Bengaluru Airport: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ!
Bengaluru Airport: 6E 455ಸಂಖ್ಯೆಯ ಇಂಡಿಗೋ ವಿಮಾನ ಕೋಲ್ಕತ್ತಾಗೆ ಹೊರಟಿತ್ತು, ಹಾಗೆಯೇ 6E 246 ಸಂಖ್ಯೆಯ ಇಂಡಿಗೋ ವಿಮಾನ ಭುವನೇಶ್ವರಕ್ಕೆ ಹೊರಟಿತ್ತು. ಆದರೆ ಏರ್ ಟ್ರಾಫಿಕ್ ಕಂಟ್ರೋಲರ್ಗಳ (ATCos) ನಡುವೆ ಸಂವಹನದ ಕೊರತೆಯ ಕಾರಣದಿಂದ ಇವೆರಡಕ್ಕೂ ಒಂದೇ ಸಮಯದಲ್ಲಿ ಹೊರಡಲು ಅನುಮತಿ ನೀಡಿದಾಗ ಈ ಘಟನೆ ಸಂಭವಿಸಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ(KempeGowda International Airport) ಕೋಲ್ಕತ್ತ(Kolkata) ಮತ್ತು ಭುವನೇಶ್ವರಕ್ಕೆ(Bhuvneshwar) ತೆರಳುತ್ತಿದ್ದ ಇಂಡಿಗೋ ವಿಮಾನಗಳು(Indigo Flights) ಏಕಕಾಲಕ್ಕೆ ಟೇಕ್ ಆಫ್ ಗೆ(Takeoff) ಸಿದ್ಧವಾದ ಕಾರಣ ಸಂಭವಿಸಬೇಕಿದ್ದ ಭಾರೀ ದರುಂತ ಸ್ವಲ್ಪದರಲ್ಲಿಯೇ ತಪ್ಪಿದೆ ಎಂದು ತಿಳಿದು ಬಂದಿದೆ. ಈ ಘಟನೆ ಜನವರಿ 7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದ ಹಲವು ದಿನಗಳ ಬಳಿಕ ವಿಷಯ ಬಹಿರಂಗ ಆಗಿರುವುದರಿಂದ ನಾಗರೀಕ ವಿಮಾನಯಾನ ನಿರ್ದೇಶನಾಲಯ ಘಟನೆ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶ ನೀಡಿದೆ. ಅಲ್ಲದೆ ತನಿಖೆಗೆ ಸಹಕಾರ ನೀಡುವಂತೆ ಬೆಂಗಳೂರು ವಿಮಾನ ನಿಲ್ದಾಣವಾಗಲಿ, ಇಂಡಿಗೋ ಸಂಸ್ಥೆಗೆ DGCA ಸೂಚನೆ ನೀಡಿದೆ
ಎರಡು ವಿಮಾನಗಳ ನಡುವೆ ಅಪಘಾತ ಸಂಭವಿಸುವ ಸ್ಥಿತಿ ಉಂಟಾಗಿದ್ದು ಹೇಗೆ..?
6E 455ಸಂಖ್ಯೆಯ ಇಂಡಿಗೋ ವಿಮಾನ ಕೋಲ್ಕತ್ತಾಗೆ ಹೊರಟಿತ್ತು, ಹಾಗೆಯೇ 6E 246 ಸಂಖ್ಯೆಯ ಇಂಡಿಗೋ ವಿಮಾನ ಭುವನೇಶ್ವರಕ್ಕೆ ಹೊರಟಿತ್ತು. ಆದರೆ ಏರ್ ಟ್ರಾಫಿಕ್ ಕಂಟ್ರೋಲರ್ಗಳ (ATCos) ನಡುವೆ ಸಂವಹನದ ಕೊರತೆಯ ಕಾರಣದಿಂದ ಇವೆರಡಕ್ಕೂ ಒಂದೇ ಸಮಯದಲ್ಲಿ ಹೊರಡಲು ಅನುಮತಿ ನೀಡಿದಾಗ ಈ ಘಟನೆ ಸಂಭವಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎರಡು ರನ್ವೇಗಳನ್ನು ಹೊಂದಿದೆ. ಒಂದು ಉತ್ತರ ರನ್ವೇ ಮತ್ತು ದಕ್ಷಿಣ ರನ್ವೇ. ಬೆಂಗಳೂರು ವಿಮಾನ ನಿಲ್ದಾಣ 2008ರಿಂದ ಕಾರ್ಯಾಚರಣೆ ನಡೆಸುತ್ತಿದೆ.
ವಿಮಾನ ಸಂಚಾರ ಹೆಚ್ಚಳವಾದಂತೆ ಎರಡನೇ ರನ್ವೇ ಅವಶ್ಯಕತೆ ಅರಿತು ನಿರ್ಮಾಣ ಆರಂಭಿಸಲಾಯಿತಾದರೂ ವಿಳಂಬದಿಂದಾಗಿ 2019ರಿಂದ ಎರಡನೇ ರನ್ವೇ ಕಾರ್ಯಾಚರಣೆ ಆರಂಭಿಸಿತು. ಪ್ರಾರಂಭದಿಂದಲೂ ಇದ್ದ ರನ್ವೇಯನ್ನು ಉತ್ತರ ರನ್ವೇ ಎಂದು, ಕರೆಯಲಾಗುತ್ತಿದ್ದು, ವಿಮಾನಗಳು ಹಾರಾಟ ಆರಂಭಿಸಲು(ಟೇಕಾಫ್) ಅದನ್ನು ಬಳಸಲಾಗುತ್ತಿದೆ.
ಎರಡನೇ ಮತ್ತು ಹೊಸ ರನ್ವೇಯನ್ನು ದಕ್ಷಿಣ ರನ್ವೇ ಎಂದು ಹೆಸರಿಸಿ ವಿಮಾನಗಳ ಆಗಮನಕ್ಕೆ(ಲ್ಯಾಂಡಿಂಗ್) ಬಳಕೆ ಮಾಡಲಾಗುತ್ತಿದೆ.. ಆದರೆ ಭಾರತದ ವಿಮಾನ ನಿಲ್ದಾಣಗಳಲ್ಲಿ ಎರಡು ಸಮಾನಾಂತರ ರನ್ವೇಗಳಿಂದ ಏಕಕಾಲಕ್ಕೆ ನಿರ್ಗಮನಕ್ಕೆ ಅನುಮತಿ ಇಲ್ಲ.
ಎರಡು ವಿಮಾನದಲ್ಲಿದ್ದ 414 ಪ್ರಯಾಣಿಕರು
ಇನ್ನು ವರದಿಗಳ ಪ್ರಕಾರ ಭುವನೇಶ್ವರಕ್ಕೆ ಹೊರಟಿದ್ದ ವಿಮಾನದಲ್ಲಿ 238 ಪ್ರಯಾಣಿಕರಿದ್ದರು. ಕೋಲ್ಕತ್ತಾಗೆ ಹೊರಟಿದ್ದ ವಿಮಾನದಲ್ಲಿ ಒಂದು 176 ಪ್ರಯಾಣಿಕರು ಇದ್ದರು..
ಎರಡು ವಿಮಾನಗಳು ಟೇಕಾಫ್ ಆಗಿ ಸರಿಸುಮಾರು ಮೂರು ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವವರೆಗೂ ಎರಡೂ ವಿಮಾನಗಳ ಪೈಲಟ್ಗಳಿಗೂ ಇದರ ಮಾಹಿತಿ ಇರಲಿಲ್ಲ.
ವಿಮಾನ ನಿಲ್ದಾಣದಲ್ಲಿರುವ ಪ್ರಿಸಿಷನ್ ಅಪ್ರೋಚ್ ರಾಡಾರ್ ಈ ಅಪಾಯವನ್ನು ಗ್ರಹಿಸಿ ಇಬ್ಬರೂ ಪೈಲಟ್ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದಾಗ ಪೈಲಟ್ಗಳು ಎಚ್ಚೆತ್ತಿದ್ದಾರೆ. ಕೂಡಲೆ ಕೋಲ್ಕತಾಕ್ಕೆ ಹೋಗಬೇಕಿದ್ದ ವಿಮಾನವನ್ನು ಎಡಕ್ಕೆ, ಭುವನೇಶ್ವರಕ್ಕೆ ತೆರಳುತ್ತಿದ್ದ ವಿಮಾನವನ್ನು ಬಲಕ್ಕೆ ತಿರುಗಿಸಿ ಅಪಾಯವನ್ನು ತಪ್ಪಿಸಿದ್ದಾರೆ. ಇಲ್ಲದಿದ್ದರೆ 414 ಅಮಾಯಕ ಪ್ರಯಾಣಿಕರ ಜೀವ ಘಟನೆಯಿಂದ ಹೋಗುವ ಸಂಭವ ಇತ್ತು.
ಇನ್ನು ಈ ಘಟನೆಯನ್ನು ಯಾವುದೇ ಲಾಗ್ಬುಕ್ನಲ್ಲಿ ದಾಖಲಿಸಲಾಗಿಲ್ಲ ಅಥವಾ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI)ಗೂ ಮಾಹಿತಿ ನೀಡಲಾಗಿಲ್ಲ ಎಂದು ಎಂದು DGCA ಹೇಳಿದೆ.
ಈ ಘಟನೆಯು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಏರ್ ಟ್ರಾಫಿಕ್ ಕಂಟ್ರೋಲರ್ಗಳ ನಡುವೆ ಸಮನ್ವಯದ ಕೊರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆಯನ್ನು ಸುರಕ್ಷತಾ ನಿಯಂತ್ರಕ ಡಿಜಿಸಿಎಗೆ ವರದಿ ಮಾಡುವಲ್ಲಿಯೂ ಲೋಪಗಳನ್ನು ಎತ್ತಿ ತೋರಿಸುತ್ತಿದೆ. ಇನ್ನು ಘಟನೆಯ ಕುರಿತು ಡಿಜಿಸಿಎ ತನಿಖೆ ನಡೆಸಲಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಡಿಜಿಸಿಎ ತಿಳಿಸಿದೆ.