ರಾಜ್ಯದಲ್ಲಿ 90 ಸಾವಿರಕ್ಕೂ ಅಧಿಕ ಸಕ್ರಿಯ ಕೊರೊನಾ ಕೇಸ್: ಮತ್ತೆ Lockdown ಆಗುತ್ತಾ? ಸಚಿವ Sudhakar ಮಾಹಿತಿ
ಕೊರೊನಾ ಏರಿಕೆ ಕಂಡು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ (Karnataka Lockdown) ಆಗುತ್ತಾ ಅನ್ನೋ ಪ್ರಶ್ನೆ ಮುನ್ನಲೆಗೆ ಬಂದಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister Dr.K.Sudhakar) ಲಾಕ್ ಡೌನ್ ಆಗುತ್ತಾ:? ಇಲ್ಲವಾ? ಎಂಬುದರ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ (Corona Virus) ಮತ್ತು ಓಮೈಕ್ರಾನ್ (Omicron Variant) ನಿಯಂತ್ರಣಕ್ಕಾಗಿ ಸರ್ಕಾರ ಟಫ್ ರೂಲ್ಸ್ ಜೊತೆ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದೆ. ಇಂದಿನಿಂದ ಎರಡನೇ ವಾರದ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಾಗುತ್ತಿದೆ, ಇಂದು ರಾತ್ರಿ 10 ಗಂಟೆಯಿಂದಲೇ ಬೆಂಗಳೂರು (Bengaluru) ಸೇರಿದಂತೆ ಕರುನಾಡು ಎರಡು ದಿನ ಬಂದ್ ಆಗಲಿದೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 20 ಸಾವಿರದ ಗಡಿ ದಾಟುತ್ತಿದೆ. ಇದರಲ್ಲಿ ಸಿಂಹಪಾಲು ಬೆಂಗಳೂರು ನಗರದಲ್ಲಿಯೇ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿವೆ. ಕೊರೊನಾ ಏರಿಕೆ ಕಂಡು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ (Karnataka Lockdown) ಆಗುತ್ತಾ ಅನ್ನೋ ಪ್ರಶ್ನೆ ಮುನ್ನಲೆಗೆ ಬಂದಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister Dr.K.Sudhakar) ಲಾಕ್ ಡೌನ್ ಆಗುತ್ತಾ? ಇಲ್ಲವಾ? ಎಂಬುದರ ಮಾಹಿತಿ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ವೀಕೆಂಡ್ ಕರ್ಫ್ಯೂ ಮತ್ತು ಕಠಿಣ ನಿಯಮಗಳು ಈ ತಿಂಗಳು ಮುಂದುವರಿಯುತ್ತವೆ. ಇವತ್ತು ಎರಡನೇಯ ವೀಕೆಂಡ್ ಕರ್ಫ್ಯೂ ಜಾರಿ ಆಗ್ತಿದೆ. ಕೊರೊನಾ ನಿಯಂತ್ರಣ ನಿಯಂತ್ರಿಸಲು ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಮತ್ತೆ Lockdown ಆಗುತ್ತಾ?
ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್ ಅಸ್ತ್ರವನ್ನು ಸರ್ಕಾರ ಬಳಕೆ ಮಾಡುತ್ತಾ ಅನ್ನೋ ಪ್ರಶ್ನೆ ಸಚಿವರು ಉತ್ತರಿಸಿದರು. ಸದ್ಯ ಇರೋ ನಿಯಮಗಳು ಮುಂದುವರಿಯಲಿವೆ. ಲಾಕ್ ಡೌನ್ ಮಾಡುವ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. ಯಾರು ಉದಾಸೀನ ಮಾಡಬಾರದು. ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ. ಬೂಸ್ಟರ್ ಡೋಸ್ ಅರ್ಹತೆ ಇರೋರು ಲಸಿಕೆ ತೆಗೆದುಕೊಳ್ಳಿ. ಎರಡನೇ ಡೋಸ್ 40 ಲಕ್ಷ ಜನ ತಗೋಬೇಕು. ಶೀಘ್ರ ಲಸಿಕೆ ಪಡೆಯಿರಿ ಎಂದು ತಿಳಿಸಿದರು.
ಆರ್ಥಿಕ ಸಂಕಷ್ಟ ಆಗದಂತೆ ಕ್ರಮಗಳು
ಆತಂಕಕಾರಿಯಾದ ನಿಯಮ ಜಾರಿ ಮಾಡಲ್ಲ. ಲಾಕ್ ಡೌನ್ ಮೂಲಕ ಸೋಂಕು ನಿಯಂತ್ರಣ ಆಗಲ್ಲ. ಎರಡು ಬಾರಿ ಲಾಕ್ ಡೌನ್ ಮಾಡಿ ಜನರಿಗೆ ಸಮಸ್ಯೆ ಆಗಿದೆ. ನಿನ್ನೆ ಪ್ರಧಾನಿ ಮೋದಿ ಅವರು ಕೂಡಾ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಲಾಕ್ ಡೌನ್ ಅಂತಹ ನಿಯಮ ಇಲ್ಲದೆ ಅಗತ್ಯ ಕ್ರಮ ತೆಗೆದುಕೊಳ್ಳೋ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಿ
ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಬಹಿರಂಗ ಸಮಾವೇಶ, ಗುಂಪು ಗೂಡೋದು ಮಾಡಬೇಡಿ. ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳ ಆಗ್ತಿದೆ. ಆದ್ರು 5-6% ಮಾತ್ರ ಆಸ್ಪತ್ರೆ ಸೇರುತ್ತಿದ್ದಾರೆ. ಇದು ಸಮಾಧಾನದ ವಿಷಯ. ನರ್ಸ್ ಗಳು ಕೂಡಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕತೆ ಇದೆ.
ಹೆಚ್ಚು ಸೋಂಕು ಇರೋ ಜಿಲ್ಲಾಡಳಿತಗಳ ಇಂದು ಸಭೆ ಮಾಡಲಾಗುತ್ತಿದೆ. ಮೋದಿ ಅವರು ಕೊಟ್ಟ ಸಲಹೆಗಳನ್ನು ಅನುಷ್ಠಾನ ಮಾಡ್ತೀವಿ. ಇದ ವೇಳೆ ವೀಕೆಂಡ್ ಕರ್ಫ್ಯೂ ಮಾಡಿದ್ರು ಸೋಂಕು ಕಡಿಮೆ ಆಗ್ತಿಲ್ಲ ಅನ್ನೋ ವಿಚಾರಕ್ಕೆ ಸುಧಾಕರ್ ಪ್ರತಿಕ್ರಿಯಿಸಿದರು. ಕಳೆದ ವಾರದಿಂದ ವೀಕೆಂಡ್ ಲಾಕ್ ಮಾಡಿದ್ದೇವೆ. 7 ದಿನಕ್ಕೆ ಸೋಂಕು ಕಡಿಮೆ ಆಗಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದ್ರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ.
ಫೆಬ್ರವರಿ ಮೊದಲ ವಾರ ಪೀಕ್ ಗೆ ಹೋಗುತ್ತೆ ಕೊರೊನಾ?
ಈ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಹೀಗಾಗಿ ಇನ್ನು ಸ್ವಲ್ಪ ದಿನ ಹೋದ್ರೆ ವೀಕೆಂಡ್ ಕರ್ಫ್ಯೂ ರಿಸಲ್ಟ್ ಸಿಗಬಹುದು ರಾಜ್ಯದಲ್ಲಿ ಕೊರೊನಾ ಇನ್ನು ಪೀಕ್ ಗೆ ಹೋಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್ ಗೆ ಹೋಗುತ್ತೆ. 3- 4ನೇ ವಾರದಿಂದ ಕಡಿಮೆ ಆಗುತ್ತೆ ಎಂದು ತಜ್ಞರು ಹೇಳಿರುವ ಮಾಹಿತಿಯನ್ನು ಹಂಚಿಕೊಂಡರು.