Extra Marital Affair: ಪಾಪಪ್ರಜ್ಞೆ ಕಾಡುತ್ತಿದೆ.. ಅಕ್ರಮ ಸಂಬಂಧ ಸಾಕು ಎಂದ ವಿವಾಹಿತೆಯ ಬರ್ಬರ ಕೊಲೆ!

married woman killed by her boyfriend: ಎಷ್ಟಾದರೂ ನನ್ನೊಂದಿಗೆ 3 ವರ್ಷ ಅಲೆದವನು. ನನ್ನನ್ನು ಅರ್ಥ ಮಾಡಿಕೊಳ್ಳುತ್ತಾನೆ ಎಂದು ಅನಿತಾ ಭಾವಿಸಿದ್ದಳು. ನನಗೆ ಪಾಪಪ್ರಜ್ಞೆ ಕಾಡುತ್ತಿದೆ, ನಮ್ಮ ಸಂಬಂಧವನ್ನು ಕೊನೆ ಮಾಡಲು ಬಯಸಿದ್ದೇನೆ. ಇನ್ಮುಂದೆ ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ ಎಂದು ಬಿಟ್ಟಳು.

ಕೊಲೆಯಾದ ಅನಿತಾ

ಕೊಲೆಯಾದ ಅನಿತಾ

  • Share this:
ಬೆಂಗಳೂರು: ಅವರಿಬ್ಬರದ್ದು ಇನ್ನೂ ಚಿಕ್ಕ ವಯಸ್ಸು. ಇಬ್ಬರು ಒಟ್ಟಿಗೆ ಖಾಸಗಿ ಮೆಡಿಕಲ್​​​ ಶಾಪ್​​ನಲ್ಲಿ ಕೆಲಸ ಮಾಡುತ್ತಿದ್ದರು. ಹರೆಯದ ಸಹೋದ್ಯೋಗಿಗಳ ಮಧ್ಯೆ ಸ್ನೇಹ ಬೆಳೆದು, ಸಲುಗೆ ಶುರುವಾಗಿತ್ತು. ಇಬ್ಬರ ಮಧ್ಯೆ ಪ್ರೇಮ ಅರಳಿ ಮನಸ್ಸುಗಳ ಜೊತೆ ದೇಹಗಳು ಒಂದಾಗಿದ್ದವು. ಅಲ್ಲಿಗೆ ಇದೊಂದು ಲವ್​ ಸ್ಟೋರಿ ಆಗುತ್ತಿತ್ತು. ಆದರೆ ಅಕ್ರಮ ಸಂಬಂಧ ಎನಿಸಿಕೊಂಡಿದ್ದೇ ಈ ಕಥೆಯ ದುರಂತ ನಾಯಕಿಯಿಂದ. ಮೇಲೆ ಹೇಳಿದ ಪ್ರೇಮ ಕಹಾನಿ ಶುರುವಾಗಿದ್ದೇ 23 ವರ್ಷದ ವಿವಾಹಿತೆ ಹಾಗೂ 27 ವರ್ಷದ ಯುವಕನ ಮಧ್ಯೆ. ಯಾರನ್ನು ಯಾರು ಪುಸಲಾಯಿಸಿದ್ರೋ, ಯಾರು ಯಾರ ಮೋಹದ ಬಲೆಗೆ ಬಿದ್ದರೋ ಗೊತ್ತಿಲ್ಲ. ಕಳೆದ 3 ವರ್ಷಗಳ ಹಿಂದೆ ಪರಿಚಯವಾದವರ ಮಧ್ಯೆ ಸಂಬಂಧ ಅಂದರೆ ಅಕ್ರಮ ಸಂಬಂಧವೊಂದು ಶುರುವಾಗಿತ್ತು.

3 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಬಂಧ ಇಂದು ಬೆಳಗ್ಗೆ ಅಪರಾಧದಲ್ಲಿ ಕೊನೆಯಾಗಿದೆ. ಒಬ್ಬರು ಕೊಲೆಯಾದರೆ, ಮತ್ತೊಬ್ಬರು ಕೊಲೆಗಾರರಾಗಿದ್ದಾರೆ. ಮೋಹದಲ್ಲಿ ಶುರುವಾದ ಸಂಬಂಧ ಪಾಪಪ್ರಜ್ಞೆಯ ಬೆಂಕಿಯಲ್ಲಿ ಬೆಂದು ಇಂದು ಸ್ಮಶಾಣ ಸೇರಿದೆ.

ಅಕ್ರಮ ಸಂಬಂಧ & ಪಾಪಪ್ರಜ್ಞೆ..!

ಇಂದು ಬೆಳ್ಳಂಬೆಳಗ್ಗೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿದೆ. ಕೊಲೆಯಾದಾಕೆ ಅನಿತಾ (23), ಕೊಲೆ ಮಾಡಿದ್ದು ಆಕೆಯ ಸಹೋದ್ಯೋಗಿ ವೆಂಕಟೇಶ್​(27). ಇಬ್ಬರು ಖಾಸಗಿ ಮೆಡಿಕಲ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಭೇಟಿಯಾಗಿದ್ದರು, ಸ್ವಲ್ಪ ಹೊತ್ತು ಇಬ್ಬರು ಮಾತನಾಡಿದ್ದರು. ನಂತರ ವೆಂಕಟೇಶ್​ ಏಕಾಏಕಿ ಅನಿತಾ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಅನಿತಾಳ ಪ್ರಾಣ ಪಕ್ಷಿ ಹಾರಿ ಹೋಗಿ ಕೆಲವೇ ಕ್ಷಣಗಳಲ್ಲಿ ಹೆಣವಾಗಿದ್ದಾಳೆ. ಆಕೆಯ ಈ ಸ್ಥಿತಿಗೆ ಕಾರಣವಾಗಿದ್ದು 2 ಸಂಗತಿಗಳು. ಒಂದು ಅಕ್ರಮ ಸಂಬಂಧ, ಎರಡನೆಯದ್ದು ಪಾಪಪ್ರಜ್ಞೆ.

ಹೌದು ಪಾಪಪ್ರಜ್ಞೆಯೇ ಅನಿತಾಳನ್ನು ಇಂದು ಶವವಾಗಿಸಿದೆ. 3 ವರ್ಷಗಳ ಹಿಂದೆ ಅನಿತಾಗೆ 20ರ ಹರೆಯ, ಅಷ್ಟರಲ್ಲಿ ಆಗಲೇ ತಾಳಿ ಕೊರಳಲ್ಲಿ ಇತ್ತು. ಆದರೆ ಹರೆಯದ ಮನಸ್ಸಿಗೆ ಯಾವ ಬೇಲಿಯೂ ಇರಲಿಲ್ಲ. ಅಂದು 24 ವರ್ಷದ ವೆಂಕಟೇಶನ ಮೋಹಕ್ಕೆ ಬಿದ್ದದ್ದಳು. 3 ವರ್ಷಗಳಿಂದ ಇವರ ಸರಸ ಸಲ್ಲಾಪ ನಡೆಯುತ್ತಿತ್ತು. ಅದೇನಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಅನಿತಾಗೆ ವೆಂಕಟೇಶ್​ ಜೊತೆಗಿನ ಪ್ರೇಮ-ಕಾಮದ ಬಗ್ಗೆ ಜಿಗುಪ್ಸೆ ಬಂದು ಬಿಟ್ಟಿತ್ತು.

ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ

ಮನಸಾಕ್ಷಿ ಅನ್ನೋದು ಒಂದು ಇರುತ್ತಲ್ಲ. ಅದು ಒಂದಲ್ಲ ಒಂದು ದಿನ ಕಾಡಲು ಆರಂಭಿಸಿಯೇ ಬಿಡುತ್ತೆ. ಅನಿತಾಗೆ ಆಗಿದ್ದು ಅದೇ. ಸಾಕು.. ಬದುಕಿನ ಈ ಅಕ್ರಮ ಅಧ್ಯಾಯ ಮುಗಿಯಲಿ ಅಂತ ಬಯಸಿದ್ದಳು ಅನಿತಾ. ಪ್ರಿಯಕರ ವೆಂಕಟೇಶನಿಗೆ ನೇರಾನೇರ ಹೇಳಿದ್ದಳು ಕೂಡ. ಎಷ್ಟಾದರೂ ನನ್ನೊಂದಿಗೆ 3 ವರ್ಷ ಅಲೆದವನು. ನನ್ನನ್ನು ಅರ್ಥ ಮಾಡಿಕೊಳ್ಳುತ್ತಾನೆ ಎಂದು ಅನಿತಾ ಭಾವಿಸಿದ್ದಳು. ನನಗೆ ಪಾಪಪ್ರಜ್ಞೆ ಕಾಡುತ್ತಿದೆ, ನಮ್ಮ ಸಂಬಂಧವನ್ನು ಕೊನೆ ಮಾಡಲು ಬಯಸಿದ್ದೇನೆ. ಇನ್ಮುಂದೆ ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ ಎಂದು ಬಿಟ್ಟಳು.

ಇದನ್ನೂ ಓದಿ: Drugs Case: ಬೇಕಂತಲೇ ಅರೆಸ್ಟ್ ಆಗಿದ್ದ ಡ್ರಗ್ ಪೆಡ್ಲರ್ ಥಾಮಸ್ ಕಲು; ಸೆಲಬ್ರಿಟಿ ಸೋನಿಯಾ ಮನೆಯಲ್ಲಿ ಗಾಂಜಾ ಪತ್ತೆ

ಪ್ರಿಯಕರ ಕೊಲೆಗಾರನಾದ..!

ಅನಿತಾ ಬೇಡ ಅಂತಿದ್ದೇ ದೂರವಾಗುವ ಮನಸ್ಸು ವೆಂಕಟೇಶ್​ಗೆ ಇರಲಿಲ್ಲ. ಫೋನ್​ನಲ್ಲಿ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಯಾವಾಗ ಅನಿತಾ ಬಿಲ್​ಕುಲ್​ ಒಪ್ಪುಲಿಲ್ಲವೋ, ವೆಂಕಟೇಶನ ಮನದಲ್ಲಿ ಕೆಟ್ಟ ಯೋಚನೆ ಬಂದೇ ಬಿಟ್ಟಿತ್ತು. ಮಾತನಾಡಬೇಕು ಅಂತ ಪುಸಲಾಯಿಸಿ ಅನಿತಾಳನ್ನು ಕರೆದಿದ್ದಾನೆ. ನೇರವಾಗಿ ಮಾತನಾಡಿ ಎಲ್ಲದ್ದಕ್ಕೂ ಕೊನೆಯಾಡಲು ಬಂದ ಅನಿತಾಳ ಜೀವನವೇ ಕೊನೆಯಾಗಿದೆ. ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ವೆಂಕಟೇಶ ಅನಿತಾಳನ್ನು ಕೊಂದೇ ಬಿಟ್ಟಿದ್ದಾನೆ.  ಕೆಂಗೇರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಆರೋಪಿ ವೆಂಕಟೇಶ್​ ತಮ್ಮ ಸಂಬಂಧ, ಕೊಲೆ ಹಿಂದಿನ ಕಾರಣದ ಬಗ್ಗೆ ಬಾಯ್ಬಿಟ್ಟಿದ್ದಾನೆ.
Published by:Kavya V
First published: