ಬರ್ತ್ ಡೇ ಬಲೂನ್ ತೆಗೆಯಿತು ಪ್ರಾಣ.. ಬೆಂಗಳೂರಿನ ಅಪಾರ್ಟ್​​ಮೆಂಟ್​​ನಲ್ಲಿ ಭಯಾನಕ ಘಟನೆ!

ಜೊತೆಗಿದ್ದ ವ್ಯಕ್ತಿ ನೀರು ತರಲೆಂದು ಅಪಾರ್ಟ್‌ಮೆಂಟ್ ಒಳಗೆ ಹೋಗಿದ್ದ. ಕೆಲವೇ ಕ್ಷಣಗಳಲ್ಲಿ ದಿನೇಶ್​ ಒಬ್ಬರೇ ಬಲೂನ್ ಫಿಲ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ದಿನೇಶ್​ ಕೈ-ಕಾಲು, ದೇಹ ಛಿದ್ರಗೊಂಡು ಚಿಮ್ಮಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಬರ್ತ್​ ಡೇ ಪಾರ್ಟಿಗಳು ಬಲೂನ್​ಗಳಿಲ್ಲದೆ ಕಂಪ್ಲೀಟ್​ ಆಗೋಲ್ಲ. ಸಂಭ್ರಮದ ಸಂಕೇತದಂತಿದ್ದ ಬಣ್ಣ ಬಣ್ಣದ ಬಲೂನ್​ಗಳು ಇಂದು ಒಬ್ಬರ ಪ್ರಾಣವನ್ನೇ ತೆಗೆದಿದೆ. ಕೇಕ್​​ ಕಟ್​ ಮಾಡಿ ಸೆಲೆಬ್ರೆಷನ್​ ಮಾಡಬೇಕಾದ ಸ್ಥಳದಲ್ಲಿ ಭಯಾನಕ ಸ್ಫೋಟ ನಡೆದಿದೆ. ಬಲೂನ್​​​ ಬ್ಲಾಸ್ಟ್​​​​​​ನಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟಿದ್ದಾರೆ. ಬರ್ತ್​ಡೇ ಆಚರಣೆಗೆಂದು ಬಲೂನ್ ಗ್ಯಾಸ್ ಫಿಲ್ ಮಾಡಬೇಕಾದರೆ ಸ್ಪೋಟ ಸಂಭವಿಸಿದೆ. ಗ್ಯಾಸ್ ಫಿಲ್ ಮಾಡುತಿದ್ದ ವ್ಯಕ್ತಿ ಸ್ಫೋಟದಿಂದ ಸಾವನ್ನಪ್ಪಿದ್ದಾರೆ. ಅಶೋಕನಗರದ ಅಪಾರ್ಟ್​​ಮೆಂಟ್​​ ಆವರಣದಲ್ಲಿ ಘಟನೆ ನಡೆದಿದೆ.

ಗ್ಯಾಸ್​ ಮೂಲಕ ಬಲೂನ್​​ ಫಿಲ್​ ಮಾಡುತ್ತಿದ್ದಾಗ ಭಯಾನಕ ಸ್ಫೋಟ ಸಂಭವಿಸಿದೆ.  ಬರ್ತ್​​​​ಗೆ ಪಾರ್ಟಿಗಳಿಗೆ ಬಲೂನ್​​​​ ಒದಗಿಸುತ್ತಿದ್ದ ಪರಪ್ಪನ ಅಗ್ರಹಾರ ನಿವಾಸಿಯಾದ ದಿನೇಶ್ (19) ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ದಿನೇಶ್ ಬರ್ತ್​ ಡೇ ಕಾರ್ಯಕ್ರಮವೊಂದರಲ್ಲಿ ಬಲೂನ್​ ಡಿಸೈನ್​ ಒಪ್ಪಿಕೊಂಡಿದ್ದರು. ಬಲೂನ್ ಗ್ಯಾಸ್ ಸಹಿತ ಬೈಕ್ ನಲ್ಲಿ ಸಹಾಯಕ ಮಾಹದೇಶ್ ಜೊತೆಗೆ ಅಶೋಕನಗರದ ಅಪಾರ್ಟ್​ಮೆಂಟ್​ಗೆ ಆಗಮಿಸಿದ್ದರು.

ಅಪಾರ್ಟ್‌ಮೆಂಟ್ ಆವರಣದಲ್ಲೇ ಬೈಕ್ ನಿಲ್ಲಿಸಿಕೊಂಡು ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದರು. ಈ ವೇಳೆ ಜೊತೆಗಿದ್ದ ವ್ಯಕ್ತಿ ನೀರು ತರಲೆಂದು ಅಪಾರ್ಟ್‌ಮೆಂಟ್ ಒಳಗೆ ಹೋಗಿದ್ದ. ಕೆಲವೇ ಕ್ಷಣಗಳಲ್ಲಿ ದಿನೇಶ್​ ಒಬ್ಬರೇ ಬಲೂನ್ ಫಿಲ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ದಿನೇಶ್​ ಕೈ-ಕಾಲು, ದೇಹ ಛಿದ್ರಗೊಂಡು ಚಿಮ್ಮಿದೆ.

ಮೈ ಪಾರ್ಟಿ ಡಾಟ್ ಕಾಮ್ ಮೂಲಕ ನಂಬರ್ ಸಂಗ್ರಹಿಸಿದ್ದ ಫ್ಲ್ಯಾಟ್ ನಿವಾಸಿ, ಮನೆಯಲ್ಲಿ ಬರ್ತಡೇ ಪಾರ್ಟಿಗೆ ಬಲೂನ್​ ಡಿಸೈನ್​ ಆರ್ಡರ್​ ಮಾಡಿದ್ದರು. ಒಟ್ಟು 200 ಬಲೂನ್ ಗಳನ್ನು ತಯಾರಿಸಲು ತಿಳಿಸಿದ್ದರು. ಅದರಂತೆ ನೂರು ಬಲೂನ್ ಮಾಡಿ ಕಳುಹಿಸಲಾಗಿತ್ತು. ಉಳಿದ‌ ನೂರು ಬಲೂನ್​​ಗಳನ್ನು ತಯಾರಿಸುತಿದ್ದ ವೇಳೆ ಅವಘಡ ನಡೆಸಿದೆ. ಸ್ಫೂಟದ ತೀವ್ರತೆಗೆ ದಿನೇಶ್​ ಅವರ ದೇಹ 10 ಅಡಿ ಎತ್ತರಕ್ಕೆ ಹಾರಿ ಮರಕ್ಕೆ ಹೊಡೆದು ಕೆಳಗೆ ಬಿದ್ದಿದೆ. ದೇಹ ಇಬ್ಭಾಗವಾಗಿ ಮೃತಪಟ್ಟಿದ್ದಾರೆ.

ಮೃತ ದಿನೇಶ್​


ಮೃತ ದಿನೇಶ್​​ ಕಳೆದ ನಾಲ್ಕು ವರ್ಷಗಳಿಂದ ಬಲೂನ್ ಕೆಲಸ ಮಾಡುತ್ತಿದ್ದರು. ಆನ್ ಲೈನ್ ಮುಖಾಂತರ ಸಿಕ್ಕ ಆರ್ಡರ್​​​​ಗೆ ಬಲೂನ್ ತಯಾರಿಕೆ ಮಾಡುತ್ತಿದ್ದರು. ಕೃತಕ ರಾಸಾಯನಿಕಗಳನ್ನು ಬಳಸಿ ಸಿಲಿಂಡರ್ ತಯಾರಿಸಿಕೊಂಡಿದ್ದರು. ಅದರ ಮೂಲಕ ಬಲೂನ್ ಫಿಲ್ಲಿಂಗ್ ಮಾಡುತಿದ್ದರು. ಫಿಲ್ಲಿಂಗ್​​ ವೇಳೆಯೇ ಭಯಾನಕ ಸ್ಫೋಟಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ತವರು ಸೇರಿದ್ದ ಹೆಂಡತಿನ ಪುಸಲಾಯಿಸಿ ಜೊತೆ ಸೇರಿದ್ದ.. ಮಧ್ಯರಾತ್ರಿ ಹರಿಯಿತು ರಕ್ತದ ಕೋಡಿ..!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: