Bengaluru Power Cut: ಬೆಂಗಳೂರಿನಲ್ಲಿ ಇಂದು ವಿದ್ಯುತ್ ವ್ಯತ್ಯಯ- ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ..

Bengaluru Power Cut:ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಹಲವೆಡೆ ಇಂದು ವಿದ್ಯುತ್​ ವ್ಯತ್ಯಯವಾಗಲಿದ್ದು(Power Cut), ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ(BESCOM) ಮನವಿ ಮಾಡಿದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 27ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ ಎಂಬ ಪಟ್ಟಿ ಇಲ್ಲಿದೆ.

ಇಸ್ಕಾನ್‌ ಬಳಿಯ ಮಂತ್ರಿ ವಸತಿ ಸಮುಚ್ಚಯ, ತಲಘಟ್ಟಪುರ, ರಘುವನಹಳ್ಳಿ, ಗುಬ್ಲಾಳ, ಕುವೆಂಪುನಗರ, ವಿವಿ ನಗರ, ವಿವಿ ಬಡಾವಣೆ, ಬಾಲಾಜಿ ಲೇಔಟ್‌, ರಾಯಲ್‌ ಫಾರ್ಮ್‌, ಎಚ್‌ಎಸ್‌ಆರ್‌ ಬಡಾವಣೆಯ 7ನೇ ಸೆಕ್ಟರ್‌ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ’ ಎಂದು ಎಂದು ಸೂಚನೆ ನೀಡಲಾಗಿದೆ.

ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ..  

ರಾಮಗೊಂಡನಹಳ್ಳಿ, ವೈಟ್ ಫೀಲ್ಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಪಿ & ಟಿ ಲೇಔಟ್, ಹೊರಮಾವು, ಬಾಬುಸಾಪಾಳ್ಯ ಮತ್ತು  ಅಲ್ಲಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಆಂಧ್ರದಲ್ಲಿ ಗುಲಾಬ್ ಚಂಡಮಾರುತ ಆರ್ಭಟ..

ಸ್ನೇಹ ಕಾಲೋನಿ, ಚಿಕ್ಕಲಸಂದ್ರ ,  ಮಾರುತಿ ನಗರ, ಸಣ್ಣಕ್ಕಿ ಬಯಲು, ಕಾಮಾಕ್ಷಿ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮೋದಿ ರೋಡ್, ಮಾರ್ಕೆಟ್ ರೋಡ್, ದೊಡ್ಡಣ್ಣ ನಗರ, ಡಿಜೆ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ  ಬಂಡೆ ಬೊಮ್ಮಸಂದ್ರ, ದೊಡ್ಡ ಗುಬ್ಬಿ  ಅಲ್ಲಿನ ಕೆಲ ಏರಿಯಾಗಳಲ್ಲಿ  ವಿದ್ಯುತ್ ಸಮಸ್ಯೆಯಾಗಲಿದೆ.

ಚಿಕ್ಕ ಬಸವನಪುರ, ಟಿಸಿ ಪಾಳ್ಯ ಮೇನ್ ರೋಡ್, ಅಜಿತ್ ಲೇಔಟ್,.ವಿಲ್ಸನ್ ಗಾರ್ಡನ್ ,ಲಾಲ್ಜಿ ನಗರ ,ಲಕ್ಕಸಂದ್ರ, ವೈಟ್ ಹೌಸ್, ದಿನ್ನೂರು ರಸ್ತೆಯ ಭಾಗಗಳು, ಗಂಗಾ ನಗರ , ಕಿರ್ಲೋಸ್ಕರ್ ಲೇಔಟ್, ನಾವಿ ಲೇಔಟ್, ಚಿಕ್ಕಸಂದ್ರ, ಅಂದಾನಪ್ಪ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್  ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ.

ಇದಿಷ್ಟೇ ಅಲ್ಲದೇ ಬೇರೆ ಕೆಲ ನಗರಗಳಲ್ಲಿ ಸಹ ವಿದ್ಯುತ್ ಸಮಸ್ಯೆ ತಲೆದೋರಬಹುದು ಎಂದು ಹೇಳಲಾಗುತ್ತಿದೆ. ಬೆಸ್ಕಾಂ ಮುಂಚಿತವಾಗಿ ಮಾಹಿತಿಯನ್ನೇನೋ ನೀಡಿದೆ, ಆದರೆ ಇದು ಜನರಿಗೆ ಬಹಳಷ್ಟು ಸಮಸ್ಯೆಯನ್ನು ತಂದೊಡ್ಡುತ್ತದೆ.

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ‘ಇಂದು ಸ್ಥಿರತೆ ಕಾಯ್ದುಕೊಂಡ ಚಿನ್ನ-ಬೆಳ್ಳಿ; ಬೆಂಗಳೂರಿನಲ್ಲಿ ಇಂದಿನ ರೇಟ್ ನೋಡಿ..!

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು .  ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ. ಹಾಗೆಯೇ ಇಲ್ಲರ ಮನೆಯಲ್ಲಿ ಯುಪಿಎಸ್​ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನ ಸಹ ತಿಳಿಸದಿರುವುದು ಜನರ ಕೋಪಕ್ಕೆ ಮುಖ್ಯ ಕಾರಣವಾಗಿದೆ.
Published by:Sandhya M
First published: