HOME » NEWS » State » BENGALURU URBAN MAN WHO LOST JOB IN LOCKDOWN BECOME MALE ESCORT KVD

ಲಾಕ್​​ಡೌನ್​​ನಿಂದ ಕೆಲಸ ಕಳೆದುಕೊಂಡು ಸೆಕ್ಸ್ ವರ್ಕರ್ ಆದ ಗಂಡ: ಸತ್ಯ ಗೊತ್ತಾದಾಗ ಹೆಂಡತಿ ಮಾಡಿದ್ದೇನು?

ಯಾವುದೇ ನಿರ್ದಿಷ್ಟ ಕಂಪನಿಯಲ್ಲಿ ಕೆಲಸವಿಲ್ಲದಿದ್ದರೂ ಪತಿ ಹೇಗೆ ಹಣ ಗಳಿಸುತ್ತಿದ್ದಾರೆ ಎಂಬ ಅನುಮಾನ ಪತ್ನಿಯನ್ನು ಕಾಣಲಾರಂಭಿಸಿದೆ.

Kavya V | news18-kannada
Updated:June 10, 2021, 10:48 PM IST
ಲಾಕ್​​ಡೌನ್​​ನಿಂದ ಕೆಲಸ ಕಳೆದುಕೊಂಡು ಸೆಕ್ಸ್ ವರ್ಕರ್ ಆದ ಗಂಡ: ಸತ್ಯ ಗೊತ್ತಾದಾಗ ಹೆಂಡತಿ ಮಾಡಿದ್ದೇನು?
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು: ಕಳೆದ ವರ್ಷ ಲಾಕ್​ಡೌನ್​ನಿಂದ ಜನ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದರು. ಅನೇಕ ಮಂದಿ ಉದ್ಯೋಗವನ್ನೇ ಕಳೆದುಕೊಂಡರು. ಮತ್ತೆ ಆರ್ಥಿಕವಾಗಿ ಸುಸ್ಥಿರ ಬದುಕು ನಡೆಸಲು ಇನ್ನೂ ಹೆಣಗಾಡುತ್ತಿದ್ದಾರೆ. ಹಣ, ಉದ್ಯೋಗ ಇಲ್ಲದೇ ಕಂಗೆಟ್ಟ ಕೆಲವರು ಅಡ್ಡದಾರಿಯನ್ನೂ ಹಿಡಿದಿದ್ದಾರೆ. ಇದೇ ರೀತಿ ಉದ್ಯೋಗ ನಡೆದುಕೊಂಡ ಬೆಂಗಳೂರಿನ ಬಿಪಿಓ ಉದ್ಯೋಗಿ ಹಣಕ್ಕಾಗಿ ಮಾಡಿದ ಕೆಲಸ ಆತನ ಮದುವೆಯನ್ನೇ ಮುರಿದಿದೆ. ಹಣಕ್ಕಾಗಿ ಗಂಡ ಮಾಡುತ್ತಿದ್ದ ಕೆಲಸ ಗೊತ್ತಾಗುತ್ತಿದಂತೆ ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

27 ವರ್ಷದ ಬಿಪಿಓ ಉದ್ಯೋಗಿ ಕಳೆದ ವರ್ಷ ಲಾಕ್​ಡೌನ್​ ವೇಳೆ ಉದ್ಯೋಗ ಕಳೆದುಕೊಂಡಿದ್ದರು. ಸಂಸಾರ ನಡೆಸಲು ಸಾಧ್ಯವಾಗದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಹಣ ಗಳಿಸಲು ಆತ ಆಯ್ಕೆ ಮಾಡಿಕೊಂಡ ವೃತಿಯೇ ಸೆಕ್ಸ್​ ವರ್ಕರ್​. ಸಾಮಾನ್ಯವಾಗಿ ಹೆಣ್ಣು ಮಕ್ಕಳು ವೇಶ್ಯೆ ವೃತ್ತಿಯಲ್ಲಿ ತೊಡಗಿರೋದನ್ನು ಕೇಳಿರುತ್ತೇವೆ. ಅದೇ ರೀತಿ ಪುರುಷರು ಈ ವೃತ್ತಿಯಲ್ಲಿ ತೊಡಗುವ ಅವಕಾಶವಿದೆ. ಇದೇ ರೀತಿ ಸೆಕ್ಸ್​ ವರ್ಕರ್​ ಆಗಿ ಕೆಲಸ ಮಾಡಲು ಶುರು ಮಾಡಿದ ಕೆಲ ತಿಂಗಳುಗಳ ಬಳಿಕ ವ್ಯಕ್ತಿಯ ಪತ್ನಿಗೆ ಅನುಮಾನ ಮೂಡಿದೆ.

ಯಾವುದೇ ನಿರ್ದಿಷ್ಟ ಕಂಪನಿಯಲ್ಲಿ ಕೆಲಸವಿಲ್ಲದಿದ್ದರೂ ಪತಿ ಹೇಗೆ ಹಣ ಗಳಿಸುತ್ತಿದ್ದಾರೆ ಎಂಬ ಅನುಮಾನ ಪತ್ನಿಯನ್ನು ಕಾಣಲಾರಂಭಿಸಿದೆ. ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಶಂಕಿಸಿದ ಪತ್ನಿ ಹಲವು ಬಾರಿ ಈ ಬಗ್ಗೆ ಪತಿಯೊಂದಿಗೆ ಮಾತನಾಡಲು ಯತ್ನಿಸಿದ್ದಾರೆ. ಆದರೆ ಪತಿ ಯಾವುದಕ್ಕೂ ಸರಿಯಾಗಿ ಉತ್ತರಿಸದೇ ನುಣುಚಿಕೊಂಡಿದ್ದಾರೆ. ಕೊನೆಗೆ ತನ್ನ ಸೋದರನ ಸಹಾಯದಿಂದ ಪತಿಯ ಲ್ಯಾಪ್​ಟಾಪನ್ನು ಓಪನ್​ ಮಾಡಿದ್ದಾರೆ. ಲ್ಯಾಪ್​ಟಾಪ್​ನಲ್ಲಿ ಹಲವು ಮಹಿಳೆಯರೊಂದಿಗೆ ಇರುವ ಫೋಟೋಗಳು , ಮಹಿಳೆಯರ ಮೊಬೈಲ್​ ಸಂಖ್ಯೆಗಳನ್ನು ನೋಡಿದಾಗ ಶಾಕ್​ ಆಗಿದೆ.

ಇದನ್ನೂ ಓದಿ : ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆಗೆ ತಿಳಿಸಿದ ಮಕ್ಕಳು: ರೊಚ್ಚಿಗೆದ್ದವಳು ಮಕ್ಕಳಿಗೆ ತೋರಿಸಿದಳು ನರಕ!

ಮಹಿಳೆಯರೊಂದಿಗೆ ಅಕ್ಷೇಪಾರ್ಹ ಭಂಗಿಯಲ್ಲಿರುವ ಫೋಟೋಗಳ ಬಗ್ಗೆ ಪ್ರಶ್ನಿಸಿದಾಗ ಮೊದಲು ಅಲ್ಲಗಳೆದ ಪತಿ ನಂತರ ಒಪ್ಪಿಕೊಂಡಿದ್ದಾರೆ. ಹಣಕ್ಕಾಗಿ ಹೀಗೆಲ್ಲಾ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ನಿತ್ಯ 3ರಿಂದ 5 ಸಾವಿರದವರೆಗೂ ಗಳಿಸುತ್ತಿದ್ದಾಗಿ ಬಾಯ್ಬಿಟ್ಟಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಪತ್ನಿ ವಿಚ್ಛೇದಕ್ಕೆ ಮುಂದಾಗಿದ್ದಾರೆ.

2 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಪತ್ನಿಗೆ ವಿಚ್ಛೇದನ ನೀಡಲು ಪತಿ ನಿರಾಕರಿಸಿದ್ದಾರೆ. ಜೊತೆಗೆ ವನಿತಾ ಸಹಾಯವಾಣಿಯವರು ದಂಪತಿಯನ್ನು ಸಮಾಲೋಚನೆಗೆ ಒಳಪಡಿಸಿ ಒಂದಾಗಿಸಲು ಯತ್ನಿಸಿದ್ದಾರೆ. ಆದರೆ ವಿಷಯ ಇತ್ಯರ್ಥವಾಗದೆ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಲಾಕ್​ಡೌನ್​ ಸಂಕಷ್ಟ ಇವರ ದಾಂಪತ್ಯವನ್ನೇ ಮುರಿದಿದೆ.



ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 10, 2021, 10:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories