ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್​ ಮಹಿಳಾ ಸಮಾವೇಶ: ಪಕ್ಷದ ಏಕೈಕ ಶಾಸಕಿ ಅನಿತಾ ಕುಮಾರಸ್ವಾಮಿ ಗೈರು

ರಾಜ್ಯದಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಿದ್ದೇವೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲೂ ಮೀಸಲಾತಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು. 

ಶಾಸಕಿ ಅನಿತಾ ಕುಮಾರಸ್ವಾಮಿ

ಶಾಸಕಿ ಅನಿತಾ ಕುಮಾರಸ್ವಾಮಿ

 • Share this:
  ಬೆಂಗಳೂರು (ಸೆ. 2): ಪಕ್ಷದ ಬಲವರ್ಧನೆಗಾಗಿ, ಮಹಿಳಾ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಲು ದೇವೇಗೌಡ ನೇತೃತ್ವದಲ್ಲಿ ಇಂದು ಬೆಂಗಳೂರು ನಗರದ ಜೆಡಿಎಸ್​ ಮಹಿಳಾ ಸಮಾವೇಶವನ್ನು ನಡೆಸಲಾಗುತ್ತಿದೆ. ಜೆಡಿಎಸ್​ ವರಿಷ್ಠ ದೇವೇಗೌಡ ಅವರ ನೇತೃತ್ವದಲ್ಲಿ ನಗರದ ಜೆಪಿ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಕ್ಷದ ಏಕೈಕ ಮಹಿಳಾ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಪಕ್ಷದ ಏಕೈಕ ಮಹಿಳಾ ಶಾಸಕರಾಗಿರುವ ಅನಿತಾ ಕುಮಾರಸ್ವಾಮಿ ಗೈರಿನಲ್ಲಿ ಉಳಿದ ಮಹಿಳಾ ಕಾರ್ಯಕರ್ತರು ಉತ್ಸಾಹದಿಂದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಸಭೆಗೆ ಮಳೆರಾಯನ ಅಡ್ಡಿ ನಡುವೆಯೂ 88ರ ಇಳಿ ವಯಸ್ಸಿನಲ್ಲೂ ದೇವೇಗೌಡ ಅವರು, ಉತ್ಸಾಹದಿಂದ ಮಾತನಾಡಿ ಗಮನಸೆಳೆದರು.

  ಮಹಿಳೆಯರಿಗೆ ಟಿಕೆಟ್​​

  ಈ ವೇಳೆ ಮಾತನಾಡಿದ ಜೆಡಿಎಸ್​ ವರಿಷ್ಠ ದೇವೇಗೌಡ, 28 ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಪಾಲಿಕೆ ಚುನಾವಣೆಯಲ್ಲಿ ಕಣಕ್ಕೆ ಇಳಿಸಲಾಗುವುದು.  ಇದರಲ್ಲಿ ಕನಿಷ್ಟ 9 ಮಹಿಳೆಯರಿಗೆ ಟಿಕೆಟ್ ನೀಡುತ್ತೇವೆ. ಮಹಿಳೆಯರು ಎಷ್ಟಾದರೂ ಮತ ಪಡೆಯಲಿ ಈ ಬಗ್ಗೆ ಚಿಂತೆ ಇಲ್ಲ. ಮಹಿಳೆಯರನ್ನು ಪ್ರೋತ್ಸಾಹಿಸುವುದು ನಮ್ಮ ಮುಖ್ಯ ಉದ್ದೇಶ.. ಮುಂದೆ ಅವರೇ ಕ್ಷೇತ್ರದಲ್ಲಿ ಬೆಳೆಯುತ್ತಾರೆ. ಹೀಗಾಗಿ ಮಹಿಳೆಯರು ವಿಧಾನಸಭೆಗೆ ಸ್ಪರ್ಧಿಸಲು ಮುಂದಾಗಬೇಲು. ಅವರಿಗೆ ನಾನು ಟಿಕೆಟ್ ನೀಡುತ್ತೇನೆ. ಮಹಿಳಾ ಕಾರ್ಯಕರ್ತರು ಹಣವಿಲ್ಲ‌ ಎಂದು ಸುಮ್ಮನೆ ಹಿಂಜರಿಕೆ ಬೇಡ. ಪಕ್ಷ ನಿಮ್ಮ ಪರ ಕೆಲಸ ಮಾಡಲಿದೆ ಎಂಬ ಭರವಸೆ ನೀಡಿದರು.

  ಮಹಿಳಾ ಮೀಸಲಾತಿ ನೀಡಿದ್ದೇವೆ

  ಇದೇ ವೇಳೆ ಮಹಿಳಾ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿದ ಅವರು, ನಾನು ಕೂಡ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೆ. ನಂತರ ರಾಜ್ಯದ ಮುಖ್ಯಮಂತ್ರಿಯಾದೆ. ರಾಜ್ಯದಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಿದ್ದೇವೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲೂ ಮೀಸಲಾತಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.

  ಮಹಿಳೆಯರಿಗೆ ಉತ್ತಮ ಯೋಜನೆ

  ಪಕ್ಷದ ರಾಜ್ಯಾಧ್ಯಕ್ಷ ಎಚ್​ಕೆ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಮಹಿಳೆಯರು, ಬಡವರ ಬಗ್ಗೆ ಕಾಳಜಿ ಇಲ್ಲ. ರಾಷ್ಟ್ರಮಟ್ಟದಲ್ಲಿ ಇಂದು ಕರ್ನಾಟಕ ಸುರಕ್ಷತೆ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಕುಮಾರಸ್ವಾಮಿ ನೇತೃತ್ವದ  ನಮ್ಮ ಸರ್ಕಾರ ಕೇವಲ 14 ತಿಂಗಳಿದ್ದರೂ, ಕಾನೂನು ವ್ಯವಸ್ಥೆ ಸದೃಢವಾಗಿತ್ತು. ಕುಮಾರಸ್ವಾಮಿ ಮಹಿಳೆಯರಿಗಾಗಿ ಅನೇಕ ಉತ್ತಮ ಯೋಜನೆ ತಂದರು. ಬಡವರ ಬಂಧು ಯೋಜನೆ ಮೂಲಕ ಬೀದಿ ಬದಿ ವ್ಯಾಪಾರ ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದರು ಎಂದು ತಮ್ಮ ಕಾರ್ಯಕ್ರಮದ ಯೋಜನೆ ಕುರಿತು ತಿಳಿಸಿದರು.

  ಇದನ್ನು ಓದಿ: ತೆರಿಗೆ ಸಂಗ್ರಹಕ್ಕೆ ಬೆಲೆ ಏರಿಕೆ ಅನಿವಾರ್ಯ; ಕೇಂದ್ರದ ನಿರ್ಧಾರ ಸಮರ್ಥಿಸಿಕೊಂಡ ರಾಜ್ಯ ಉಸ್ತುವಾರಿ ಅರುಣ್​ಸಿಂಗ್​

  ಬೂತ್​ಮಟ್ಟದಲ್ಲೂ ಅವರಿಗೆ ಪ್ರಾಮುಖ್ಯತೆ

  ಇನ್ನು ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ  ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂಬ ಸಂಕಲ್ಪಕ್ಕೆ ಮುಂದಾಗಿದ್ದೇವೆ. ಪ್ರತಿ ಬೂತ್​ ಮಟ್ಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನವನ್ನು ಅವರಿಗೆ ಮೀಸಲಿಡಲು ಮುಂದಾಗಿದೆ. ಮ ಮಹಿಳೆಯರು ಕೂಡ ಹೆಚ್ಚು ಉತ್ಸಾಹದಿಂದ ಕೂಡ ಭಾಗಿಯಾಬೇಕು ಎಂದು ಕರೆ ನೀಡಿದರು.

  ಸಾಮಾಜಿಕ ಅಂತರ ಮರೆತ ಕಾರ್ಯಕರ್ತರು

  ಇನ್ನು ಸಮಾವೇಶದಲ್ಲಿ ಮಹಿಳೆಯರು ಸಮಾಜಿಕ ಅಂತರ ಮರೆತು ಭಾಗಿಯಾಗಿದ್ದರು. ಕೋವಿಡ್​ ಆತಂಕ ಮರೆತ ಕಾರ್ಯಕರ್ತರು ಮಾಸ್ಕ್​ ಮರೆತು, ಗುಂಪುಗೂಡಿ ಅಲ್ಲಲ್ಲಿ ಚರ್ಚೆ ನಡೆಸುತ್ತಿರುವ ದೃಶ್ಯ ಕಂಡು ಬಂದಿತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: