Crime News: ಬೆಂಗಳೂರಲ್ಲಿ ನಡೆಯುತ್ತಾ ಇಂಥಾ ದಂಧೆ? ಕೇಳಿದರೆ ನೀವು ಛೀ, ಥೂ ಅಂತೀರಿ!

ಹೆಂಡತಿಯನ್ನು ಯಾರಾದ್ರೂ ಕೆಟ್ಟದಾಗಿ ನೋಡಿದ್ರೆ ಸುಮ್ಮನೆ ಇರುವ ಗಂಡಂದಿರೇ ಇಲ್ಲ. ಅಂಥದ್ರಲ್ಲಿ ಇಂದೆಥಾ ರೀ ಅಸಹ್ಯ! ಸಭ್ಯ ಸಮಾಜದಲ್ಲೇ ಇದ್ದು ಇಂಥದ್ದೆಲ್ಲ ಮಾಡ್ತಾರಲ್ಲ? ಏನ್ ಹೇಳ್ತೀರಿ ಇಂಥವ್ರಿಗೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಸಿಲಿಕಾನ್ ಸಿಟಿ (Silicone City) ಬೆಂಗಳೂರು (Bengaluru) ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಪ್ರತಿಕ್ಷಣ ಆಧುನಿಕತೆಗೆ (Modernity) ಉದ್ಯಾನನಗರಿ (Garden City) ಒಗ್ಗಿಕೊಳ್ಳುತ್ತಿದೆ. ಇಲ್ಲಿನ ಜನರೂ ಸಹ ಆಧುನಿಕ ಜೀವನ ಪದ್ಧತಿ ರೂಢಿಸಿಕೊಳ್ಳುತ್ತಿದ್ದಾರೆ. ಆದರೆ ತಾವು ಆಧುನಿಕ ಮನಸ್ಥಿತಿಯವರು ಅಂತ ಸಾರುವುದಕ್ಕಾಗಿ ಕೆಲವೊಮ್ಮೆ ವಿಕೃತಿಗಳನ್ನು ಪ್ರದರ್ಶಿಸಿ ಬಿಡ್ತಾರೆ. ಇಲ್ಲಾಗಿದ್ದೂ ಅದೇ. ದುಡ್ಡಿನಾಸೆಗೆ ಬಿದ್ದ ವಿಕೃತ ವ್ಯಕ್ತಿಯೊಬ್ಬ ವೈಫ್ ಸ್ವಾಪಿಂಗ್‌ನಂತ (Wife Swapping) ಅತೀ ಕೆಟ್ಟ ಕೆಲಸಕ್ಕೆ ಇಳಿದು ಬಿಟ್ಟಿದ್ದ. “ನನ್ನ ಪತ್ನಿಯೊಂದಿಗೆ ಇದ್ದು, ಸುಖಪಡಿ” ಅಂತ ಆನ್‌ಲೈನ್‌ಗಳಲ್ಲಿ (Online) ಜಾಹೀರಾತು (Advertisement) ಹಾಕ್ತಿದ್ದ. ಈತನ ಘನಂದಾರಿ ಕೆಲಸಕ್ಕೆ ಪತ್ನಿ ಕೂಡ ಸಾಥ್ ಕೊಡ್ತೀದ್ದಳು. ಇದೀಗ ವಿಕೃತ ಮನಸ್ಸಿನ ವ್ಯಕ್ತಿ ಸೀದಾ ಮಾವನ ಮನೆ ಸೇರಿದ್ದಾನೆ. ಹಾಗಿದ್ರೆ ಏನಿದು ವಿಕೃತ ದಂಪತಿ ಕಥೆ ಅಂತ ನೀವೇ ಓದಿ…

 ಹೊರಗಡೆ ಸೇಲ್ಸ್‌ ಮ್ಯಾನ್ ಕೆಲಸ, ಒಳಗಡೆ?

 ಈ ಕೇಸ್‌ನ ಪ್ರಮುಖ ಆರೋಪಿ ವಿನಯ್ ಕುಮಾರ್. ಈತ ಎಲೆಕ್ಟ್ರಾನಿಕ್ಸ್ ಮಳಿಗೆಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡ್ತಿದ್ದ. ಮಂಡ್ಯ ಮೂಲದ ಈತ ರಾಮನಗರ ಮೂಲದ ಯುವತಿಯನ್ನು ವಿವಾಹವಾಗಿದ್ದ. ಜೀವನ ಸಹಜವಾಗಿಯೇ ಸಾಗುತ್ತಿತ್ತು. ಆದ್ರೆ ವಿನಯ್ ಕುಮಾರ್ ಹಾಗೂ ಆತನ ಪತ್ನಿ ದುಡ್ಡಿನ ದುರಾಸೆಗೆ ಬಿದ್ರು. ಮುದ್ದೆ ಬಸ್ಸಾರು ಯಾಕೋ ಅವರಿಗೆ ರುಚಿಸಲಿಲ್ಲ. ಪ್ರತಿದಿನ ಸ್ಟಾರ್ ಹೋಟೆಲ್‌ನಲ್ಲಿ ತಿನ್ನಬೇಕು, ಝೂಮ್ ಅಂತ ಓಡಾಡಬೇಕು ಅಂತ ಕನಸು ಕಂಡರು. ಆದರೆ ಆ ಕನಸು ನನಸು ಮಾಡಿಕೊಳ್ಳುವುದಕ್ಕೆ ತುಳಿದಿದ್ದು ಮಾತ್ರ ಬೇರೆಯದ್ದೇ ದಾರಿ!

ಪ್ರೀತಿಸಿ ವಿವಾಹವಾಗಿದ್ದ ವಿಕೃತ ದಂಪತಿ

ವಿನಯ್‌ ಕುಮಾರ್ ಹಾಗೂ ಈಕೆಯದ್ದು ಪ್ರೇಮ ವಿವಾಹ. ಮಂಡ್ಯ ಮೂಲದ ವಿನಯ್ ಹಾಗೂ ರಾಮನಗರ ಮೂಲದ ಯುವತಿ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಅಲ್ಲಿ ಪರಸ್ಪರ ಪ್ರೀತಿಸ ತೊಡಗಿದ್ದರು. ಮನೆಯವರ ವಿರೋಧ ಕಟ್ಟಿಕೊಂಡು 2019ರಲ್ಲಿ ವಿವಾಹ ಆಗಿದ್ದರು. ದಂಪತಿಗೆ ಒಂದೂವರೆ ವರ್ಷದ ಮಗುವಿದ್ದು, ಸಂಬಂಧಿಕರ ಮನೆಯಲ್ಲಿ ಬಿಡಲಾಗಿದೆ. ದಂಪತಿ ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರ ಸಮೀಪದ ಸಿಂಗಸಂದ್ರದಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru: ಕಳ್ಳತನಕ್ಕೆ ಅಂತ ಹೋದ, ದೇವರಿಗೆ ಕೈಮುಗಿದು ವಾಪಸ್ ಬಂದ! ಈ ಕಳ್ಳನಿಗೆ ಅದೇನಾಯ್ತಪ್ಪಾ?

ವೈಪ್ ಸ್ವಾಪಿಂಗ್ ದಂಧೆಗೆ ಇಳಿದ ಗಂಡ-ಹೆಂಡತಿ

ದುಡ್ಡು ಮಾಡಬೇಕು ಅನ್ನೋ ಆಸೆಯೇನೋ ವಿನಯ್‌ಗೆ ಇತ್ತು. ಆದರೆ ಕಷ್ಟಪಟ್ಟು ದುಡಿಯುವುದು ಬೇಕಿರಲಿಲ್ಲ. ಹೀಗಾಗಿ ಸುಲಭಕ್ಕೆ ದುಡ್ಡು ಮಾಡುವ ದಾರಿ ಹುಡುಕಿಕೊಂಡ. ಅದೇ ವೈಫ್ ಸ್ವಾಪಿಂಗ್. ಅಶ್ಲೀಲ ವೀಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದ ಖದೀಮ, ಹೆಂಡತಿಗೂ ಆ ಚಟ ಅಂಟಿಸಿದ. ಬಳಿಕ ಇಬ್ಬರು ತಮ್ಮದೇ ಮಿಲನದ ವಿಡಿಯೋ ಮಾಡಿಕೊಂಡು, ಅದನ್ನು ನೋಡಿ ಖುಷಿ ಪಡುತ್ತಿದ್ದರು. ಬಳಿಕ ಆರೋಪಿಯು ಈ ಅಶ್ಲೀಲ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ವೇಶ್ಯಾವಾಟಿಕೆಗೆ ಆಹ್ವಾನ ನೀಡಿದರೆ, ಕೈತುಂಬಾ ಹಣ ಸಿಗಲಿದೆ. ಜತೆಗೆ ನಿನಗೂ ಸಂತೋಷ ಸಿಗಲಿದೆ ಎಂದು ಪತ್ನಿಗೆ ಹೇಳಿ ಒಪ್ಪಿಸಿದ್ದ ಎನ್ನಲಾಗಿದೆ.

ಆನ್‌ಲೈನ್‌ ಮೂಲಕವೇ ಪರ ಪುರುಷರಿಗೆ ಆಹ್ವಾನ

ದಂಧೆಗೇನೋ ಪತ್ನಿ ಒಪ್ಪಿದಳು. ಆದರೆ ಗ್ರಾಹಕರನ್ನು ಸೆಳೆಯುವುದು ಹೇಗೆ? ಇದಕ್ಕಾಗಿ ಆನ್‌ಲೈನ್ ಮೊರೆಹೋದ ವಿನಯ್, ಟೆಲಿಗ್ರಾಂ ಮೂಲಕ ಪರಪುರುಷರನ್ನು ಸೆಳೆಯತೊಡಗಿದ. ಟ್ವಿಟ್ಟರ್‌ನಲ್ಲಿಯೂ ಪತ್ನಿ ಹೆಸರಲ್ಲಿ ಖಾತೆ ತೆರೆದು, ವಿಕೃತ ಜಾಹೀರಾತು ಕೊಟ್ಟ. ಅಲ್ಲಿ ಕೊಟ್ಟ ನಂಬರ್‌ಗೆ ಕರೆ ಮಾಡುವ ಗ್ರಾಹಕರನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ.

ಪತ್ನಿ ಪರಪುರುಷನ ಜೊತೆಯಿರುವ ವಿಡಿಯೋ ರೆಕಾರ್ಡ್

ತನ್ನ ಪತ್ನಿಯ ಜತೆ ಗ್ರಾಹಕರು ಲೈಂಗಿಕ ಸಂಪರ್ಕ ನಡೆಸುವಾಗ ಅಲ್ಲೇ ಇರುತ್ತಿದ್ದ ವಿನಯ್, ಲೈವ್‌ ವಿಡಿಯೋ ಮಾಡುತ್ತಿದ್ದ. ಅವರಿಬ್ಬರ ಮುಖ ಕಾಣದಂತೆ ವೀಡಿಯೋ ಮಾಡಿ ಬಳಿಕ ಅದನ್ನು ನೋಡುತ್ತಾ ವಿಕೃತ ಆಸೆ ಈಡೇರಿಸಿಕೊಳ್ಳುತ್ತಿದ್ದ.

ಇದನ್ನೂ ಓದಿ: Bantwal: ಕರಾವಳಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೊರಗಜ್ಜ ವೇಷಧಾರಿ ವರನ ಬಂಧನ

'ಮಾವನ ಮನೆ' ಸೇರಿದ ವಿಕೃತ ಪತಿ

ಈ ಬಗ್ಗೆ ಸುಳಿವು ಪಡೆದ ಪೊಲೀಸರು, ಗ್ರಾಹಕರ ಸೋಗಿನಲ್ಲಿ ಹೋಗಿ ರೇಡ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿ ವಿನಯ್ ಅರೆಸ್ಟ್ ಆಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Published by:Annappa Achari
First published: