Crime News: ಜಾಹೀರಾತು ನೋಡಿದ್ರೆ ನಿಮ್ಮ ಅಕೌಂಟ್​ಗೆ ಹಣ: ಬಂಪರ್ ಆಫರ್ ಕೊಟ್ಟವನು ಸಿಸಿಬಿ ಬಲೆಗೆ !

Bengaluru Crime: ಜಾಹೀರಾತು ನೋಡಿದ್ರೆ ಸಾಕು, ನಿಮ್ಮ ಅಕೌಂಟಿಗೆ ಹಣ ಬಂದು ಬೀಳುತ್ತೆ ಎಂದು ಲಕ್ಷಾಂತರ ಜನರನ್ನು ನಂಬಿಸಿ ತಾನು ಲೈಫ್ ಸೆಟಲ್ ಮಾಡಿಕೊಳ್ತಿದ್ದ ವ್ಯಕ್ತಿಯೊಬ್ಬ ಸದ್ಯ ಪೋಲೀಸರ ಅತಿಥಿಯಾಗಿದ್ದಾನೆ.

ಸಿಸಿಬಿ ಕೇಂದ್ರ ಕಚೇರಿ, ಬೆಂಗಳೂರು

ಸಿಸಿಬಿ ಕೇಂದ್ರ ಕಚೇರಿ, ಬೆಂಗಳೂರು

  • Share this:
Bengaluru Crime: ಕಷ್ಟ ಪಡೋ ಹಾಗಿಲ್ಲ, ಬಂಡವಾಳನೂ ಹಾಕೋ ಹಾಗಿಲ್ಲ. ಅದರೂ ಕೈ ತುಂಬ ಹಣ ನೀವು ಕುಳಿತಲ್ಲೆ ನಿಮ್ಮ ಕಿಸೆ ಸೇರುತ್ತೆ ಅಂದ್ರೆ ಯಾರ್ ತಾನೇ ಸುಮ್ಮನೆ ಇರ್ತಾರೆ. ಹೀಗೆ ಕಲರ್ ಕಲರ್ ಕಾಗೆ ಹಾರಿಸಿದ ಅಸಾಮಿಯೊಬ್ಬ ಒಂದಷ್ಟು ಜನರಿಗೆ ಮಕ್ಮಲ್ ಟೋಪಿ ಹಾಕಿ ಈಗ ಖಾಕಿ ಬಲೆಗೆ ಬಿದ್ದಿದ್ದಾನೆ. ನೀವು ಮನೆಯಲ್ಲಿ ಕುಳಿತು ಅರ್ಧಗಂಟೆ ಜಾಹೀರಾತು ನೋಡಿದ್ರೆ ನಿಮ್ಮ ಖಾತೆಗೆ ಹಣ ಬರುತ್ತೆ ಎಂದು ಬಣ್ಣ ಬಣ್ಣದ ಕಾಗೆ ಹಾರಿಸಿದ ಅಸಾಮಿಯೊಬ್ಬ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಈಗ ಸಿಕ್ಕಿ ಬಿದ್ದಿದ್ದಾನೆ. ಕೇರಳ ಮೂಲದ ಆರೋಪಿ ಜಾನಿ ಎಂಬಾತ ಜಾಹೀರಾತು ಸಂಸ್ಥೆಯನ್ನ ನಡೆಸುತ್ತಿದ್ದು ಅದನ್ನ ಹೆಚ್ಚಿನ ಜನರಿಗೆ ತಲುಪಿಸೋ ಸಲುವಾಗಿ Www.jalilifestyle.com  ಎಂಬ ವೆಬ್ ಸೈಟ್ ಹೊಂದಿದ್ದನಂತೆ. ವೆಬ್ ನಲ್ಲಿ ಚೈನ್ ಲಿಂಕ್ ದಂಧೆ ಶುರು ಮಾಡಿದ್ದ. ಬಳಿಕ ಆರೋಪಿ ಪ್ರತಿಯೊಬ್ಬರೂ ದಿನಕ್ಕೆ 60 ಜಾಹೀರಾತು ನೋಡಿದರೆ ಅದಕ್ಕೆ ಇಂತಿಷ್ಟು ಹಣ ನೀಡುವುದಾಗಿ ಅನ್ ಲೈನ್ ಮೂಲಕ ಪ್ರಚಾರ ಮಾಡಿದ್ದನಂತೆ.

ಸಾರ್ವಜನಿಕರು ತನ್ನ ಕಂಪನಿಯ ಜಾಹೀರಾತು ವೀಕ್ಷಿಸಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಆರೋಪಿ ಪ್ರತಿದಿನ ತನ್ನ ಸಂಸ್ಥೆಯ 60 ಜಾಹೀರಾತು ವೀಕ್ಷಿಸಿದರೆ ನಿಮಗೆ ಪ್ರತಿ ಜಾಹೀರಾತಿಗೆ 4 ರೂನಂತೆ ದಿನಕ್ಕೆ 240 ರೂಪಾಯಿ ಕೊಡುತ್ತೇನೆ ಎಂದು ಅಮಿಷವೊಡ್ಡಿದ್ದನಂತೆ. ಇನ್ನೂ ಈ ಜಾಹೀರಾತು ವೀಕ್ಷಿಸಲು 1109  ರೂಪಾಯಿ ನೀಡಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಕಂಡೀಷನ್ ಹಾಕಿದ್ದನಂತೆ. ಹೀಗೆ ಸದಸ್ಯತ್ವ ಪಡೆದ ಜನರು ತಿಂಗಳಿಗೆ 7200 ರೂಪಾಯಿ ವರ್ಷಕ್ಕೆ 86,400 ರೂಪಾಯಿ ದುಡಿಯಬಹುದು ಎಂದು ಅಮಿಷವೊಡ್ಡಿದ್ದನಂತೆ. ಅದೇ ರೀತಿ ಒಬ್ಬ ಸದ್ಯಸ್ಯ 10 ಜನರನ್ನ ಸದ್ಯಸ್ಯರನ್ನಾಗಿ ಮಾಡಿದರೆ 4400 ರೂಪಾಯಿ ಪ್ರಾಫಿಟ್ ಸಿಗುತ್ತೆ ಎಂದು ಸುಳ್ಳು ಹೇಳಿ ಲಕ್ಷಾಂತರ ಮಂದಿಯನ್ನ ಸೇರಿಸಿಕೊಂಡು ಹಣ ವಂಚಿಸಿದ್ದಾನೆ.

ಇದನ್ನೂ ಓದಿ: Vaastu Tips: ಮನೆಯಲ್ಲಿ ಈ ಚಿತ್ರಗಳಿದ್ದರೆ ಮದುವೆ ತಡವಾಗುತ್ತದಂತೆ, ನಿಮ್ಮ ಮನೆಯಲ್ಲೂ ಇದೆಯಾ ನೋಡಿ !

ಹೀಗೆ ಚೈನ್ ಲಿಂಕ್ ರೀತಿಯಲ್ಲಿ ಸುಮಾರು  4 ಲಕ್ಷ ಜನರ ನೋಂದಣಿ ಮಾಡಿದ ಆರೋಪಿ ಎಲ್ಲರಿಂದ ಸದಸ್ಯತ್ವ ಶುಲ್ಕ ಪಡೆದು ಉಂಡೆನಾಮ ಹಾಕಿದ್ದಾನೆ. ಈ ಬಗ್ಗೆ  ಮೋಸ ಹೋದ ಜನ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಜಾನಿಯ ಅನ್ ಲೈನ್ ದೋಖಾ ಪತ್ತೆ ಹಚ್ಚಿದ ಪೊಲೀಸರು ಮಾಗಡಿ ರಸ್ತೆಯ ಕಚೇರಿ ಪರಿಶೀಲನೆ ನಡೆಸಿ ಆರೋಪಿಗೆ ಬಲೆ ಬೀಸಿದ್ದಾರೆ. ಪೊಲೀಸರು ತನ್ನ ಬೆನ್ನು ಬಿದ್ದ ವಿಚಾರ ತಿಳಿದು ಆಸಾಮಿ ಕೇರಳ ಕಡೆಗೆ ಎಸ್ಕೇಪ್ ಅಗಿದ್ದು ಸಿಸಿಬಿ ಪೊಲೀಸರ ತಂಡ ಜಾನಿಯನ್ನ ಬಂಧಿಸಿ ಕರೆ ತಂದಿದ್ದಾರೆ.

ಸದ್ಯ ಪೊಲೀಸರು ಜಾನಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದು ಆತನ ಚೈನ್ ಕಂಪನಿಯ ಜನ್ಮ ಜಾಲಾಡಲು ಮುಂದಾಗಿದ್ದಾರೆ. ಅದೇನೇ ಇರಲಿ ಕುಳಿತಲ್ಲೆ ಹಣ ಮಾಡೋ ಆಸೆಗೆ ಬಿದ್ದ ನೂರಾರು ಜನ ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: