಿಭೂತ : HD Kumaraswamy ತೀವ್ರ ವಾಗ್ದಾಳಿ

ಉದ್ಘಾಟನೆಗೆ ಬಾರದ ಮೊದಲ ಸಿಎಂ ಕುಮಾರಸ್ವಾಮಿ

ಕರ್ನಾಟಕದಲ್ಲಿ ಹಜ್ ಯಾತ್ರಿಗಳ ಉದ್ಘಾಟನೆಗೆ ಬಾರದ ಮೊದಲ ಸಿಎಂ ಕುಮಾರಸ್ವಾಮಿ ಎಂದು ಆರೋಪಿಸಿದರು. ಬಿಜೆಪಿಯ ಸಿಎಂಗಳು ಕೂಡಾ ಹಜ್ ಉದ್ಘಾಟನೆಗೆ ಬಂದಿದ್ದರು. ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದ್ರು. ಆದರೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಬ್ಯಾಂಕ್ವೇಟ್ ಹಾಲ್ ನಲ್ಲಿ ಮಾಡಬಾರದು ಅಂತ ಆದೇಶ ಹೊರಡಿಸಿದ್ದರು. ಟಿಪ್ಪು ಜಯಂತಿಗೆ ಬರ್ತೇನೆ ಅಂತ ಹೇಳಿ ಕುಮಾರಸ್ವಾಮಿ ಬರಲಿಲ್ಲ. ಕಾಂಗ್ರೆಸ್ ಗಿಂತ ಹೆಚ್ಚಾಗಿ ಜನರು ನನ್ನ ಬೆಳೆಸಿದ್ದಾರೆ. ಜನರು ನನ್ನ ಮಂತ್ರಿಯಾಗಿ ನೋಡಬೇಕು ಅಂತ ಭಯಸಿದ್ದರು. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಡೆಸಿದ ಸರ್ವೆಯಲ್ಲಿ ಜನರು ಭಯಸಿದ್ದರು. ಜನರ ಆಸೆಯಿಂದ ನಾನು ಮಂತ್ರಿಯಾದೆ ಎಂದರು.

ಈಗ ಬೊಮ್ಮಾಯಿ ಅವರು ರಕ್ಷಣೆ ಮಾಡಲಿ

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧವೂ ವಾಗ್ದಾಳಿ ನಡೆಸಿದ ಜಮೀರ್​, ಅಲ್ಪಸಂಖ್ಯಾತ ರನ್ನು ರಕ್ಷಣೆ ಮಾಡೋದು ಸಿದ್ದರಾಮಯ್ಯರ ಕೆಲಸ ಅಲ್ಲ. ಅದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರದ್ದು‌. ಯಡಿಯೂರಪ್ಪ ಅಲ್ಪಸಂಖ್ಯಾತ ವಿರೋಧಿ ಅಲ್ಲ ಅಂದಿದ್ದಾರೆ. ಯಾವುದೇ ಮುಖ್ಯಮಂತ್ರಿ ಆದರೂ ಎಲ್ಲ ಸಮುದಾಯದ ರಕ್ಷಣೆ ಮಾಡೋದು ಅವರ ಕರ್ತವ್ಯ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವ್ರು ಅಲ್ಪಸಂಖ್ಯಾತ ರಿಗೆ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ.ಇವಾಗ ಮುಖ್ಯಮಂತ್ರಿ ಆಗಿರುವ ಬೊಮ್ಮಾಯಿ ಅವ್ರು ನಮ್ಮ ರಕ್ಷಣೆ ಮಾಡಲಿ ಎಂದು ಸವಾಲೆಸೆದರು.
Published by:Kavya V
First published: