ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿ ನಿಗೂಢ ಸಾವು

ಸೈಯದ್ ಉಮೇದ್ ನಿಗೂಢ ಹತ್ಯೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು (ಜೂ. 29):  ಬಕ್ರೀದ್ ಹಬ್ಬಕ್ಕೆ ಮನೆಗೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನು ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಸುಲ್ತಾನ್ ಪಾಳ್ಯ ನಿವಾಸಿ ಸೈಯದ್ ಉಮೇದ್ ಅಹಮದ್ ಹತ್ಯೆಯಾದ ವಿದ್ಯಾರ್ಥಿ. ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರಿ ನಗರ ಮತ್ತು ವಿಜಿನಾಪುರ ನಡುವಿನ ರೈಲು ಹಳಿ ಪಕ್ಕದಲ್ಲಿ ಸೈಯದ್ ಉಮೇದ್ ಮೃತದೇಹ ಪತ್ತೆಯಾಗಿದೆ. ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಸೈಯದ್ ಉಮೇದ್ ಅಹಮದ್ ಒಂದು ವಾರದ ಹಿಂದೆ ನಗರದ ಸುಲ್ತಾನ್ ಪಾಳ್ಯದ ತನ್ನ ಮನೆಗೆ ಬಂದಿದ್ದ. ಹಬ್ಬ ಮುಗಿಸಿ ಕಳೆದ ಶನಿವಾರ ಹುಬ್ಬಳ್ಳಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಆದರೆ ಈಗ ಸೈಯದ್ ಉಮೇದ್ ಇದೀಗ ರೈಲು ಹಳಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ.

ಸೈಯದ್ ಉಮೇದ್ ಅಹಮದ್ ಹುಬ್ಬಳ್ಳಿಯ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ಶನಿವಾರ ಹುಬ್ಬಳ್ಳಿಗೆ ಹೊರಡುವುದಾಗಿ ಹೇಳಿದ್ದ ಸೈಯದ್ ಉಮೇದ್ ಗೆ ಭಾನುವಾರ ತಂದೆ ಪೋನ್ ಮಾಡಿದ್ದು ಈ ವೇಳೆ ತಾನು ಹುಬ್ಬಳ್ಳಿಗೆ ತಲುಪಿದ್ದಾಗಿ ಹೇಳಿದ್ದನಂತೆ. ಬಳಿಕ ಪೋನ್ ಸ್ವಿಚ್ ಆಫ್ ಆಗಿದ್ದು ಎಷ್ಟೋತ್ತಾದರು ಪೋನ್ ಆನ್ ಆಗಿರಲಿಲ್ಲ. ನಂತರ ಸಾರ್ವಜನಿಕರು ರೈಲು ಹಳಿ ಬಳಿ ಸೈಯದ್ ಉಮೇದ್ ಶವ ಕಂಡು ಬೈಯ್ಯಪ್ಪನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಸೈಯದ್ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು ಅದನ್ನ ಪರಿಶೀಲಿಸಿ ಮೃತ ವ್ಯಕ್ತಿ ಸೈಯದ್ ಎಂದು ಧೃಡಪಡಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಯುವಕನ ಕುತ್ತಿಗೆ ಬಳಿ ಇರಿದು ಹತ್ಯೆ ಮಾಡಿರುವ ಕುರುಹುಗಳು ಪತ್ತೆಯಾಗಿದ್ದು ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಹಳೇ ಮೈಸೂರು ಪ್ರಾಂತ್ಯ

ಮೃತ ವಿದ್ಯಾರ್ಥಿ ಪೋಷಕರ ಬಳಿ ಮಾಹಿತಿ ಸಂಗ್ರಹಿಸಿರುವ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು, ಸೈಯದ್ ಕಾಲೇಜಿಗೆ ಹೊರಡುವುದಾಗಿ ಹೇಳಿ ಶನಿವಾರವೇ ಹೊರಟಿದ್ದ, ಒಮ್ಮೆ ಪೋನ್ ಮಾಡಿದಾಗ ಹುಬ್ಬಳ್ಳಿಗೆ ತಲುಪಿದ್ದೇನೆ ಎಂದು ಕೂಡ ತಿಳಿಸಿದ್ದ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಇನ್ನೂ ಪೊಲೀಸರ ತನಿಖೆ ವೇಳೆ ವಿದ್ಯಾರ್ಥಿ ಮೊಬೈಲ್ ಫೋನ್ ಪರಿಶೀಲನೆ ನಡೆಸಿದ್ದು, ಮೊಬೈಲ್ ನಲ್ಲಿ ಈ ಟಿಕೆಟ್ ಬುಕ್ ಮಾಡಿರುವುದು ಕಂಡು ಬಂದಿದೆ.

ಈ ನಡುವೆ ಸೈಯದ್ ಉಮೇದ್ ನಿಗೂಢ ಹತ್ಯೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಅದೇನೇ ಇರಲಿ ಬಕ್ರೀದ್ ಹಬ್ಬ ಅಂತೇಳಿ ಮನೆಗೆ ಬಂದ ವೈದ್ಯಕೀಯ ವಿದ್ಯಾರ್ಥಿಯ ನಿಗೂಢ ಸಾವು ಪೊಲೀಸರಿಗೆ ತಲೆ ಬಿಸಿ ತಂದೊಡ್ಡಿದೆ. ಈತ್ತ ಹಬ್ಬ ಆಚರಿಸಿ ಕಾಲೇಜಿಗೆ ಹೊರಟೆ ಎಂದವನು ರೈಲು ಹಳಿ ಬಳಿ ಶವವಾಗಿ ಪತ್ತೆಯಾಗಿದ್ದು ಪೋಷಕರನ್ನ ಚಿಂತೆಗೀಡು ಮಾಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: