ಇಂದು ವಿಧಾನಸಭೆಯ (Assembly Session) ಶೂನ್ಯ ವೇಳೆಯಲ್ಲಿ ಮೇಕೆದಾಟು ಯೋಜನೆ (Mekedatu Project) ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಹೆಚ್.ಕೆ.ಪಾಟೀಲ್ (Former Minister HK Patil) ಪ್ರಸ್ತಾಪ ಮಾಡಿದರು.ಈ ವೇಳೆ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ (Tamilnadu Government) ಕೈಗೊಂಡ ನಿರ್ಣಯದ ಬಗ್ಗೆ ಪ್ರಸ್ತಾಪ ಮಾಡಲಾಯ್ತು. ತಮಿಳುನಾಡಿನವರು ಅನಾವಶ್ಯಕವಾಗಿ ಅಡ್ಡಗಾಲು ಹಾಕ್ತಿದ್ದಾರೆ. ಯೋಜನೆ ಆಗೋದನ್ನು ನಿಲ್ಲಿಸಲು ಕೆಟ್ಟ ಪ್ರವೃತ್ತಿ ಇದಾಗಿದೆ. ತಮಿಳುನಾಡು ನೀರನ್ನು ನಾವೇನು ಬಳಕೆ ಮಾಡಿಕೊಳ್ತಿಲ್ಲ. ನಮಗೆ ಕೊಟ್ಟಿರುವ ನ್ಯಾಯಯುತ ಹಕ್ಕಿನಲ್ಲಿ ನೀರು ಬಳಸಲು ಅವಕಾಶ ಇದೆ. ಹೀಗಾಗಿ ಸದನದಲ್ಲಿ ನಾವು ಒಂದು ನಿರ್ಣಯ ಮಾಡಬೇಕಿದೆ. ಸರ್ಕಾರ ತಕ್ಷಣ ಜಾಗೃತ ಆಗಬೇಕಿದೆ. ಈ ಸದನದ ಮೂಲಕ ವಿಪಕ್ಷ ಹಾಗೂ ಸರ್ಕಾರ ಎರಡು ಸೇರಿ ಒಂದು ಸರ್ವಾನುಮತದ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ(Opposition Leader Siddaramaiah), ತಮಿಳುನಾಡಿನ ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಿದ್ದಕ್ಕೆ ಕಾನೂನು ಬಾಹಿರ ನಿರ್ಣಯ ಮಾಡಿದ್ದಾರೆ. ಈಗಾಗಲೇ ಅದನ್ನು ಮುಖ್ಯಮಂತ್ರಿಗಳು ಖಂಡಿಸಿದ್ದಾರೆ. ನಾನೂ ಕೂಡ ಖಂಡಿಸಿದ್ದೇನೆ. ಕಾನೂನು ಬಾಹಿರ ನಿರ್ಣಯ ಮಾಡಲು, ತಮಿಳುನಾಡಿಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ರಾಜಕೀಯ ಕ್ಯಾತೆ ತೆಗೆಯಲು ಕಾನೂನು ಬಾಹಿರ ನಿರ್ಣಯ ಮಾಡಿದ್ದಾರೆ.
2018ರಲ್ಲಿ ಸುಪ್ರೀಂಕೋರ್ಟ್ ತೀರ್ಪು
ನಾನು ಅದನ್ನು ವಿಧಾನಸಭೆಯಲ್ಲಿ ತೀವ್ರವಾಗಿ ಖಂಡಿಸುತ್ತೇನೆ. 2018ರಲ್ಲಿ ಸುಪ್ರೀಂ ಕೋರ್ಟ್ ನಿಂದ ಅಂತಿಮ ತೀರ್ಪು ಬಂದಿದೆ. ಆ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ, ಅವರು ಕೂಡ ಒಪ್ಕೊಂಡಿದ್ದಾರೆ. ಪ್ರತಿ ವರ್ಷ 177.25 ಟಿಎಂಸಿ ನೀರನ್ನು ಅವರಿಗೆ ಕೊಡಬೇಕು. ಇದರ ಹೊರತಾಗಿ ಹೆಚ್ಚುವರಿಯಾಗಿ ಏಳೆಂಟು ವರ್ಷಗಳಲ್ಲಿ 582 ಟಿಎಂಸಿ ನೀರು ಅಡಿ ಹೋಗಿದೆ. ರಾಜಕಾರಣಕ್ಕಾಗಿ ಕಾಲು ಕೆರೆದುಕೊಂಡು ಬರೋರನ್ನು ನಾವು ಕನ್ನಡಿಗರಿಗಾಗಿ ಸಹಿಸಿಕೊಳ್ಳಬೇಕಾ ತಮಿಳುನಾಡು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.
ನೀರು, ಭಾಷೆ, ಗಡಿ ವಿಷಯದಲ್ಲಿ ನಾವು ಯಾವತ್ತಿಗೂ ರಾಜಕಾರಣ ಮಾಡಲ್ಲ. ಕನ್ನಡಿಗರ ಹಿತ ರಕ್ಷಣೆ ಮುಖ್ಯ. ಎಲ್ಲ ಪಕ್ಷಗಳು ಒಟ್ಟಾಗಿ ನಿರ್ಣಯ ಮಾಡಿ, ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವ ಕೆಲಸ ಮಾಡಬೇಕು. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಎಂದು ಕೇಳಿದ್ದೇವೆ. ಒಕ್ಕೂಟದ ಧರ್ಮ ಪಾಲನೆ ಮಾಡಬೇಕಲ್ಲ. ಕಾನೂನು ವಿರುದ್ಧವಾಗಿ ನಾವೇನು ಕೇಳ್ತಿಲ್ಲ. ಸಂವಿಧಾನ ಬದ್ಧವಾಗಿ ನಾವು ಕೇಳ್ತಿರೋದು. ಕೇಂದ್ರ ಸರ್ಕಾರದಿಂದ ಪರಿಸರ ಇಲಾಖೆಯ ಅನುಮತಿ ಕೊಡಿಸಬೇಕು.
ತಮಿಳುನಾಡು ಸರ್ಕಾರ ನಿರ್ಣಯ
ಬೆಂಗಳೂರು (Benglore) ನಗರಕ್ಕೆ ಕುಡಿಯುವ ನೀರು (Drinking Water) ಪೂರೈಸಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ ಕರ್ನಾಟಕ ಸರ್ಕಾರ (Government of Karnataka) ರಾಮನಗರ ಜಿಲ್ಲೆ ಮೇಕೆದಾಟು (Mekedatu) ಬಳಿ ಅಣೆಕಟ್ಟು ನಿರ್ಮಾಣ ಮಾಡಲು ರೂಪಿಸಿರುವ ಯೋಜನೆಗೆ ನಿರಂತರವಾಗಿ ವಿರೋಧ ಮಾಡುತ್ತಿರುವ ತಮಿಳುನಾಡು ಸರ್ಕಾರ (Government of Tamilunadu) ಇಂದು ಅಲ್ಲಿನ ವಿಧಾನಸಭೆಯಲ್ಲಿ (Assembly) ಮೇಕೆದಾಟು ಯೋಜನೆಗೆ ರಾಜ್ಯ ಬಜೆಟ್ ನಲ್ಲಿ ಹಣ ಮೀಸಲಿಟ್ಟಿರುವ ಕರ್ನಾಟಕ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಕೈಗೊಂಡಿದೆ.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಳೆದ ವಾರ ವಿಷಯ ಪ್ರಸ್ತಾಪಿಸಿದ್ದ ರಾಜ್ಯದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಬಹಳ ವೇಗವಾಗಿ ಬೆಳೆಯುತ್ತಿರುವ 'ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1.27 ಕೋಟಿ ಜನರಿದ್ದಾರೆ.
ಕುಡಿಯಲು 54 ಟಿಎಂಸಿ ನೀರಿನ ಅಗತ್ಯ ಇದೆ. ಆದರೆ ಸದ್ಯ ಸಿಗುತ್ತಿರುವುದು ಬರೀ 17 ಟಿಎಂಸಿ ನೀರು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಹರಿದು ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಸಂಗ್ರಹ ಮಾಡಲೆಂದು ಮೇಕೆದಾಟು ಬಳಿ ಅಣೆಕಟ್ಟು ಮಾಡಲು ನಿಶ್ವಯಿಸಲಾಗಿದೆ. ಇಡೀ ಜಗತ್ತು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು ಎಂದು ಹೇಳುತ್ತಿದೆ. ಆದರೂ ತಮಿಳುನಾಡು ಈ ಮಹತ್ವಾಕಾಂಕ್ಷೆಯ ಯೋಜನೆಗೆ ವಿರೋಧ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.