ನಾಳೆ ರಾಮನಗರಕ್ಕೆ ಸಚಿವ ಅಶ್ವತ್ಥ ನಾರಾಯಣ ಎಂಟ್ರಿ.. ಮತ್ತೆ DK Brothers ಜೊತೆ ಜಟಾಪಟಿ ಶುರುವಾಗುತ್ತಾ?

ಇದು ಪಾದಯಾತ್ರೆ ಅಲ್ಲ, ಇದೊಂದು ಡಿಕೆ ಇವೆಂಟ್. ಜನರಿಗೆ ಏನಾದ್ರೂ ಆಗಲಿ ನಮ್ಮ ಪಕ್ಷ ಪ್ರಚಲಿತದಲ್ಲಿ ಇರಬೇಕು ಅನ್ನೋದಷ್ಟೇ ಇವರ ಉದ್ದೇಶ ಎಂದು ಸಚಿವ ಅಶ್ವತ್ಥ ನಾರಾಯಣ ಕಿಡಿಕಾರಿದರು.

ವೇದಿಕೆ ಮೇಲೆ ಜಟಾಪಟಿ (ಫೈಲ್​​ ಫೋಟೋ)

ವೇದಿಕೆ ಮೇಲೆ ಜಟಾಪಟಿ (ಫೈಲ್​​ ಫೋಟೋ)

  • Share this:
ಬೆಂಗಳೂರು: ಇತ್ತೀಚೆಗಷ್ಟೇ ರಾಮನಗರದಲ್ಲಿ (Ramanagara) ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ಸಂಸದ ಡಿಕೆ ಸುರೇಶ್​ (DK Suresh) ಹಾಗೂ ಸಚಿವ ಡಾ.ಸಿಎನ್​ ಅಶ್ವತ್ಥ ನಾರಾಯಣ (Dr CN Ashwath Narayan) ಜಟಾಪಟಿ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ರಾಮನಗರಕ್ಕೆ ಮತ್ತೆ ಭೇಟಿ ನೀಡುವುದಾಗಿ ಸಚಿವರು ಘೋಷಿಸಿದ್ದಾರೆ. ನಾಳೆ ರಾಮನಗರಕ್ಕೆ ತೆರಳುತ್ತಿದ್ದೇನೆ,  ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ವಿರುದ್ಧ ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಆ ಮೂಲಕ ಡಿಕೆ ಬ್ರದರ್ಸ್​​ ಹಾಗೂ ಸಚಿವ ಅಶ್ವತ್ಥ ನಾರಾಯಣ ಅವರ ನಡುವಿನ ಜಟಾಪಟಿ ಮುಂದುವರೆಯುವ ಮುನ್ಸೂಚನೆ ಸಿಕ್ಕಿದೆ. ಇನ್ನು ಇಂದು ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್​​​ ನಾಯಕರ ಪಾದಯಾತ್ರೆಯನ್ನು ತೀವ್ರವಾಗಿ ಟೀಕಿಸಿದರು. ಪಾದಯಾತ್ರೆ ಮಾಡಬೇಡಿ ಎಂದು ಮನವಿ ಮಾಡಿದ್ವಿ, ಆದರೂ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆಗೆ ನಾವು ಬದ್ದವಾಗಿದ್ದೇವೆ. ಸರ್ಕಾರದ ಏನೆಲ್ಲ ಕೆಲಸ ಮಾಡ್ತಿದ್ದೆ ಎಂದು ಹೇಳಿದ್ವಿ, ಆದರೂ ಕಾಂಗ್ರೆಸ್​ ನಾಯಕರು ಕೇಳಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಪೊಲಿಟಿಕಲ್ ಡ್ರಾಮಾ ಇದು

ಕಾಂಗ್ರೆಸ್​​ ಪಾದಯಾತ್ರೆ ಸಂಬಂಧ ಈಗಾಗಲೇ 20 ಜನರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿದೆ. ಕೇಸ್ ಹಾಕಿದ ಮೇಲೆ ಅದ್ರ ನಿಯಮಾನುಸಾರ ಕ್ರಮ ಕೈಗೊಳ್ಳುಲಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಜಾಗೃತಿ ಮೂಡಿಸಿದ್ರು ಇವರು ಮಾತು ಕೇಳಿಲ್ಲ. ರಾಜಕೀಯವಾಗಿ ಈ ಪಾದಯಾತ್ರೆ ಮಾಡ್ತಿದ್ದಾರೆ ಅಷ್ಟೇ. ಪೊಲಿಟಿಕಲ್ ಡ್ರಾಮಾ ಮಾಡಲು ಹೊರಟಿದ್ದಾರೆ. ಜನ ವಿರೋಧವಾಗಿ ಮಾಡ್ತಿದ್ದಾರೆ, ಸ್ವಾರ್ಥಕ್ಕಾಗಿ ಅವರ ಏಳಿಗಾಗಿ ಈ ಪಾದಯಾತ್ರೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Mekedatu Padayatreಗೆ ಮತ್ತೊಂದು ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್ ಗೆ ಟಾಂಗ್ ನೀಡಿದ ಬಿಜೆಪಿ!

ಇದು ಪಾದಯಾತ್ರೆ ಅಲ್ಲ, ಇದೊಂದು ಡಿಕೆ ಇವೆಂಟ್

ಕಾಂಗ್ರೆಸ್ ಭಂಡತನದ ರಾಜಕೀಯ ಮಾಡ್ತಿದೆ. ಜನರ ಮುಂದೆ ಇವರ ಉದ್ದೇಶ ಸಂಪೂರ್ಣ ಬದಲಾಗಿದೆ.  ರಾಜಕೀಯವಾಗಿ ಉತ್ತರ ಕೊಡ್ತೇವೆ. ಕಾನೂನು ಪಾಲನೆ ಮಾಡಿ ಅಂದ್ರೆ ಕಾನೂನು ಉಲ್ಲಂಘನೆ ಮಾಡ್ತಿದ್ದಾರೆ. ಜನರೂ ಕೂಡ ಇದೇ ಪ್ರಶ್ನೆ ಮಾಡ್ತಿದ್ದಾರೆ. ಇದು ಪಾದಯಾತ್ರೆ ಅಲ್ಲ, ಇದೊಂದು ಡಿಕೆ ಇವೆಂಟ್. ಜನರಿಗೆ ಏನಾದ್ರೂ ಆಗಲಿ ನಮ್ಮ ಪಕ್ಷ ಪ್ರಚಲಿತದಲ್ಲಿ ಇರಬೇಕು ಅನ್ನೋದಷ್ಟೇ ಇವರ ಉದ್ದೇಶ. ಏನಾದ್ರೂ ಆಗಲಿ ಪ್ರಚಾರದಲ್ಲಿ ಇರಬೇಕು ಅಷ್ಟೇ , ಪಾದಯಾತ್ರೆ ಒಂದು ಮಾಡಲ್ ಅಷ್ಟೇ. ಸ್ವಾರ್ಥದ ಪಶ್ಚಾತ್ತಾಪದ ಪಾದಯಾತ್ರೆ ಅಷ್ಟೇ. ನನಗೆ ಆಶಿರ್ವಾದ ಮಾಡಿ ಅನ್ನೋದು ಅವರ ಮಾತಿನಲ್ಲಿ ಅರ್ಥ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.

ಡಿಕೆಶಿಗೆ ನಿಜವಾಗಿಯೂ ಕಾಳಜಿ ಇದೆಯೇ?

ಪಾದಯಾತ್ರೆ ತಡೆಯುವ ವಿಚಾರವಾಗಿ ಸಿಎಂ ಪರಿಶೀಲನೆ ಮಾಡಿ ನಿರ್ಧಾರ ಮಾಡ್ತಾರೆ. ಈ ಮೇಕೆದಾಟು ನೆನೆಪಾಗಿದೆ ಇವರಿಗೆ. ರಾಮನಗರ ನೀರಾವರಿ ಯೋಜನೆಗಳಿಗೆ ಡಿಕೆಶಿ ಎಷ್ಟು ಸಲ ವಿಸಿಟ್ ಮಾಡಿದ್ದಾರೆ? ಎಷ್ಟು ಸಲ ವಿಧಾನಸಭೆ ಅಧಿವೇಶನದಲ್ಲಿ ಮೇಕೆದಾಟು ಬಗ್ಗೆ ಡಿಕೆಶಿ ಮಾತನಾಡಿದ್ದಾರೆ? ಎಷ್ಟು ಸಲ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಏಕಾಏಕಿ ಬಂದು ಪಾದಯಾತ್ರೆ ಮಾಡ್ತಾರೆ ಅಂದ್ರೆ ನೀವೆ ಯೋಚನೆ ಮಾಡಿ ಎಂದು ಕಿಡಿಕಾರಿದರು.

ಇದನ್ನೂ ಓದಿ: Congress Padayatre: ಕಾಂಗ್ರೆಸ್ ಪಾದಯಾತ್ರೆಗಿಂದು 2ನೇ ದಿನ.. ಹೆಜ್ಜೆ ಇಟ್ಟ ಮೇಲೆ ಹಿಂದೆ ಇಡೋ ಮಾತೇ ಇಲ್ಲ ಎಂದ ಕನಕಪುರ `ಬಂಡೆ’!

ಪರೀಕ್ಷೆ ಮಾಡಿಕೊಳ್ಳದೇ ಇರುವ ಹಕ್ಕಿದೆ

ಸ್ವ್ಯಾಬ್ ಟೆಸ್ಟ್ ಗೆ ಬಂದ ಆರೋಗ್ಯ ಇಲಾಖೆ ಅಧಿಕಾರಿ ವಿರುದ್ಧ ಡಿಕೆಶಿ ಗರಂ ಆದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ ನಾರಾಯಣ, ಪರೀಕ್ಷೆಗೆ ಅವರು ಸಹಕರಿಸಬೇಕಿತ್ತು. ಪರೀಕ್ಷೆ ಮಾಡಿಸಿಕೊಳ್ಳಬೇಕೋ, ಬೇಡ್ವೋ ಅನ್ನೋದು ಅವರ ನಿರ್ಧಾರ ಸರಿ. ಅದು ಅವರ ಹಕ್ಕಿರಬಹುದು ಇಲ್ಲ ಅಂತ ಹೇಳೋದಿಲ್ಲ. ಅದನ್ನ ಅವರು ಹೇಳಬಹುದಿತ್ತು, ಆದ್ರೆ ಕಾನೂನಿನಲ್ಲಿ ಸಹ ಅಧಿಕಾರವಿದೆ‌. ಜನರ ಗುಂಪಿನಲ್ಲಿ ಸುತ್ತಮುತ್ತ ಸೋಂಕಿದ್ದರೆ ಟೆಸ್ಟ್ ಮಾಡಿಸಿಕೊಳ್ಳಬೇಕು. ಅವರಿಗೆ ಇಷ್ಟವಿರಲಿ ಇಲ್ಲದೇ ಇರಲಿ ಅವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ಯಾಂಡಮಿಕ್ ಆಕ್ಟ್ ಪ್ರಕಾರ ಅವರು ಕಡ್ಡಾಯವಾಗಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಈ ರೀತಿ ಭಂಡತನವಾಗಿ ನಡೆದುಕೊಂಡಿದ್ದು ಸರಿಯಲ್ಲ. ಇವರ ನಡುವಳಿಕೆಯಿಂದ ಜನರು ಸಹ ಬೆಸತ್ತು ಹೋಗಿದ್ದಾರೆ ಎಂದು ಟೀಕಿಸಿದರು.
Published by:Kavya V
First published: