Karnataka New CM: ಸಿಎಂ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ಹೆಸರು ಫೈನಲ್? ಸುಳಿವು ನೀಡಿದ ವಿಡಿಯೋ..!

Arvind Bellad ಬಿಜೆಪಿ ಹೈಕಮಾಂಡ್​ ಎದುರು ತಾನು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹನೂ ಎಂಬುವುದನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಿದೆ ಮೂಲಗಳು. ಅಚ್ಚರಿಯ ಹೆಸರನ್ನು ಹೈಕಮಾಂಡ್ ಘೋಷಿಸುವ ಧೈರ್ಯ ಮಾಡಿದೆ.

ವೈರಲ್​​ ವಿಡಿಯೋದಲ್ಲಿ ಬೆಲ್ಲದ್​​

ವೈರಲ್​​ ವಿಡಿಯೋದಲ್ಲಿ ಬೆಲ್ಲದ್​​

  • Share this:
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಹೆಸರನ್ನು ಘೋಷಿಸಲು ಕೆಲವೇ ಗಂಟೆಗಳ ಬಾಕಿ ಇವೆ. ಈಗಾಗಲೇ ದೆಹಲಿ ನಾಯಕರು ಬೆಂಗಳೂರು ತಲುಪಿದ್ದಾರೆ. ವೀಕ್ಷಕರಾಗಿ ಆಗಮಿಸಿರುವ ಧರ್ಮೇಂದ್ರ ಪ್ರಧಾನ್​ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಸಿಎಂ ಸ್ಥಾನಕ್ಕೆ ಹೆಸರು ಫೈನಲ್​ ಮಾಡುತ್ತೇನೆ ಎಂದು ಬಿಜೆಪಿ ಮಾಧ್ಯಮಗಳಿಗೆ ಹೇಳುತ್ತಿದೆ. ಆದರೆ ಮೂಲಗಳ ಪ್ರಕಾರ ಮುಖ್ಯಮಂತ್ರಿ ಸ್ಥಾನದಲ್ಲಿ ಯಾರ ಕೂರಬೇಕು ಎನ್ನುವುದನ್ನು ಈಗಾಗಲೇ ಹೈಕಮಾಂಡ್​ ತೀರ್ಮಾನ ಮಾಡಿದ್ದು, ಶಾಸಕಾಂಗ ಸಭೆ ಕೇವಲ ಔಪಚಾರಿಕ ಅಷ್ಟೇ ಎನ್ನಲಾಗುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಒಬ್ಬ ನಾಯಕನ ಬೆಂಬಲಿಗರು ನಮ್ಮ ನಾಯಕನೇ ಮುಂದಿನ ಸಿಎಂ ಎಂದು ವಿಡಿಯೋಗಳನ್ನು ಮಾಡಿ ಸೋಷಿಯಲ್​ ಮೀಡಿಯಾಗಳಲ್ಲಿ ಹರಿಬಿಡುತ್ತಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಶಾಸಕ ಅರವಿಂದ್​ ಬೆಲ್ಲದ್​ ಹೆಸರು ಫೈನಲ್​ ಆಗಿದೆಯಂತೆ. ಈ ಬಗ್ಗೆ ಅವರ ಬೆಂಬಲಿಗರಿಗೆ ಈಗಾಗಲೇ ಸುಳಿವು ಸಿಕ್ಕಿದ್ದು, ಸಂಭ್ರಮಾಚರಣೆ ಮುಗಿಲು ಮುಟ್ಟಿದೆ ಎನ್ನಲಾಗುತ್ತಿದೆ. ಸಿಎಂ ಸ್ಥಾನ ಸಿಗುವುದು ಖಚಿತವಾಗಿರುದರಿಂದಲೇ ಬೆಂಬಲಿಗರು ಪಿಆರ್​ ಕೆಲಸವನ್ನು ನಡೆಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಗುಡ್​ ಪಬ್ಲಿಸಿಟಿ, ಪಾಸಿಟಿವ್​ ಇಮೇಜ್​ಗಾಗಿ ನಿಯೋಜಿತ ಸಿಬ್ಬಂದಿ ಮುಂದಿನ ಸಿಎಂ ಬೆಲ್ಲದ್​ ಎಂಬ ಫೋಟೋಗಳು, ವಿಡಿಯೋಗಳನ್ನು ಮಾಡಿ ಹರಿ ಬಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ನಮ್ ಬೆಲ್ಲದ್, ನಮ್ ಮುಖ್ಯಮಂತ್ರಿ ಎಂದು ಇದೆ. ಇದನ್ನು ಶಾಸಕರ ಆಪ್ತರೇ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾವುಕ ಕ್ಷಣ..ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಲೇ ಕಾವೇರಿ ನಿವಾಸಕ್ಕೆ ದೌಡಾಯಿಸಿದ ಬಿಎಸ್​ವೈ ಕುಟುಂಬ!

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಅರವಿಂದ್​ ಬೆಲ್ಲದ್​​​ ಮಾಧ್ಯಮಗಳಲ್ಲಿ ಅಷ್ಟೇನು ಪ್ರಸಿದ್ಧರಲ್ಲರಿದ್ದರೂ ಬಿಜೆಪಿ ಹೈಕಮಾಂಡ್​ ಎದುರು ತಾನು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹನೂ ಎಂಬುವುದನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಿದೆ ಮೂಲಗಳು. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು ಜಾತಿ, ಮತ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಅಚ್ಚರಿಯ ಹೆಸರನ್ನು ಹೈಕಮಾಂಡ್ ಘೋಷಿಸುವ ಧೈರ್ಯ ಮಾಡಿದೆ. ಕ್ಲೀನ್​ ಇಮೇಜ್​​ ಹೊಂದಿರುವ ಯುವ ನಾಯಕ ಅರವಿಂದ್​ ಬೆಲ್ಲದ್​ ಹೆಸರು ಬಹುತೇಕ ಫೈನಲ್​ ಆಗಿದೆ ಎನ್ನಲಾಗುತ್ತಿದೆ. ಇಂದು ಸಂಜೆ ಬಿಜೆಪಿ ನಾಯಕರು ಘೋಷಿಸುವುದಷ್ಟೇ ಬಾಕಿ ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಹಿರಿಯ ನಾಯಕ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ ಅರವಿಂದ್ RSS ಬೆಂಬಲ ಹೊಂದಿರುವ ಯುವ ರಾಜಕಾರಣಿ. ಎರಡು ಬಾರಿ ಶಾಸಕರಾಗಿರುವ ಅರವಿಂದ್ ಬೆಲ್ಲದ್ ಅವರು ಹುಬ್ಬಳ್ಳಿ -ಗದಗ ಭಾಗದಲ್ಲಿ ತಕ್ಕಮಟ್ಟಿನ ಜನಪ್ರಿಯತೆ ಹೊಂದಿದ್ದಾರೆ.  ಉತ್ತರ ಕರ್ನಾಟಕ ಭಾಗದ ಎರಡನೇ ಪೀಳಿಗೆಯ ನೇತಾರ ಎಂದು ಬಿಂಬಿಸಲಾಗುತ್ತಿದೆ. ಅಚ್ಚರಿಯ ಹೆಸರಾಗಿ ಬೆಲ್ಲದ್ ಹೆಸರು ಸಿಎಂ ರೇಸ್ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಈ ಬಾರಿ ಕ್ಲೀನ್ ಇಮೇಜ್ ಇರುವ ನಾಯಕರ ಆಯ್ಕೆಗೆ ಹೆಚ್ಚಿನ ಒತ್ತು ನೀಡಿರುವ ಹೈಕಮಾಂಡ್  ಪ್ರಾದೇಶಿಕತೆ, ಜಾತಿ ಕೋಟಾ, ಮತದಾರರ ನಾಡಿ ಮಿಡಿತದ ಆಧಾರ ಮೇಲೆ ಬೆಲ್ಲದ್ ಅವರಿಗೆ ಮಣೆ ಹಾಕಿದೆ ಎನ್ನಲಾಗುತ್ತಿದೆ.
Published by:Kavya V
First published: