Acid Attack: ಸರ್ಕಾರದಿಂದಲೇ ಸಂತ್ರಸ್ತ ಯುವತಿಗೆ ಚಿಕಿತ್ಸೆ, ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ: ಸಚಿವ ಸುಧಾಕರ್
ಯುವತಿ ದೇಹ ಶೇ.35ರಷ್ಟು ಬರ್ನ್ ಆಗಿದ್ದು, ಪರಿಸ್ಥಿತಿ ಸ್ವಲ್ಪ ಕ್ಲಿಷ್ಟವಾಗಿದೆ. ಆದರೂ ವೈದ್ಯರು ಭರವಸೆ ನೀಡಿದ್ದಾರೆ . ಆಕೆ ಸಂಪೂರ್ಣ ಗುಣಮುಖರಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ ಎಂದರು.
Bengaluru Acid Case: ಆಸಿಡ್ ದಾಳಿಗೆ ಒಳಗಾಗಿರುವ ಸಂತ್ರಸ್ತೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ (St Johns Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Minister Dr K Sudhakar), ಪೊಲೀಸ್ ಕಮಿಷನರ್ ಕಮಲ್ ಪಂತ್ (Kamal Pant), ಜೆಡಿಎಸ್ ನಾಯಕ ಶರವಣ (JDS Leader Saravana) ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದರು. ಯುವತಿಯ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ಯುವತಿ ದೇಹ ಶೇ.35ರಷ್ಟು ಬರ್ನ್ ಆಗಿದ್ದು, ಪರಿಸ್ಥಿತಿ ಸ್ವಲ್ಪ ಕ್ಲಿಷ್ಟವಾಗಿದೆ. ಆದರೂ ವೈದ್ಯರು ಭರವಸೆ ನೀಡಿದ್ದಾರೆ . ಆಕೆ ಸಂಪೂರ್ಣ ಗುಣಮುಖರಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ ಎಂದರು.
ಯುವತಿಯ ಭವಿಷ್ಯ ರೂಪಿಸೋ ನಿಟ್ಟಿನಲ್ಲಿ ಆಕೆಗೆ ಸರ್ಕಾರಿ ಉದ್ಯೋಗ ಕೊಡುವಂತಹದ್ದು ಆಗಬೇಕು. ಆ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಬರ್ನ್ಸ್ ವಿಚಾರವಾಗಿ ನಾವು ಒಂದೆರಡು ದಿನದಲ್ಲಿ ರಿಕವರಿ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.
ಬಹಳ ಎಚ್ಚರಿಕೆಯಿಂದ ನಾವು ಚಿಕಿತ್ಸೆ ನೀಡಬೇಕು. ಒಂದು ವಾರದಲ್ಲಿ ಚೇತರಿಕೆ ಬಗ್ಗೆ ತಿಳಿದು ಬರುತ್ತವೆ. ಪೂರ್ಣ ಪ್ರಮಾಣದ ಚೇತರಿಕೆ ಕಾಣಲು ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಸರ್ಕಾರದಿಂದ 5 ಲಕ್ಷ ರೂಗಳ ಪರಿಹಾರ ನೀಡಲಾಗುತ್ತದೆ. ಯುವತಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.
ಯುವತಿ 3 ದಿನಗಳ ಹಿಂದೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಶೇಕಡ 36 ರಷ್ಟು ದೇಹದ ಹಲವು ಭಾಗಗಳು ಸುಟ್ಟಿದೆ. ಸರಿ ಸುಮಾರು ಚಿಕಿತ್ಸೆ 2 ತಿಂಗಳು ನಡೆಯಬೇಕಾಗುತ್ತದೆ. ಸ್ಕಿನ್ ಬ್ಯಾಂಕ್ ನಿಂದ ಸ್ಕಿನ್ ತರಿಸಿ ಸರ್ಜರಿ ನಡೆಸಬೇಕಿದೆ. ಸಾಕಷ್ಟು ಸರ್ಜರಿಗಳ ಅಗತ್ಯವಿದೆ. ಆಸಿಡ್ ದಾಳಿ ಆಗಿರೋದ್ರಿಂದ ದೇಹದಲ್ಲಿ ಡೀಪ್ ಗಾಯಗಳಾಗಿವೆ. ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ವೈದ್ಯರ ತಂಡ ನಿರಂತರವಾಗಿ ಯುವತಿಯ ಚಿಕಿತ್ಸೆಗೆ ಪ್ರಯತ್ನ ಪಡುತ್ತಿದ್ದೇವೆ ಎಂದು ಸೇಂಟ್ ಜಾನ್ಸ್ ಆಸ್ಪತ್ರೆಯ ವೈದ್ಯರು ಸಂತ್ರಸ್ತೆಯ ಆರೋಗ್ಯದ ಮಾಹಿತಿ ನೀಡಿದರು.
ಜೆಡಿಎಸ್ ನಿಂದ 1 ಲಕ್ಷ ಪರಿಹಾರ
ಜೆಡಿಎಸ್ ಮುಖಂಡ ಶರವಣ ಆಸ್ಪತ್ರೆಗೆ ಭೇಟಿ ನೀಡಿ ಯುವತಿ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಿಂದ ಹೊರ ಬಂದ ಬಳಿಕ ಮಾತನಾಡಿದ ಶರವಣ, ಯುವತಿಯನ್ನು ಭೇಟಿ ಮಾಡಿದೆ, ಎಚ್ಚರವಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಸುಂಕದಕಟ್ಟೆ ಬಳಿ ಅ್ಯಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಆರೋಗ್ಯ ವಿಚಾರಿಸಲು ಇಂದು ಸೆಂಟ್ ಜಾನ್ ಆಸ್ಪತ್ರೆಗೆ ಭೇಟಿ ನೀಡಲಾಯಿತು.
ವಿಕೃತ ಮನಸ್ಸುಗಳ ಈ ಅಮಾನುಷ ದುಷ್ಕೃತ್ಯದಿಂದ ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಿದೆ.
ಜೆಡಿಎಸ್ ಪಕ್ಷ ಆಸಿಡ್ ದಾಳಿಯನ್ನು ಖಂಡಿಸುತ್ತದೆ. ಆರೋಪಿಗೆ ಕಾನೂನಿನಲ್ಲಿ ಅತಿ ದೊಡ್ಡ ಶಿಕ್ಷೆ ಕೊಡಬೇಕು. ಕುಟುಂಬಸ್ಥರಿಗೆ ನಮ್ಮ ಪಕ್ಷದಿಂದ 1 ಲಕ್ಷ ರೂ ಚೆಕ್ ನೀಡಲಾಗಿದೆ. ಸರ್ಕಾರ ಪ್ರಾಮಾಣಿಕವಾಗಿ ಯುವತಿಯ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು.
ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ
ಕುಟುಂಬದ ಕನಸ್ಸಿನಂತೆ ಯುವತಿ ಚೇತರಿಸಿಕೊಂಡ ನಂತರ ಸರ್ಕಾರಿ ಉದ್ಯೋಗ ನೀಡಬೇಕು. ಈಗಾಗಲೇ ಆರೋಪಿಯ ಸಹೋದರ ಮತ್ತು ಕುಟುಂಬಸ್ಥರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದಿದೆ. ಆದಷ್ಟು ಬೇಗ ಆರೋಪಿಯನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.
ಇನ್ನೂ ಸಂತ್ರಸ್ತೆಯ ವೈದ್ಯಕೀಯ ವೆಚ್ಚಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ 1 ಲಕ್ಷ ರೂ. ಸಹಾಯಹಸ್ತದ ಚೆಕ್ ವಿತರಿಸಲಾಯ್ತು. ವಿಶೇಷ ಆಯುಕ್ತರಾದ ರಂಗಪ್ಪ ಮತ್ತು ಬಿಬಿಎಂಪಿ ನೌಕರರ ಭವನದ ಅಧ್ಯಕ್ಷರಾದ ಅಮೃತ್ ರಾಜ್ ಅವರು ಪರಿಹಾರದ ಚೆಕ್ ನ್ನು ಕುಟುಂಬಸ್ಥರಿಗೆ ವಿತರಿಸಿದರು.