ಕೊರೊನಾ, ಲಾಕ್ಡೌನ್, ಹಣದುಬ್ಬರ ಸರಣಿ ಸಮಸ್ಯೆಗಳಿಂದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪೆಟ್ರೋಲ್-ಡಿಸೇಲ್, ಗ್ಯಾಸ್ ಬೆಲೆ ಏರಿಕೆಯ ಜೊತೆಗೆ ಅಡುಗೆ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಅಂಗಡಿಯಲ್ಲಿ ದುಬಾರಿ ಬೆಲೆ ಕೊಟ್ಟು ತಂದು ಸೇವಿಸುವ ಎಣ್ಣೆ ಎಷ್ಟು ಸುರಕ್ಷಿತ ಎಂದು ನಾವೆಂದೂ ಯೋಚಿಸುವುದೇ ಇಲ್ಲ. ಸಾಮಾನ್ಯವಾಗಿ ಒಂದು ಕೆಜಿ ಕಡ್ಲೆಬೀಜಕ್ಕಿಂತ 1 ಲೀಟರ್ ಕಡ್ಲೆಕಾಯಿ ಎಣ್ಣೆ ಬೆಲೆ ಕಡಿಮೆ ಇರುತ್ತೆ. ಒಂದು ಲೀಟರ್ ಶುದ್ಧ ಎಣ್ಣೆ ಮಾಡಲು ಎರಡೂವರೆ ಕೆಜಿಯಿಂದ 3 ಕೆಜಿ ಕಡ್ಲೆಬೀಜ ಬೇಕಾಗುತ್ತೆ. ಅಂತಹದರಲ್ಲಿ ಕಡಿಮೆ ಬೆಲೆಗೆ ದೊಡ್ಡ ದೊಡ್ಡ ಕಂಪನಿಗಳು 1 ಲೀಟರ್ ಎಣ್ಣೆಯನ್ನು ಹೇಗೆ ನೀಡುತ್ತಾರೆ ಗೊತ್ತೇ..?
ಜಾಹೀರಾತುಗಳಲ್ಲಿ ಶೇಕಡಾ ನೂರರಷ್ಟು ಆರೋಗ್ಯ ಎಂದು ತೋರಿಸುವ ಎಣ್ಣೆಗಳಲ್ಲಿ ಯೆತೇಚ್ಛವಾಗಿ ಕೆಮಿಕಲ್ ಬೆರಸಿರುವುದು ಸಾಕಷ್ಟು ಸಂಶೋಧನೆಗಳಿಂದ ಬಯಲಾಗಿದೆ. ಎಣ್ಣೆ ಹೆಚ್ಚು ದಿನ ಕೆಡದಿರಲು ಹಾಗೂ ನೀರಿನಷ್ಟು ಟ್ರಾನ್ಸ್ಪರೆಂಟ್, ಪ್ಯೂರ್ ಆಗಿ ಕಾಣಲು ಸಾಕಷ್ಟು ಕೆಮಿಕಲ್ಗಳನ್ನು ಬಳಸುತ್ತಾರೆ. ಮಿಟಮಿನ್ ಯುಕ್ತ ಎಂದು ಹೇಳಿಕೊಳ್ಳುವ ಎಣ್ಣೆಗಳು ಆರೋಗ್ಯಕ್ಕೆ ಅಪಾಯಕಾರಿಯಾದ ಮಿನರಲ್ಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಶುಗರ್ ಇರುವವರಿಗೆ ಬೆಂಡೆಕಾಯಿಯೇ ರಾಮಬಾಣ.. ತೂಕ ಇಳಿಸಲೂ ಸಹಕಾರಿ ಈ ತರಕಾರಿ..!
ಎಣ್ಣೆಯಲ್ಲಿನ ಕೆಮಿಕಲ್ಗಳೇ ಕ್ಯಾನ್ಸರ್, ಹೃದಯ ಸಂಬಂಧಿ ಸೇರಿದಂತೆ ಹಲವು ಕಾಯಿಲೆಗಳಿಗೆ ಕಾರಣ ಎನ್ನಲಾಗುತ್ತೆ. ಹಾಗಾದರೆ ಎಣ್ಣೆಯನ್ನು ಬಳಸದಿರುವುದೇ ಲೇಸು ಅಂದುಕೊಳ್ಳಬೇಡಿ. ಸರಿಯಾದ ಎಣ್ಣೆ ಸೇವನೆಯಿಂದಷ್ಟೇ ಆರೋಗ್ಯವಾಗಿರಲು ಸಾಧ್ಯ. ಸ್ವಲ್ಪ ಹಣ ಹೆಚ್ಚಾದರೂ ಪರವಾಗಿಲ್ಲ, ಹಿಂದಿನ ಕಾಲದವರಂತೆ ಗಾಣದಲ್ಲಿ ಎಣ್ಣೆ ಹಾಕಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿದ್ದು ಹೆಚ್ಚಿನ ಜನ ಕಾಳು, ಬೀಜಗಳನ್ನು ಖುದ್ದು ಗಾಣಕ್ಕೆ ಹಾಕಿಸಿ ಎಣ್ಣೆ ಮಾಡಿಸಿಕೊಂಡು ಅಡುಗೆಗೆ ಬಳಸುತ್ತಿದ್ದಾರೆ.
ಇತ್ತೀಚೆಗೆ ಬಹುತೇಕ ಕಡೆ ಆಯಿಲ್ ಮಿಲ್ಗಳು ತಲೆ ಎತ್ತಿವೆ. ಕಡಿಮೆ ಬೆಲೆಯಲ್ಲಿ ಕಣ್ಣ ಮುಂದೆಯೇ ಶುದ್ಧ ಎಣ್ಣೆಯನ್ನು ನೀಡುತ್ತಿವೆ. ಒಂದು ಲೀಟರ್ ಅಂಗಡಿ ಎಣ್ಣೆ ಬೆಲೆ, ಮಿಲ್ನಲ್ಲಿ ಎಣ್ಣೆ ಮಾಡಿಸಿದರೆ ಎಷ್ಟು ವೆಚ್ಚ ತಗುಲುತ್ತದೆ. ಮಿಲ್ ಚಾರ್ಜ್ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಅಂಗಡಿ ಬೆಲೆ - ಗಾಣಕ್ಕೆ ಹಾಕಿಸಿದರೆ - ಕೆಜಿ ಬೀಜದ ಬೆಲೆ - ಗಾಣದ ವೆಚ್ಚ
ಕಡ್ಲೆ ಕಾಯಿ ಎಣ್ಣೆ 160-190 300-330 100- 130 15 - 20 ರೂ.
ಕೊಬ್ಬರಿ ಎಣ್ಣೆ 220-250 360-400 160-190 15 - 20 ರೂ.
ಕಪ್ಪು ಎಳ್ಳೆಣ್ಣೆ 180-200 380-450 150-180 15 - 20 ರೂ.
ಇನ್ನು ಒಂದು ಲೀಟರ್ ಎಣ್ಣೆ ಮಾಡಿಸಲು ಎಷ್ಟು ಕೆಜಿ ಕಾಳು ಇಲ್ಲವೇ ಬೀಜ ಬೇಕಾಗುತ್ತದೆ ಎಂದು ತಿಳಿಯಿರಿ
1 ಲೀಟರ್ ಎಣ್ಣೆಗೆ ಎಷ್ಟು ಬೇಕಾಗುತ್ತೆ?
- ಗೊಬ್ಬರಿ ಎಣ್ಣೆ -– 2 ಕೆಜಿ ಕೊಬ್ಬರಿ
- ಕಡ್ಲೆ ಕಾಯಿ ಎಣ್ಣೆ - 2.5-3 ಕೆಜಿ
- ಎಳ್ಳೆಣ್ಣೆ - 2.5-3 ಕೆಜಿ
ಯಾವುದೇ ಕಲಬೆರಕೆ ಇಲ್ಲದ ಶುದ್ಧ ಎಣ್ಣೆಯ ಬೆಲೆ ಕೊಂಚ ಹೆಚ್ಚಾದರೂ ಆರೋಗ್ಯದ ಲಾಭಗಳು ಸಾಕಷ್ಟಿದೆ. ಇನ್ನು ತುಮಕೂರಿನಲ್ಲಿ ಅತೋಸ್ಯ ಎಣ್ಣೆ ಗಾಣದ ಮಾಲೀಕರಾದ ಪಿ.ವಾಗೀಶ್ ಅವರು ತಿಳಿಸುವಂತೆ ನೀವು ಗಾಣದಲ್ಲಿ ಎಣ್ಣೆ ಹಾಕಿಸಿಕೊಂಡು ಹಿಂಡಿ (ಹಿಪ್ಪೆ)ಯನ್ನು ಬಿಟ್ಟರೆ ಮಿಲ್ ಚಾರ್ಜ್ ಕೊಡುವಂತಿಲ್ಲ. ಹಿಂಡಿಯನ್ನು ಗಾಣದವರಿಗೆ ಬಿಟ್ಟರೆ ಎಣ್ಣೆ ಹಾಕಿಸಿಕೊಂಡಿದ್ದಕ್ಕೆ ಹಣ ಕೊಡುವಂತಿಲ್ಲ. ಉಚಿತವಾಗಿ ಎಣ್ಣೆಯನ್ನು ಹಾಕಿಸಿಕೊಳ್ಳಬಹುದು ಎಂದು ತಿಳಿಸುತ್ತಾರೆ. ಆರೋಗ್ಯದ ದೃಷ್ಟಿಯಿಂದ ಮಿಲ್ನಲ್ಲಿ ಎಣ್ಣೆ ಹಾಕಿಸಿಕೊಂಡು ಮಿತವಾಗಿ ಸೇವಿಸಿದಲ್ಲಿ ಆರೋಗ್ಯವೇ ನಿಮ್ಮ ಭಾಗ್ಯವಾಗಲಿದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ