Neo Train: ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಸೇರ್ಪಡೆ, ಶೀಘ್ರವೇ ಓಡಾಡಲಿದೆ ಮೆಟ್ರೋ ನಿಯೋ ರೈಲು

ನಮ್ಮ ಮೆಟ್ರೋ (Namma Metro) ಮತ್ತೊಂದು ಹೆಜ್ಜೆ ಇಡುತ್ತಿದೆ. ಐಟಿ ಕಂಪನಿಗಳ (IT Companies) ಸಹಭಾಗಿತ್ವದಲ್ಲಿ ದೇಶದಲ್ಲಿ ಮೊದಲ ಬಾರಿಗೆ ನಿಯೋ ರೈಲು (Neo Train) ಆರಂಭಿಸಲು ಮುಂದಾಗಿದೆ. ಅಷ್ಟಕ್ಕೂ ನಿಯೋ ರೈಲು ಎಂದರೇನು? ಹೇಗಿರುತ್ತೆ ಈ ಪುಟ್ಟ ರೈಲು ಗೊತ್ತಾ? ಇದರ ಬಗ್ಗೆ ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ಶೀಘ್ರವೇ ಸಂಚರಿಸಲಿರುವ ನಿಯೋ ರೈಲು

ಶೀಘ್ರವೇ ಸಂಚರಿಸಲಿರುವ ನಿಯೋ ರೈಲು

  • Share this:
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೂ (Bengaluru), ಟ್ರಾಫಿಕ್ ಜಾಮ್‌ಗೂ (Traffic Jam) ಅದೇನೋ ಸಂಬಂಧ. ಕೊರೋನಾ (Corona) ವಕ್ಕರಿಸುವ ಮೊದಲು ಜಾಸ್ತಿಯಿದ್ದ ಟ್ರಾಫಿಕ್ ಕಿರಿಕಿರಿ, ಕೊರೋನ ಬಳಿಕ ಕೊಂಚ ಕಡಿಮೆಯಾಗಿದೆ. ಆದರೂ ಜನ ಸಾಮಾನ್ಯರು, ವಾಹನ ಸವಾರರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒದ್ದಾಡೋದು ತಪ್ಪಿಲ್ಲ. ಇಂತಹ ಸಿಲಿಕಾನ್ ಸಿಟಿಯಲ್ಲಿ (Silicone City) ಸಂಚಾರಕ್ಕೆ ಜನರಿಗೆ ಮೆಟ್ರೋ (Metro) ದಿ ಬೆಸ್ಟ್ ಚಾಯ್ಸ್ (The Best Choice). ಇದೀಗ ನಮ್ಮ ಮೆಟ್ರೋ (Namma Metro) ಮತ್ತೊಂದು ಹೆಜ್ಜೆ ಇಡುತ್ತಿದೆ. ಐಟಿ ಕಂಪನಿಗಳ (IT Companies) ಸಹಭಾಗಿತ್ವದಲ್ಲಿ ದೇಶದಲ್ಲಿ ಮೊದಲ ಬಾರಿಗೆ ನಿಯೋ ರೈಲು (Neo Train) ಆರಂಭಿಸಲು ಮುಂದಾಗಿದೆ. ಅಷ್ಟಕ್ಕೂ ನಿಯೋ ರೈಲು ಎಂದರೇನು? ಹೇಗಿರುತ್ತೆ ಈ ಪುಟ್ಟ ರೈಲು ಗೊತ್ತಾ? ಇದರ ಬಗ್ಗೆ ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ರಾಜಧಾನಿ ಸಂಚಾರಕ್ಕೆ ಇನ್ನೊಂದು ಸೇರ್ಪಡೆ

ಸಂಚಾರ ವ್ಯವಸ್ಥೆಯಲ್ಲಿ ಬಿಎಂಟಿಸಿ ಹಾಗೂ ಮೆಟ್ರೋ ರೈಲೇ ನಂಬರ್ ಒನ್. ಈ ಮೆಟ್ರೋ ಸೇವೆಗೆ ಬೆಂಗಳೂರಿಗರು ಫಿದಾ ಆಗಿದ್ದಾರೆ.‌ ಇದೇ ರೀತಿ ಮತ್ತೊಂದು ಹೊಸ ರೈಲು ವ್ಯವಸ್ಥೆ ಬಂದ್ರೆ ಹೇಗಿರುತ್ತೆ ಅಂತ ಕನಸು ಕಾಣುತ್ತಿದ ಗಾರ್ಡನ್ ಸಿಟಿ ಜನ್ರಿಗೆ ಮೆಟ್ರೋ ನಿಗಮ ಹೊಸ ಯೋಜನೆ ಒಂದನ್ನು ಜಾರಿಗೆ ತರ್ತಿದೆ. ಅದೇ ಮೆಟ್ರೋ ನಿಯೋ ರೈಲು.

ಶೀಘ್ರವೇ ನಿಯೋ ರೈಲು ಎಂಟ್ರಿ

ಸಿಲಿಕಾನ್ ಸಿಟಿ ಬೆಂಗಳೂರಿಗೆ ಸದ್ಯದಲ್ಲೆ ಮೆಟ್ರೋ ನಿಯೋ ರೈಲು ಎಂಟ್ರಿಯಾಗಲಿದೆ.‌ ಈಗಾಗಲೇ ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಈ ನಿಯೋ ರೈಲು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತನ್ನ‌‌ ಮೊದಲ ಸಂಚಾರವನ್ನ ಆರಂಭಿಸಲಿದೆ.‌ ಮೂರು ಬಸ್ ಜಾಯಿಂಟ್ ಗಳಷ್ಟು ಉದ್ದವಿರುವ ಮೆಟ್ರೊ ನಿಯೋ ರೈಲು ವಿದ್ಯುತ್ ಮೂಲಕ ರಸ್ತೆಯಲ್ಲಿ ಸಂಚಾರ ಮಾಡಲಿದೆ.‌

ಇದನ್ನೂ ಓದಿ: Explained: ಪ್ರತಿ ಮಳೆಗಾಲದಲ್ಲೂ ಬೆಂಗಳೂರು ಮುಳುಗುವುದೇಕೆ? ಈ ಬಾರಿಯೂ ತಪ್ಪೋದಿಲ್ವ ಜನರಿಗೆ ಸಂಕಷ್ಟ?

ನಿಯೋ ರೈಲು ಹೇಗೆ ಕೆಲಸ ಮಾಡುತ್ತದೆ?

ನೋಡಲು ಬಸ್ ಥರ ಕಾಣುವ ಈ ರೈಲಿನಿಂದ ಎಂಜಿನ್ ಮೂಲಕ ಎತ್ತರದ  ಎಲೆಕ್ಟ್ರಿಕ್ ಲೈನ್ ಗೆ  ಕನೆಕ್ಷನ್ ನೀಡಲಾಗುತ್ತದೆ.‌ ಆ ವಿದ್ಯುತ್ ಆಧಾರದ ಮೇಲೆ ರೈಲು ಸಂಚಾರ ಮಾಡಲಿದೆ.‌ ನಮ್ಮ  ಮೆಟ್ರೋ ರೀತಿಯೇ ಇದೊಂದು ಗ್ರೀನ್ ಟೆಕ್ನಾಲಜಿಯಾಗಿದ್ದು   ಮೆಟ್ರೋ ನಿಯೋ ರೈಲಿಗೆ ಡೆಡಿಕೇಟೆಡ್ ಕಾರಿಡಾರ್ ಮೀಸಲಿರಿಸಲಾಗುತ್ತದೆ.

250 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ

ಮೆಟ್ರೋ ನಿಯೋ ರೈಲು ಸಂಚಾರಕ್ಕೆ ಕಾರಿಡಾರ್ ನಿರ್ಮಾಣ ಮಾಡಲು ಒಂದು ಕಿಲೋ‌ಮೀಟರ್ ಗೆ  120 ಕೋಟಿ  ವೆಚ್ಚ ತಗುಲಲಿದ್ದು ಏಕಕಾಲದಲ್ಲಿ 250 ಪ್ರಯಾಣಿಕರನ್ನ ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ ಎಂದು ನಿಗಮದ ಎಂಡಿ ಅಂಜುಮ್ ಫರ್ವೇಜ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಹೆಚ್ಚು ಟ್ರಾಫಿಕ್ ಹಾಗೂ ಐಟಿ ಉದ್ಯೋಗಿಗಳು ಇರುವ ಏರಿಯಾಗಳಲ್ಲಿ ಮೆಟ್ರೋ ನಿಯೋ ರೈಲು ಆರಂಭ ಮಾಡುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಸುತ್ತ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲು ಓಡಾಡಲಿದ್ದು ಪ್ರತಿ 500 ಮೀಟರ್ ಗೆ ಒಂದು ಸ್ಟೇಷನ್ ಬರಲಿದೆ.‌

ಖಾಸಗಿ ಸಹಭಾಗಿತ್ವದೊಂದಿಗೆ ಯೋಜನೆ

ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿಯಿಂದ ಮೆಟ್ರೋ ನಿಯೋ ರೈಲು ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಇದು ಮೆಟ್ರೋ ಫೀಡರ್ ಆಗಿಯೂ ಕೂಡ ಕಾರ್ಯ ನಿರ್ವಹಿಸಲಿದೆ.‌ ಇದ್ರಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವಂತಹ ಕಂಪನಿಗಳು  ಹಣ ಹೂಡಿಕೆ ಮಾಡುತ್ತಿದೆ.

ಇದನ್ನೂ ಓದಿ: Bengaluru: ಅಪ್ಪನ ಬೈಕ್​ಗಾಗಿ 25 ವರ್ಷ ಹುಡುಕಾಡಿದ ಬೆಂಗಳೂರಿನ ಟೆಕ್ಕಿ, ಅದು ಸಿಕ್ಕ ಕತೆಯೇ ರೋಚಕ!

ಬಿಎಂಆರ್ ಸಿ ಎಲ್ ನಿಯೋ ರೈಲಿಗೆ ಬೇಕಾದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಕಂಪನಿಗಳ ಎಂಪ್ಲಾಯಿಸ್ ಗೆ ಉಚಿತ ಪ್ರಯಾಣ ನೀಡಲಾಗುತ್ತದೆ ಅಂತ ಮೆಟ್ರೋ ಎಂಡಿ ತಿಳಿಸಿದ್ರು‌. ಒಟ್ಟಿನಲ್ಲಿ ಮೆಟ್ರೋ ನಿಯೋ ರೈಲಿಗೆ ಈಗಾಗಲೇ ಡಿಪಿಆರ್ ಸಿದ್ದ ಮಾಡಲಾಗುತ್ತಿದೆ.‌ ಅಂದುಕೊಂಡಂತೆ ಎಲ್ಲಾ ಆದ್ರೆ ಸದ್ಯದಲ್ಲೆ ಮೆಟ್ರೋ ನಿಯೋ ರೈಲು ಬೆಂಗಳೂರಲ್ಲಿ ಸಂಚಾರ ಮಾಡಲಿದೆ.‌
Published by:Annappa Achari
First published: