ಕೊಟ್ಟ ಸಾಲ ವಾಪಸ್ ಕೇಳಿದ್ದೇ ತಪ್ಪಾಯ್ತು, ಮದುಮಗನನ್ನೇ ಕೊಂದ ಸಹೋದರ, ಇಂಥವರೂ ಇರ್ತಾರಾ!

ವಿನೋದ್ ಜೊತೆ ಮದುವೆಯಾಗಿ ಮುಂದಿನ  ನೂರಾರು ಕನಸು ಕಂಡಿದ್ದ ಆ ಯುವತಿ ಈಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ.. ಇನ್ನು ಆರೋಪಿ ಅರುಣ್ ಪತ್ನಿಯೂ ಕೊಲೆಗೆ ಸಾಥ್ ಕೊಟ್ಟಿದ್ದಾಳೆ ಎಂದು ಮೃತ  ವಿನೋದ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಆ ಯುವಕನಿಗೆ ಹದಿನೈದು ದಿನದ ಹಿಂದೆಯಷ್ಟೇ ಎಂಗೇಜ್ಮೆಂಟ್ ಆಗಿತ್ತು.. ಮುಂದಿನ ತಿಂಗಳಲ್ಲಿ ಮದುವೆ ಮಾಡಿಕೊಳ್ಳಲು ಸಿದ್ದತೆ ಕೂಡಾ ಮಾಡ್ಕೊಳ್ತಿದ್ದ.. ಹೀಗಿರುವಾಗ ತಾನು ಕೊಟ್ಟ ಸಾಲ ಮದುವೆಗೆ ಕೊಡು ಅಂತ ದೊಡ್ಡಪ್ಪನ ಮಗನ ಹಿಂದೆ ಬಿದ್ದಿದ್ದ..ಆದ್ರೆ ಇಬ್ಬರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.. ಯೆಸ್..ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ ನೆನ್ನೆ ಮಟಮಟ ಮಧ್ಯಾಹ್ನ ಯುವಕನೊಬ್ಬನ ಹೆಣ ಉರುಳಿದೆ..ವಿನೋದ್ ಅನ್ನೊ ಯುವಕನೇ‌ ಕೊಲೆಯಾಗಿರೊದು.. ಅಷ್ಟಕ್ಕು ವಿನೋದ್ ನನ್ನು ಹತ್ಯೆ ಗೈದಿದ್ದು ಆತನ ಸಹೋದರ ಸಂಬಂಧಿ ಅರುಣ್‌ ಅನ್ನೋನು ಚಾಕುವಿನಿಂದ ಇರಿದು ಕೊಂದುಹಾಕಿದ್ದಾನೆ.. ಈ ಹಿಂದೆ ವಿನೋದ್, ಅರುಣ್ ಗೆ ೬ ಲಕ್ಷ ಸಾಲ ಕೊಟ್ಟಿದ್ದ..ಸಾಕಷ್ಟು ಬಾರೀ ವಿನೋದ್ ಹಣ ವಾಪಸ್ ಕೊಂಡುವಂತೆ ಕೇಳಿದ್ರೂ, ಅರುಣ್ ಮಾತ್ರ ಒಂದು ನಯಾ ಪೈಸೆ ಕೊಟ್ಟಿರ್ಲಿಲ್ಲ..ಈ ಬಗ್ಗೆ ವಿನೋದ್ ಹಾಗೂ ಅರುಣ್ ಮಧ್ಯೆ ಸಾಕಷ್ಟು ಅಲ ಗಲಾಟೆಯೂ ಆಗಿತ್ತಂತೆ..ಇಂದು  ವಿನೋದ್, ಹಣ ಕೇಳೊಕೆ ಅಂತ ಆರೋಪಿ ಅರುಣ್ ಮನೆಗೆ ಹೋಗಿದ್ದ..ಆ ವೇಳೆ ವಿನೋದ್, ಮನೆ ಡೋರ್ ಲಾಕ್ ಮಾಡಿಕೊಂಡು, ಹಣ ಕೊಡದಿದ್ರೆ ನಿಮ್ಮನ್ನ ಹೊರಗೆ ಬಿಡಲ್ಲ ಅಂತ ಹೇಳಿದ್ನಂತೆ.

ಆಗ ಅರುಣ್ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ವಿನೋದ್ಗೆ ಚುಚ್ಚಿ ಹತ್ಯೆಗೈದಿದ್ದಾನೆ..ಹೌದು..ಮೃತ ವಿನೋದ್ ಹಸುಗಳನ್ನು ಇಟ್ಕೊಂಡು ಹಾಲಿನ ಡೈರಿ ಬಿಸಿನೆಸ್ ನಡೆಸ್ತಿದ್ದ..ಅದೇ ದುಡ್ಡಲ್ಲಿ ೬ ಲಕ್ಷ ಹಣವನ್ನು ಸಹೋದರ ಸಂಬಂಧಿ ಅರುಣ್ ಗೆ ಕೊಟ್ಟಿದ್ದ.. ಹಲವು ಬಾರೀ ಹಣ ಕೇಳಿದ್ರೂ ಅರುಣ್ ಕೊಟ್ಟಿರ್ಲಿಲ್ಲ..ಆಗ ವಿನೋದ್, ಏನೋ ಕಷ್ಟದಲ್ಲಿರ್ಬೇಕು, ಕೊಡ್ತಾನೆ, ಎಷ್ಟೇ ಆಗ್ಲಿ ಸಂಬಂಧಿ ಅಲ್ವಾ ಅಂತ ಸ್ವಲ್ಪದಿನ ಸುಮ್ಮನಿದ್ದ..ಆದ್ರೆ ಇತ್ತೀಚೆಗೆ ವಿನೋದ್ ಗೆ ಎಂಗೆಜ್ ಮೆಂಟ್ ಆಗಿತ್ತು..ಇನ್ನೇರಡು ಮೂರು ತಿಂಗಳಲ್ಲಿ ಮದುವೆ ಫಿಕ್ಸ್ ಮಾಡೊ ಬಗ್ಗೆಯೂ ಫೈನಲ್ ಆಗಿತ್ತು‌.‌‌.ಇದೇ ಕಾರಣಕ್ಕೆ ಮದುವೆಗೆ ಹಣ ಹೊಂದಿಸ್ಬೇಕು ಅಂತ ವಿನೋದ್, ಕಳೆದ ಕೆಲ‌ ದಿನಗಳಿಂದ ಹಣ ಬೇಕೆಬೇಕು ಹಿಂದಿರುಗಿಸು ಅಂತ ಅರುಣ್ ಬೆನ್ನುಬಿದ್ದಿದ್ದ.

ಇದನ್ನೂ ಓದಿ: Basavaraj Bommai: ನೂತನ ಸಿಎಂ ಬಸವರಾಜ ಬೊಮ್ಮಾಯಿ; ತಂದೆ-ಮಗ ಇಬ್ಬರಿಗೂ ಅದೃಷ್ಟ ಒಲಿದ ರೀತಿ ಒಂದೇ!

ಅದೇ ವಿಚಾರವಾಗಿ ಇಂದು ವಿನೋದ್, ಆರೋಪಿ ಅರುಣ್ ಮನೆಗೆ  ಹಣ ಕೇಳಲು ಹೋದಾಗ ಈ ಹತ್ಯೆ ನಡೆದಿದೆ..ಈ ವಿಷ್ಯ ತಿಳಿಯುತ್ತಿದ್ದಂತೆ ಕೆಂಪೇಗೌಡನಗರ ಪೊಲೀಸರು,ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಅರುಣ್ ನನ್ನು ಬಂಧಿಸಿದ್ದಾರೆ..ಇತ್ತ ಮೃತ ವಿನೋದ್ ಜೊತೆ ಮದುವೆಯಾಗಿ ಮುಂದಿನ  ನೂರಾರು ಕನಸು ಕಂಡಿದ್ದ ಆ ಯುವತಿ ಈಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ.. ಇನ್ನು ಆರೋಪಿ ಅರುಣ್ ಪತ್ನಿಯೂ ಕೊಲೆಗೆ ಸಾಥ್ ಕೊಟ್ಟಿದ್ದಾಳೆ ಎಂದು ಮೃತ  ವಿನೋದ್ ಕುಟುಂಬಸ್ಥರು ಆರೋಪಿಸಿದ್ದಾರೆ.. ಜೊತೆಗೆ ವಿನೋದ್ ತಾಯಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.. ಗಾರೆ ಕೆಲಸ ಮಾಡ್ತಿದ್ದ ಅರುಣ್ ಗೆ ಸಾಲ ಕೊಟ್ಟಿದ್ದಲ್ಲದೆ ತನ್ನ ಪ್ರಾಣವನ್ನೂ ಕಳೆದುಕೊಂಡಿದ್ದಾನೆ ಎಂದು ಸಂಬಂಧಿಕರು ಗೋಗರೆದಿದ್ದಾರೆ.. ಈ ಮಧ್ಯೆ ಅರುಣ್ ನನ್ನ ವಶಕ್ಕೆ ಪಡೆದಿರೋ ಪೊಲೀಸ್ರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: