ಪ್ರಮಾಣವಚನ ಸ್ವೀಕಾರ ವೇಳೆ ಪ್ರಮಾದ: ಮತ್ತೆ ರಾಜ್ಯಪಾಲರ ಬಳಿ ತೆರಳಿ ಪ್ರತಿಜ್ಞಾವಿಧಿ ಓದಿದ ಸಚಿವ

Minister shankar Patiala Munegowda: ಸಚಿವರು ಎರಡು ಪ್ರತಿಗಳನ್ನ ಓದುವ ಬದಲು ಒಂದೇ ಪ್ರತಿಯನ್ನ ಎರಡು ಸಲ ಓದಿಬಿಟ್ಟಿದ್ದಾರೆ. ನಿಯಮಗಳ ಪ್ರಕಾರ ಗೌಪ್ಯತಾ ಪ್ರಮಾಣ ಓದದಿದ್ದರೆ ಪ್ರಮಾಣವಚನ ಅಪೂರ್ಣವಾಗುತ್ತದೆ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ

 • Share this:
  ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿದ ಬಳಿಕ ಸಂಪುಟ ಮರುರಚನೆಯಾಗಿದೆ. ಹಲವರನ್ನು ಕೈಬಿಟ್ಟು ಹೊಸದಾಗಿ ಕ್ಯಾಬಿನೆಟ್​ ರಚಿಸಲಾಗಿದೆ. ಇಂದು 29 ಮಂದಿ ಸಚಿವರಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಪ್ರತಿಜ್ಞಾ ವಿಧಿ ಬೋಧಿಸಿದರು. ನಿಯಮದ ಪ್ರಕಾರ ಹೆಸರು ಹೇಳಿದ ಬಳಿಕ ಒಬ್ಬೊಬ್ಬರಾಗಿ ಬಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಹುತೇಕ ಎಲ್ಲಾ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಆ ಕ್ಷಣಕ್ಕೆ ಯಾರಿಗೂ ತಿಳಿಯದೆ ಪ್ರಮಾದವೊಂದು ನಡೆದಿದೆ.

  ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರಮಾಣ ವಚನದ ಸಮಯದಲ್ಲಿ ಸಣ್ಣದೊಂದು ಪ್ರಮಾದ ನಡೆದಿದೆ. ಸಚಿವರು ಎರಡು ಪ್ರತಿಗಳನ್ನ ಓದುವ ಬದಲು ಒಂದೇ ಪ್ರತಿಯನ್ನ ಎರಡು ಸಲ ಓದಿಬಿಟ್ಟಿದ್ದಾರೆ. ನಿಯಮಗಳ ಪ್ರಕಾರ ಗೌಪ್ಯತಾ ಪ್ರಮಾಣ ಓದದಿದ್ದರೆ ಪ್ರಮಾಣವಚನ ಅಪೂರ್ಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜ್ಯಪಾಲರು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ನಿಯಮದಡಿಯಲ್ಲಿ ಮತ್ತೆ ಪ್ರಮಾಣವಚನವನ್ನು ಸಚಿವ ಶಂಕರ ಪಾಟೀಲಮುನೇನಕೊಪ್ಪ ಓದಿದ್ದಾರೆ. ಈ ವೇಳೆ ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ ಹಾಜರಿದ್ದರು.

  ಇಂದಿನ ಕಾರ್ಯಕ್ರಮದಲ್ಲಿ ಮೊದಲಿಗೆ ಗೋವಿಂದ ಕಾರಜೋಳ ಅವರು ದೇವರ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೂ ಗುಚ್ಛ ನೀಡಿ ಸ್ವಾಗತಿಸಿದರು.  ಬಳಿಕ ಎರಡನೆಯವರಾಗಿ ಕೆ.ಎಸ್​.ಈಶ್ವರಪ್ಪ ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಆರ್. ಅಶೋಕ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕ್ರಮವಾಗಿ ವಿ.ಸೋಮಣ್ಣ,  ಉಮೇಶ್​ ಕತ್ತಿ, ಎಸ್​.ಅಂಗಾರ, ಜೆ.ಸಿ.ಮಾಧುಸ್ವಾಮಿ , ಅರಗ ಜ್ಞಾನೇಂದ್ರ,  ಅಶ್ವತ್ಥ ನಾರಾಯಣ, ಸಿ.ಸಿ. ಪಾಟೀಲ್​​ ಪ್ರತಿಜ್ಞಾವಿಧಿ ಸ್ವೀಕರಿಸಿದರು.

  ಇದನ್ನೂ ಓದಿ: ದಳಪತಿಗಳು ಉರುಳಿಸಿದ ದಾಳದಿಂದ ಬಿಜೆಪಿ ಶಾಸಕ ಪ್ರೀತಂಗೌಡರಿಗೆ ತಪ್ಪಿತಾ ಸಚಿವ ಸ್ಥಾನ?

  ಇನ್ನು ಬಿಎಸ್ ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದ ಬಸನಗೌಡ ಪಾಟೀಲ ಯತ್ನಾಳ್​, ಸಿಪಿಯೋಗೇಶ್ವರ್​, ಅರವಿಂದ ಬೆಲ್ಲದ್​ ಸಚಿವ ಸಂಪುಟ ಸೇರುವಲ್ಲಿ ವಿಫಲರಾಗಿದ್ದಾರೆ. ಮಾಜಿ ಸಿಎಂ ವಿರುದ್ಧ ಬಂಡಾಯ ಎದಿದ್ದ ಈ ನಾಯಕರಿಗೆ ಮಂತ್ರಿ ಸ್ಥಾನ ಸಿಗದಂತೆ ನೋಡಿಕೊಳ್ಳುವಲ್ಲಿ ಬಿಎಸ್​ ಯಡಿಯೂರಪ್ಪ ಸಫಲರಾಗಿದ್ದಾರೆ. ಕಳೆದ ಬಾರಿ ಸಚಿವ ಸ್ಥಾನ ನೀಡುವಂತೆ ನೋಡಿಕೊಂಡಿದ್ದ ಬಿಎಸ್​ ಯಡಿಯೂರಪ್ಪಗೆ ಸಿಪಿ ಯೋಗೇಶ್ವರ್​ ಮಗ್ಗಲ ಮಳ್ಳಲಾಗಿದ್ದಾರೆ. ಬಿಎಸ್​ ಯಡಿಯೂರಪ್ಪ ವಿರುದ್ಧವೇ ಹೈ ಕಮಾಂಡ್​ ಮಟ್ಟದಲ್ಲಿ ದೂರು ನೀಡಿದ್ದ ಸಿಪಿ ಯೋಗೇಶ್ವರ್​ ಬಳಿಕ ಯತ್ನಾಳ್​ಗೆ ಬೆಂಬಲ ನೀಡಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: