Auto Driver: ಮುಂಬೈನಲ್ಲಿ ಉಪನ್ಯಾಸಕರು ಈಗ ಬೆಂಗಳೂರಲ್ಲಿ ಆಟೋ ಡ್ರೈವರ್, ಇವರ ನಿರರ್ಗಳ English ಮಾತಿಗೆ ಬೆರಗಾಗದವರಿಲ್ಲ

ಬೆಂಗಳೂರಿನಲ್ಲಿ ಆಟೋ ಡ್ರೈವರ್​ ಇಂಗ್ಲೀಷ್ ಮಾತಿಗೆ ಪ್ರಯಾಣಿಕರು ಬೆರಗಾಗಿದ್ದಾರೆ. ಇವರ ಬಗ್ಗೆ ತಿಳಿದ್ರೆ ನೀವೂ ಕೂಡ ಈ ಆಟೋವನ್ನು ಒಮ್ಮೆಯಾದರೂ ಹತ್ತಲೇಬೇಕು ಅಂತೀರಾ

ಆಟೋ ಡ್ರೈವರ್ ಪಟ್ಟಾಭಿ ರಾಮನ್

ಆಟೋ ಡ್ರೈವರ್ ಪಟ್ಟಾಭಿ ರಾಮನ್

  • Share this:
ಆಟೋ ಚಾಲಕರು (Auto Drivers) ನಾವು ಹೇಳಿದ ಕಡೆಗೆ ಬರಲು ಹಿಂದೇಟು ಹಾಕಿದರು ಅಥವಾ ಹೆಚ್ಚು ಹಣ ಕೇಳಿದರು ಅಂತ ನಾವು ಅವರ ಮೇಲೆ ಕೆಲವೊಮ್ಮೆ ಕೋಪ ಮಾಡಿಕೊಳ್ಳುವುದುಂಟು. ಆದರೆ ಅವರಲ್ಲಿಯೂ ಕೆಲವರು ಚೆನ್ನಾಗಿ ಓದಿಕೊಂಡು ಕೆಲಸ ಸಿಗದೇ ಆಟೋ ಚಾಲಕರಾಗಿ ಕೆಲಸ ಮಾಡುತ್ತಿರುತ್ತಾರೆ. ಅವರ ಕುಟುಂಬವನ್ನು (Family) ನಡೆಸಿಕೊಂಡು ಹೋಗುವ ಜವಾಬ್ದಾರಿ (Responsibility) ಅವರ ಹೆಗಲ ಮೇಲೆ ಇರುತ್ತದೆ. ಆದ್ದರಿಂದ ಆಟೋ ಚಾಲಕರಾಗಿ ಕೆಲಸ ಮಾಡುತ್ತಿರುತ್ತಾರೆ ಎಂಬುದನ್ನು ಸಹ ಅನೇಕರು ಮರೆತು ಅವರ ಆ ಕೆಲಸವನ್ನು ಮತ್ತು ಅವರನ್ನು ತುಂಬಾ ಹೀನಾಯವಾಗಿ ಕಾಣುತ್ತಾರೆ ಹಾಗೂ ಹೀನಾಯವಾಗೇ ಮಾತಾಡಿಸುತ್ತಾರೆ. ಇಲ್ಲೊಬ್ಬ ವ್ಯಕ್ತಿ ಹಿಂದೊಮ್ಮೆ ಉಪನ್ಯಾಸಕನಾಗಿ (Lecturer) ಕೆಲಸ ಮಾಡಿದ್ದು, ನಿವೃತ್ತಿಯಾದ ನಂತರ ಈಗ ತನ್ನ ಹೊಟ್ಟೆ ಪಾಡಿಗಾಗಿ ಆಟೋ ಓಡಿಸಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ಇವರ ಆಟೋ ಹತ್ತಿದ ಪ್ರಯಾಣಿಕರ ಜೊತೆಗೆ ಚೆನ್ನಾಗಿ ಇಂಗ್ಲಿಷ್ (English) ಮಾತಾಡುತ್ತಾರೆ.

ಹೌದು.. ಬೆಂಗಳೂರಿನ ಈ ಆಟೋ ಚಾಲಕ ಎಷ್ಟು ಚೆನ್ನಾಗಿ ಇಂಗ್ಲಿಷ್ ಮಾತಾಡುತ್ತಾರೆ ಅಂತ ಕೇಳಲು ನೀವು ಇವರ ಆಟೋ ಒಮ್ಮೆಯಾದರೂ ಹತ್ತಲೇಬೇಕು, ಇಷ್ಟೇ ಅಲ್ಲ ಅವರು ಹಿಂದೊಮ್ಮೆ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರಂತೆ. ಬೆಂಗಳೂರು ಮೂಲದ ನಿಖಿತಾ ಅಯ್ಯರ್ ಎಂಬ ವೃತ್ತಿಪರ ಮಹಿಳೆ ತನ್ನ ಆಟೋರಿಕ್ಷಾ ಚಾಲಕ ತುಂಬಾನೇ ಸಲೀಸಾಗಿ ತಪ್ಪಿಲ್ಲದೆ ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕೇಳಿದಾಗ, ಅವರು ಮೊದಲಿಗೆ ದಿಗ್ಭ್ರಮೆಗೊಂಡರು.

ಉಪನ್ಯಾಸಕರಾಗಿದ್ದವರು ಈಗ ಆಟೋ ಡ್ರೈವರ್​ 

ಕುತೂಹಲದಿಂದ, ಆಟೋ ಚಾಲಕ ಹೇಗೆ ಇಂಗ್ಲೀಷ್‌ ಭಾಷೆಯನ್ನು ಇಷ್ಟು ಸುಲಭವಾಗಿ ಮಾತಾಡುತ್ತಾರೆ ಎಂದು ಕೇಳಿದಾಗ, 74 ವರ್ಷದ ಆಟೋ ಚಾಲಕ ತಾನು ಇಂಗ್ಲೀಷ್‌ ಉಪನ್ಯಾಸಕನಾಗಿ ಕೆಲಸ ಮಾಡಿರುವುದಾಗಿ ಮತ್ತು ತನ್ನ ಹಿಂದಿನ ಜೀವನದ ಬಗ್ಗೆ ಹೆಚ್ಚಿನ ವಿಷಯಗಳನ್ನು ಹಾಗೆಯೇ ಆಕೆಯ ಮುಂದೆ ತೆರೆದಿಟ್ಟರು. ಈ 45 ನಿಮಿಷದ ಆಟೋ ಪ್ರಯಾಣವು ತುಂಬಾನೇ ಚೆನ್ನಾಗಿತ್ತು ಎಂದು ಅಯ್ಯರ್ ಅವರು ತಮ್ಮ ಈ ಅನುಭವವನ್ನು ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈಗ ಅದು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆ ಪೋಸ್ಟ್‌ನಲ್ಲಿ ನಿಖಿತಾ ಅವರು "ಇಂದು ಬೆಳಗ್ಗೆ, ನಾನು ಕೆಲಸಕ್ಕೆ ಹೋಗುವಾಗ, ಹೆದ್ದಾರಿಯ ಮಧ್ಯದಲ್ಲಿ ಉಬರ್‌ನಲ್ಲಿ ಒಂದು ಆಟೋವನ್ನು ಬುಕ್ ಮಾಡಿಕೊಂಡೆ. ನಂತರ ಈ ಚಾಲಕರ ಜೊತೆಗೆ ಭೇಟಿಯಾಗುವ ಅವಕಾಶ ಸಿಕ್ಕಿತು. ಆಟೋದಲ್ಲಿ ಚಾಲಕರ ಸೀಟ್‌ನಲ್ಲಿ ಕುಳಿತ ಒಬ್ಬ ವಯಸ್ಸಾದ ಹಿರಿಯರು ನನ್ನನ್ನು ಎಲ್ಲಿಗೆ ಹೋಗಲು ಬಯಸುತ್ತೀರಿ ಎಂದು ನನ್ನನ್ನು ಕೇಳಿದರು" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

‘ಡ್ರೈವರ್​ ಇಂಗ್ಲೀಷ್​ಗೆ ಬೆರಗಾಗದವರಿಲ್ಲ’

ಮೊದಲಿಗೆ ಸಂದೇಹಾಸ್ಪದಳಾಗಿ, ನಾನು ನಗರದ ಇನ್ನೊಂದು ತುದಿಯಲ್ಲಿರುವ ತನ್ನ ಕಚೇರಿಯನ್ನು ತಲುಪಬೇಕು ಎಂದು ಆಟೋ ಚಾಲಕನಿಗೆ ಹೇಳಿದೆ. ಅದಕ್ಕೆ ಆ ಆಟೋ ಚಾಲಕ ಇಂಗ್ಲೀಷ್‌ನಲ್ಲಿ ಪ್ರತಿಕ್ರಿಯಿಸಿದರು, ಇದು ನನಗೆ ತುಂಬಾನೇ ಆಶ್ಚರ್ಯವನ್ನುಂಟು ಮಾಡಿತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಟ್ರಕ್‌ ನಿಲ್ಲಿಸಿ ಅಜ್ಜಿಗೆ ರಸ್ತೆ ದಾಟಲು ಸಹಾಯ ಮಾಡಿದ ಚಾಲಕ, ವೈರಲ್‌ ವಿಡಿಯೋ ನೋಡಿ

"ದಯವಿಟ್ಟು ಮೇಡಂ ಬನ್ನಿ ಕುಳಿತುಕೊಳ್ಳಿ, ನಿಮಗೆ ಬೇಕಾದುದನ್ನು ನೀವು ಪಾವತಿಸಬಹುದು" ಎಂದು ಆಟೋ ಚಾಲಕ ಇಂಗ್ಲೀಷ್‌ನಲ್ಲಿ ಹೇಳಿದ್ದನ್ನು ನೋಡಿ ನನಗೆ ಅವರ ಭಾಷೆ ಮತ್ತು ದಯಾಪರ ವರ್ತನೆಯಿಂದ ದಿಗ್ಭ್ರಮೆಗೊಂಡ ನಾನು ಸರಿ ಎಂದು ಹೇಳಿದೆ. ಅಯ್ಯರ್ ತನ್ನ ಕುತೂಹಲವನ್ನು ತಡೆದುಕೊಳ್ಳಲಾಗದೆ, "ನೀವು ಹೇಗೆ ಉತ್ತಮ ಇಂಗ್ಲಿಷ್ ಮಾತನಾಡುತ್ತೀರಿ" ಎಂದು ಚಾಲಕನನ್ನು ಕೇಳಿದಾಗ, ಆ ವ್ಯಕ್ತಿ ತಾನು ಮುಂಬೈ ಕಾಲೇಜಿನಲ್ಲಿ ಇಂಗ್ಲೀಷ್‌ ಉಪನ್ಯಾಸಕರಾಗಿದ್ದೆ ಮತ್ತು ಎಂಎ ಹಾಗೂ ಎಂ.ಇಡಿ ಮಾಡಿರುವುದಾಗಿ ಬಹಿರಂಗಪಡಿಸಿದರು.

ಇಷ್ಟೊಂದು ಓದಿಕೊಂಡು ಮತ್ತು ಕೆಲಸ ಮಾಡಿದ ನಂತರ ನೀವು ಏಕೆ ಆಟೋವನ್ನು ಚಲಾಯಿಸುತ್ತಿದ್ದೀರಿ ಎಂದು ನೀವು ಮುಂದಿನ ಪ್ರಶ್ನೆ ನನಗೆ ಕೇಳಬಹುದು ಎಂದು ಖುದ್ದು ಆಟೋ ಚಾಲಕ ನಿಖಿತಾ ಅವರಿಗೆ ಕೇಳಿದರು.

ಮುಂಬೈನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಕೆಲಸ

ಇದಕ್ಕೆ ಅವರೇ ಉತ್ತರ ನೀಡುತ್ತಾ “ನನ್ನ ಹೆಸರು ಪಟ್ಟಾಭಿ ರಾಮನ್. ನಾನು ಕಾಲೇಜು ಉಪನ್ಯಾಸಕರಾಗಿ ಹುದ್ದೆಯಿಂದ ನಿವೃತ್ತರಾದಾಗಿನಿಂದ 14 ವರ್ಷಗಳಿಂದ ಆಟೋ ಓಡಿಸುತ್ತಿದ್ದೇನೆ. ಕರ್ನಾಟಕದಲ್ಲಿ ಯಾವುದೇ ಉದ್ಯೋಗಗಳು ಸಿಗದ ಕಾರಣ ಅವರು ಮುಂಬೈನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು” ಎಂದು ರಾಮನ್ ಹೇಳಿದರು.

ಕೆಲಸಕ್ಕೆಂದು ಅಲೆಯುತ್ತಿರುವಾಗ ಇವರಿಗೆ "ನಿಮ್ಮ ಜಾತಿ ಯಾವುದು" ಎಂದು ಅವರನ್ನು ಸುಮಾರು ಬಾರಿ ಕೇಳಲಾಯಿತಂತೆ ಮತ್ತು ನಾವು ನಿಮಗೆ ಸ್ವಲ್ಪ ದಿನಗಳ ನಂತರ ತಿಳಿಸುತ್ತೇವೆ ಎಂದು ಎಲ್ಲೇ ಕೆಲಸಕ್ಕೆ ಹೋದರೂ ಇದನ್ನೇ ಹೇಳುತ್ತಿದ್ದರು ಎಂದು ನಿಖಿತಾ ಅಯ್ಯರ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಕರ್ನಾಟಕದಲ್ಲಿನ ಕಾಲೇಜುಗಳಿಂದ ಪಡೆದ ಈ ಪ್ರತಿಕ್ರಿಯೆಯಿಂದ ಬೇಸತ್ತ ರಾಮನ್ ಅವರು ಮಹಾರಾಷ್ಟ್ರದ ಮುಂಬೈಗೆ ತೆರಳಿದರು. ಅಲ್ಲಿ ಅವರು ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಕಂಡುಕೊಂಡರು. ಅವರು 60 ನೇ ವಯಸ್ಸಿನಲ್ಲಿ ನಿವೃತ್ತರಾಗುವ ಮೊದಲು ಪೊವಾಯಿಯ ಕಾಲೇಜಿನಲ್ಲಿ 20 ವರ್ಷಗಳ ಕಾಲ ಕೆಲಸ ಮಾಡಿದರು ಮತ್ತು ಬೆಂಗಳೂರಿಗೆ ಮರಳಿದರು.

"ಶಿಕ್ಷಕರಿಗೆ ಸರಿಯಾಗಿ ಸಂಬಳ ಸಿಗುವುದಿಲ್ಲ. ಅಬ್ಬಬ್ಬಾ ಎಂದರೆ ಖಾಸಗಿ ಸಂಸ್ಥೆಗಳಲ್ಲಿ 10,000 ದಿಂದ 15,000 ರೂಪಾಯಿಯವರೆಗೆ ಮಾತ್ರ ಕೊಡುತ್ತಾರೆ ಮತ್ತು ಪಿಂಚಣಿಯೂ ಇರುವುದಿಲ್ಲ. ರಿಕ್ಷಾ ಓಡಿಸುವ ಮೂಲಕ ನಾನು ದಿನಕ್ಕೆ ಕನಿಷ್ಠವೆಂದರೂ 700 ರಿಂದ 1,500 ರೂಪಾಯಿ ಪಡೆಯುತ್ತೇನೆ, ಅದು ನನಗೆ ಮತ್ತು ನನ್ನ ಗೆಳತಿಗೆ ಸಾಕಾಗುತ್ತದೆ" ಎಂದು ಅವರು ನಗುತ್ತಾ ಅಯ್ಯರ್ ಅವರಿಗೆ ಹೇಳಿದರು.

ಇದನ್ನೂ ಓದಿ: ಬಡ ಕುಟುಂಬದ ಅನ್ನ ಕಸಿದ ಅಧಿಕಾರಿಯ ನಿರ್ಲಕ್ಷ್ಯ..! ಒಂದು ಸೊನ್ನೆ ಎಡವಟ್ಟಿಗೆ ಹೈರಾಣಾದ ಆಟೋ ಚಾಲಕನ ಕುಟುಂಬ

‘ನನ್ನ ಹೆಂಡತಿಯಲ್ಲ ಆಕೆ ನನ್ನ ಗೆಳತಿ’

ರಾಮನ್ ತನ್ನ ಹೆಂಡತಿಯನ್ನು ತನ್ನ ಗೆಳತಿ ಎಂದು ಕರೆದರು ಮತ್ತು ನೀವು ಯಾವಾಗಲೂ ನಿಮ್ಮ ಜೊತೆಗಾರರನ್ನು ಸಮಾನವಾಗಿ ಪರಿಗಣಿಸಬೇಕು. "ಹೆಂಡತಿ ಎಂದು ನೀವು ಹೇಳಿದ ತಕ್ಷಣ, ಗಂಡಂದಿರು ಅವಳು ನಿಮಗೆ ಸೇವೆ ಸಲ್ಲಿಸಬೇಕಾದ ಗುಲಾಮಳೆಂದು ಭಾವಿಸುತ್ತಾರೆ. ಆದರೆ ಅವಳು ನನಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ, ವಾಸ್ತವವಾಗಿ ಅವಳು ಕೆಲವೊಮ್ಮೆ ನನಗಿಂತ ಅನೇಕ ವಿಷಯಗಳಲ್ಲಿ ಶ್ರೇಷ್ಠಳಾಗಿದ್ದಾಳೆ" ಎಂದು ಅವರು ವಿವರಿಸಿದರು.

ಈ ಆಟೋ ಚಾಲಕನಿಗೆ ಒಬ್ಬ ಮಗನಿದ್ದು, ಅವನು ಅವರ ಮನೆಯ ಬಾಡಿಗೆಯನ್ನು ಪಾವತಿಸಲು ಸಹಾಯ ಮಾಡುತ್ತಾನೆ. "ಆದರೆ ಅದರಾಚೆಗೆ, ನಾವು ನಮ್ಮ ಮಕ್ಕಳ ಮೇಲೆ ಅವಲಂಬಿತರಾಗಿಲ್ಲ. ಅವರು ತಮ್ಮ ಜೀವನವನ್ನು ನಡೆಸುತ್ತಾರೆ ಮತ್ತು ನಾವು ನಮ್ಮ ಜೀವನವನ್ನು ಸಂತೋಷದಿಂದ ನಡೆಸುತ್ತೇವೆ" ಎಂದು ಅವರು ಹೇಳಿದರು.

ನಿಖಿತಾ ಅಯ್ಯರ್ ಅವರು ರಾಮನ್ ಅವರನ್ನು ಹೊಗಳುತ್ತಾ ಕೆಲವು ಸಾಲುಗಳೊಂದಿಗೆ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದರು. ಅದೇನು ಅಂತ ನೀವು ನೋಡಿ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ

"ಜೀವನದ ಬಗ್ಗೆ ಒಂದೇ ಒಂದು ದೂರು ಇಲ್ಲ. ಒಂದೇ ಒಂದು ಪಶ್ಚಾತ್ತಾಪವೂ ಇಲ್ಲ. ಇಂತಹ ನಾಯಕರಂತಹ ಜನರಿಂದ ಕಲಿಯುವುದು ತುಂಬಾನೇ ಇದೆ" ಎಂದು ಅವರು ಬರೆದಿದ್ದಾರೆ. ನಾಲ್ಕು ದಿನಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್‌ಗೆ 73,000 ಕ್ಕೂ ಹೆಚ್ಚು ಲೈಕ್ ಗಳು ಬಂದಿದ್ದು ಮತ್ತು 2,300 ಕ್ಕೂ ಹೆಚ್ಚು ಜನರು ಇದನ್ನು ಮರು ಹಂಚಿ ಕೊಂಡಿದ್ದಾರೆ.

"ಸ್ಪೂರ್ತಿದಾಯಕ ಕಥೆ" ಎಂದು ಒಬ್ಬ ವ್ಯಕ್ತಿಯು ಕಾಮೆಂಟ್ಸ್ ವಿಭಾಗದಲ್ಲಿ ಬರೆದರೇ, ಇನ್ನೊಬ್ಬರು "ನಾನು ಈ ವ್ಯಕ್ತಿ ಮತ್ತು ಅವನ ಧೈರ್ಯವನ್ನು ಮೆಚ್ಚುತ್ತೇನೆ. ಆದರೆ ಅವನು ಎದುರಿಸಿದ ತಾರತಮ್ಯದ ಬಗ್ಗೆ ನನಗೆ ಕೋಪವಿದೆ. ಆದರೆ ಇದು ಅವರನ್ನು ತಮ್ಮ 74 ನೇ ವಯಸ್ಸಿನಲ್ಲಿಯೂ ಆಟೋ ಓಡಿಸಲು ಒತ್ತಾಯಿಸಿದೆ" ಎಂದು ಬರೆದಿದ್ದಾರೆ.
Published by:Pavana HS
First published: