DK ಬ್ರದರ್ಸ್ ವಿರುದ್ಧ ಏನು ಬೇಕಾದ್ರೂ ಕ್ರಮ ತಗೊಬಹುತ್ತಿತ್ತು, ಆದರೆ.. Ashwath Narayan ಮಾತಿನೇಟು

ಡಿಕೆಶಿಯಂತ ಭಂಡರಿಗೆ ನಾನು ನೇರವಾಗಿಯೇ ಹೇಳ್ತೇನೆ. ನಿಮ್ಮ ಗಂಡಸ್ಥನಕ್ಕೆ, ಯೋಗ್ಯತೆಗೆ ಇದು ಸರಿಯಿಲ್ಲ. ನಿಮ್ಮ ಪುಂಡಾಟಿಕೆಗೆ ನಾವು ಸಹಿಸಲ್ಲ. ಹಲ್ಲೆ ಮಾಡೋಕಾ ನೀವು ಬರೋದು..? ಇವತ್ತು ಏನು ಬೇಕಾದ್ರೂ‌ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ..

ಸಚಿವ ಅಶ್ವಥ್ ನಾರಾಯಣ

ಸಚಿವ ಅಶ್ವಥ್ ನಾರಾಯಣ

  • Share this:
ಬೆಂಗಳೂರು: ನಿನ್ನೆ ರಾಮನಗರದಲ್ಲಿ ನಡೆದ ಕಾರ್ಯಕ್ರಮದ (Ramanagara program) ವೇದಿಕೆಯಲ್ಲೇ ಸಂಸದ ಡಿಕೆ ಸುರೇಶ್(DK Suresh)​, ಸಚಿವ ಡಾ.ಸಿ.ಎನ್​ ಅಶ್ವಥ್​ ನಾರಾಯಣ (Dr.C.N. Ashwath Narayan) ಜಟಾಪಟಿಯ ಕೆಂಡ ಇಂದೂ ಪರಸ್ಪರ ವಾಗ್ದಾಳಿಯಿಂದ ನಿಗಿನಿಗಿ ಎನ್ನುತ್ತಲೇ ಇದೆ. ಒಟ್ಟಾರೆ ಘಟನೆ ಬಗ್ಗೆ ಸಮರ್ಥನೆಗಿಳಿದ ಸಚಿವ ಅಶ್ವಥ್ ನಾರಾಯಣ್, ರಾಮನಗರದ ಡಿಸಿ ಕಚೇರಿಯಲ್ಲಿ ಕಾರ್ಯಕ್ರಮ ಸಂಸದರನ್ನು ಕಣೆಗಣಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ನಿನ್ನೆ ಹಲವು ಕಾರ್ಯಕ್ರಮಗಳಿದ್ದವು, ಅಂಬೇಡ್ಕರ್ ಪ್ರತಿಮೆ ಕೂಡ ನೆನೆಗುದಿಗೆ ಬಿದ್ದಿತ್ತು. ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು, ಸಿಎಂ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಡಿಸಿಯವರೇ ಪ್ರೋಟೋಕಾಲ್ ನಂತೆ ಆಹ್ವಾನಿಸಿದ್ದರು, ಎಲ್ಲರಿಗೂ ಆಹ್ವಾನ ನೀಡಿದ್ದರು. ಪುಷ್ಪಾರ್ಚನೆಗೆ ಮೂರು ಜನ ಮಾತ್ರ ಅವಕಾಶವಿತ್ತು. ನಾನು, ಸಿಎಂ, ಶಾಸಕಿಯವರು ಭಾಗಿಯಾದೆವು. ಅಲ್ಲಿಗೆ ನನ್ನನ್ನ ಕರೆಯಲಿಲ್ಲ ಅಂತ ಸಂಸದರು ವಾದಮಾಡಿದ್ರು. ಮೊದಲಿಗೆ ಸಂಸದರು ಅಲ್ಲಿ ಇರಲಿಲ್ಲ, ನಾವು ಮುಗಿಸಿ ಬಂದ ನಂತರ ಅವರು ಆಗಮಿಸಿದ್ರು ಎಂದು ಸಮಜಾಯಿಷಿ ನೀಡಿದರು.

ಡಿಕೆ ಡಿಕೆ ಅಂತ ಕೂಗಲು ಜನ ಇಟ್ಟಿದ್ದಾರೆ

ಸಿಎಂ ಇದ್ದಾಗ ಹೇಗೆ ನಡೆದುಕೊಳ್ಳಬೇಕು. ಸ್ಥಳೀಯ ಪ್ರತಿನಿಧಿಯಾಗಿ ಹೇಗೆ ನಡೆದುಕೊಳ್ಳಬೇಕು. ಸಭಾ ಕಾರ್ಯಕ್ರಮದಲ್ಲಿ ಡಿಕೆ ಡಿಕೆ ಅಂತ ಘೋಷಣೆ ಇತ್ತು, ಸುಮ್ಮನಿರಿ ಎಂದ್ರೂ ಯಾರು ಕೇಳಲಿಲ್ಲ. ಹಾಗಾಗಿ ಭಂಟರು, ಹಿಂಬಾಲಕರು ಸೇರಿ ಗಲಾಟೆ ಮಾಡಿದ್ರು. ಇವರು ಎಲ್ಲಿ ಹೋದ್ರೂ ಟ್ರೇಡ್ ಮಾರ್ಕ್. ಇವರು ಹೋದ ಕಡೆ 50 ಜನ ಸೇರಿಕೊಳ್ತಾರೆ, ಘೋಷಣೆ ಕೂಗೋಕೆ ಸೇರಿಸಿಕೊಳ್ತಾರೆ ಎಂದು ಡಿಕೆ ಬ್ರದರ್ಸ್ ವಿರುದ್ಧ ಅಶ್ವಥ್ ನಾರಾಯಣ್ ಕಿಡಿ ಕಾಡಿದರು.

ಇದನ್ನೂ ಓದಿ: ಗಂಡಸ್ತನ ಇದೆಯಾ ಎಂದು ಕರೆಯೋದು BJPಯ ಸಂಸ್ಕೃತಿಯಾ? DK Suresh ಪ್ರಶ್ನೆ

ರಾಮನಗರ ಇವರಿಗಷ್ಟೇ ಸೇರಿದ್ದಲ್ಲ

ಡಿಕೆ ಸೋದರರಿಗೆ ಅಭದ್ರತೆ ಕಾಡಿರಬಹುದು, ಅದಕ್ಕೆಂದೇ ನಿನ್ನೆ ಆ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು. ರಾಮನಗರ ಇವರಿಗಷ್ಟೇ ಸೇರಿದ್ದಲ್ಲ, ನನಗೂ ಅಷ್ಟೇ ಅಧಿಕಾರ ಇದೆ. ಇವರಿಗಿಂತ ಹೆಚ್ಚಿನ ಸಂಬಂಧ ನನಗಿದೆ. ರಾಮನಗರದಲ್ಲಿ ಇವರಿಗಿಂತ ನನಗೆ ಓನರ್ ಶಿಪ್ ಹೆಚ್ಚಿದೆ. ಕಾಂಗ್ರೆಸ್ ಸಿಎಂ ಇದ್ದಾಗ ಇದೇ ರೀತಿ ಮಾಡ್ತಿದ್ರಾ. ಪದೇ ಪದೇ ಘೋಷಣೆ ಕೂಗ್ತಿದ್ರು. ಕೂಗಿ ಕೂಗಿ ನಮ್ಮನ್ನ ಕೆಣಕಿದ್ದಾರೆ. ಬೇಕು ಎಂದೇ ಈ ರೀತಿಯಾಗಿ ಮಾಡಿದ್ದಾರೆ ಎಂದು ಡಿಕೆ ಬ್ರದರ್ಸ್ ಗೆ ತಿರುಗೇಟು ನೀಡಿದ್ರು.

ಏನು ಬೇಕಾದ್ರೂ‌ ಕ್ರಮ ತೆಗೆದುಕೊಳ್ಳಬಹುದಿತ್ತು

ಡಿಕೆಶಿಯಂತ ಭಂಡರಿಗೆ ನಾನು ನೇರವಾಗಿಯೇ ಹೇಳ್ತೇನೆ. ನಿಮ್ಮ ಗಂಡಸ್ಥನಕ್ಕೆ, ಯೋಗ್ಯತೆಗೆ ಸರಿಯಿಲ್ಲ. ನಿಮ್ಮ ಪುಂಡಾಟಿಕೆಗೆ ನಾವು ಸಹಿಸಲ್ಲ, ಕೆಲಸವಿದ್ದರೆ ಹೇಳಲಿ ಮಾಡೋಣ. ನಾವು ಮಾಡಿದ ಕೆಲಸ ಹೇಳಿಕೊಂಡಿದ್ದೇವೆ. ಇವರನ್ನ ಕೇಳಿ ನಾವು ಮಾತನಾಡಬೇಕಾ..? ಹಲ್ಲೆ ಮಾಡೋಕಾ ನೀವು ಬರೋದು..? ಇವತ್ತು ಏನು ಬೇಕಾದ್ರೂ‌ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ ಅಂತಹ ಕೆಲಸ ನಾವು ಮಾಡಿಲ್ಲ. ಗಲಾಟೆ ಮಾಡಿ ಇಲ್ಲೇ ಕಳಿಸೋಣ ಎಂಬ ಉದ್ದೇಶ ಅವರದಿತ್ತು. ಅಣ್ಣ-ತಮ್ಮನಿಗೆ ಛೀಮಾರಿ ಹಾಕಬಹುದಿತ್ತು, ಆದರೆ ನನಗೂ ರಾಮನಗರಕ್ಕೂ ಏನು ಸಂಬಂಧ ಅಂತಾರೆ. ನಾನು ಸಚಿವ ಎಲ್ಲಿಗೆ ಬೇಕಾದ್ರೂ‌‌ ಹೋಗ್ತೇನೆ. ನಾನು ನಿಮಗಿಂತ ಹೆಚ್ಚು ಜಿಲ್ಲೆಗೆ ಸೇರಿದವನು ಎಂದು ಮಾತಿನಲ್ಲೇ ತಿವಿದರು.

ತಮ್ಮನಿಗೆ ಬೈದು ಬುದ್ದಿ ಹೇಳಿಕೆ

ಇವರೇನು ಪ್ರಜಾಪ್ರಭುತ್ವದಲ್ಲಿದ್ದಾರಾ? ಬೇಡವಾದ ಅಪಾದನೆಗಳನ್ನ ಮಾಡ್ತಾರೆ. ಕುತ್ತಿಗೆ ಕೂಯ್ದು ಕುತಂತ್ರ ಮಾಡಿ ರಾಜಕಾರಣ ಮಾಡಿದವರು. ಇವರು ತಂತ್ರ,ಕುತಂತ್ರದಲ್ಲೇ ಬಂದವರು, ಇವರ ಹಿನ್ನೆಲೆ ಇಡೀ ನಾಡಿಗೆ ಗೊತ್ತಿದೆ ಎಂದು ಡಿಕೆ ಬ್ರದರ್ಸ್ ವಿರುದ್ಧ ಅಶ್ವಥ್ ನಾರಾಯಣ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ನಾನು ಮಾತನಾಡಿದ ಬಳಿಕ ಅವ್ರು ಮಾತನಾಡಬಹುದಿತ್ತು. ಆದ್ರೆ, ಬೇಂಚು ಕುಟ್ತೀಯೇನೋ ಅಂತ ಗಲಾಟೆ ಮಾಡಿದ್ರು. ಜಿಲ್ಲೆ ಅಭಿವೃದ್ಧಿ ಅವರಿಗೆ ಬೇಕಿಲ್ಲ. ಡಿಕೆ ಶಿವಕುಮಾರ್, ತಮ್ಮನಿಗೆ ಬೈದು ಬುದ್ದಿ ಹೇಳಬೇಕಾದವರು, ಅಶ್ವಥ್ ನಾರಾಯಣ ಅವರಿಗೆ ಏನು ಸಂಬಂಧ ಅಂತ ಪ್ರಶ್ನಿಸ್ತಾರೆ. ನಾನು ಒಬ್ಬ ಸಚಿವ, ನಾನು ಯಾವ ಜಿಲ್ಲೆಗೆ ಬೇಕಾದ್ರೂ ಹೋಗ್ತೀನಿ.ರಾಮನಗರ ಜಿಲ್ಲೆಗೆ ಅವಮಾನ, ಕಳಂಕ ಇವರಿಂದಲೇ ಎಂದರು.
Published by:Kavya V
First published: